Friday 8th, December 2023
canara news

ಫಿಲಿಪ್ಫೈನ್ಸ್ ಅಲ್ಲಿನ ಮನಿಲಾದಲ್ಲಿ 39ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ

Published On : 03 Jul 2023   |  Reported By : Rons Bantwal


ಜಗತ್ತನ್ನು ಬೆಸೆಯಲು ಸಾಂಸ್ಕೃತಿಕ ಮಾರ್ಗವೇ ಸೂಕ್ತ : ಡಾ| ವಿ.ನಾಗರಾಜ್

ಮುಂಬಯಿ (ಆರ್‍ಬಿಐ), ಜೂ.03: ಸ್ನೇಹದಿಂದ ಎಲ್ಲವನ್ನು ಗೆಲ್ಲುವ ಪ್ರಯತ್ನ ಮಾಡಬೇಕು. ಅದನ್ನು ಸಾಧ್ಯವಾಗಿಸುವುದು ಸುಲಭವೂ ಹೌದು. ಏಕೆಂದರೆ ಅಂತ ಶಕ್ತಿ ಸ್ನೇಹಕ್ಕೆ ಇದೆ. ಅದರೊಂದಿಗೆ ಕಲೆ ಮತ್ತು ಸಾಹಿತ್ಯಗಳು ಜೊತೆಗೂಡಿದರೆ ಮತ್ತಷ್ಟು ಸಾಮರಸ್ಯವನ್ನು ಸಾಧಿಸಬಹುದು. ಹಾಗಾಗಿ ಜಗತ್ತನ್ನ ಬೆಸೆಯಲು ಸಾಂಸ್ಕೃತಿಕ ಮಾರ್ಗವೇ ಹೆಚ್ಚು ಸೂಕ್ತ ಎಂದು ಮೈಕ್ರಾನ್ ಎಲೆಕ್ಟ್ರಿಕಲ್ಸ್‍ನ ಪ್ರಾಜೆಕ್ಟ್ ಡೈರೆಕ್ಟರ್ ಡಾ| ವಿ.ನಾಗರಾಜ್ ಅಭಿಪ್ರಾಯ ಪಟ್ಟರು.

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಭಾರತ ಮತ್ತು ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ ರಿ. ಸಂಯುಕ್ತವಾಗಿ ಫಿಲಿಪ್ಫೈನ್ಸ್ ಅಲ್ಲಿನ ಮನಿಲಾದ ಬೆರ್ಜಯ ಬಾಂಕ್ವೆಟ್ ಸಭಾಗೃಹದಲ್ಲಿ ಕಳೆದ ಶುಕ್ರವಾರ ಆಯೋಜಿಸಿದ್ದ 39ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಡಾ| ನಾಗರಾಜ್ ಮಾತನಾಡಿದರು.

ಐಸಿಎಸ್‍ಸಿಐ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಭಾಷಣಗೈದು ಸಾಂಸ್ಕೃತಿಕವಾಗಿ ಸೌಹಾರ್ದ ಮೂಡಿಸುವ ಉದ್ದೇಶವುಳ್ಳ. ಯಾವುದೇ ದೇಶದಲ್ಲಿ ನಾವು ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಸಾಮರಸ್ಯಕ್ಕೆ ಕಿರುಕೊಡುಗೆ ನೀಡುವ ಪ್ರಯತ್ನ ಮುಂದುವರಿಸಲಿದ್ದೇವೆ ಎಂದರು.

ಅತಿಥಿü ಅಭ್ಯಾಗತರಾಗಿದ್ದ ಚಲನಚಿತ್ರ ನಿರ್ಮಾಪಕ ಶಂಕ್ರೇಗೌಡ ಮೈಸೂರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಹಲವಾರು ಆಡೆತಡೆಗಳು ಇರುತ್ತವೆ ಅವುಗಳನ್ನು ನಿಭಾಯಿಸುವುದೇ ದೊಡ್ಡ ಸಾಹಸ ಎಂದರು.

ಗೌರವ ಅತಿಥಿü ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ| ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ಜಗತ್ತನ್ನು ಸುತ್ತುವುದರಿಂದ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು ಅಲ್ಲದೆ ಅದು ಆಧುನಿಕ ಜಗತ್ತಿಗೆ ಹೊಂದಿಕೊಳ್ಳಲು. ಸಹಾಕಾರಿಯಾಗುತ್ತದೆ ಎಂದರು.

