Saturday 4th, May 2024
canara news

ಹೊರನಾಡ ಕನ್ನಡಿಗನ ಹಾಡು ಪಾಡು ಕಾರ್ಯಕ್ರಮದಲ್ಲಿ ಮುಂಬಯಿ ಕವಿ, ಸಾಹಿತಿ ಗೋಪಾಲ ತ್ರಾಸಿ

Published On : 04 Oct 2023   |  Reported By : Rons Bantwal


ಹಾನಗಲ್, ಅ.4- ನಾವು ಮುಂಬಯಿ ಕನ್ನಡಿಗರಿಗೆ ಹೊರನಾಡಿನಲ್ಲಿ ಬದುಕು ಕಟ್ಟಿಕೊಳ್ಳುವುದೇ ಬಹುದೊಡ್ಡ ಪಾಡು, ಸವಾಲು, ಈ ಪಾಡಿನೊಂದಿಗೆ ಕನ್ನಡತನ ಉಳಿಸಿಕೊಳ್ಳುವ ಕಾಳಜಿಯೇ ನಮ್ಮೊಳಗಿನ ಹಾಡು, ಅದೇ ನಮಗೆ ತರುವ ಖುಷಿ. ಅದಕ್ಕೆ ಧ್ವನಿಯಾಗುವುದೇ ಸಾಹಿತ್ಯದ ಸಹವಾಸ, ಓದು ಬರಹದಂತಹ ಪ್ರವೃತ್ತಿ, ಮರಾಠಿ ನೆಲದಲ್ಲಿ ನಮ್ಮ ನಾಡು ಭಾಷೆಯ ಪ್ರೇಮದೊಂದಿಗೆ ಮರಾಠಿ ಭಾಷಿಕರೊಂದಿಗೆ ಸೌಹಾರ್ದತೆಯಿಂದ ಇರಬೇಕಾದುದು ನಮ್ಮ ಜವಾಬ್ದಾರಿಯೂ ಹೌದು. ಮುಂಬಯಿಗೆ ಬಂದು ಹೋಗುವ ಒಳನಾಡಿನ ಹಿರಿಯ ಸಾಹಿತಿಗಳು ನಮ್ಮನ್ನು ಬೆನ್ನು ತಟ್ಟಿ ಪೆÇ್ರೀತ್ಸಾಹಿಸುವುದರಿಂದಲೇ ಬರವಣಿಗೆಯಲ್ಲಿ ಮುಂದುವರಿಯಲು ಉತ್ಸಾಹ ಬರುವುದು. ಇವತ್ತು ಕವಿತೆಗಳನ್ನು ಓದಿದ ಯುವ ಕವಿಗಳ ಉಪಸ್ಥಿತಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ನಿಜವಾದ ಯಶಸ್ಸು ಆಗಿದೆ ಎಂದು ಕವಿ ಸಾಹಿತಿ ಗೋಪಾಲ ತ್ರಾಸಿ ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಹಿರಿಯ ಸಾಹಿತಿ ನಾಟಕಕಾರ ಸತೀಶ ಕುಲಕರ್ಣಿಯವರು, ಸಾಹಿತ್ಯದ ಪ್ರೀತಿ ಮತ್ತು ವಾತಾವರಣ ಇದ್ದರೆ ಸಾಹಿತಿ, ಸಾಹಿತ್ಯ ಬೆಳೆಯಲು ಸಾಧ್ಯ, ಭಾವೋದ್ವೇಗದ ಸಾಹಿತ್ಯಕ್ಕಿಂತ ವಾಸ್ತವಿಕ ಬರವಣಿಗೆ ಜನರನ್ನು ಎಚ್ಚರದಿಂದ ಇಡಬಲ್ಲದು. ಮುಂಬೈ ಕನ್ನಡ ಸಾಹಿತಿಗಳನ್ನು ಬೇರೆಯಾಗಿ ನೋಡಬೇಕಾಗಿಲ್ಲ. ಅಲ್ಲೂ ಪ್ರಬುದ್ಧ ಸಾಹಿತಿಗಳಿದ್ದಾರೆ ಎನ್ನುವುದಕ್ಕೆ ಸಾಹಿತಿ ಗೋಪಾಲ ತ್ರಾಸಿ ಸಾಕ್ಷಿಯಾಗಿದ್ದಾರೆ ಎಂದರು. ಹೋಗುವ ಶೈಲಿ ಈ ಕೃತಿಯ ಹೆಗ್ಗಳಿಕೆ ಎಂದರು.