ಗೌರವ ಅತಿಥಿü ಬೆರ್ಜಯ ಗ್ರೂಪ್ ಮಲೇಶಿಯಾ ನಿರ್ದೇಶಕ ಡಿಜೆ ಕ್ಯಾಸ್ಟಿಲೊ ಮಾತನಾಡಿ, ನನ್ನ ಅಜ್ಜ ಅಜ್ಜಿ ಭಾರತೀಯ ಮೂಲದವರು ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಭಾರತೀಯರು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದವರು. ಅವರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಅನಿಸಿದೆ ಎಂದರು.

ವಿಜಾಪುರದ ನಾಗೂರ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಇಂಡಿಯಾ ಮಾಸ್ಟರ್ ಅತ್ಲೇಟ್ಸ್ ಫೆಡೆರೇಶನ್ ಅಧ್ಯಕ್ಷ. ಡಾ. ಕೆ. ಬಿ. ನಾಗೂರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ವಿಶ್ವ ಸೌಹಾರ್ದ ಪ್ರಿಯರು ಎಂಬ ಪರಿಕಲ್ಪನೆ ಅನನ್ಯ ಮತ್ತು ಅರ್ಥಗರ್ಭಿತ ಇದರ ಅನುಷ್ಠಾನಕ್ಕೆ ಮಾನವೀಯ ಮೌಲ್ಯವನ್ನು ಗೌರವಿಸುವ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ವಿಶೇಷ ಆಮಂತ್ರಿತರಾಗಿ ಭಾರತ್ ಪಾಲಿಕ್ಲಿನಿಕ್-ನರ್ಸಿಂಗ್ ಹೋಮ್‍ನ ನಿರ್ದೇಶಕ ಡಾ| ಶಿವಪುತ್ರ ಎಸ್. ಭಾವಿ ಉಪಸ್ಥಿತರಿದ್ದು ವಿವಿಧ ಕ್ಷೇತ್ರದ ಸಾಧಕರಾದ ನಿವೃತ್ತ ಐಎಎಸ್ ಅಧಿಕಾರಿ ಡಾ| ಡಿ.ಎಸ್ ವಿಶ್ವನಾಥ್, ಡಾ| ಸತೀಶ್ ಕುಮಾರ್ ಹೊಸಮನಿ, ಜಾನಪದ ಗಾಯಕ ಗೋನಾಸ್ವಾಮಿ. ಭರತನಾಟ್ಯ ಕಲಾವಿದೆ ಕು| ಅನು ಆನಂದ್ ಇವರಿಗೆ ಇಂಡೊ ಫಿಲಿಪೈನ್ಸ್ ಫ್ರೆಂಡ್ಶಿಪ್ ಅವಾರ್ಡ್ ಪ್ರದಾನಿಸಿ ಗೌರವಿಸಲಾಯಿತು.


ಪೆÇ್ರ| ಬಿಂಡಿಗನವಿಲೆ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಡಾ| ಅಶೋಕ್ ನರೋಡೆ ವಿಶ್ವ ಸೌಹಾರ್ದತೆ ಕುರಿತು ಉಪನ್ಯಾಸ ನೀಡಿದರು. ಪ್ರಶಾಂತ್ ಮೈಸೂರ್, ಚಂದ್ರ ಮೌಳಿ ಮತ್ತು ಮೃದುಲಾ ಚಿತ್ರಕಲಾ ಪ್ರದರ್ಶನ ನಡೆಸಿದರು. ಗಾಯಕರಾದ ವೆಂಕಟೇಶ್ ಮೂರ್ತಿ ಶಿರೂರು, ಶಿವು ಪಾಂಡೇಶ್ವರ ಮತ್ತು ಪ್ರಶಾಂತ್ ರೆಡ್ಡಿ ಹಾಡುಗಳುನ್ನು ಹಾಡಿ ರಂಜಿಸಿದರು. ಕು| ಅನು ಆನಂದ್ ಭರತನಾಟ್ಯ ಪ್ರದರ್ಶಿಸಿದರು. ಪ್ರಭಾ ಎನ್.ಪಿ ಸುವರ್ಣ ಮುಂಬೈ ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು.

 




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here