ಬೇಚಾರ ಶಹರು ಕೃತಿ ಕುರಿತು ಮಾತನಾಡಿದ ಪ್ರತಿಭಾವಂತ ಯುವ ಕವಿ ದೇವರಾಜ ಹುಣಸಿಕಟ್ಟೆ, ತ್ರಾಸಿಯವರು ಅಪಾರ ಜೀವಪರ ಕವಿ ಎನ್ನುವುದಕ್ಕೆ ಇಲ್ಲಿನ ಅನೇಕ ಕವನಗಳು ಸಾಕ್ಷಿ, ಪುಟ್ಟದಾದರೂ ವೈಚಾರಿಕವಾಗಿ ಪ್ರಬುದ್ಧವಾದ ಕವನಗಳು ಇಲ್ಲಿವೆ. ನಿರ್ಭಿಡೆಯಿಂದ ಬರೆಯುವಲ್ಲೂ ಕವಿ ಸೈ ಎನಿಸಿಕೊಂಡಿರುವರು.

ಕಾರ್ಯಕ್ರಮದ ರೂವಾರಿ, ಅಧ್ಯಕ್ಷರು ಅ.ಭಾ.ಶರಣ ಸಾಹಿತ್ಯ ಪರಿಷತ್ತು ಹಾವೇರಿ ಜಿಲ್ಲೆ, ಸಾಹಿತಿ ಮಾರುತಿ ಶಿಡ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಂತಹ ಕಾರ್ಯಕ್ರಮಗಳಿಂದ ವಿವಿಧ ಪ್ರಾಂತ್ಯಗಳ ಲೇಖಕರನ್ನು ಅರಿಯಲು, ಅವರ ಕೃತಿಗಳ ಕುರಿತು ತಿಳಿದುಕೊಳ್ಳಲು ಸಾಧ್ಯ. ಗೋಪಾಲ ತ್ರಾಸಿಯವರ ಮೂಲಕ ಮುಂಬೈ ಕನ್ನಡಿಗರ ಹಾಡು ಪಾಡು ಮತ್ತು ಸಾಹಿತ್ಯದ ಕುರಿತು ಮಾಹಿತಿ ದೊರಕಿದಂತೆ ಆಯಿತು ಎಂದರು.

ಕವಿಗೋಷ್ಠಿಯಲ್ಲಿ, ದೇವರಾಜ ಹುಣಸಿಕಟ್ಟಿ, ದಾನೇಶ್ವರಿ ಶಿಗ್ಗಾವಿ, ಅನುಪಮ ನೆಗಳೂರು, ಎಚ್, ಸುಧಾ, ರಾಜೇಶ್ವರಿ ತಿರುಮಲೆ ಕವನ ವಾಚಿಸಿದರು.

ಗೋಪಾಲ ತ್ರಾಸಿಯವರ ಒಟ್ರಾಸಿ ಪ್ರಸಂಗಗಳು ಹರಟೆ ಕೃತಿ ಕುರಿತು ಮಾತನಾಡಿದ ಸಾಹಿತಿ ಶಿವಾನಂದ ಕ್ಯಾಲಕೊಂಡ ಇವರು, ಈ ಕೃತಿಯಲ್ಲಿ ಲೇಖಕರು ಬದುಕಿನ ಹತ್ತು ಹಲವು ಘಟನೆಗಳನ್ನು ಲಘುವಾದ ಹಾಸ್ಯದಿಂದ ಸೊಗಸಾಗಿ ಬರೆದಿದ್ದಾರೆ. ಕಾವ್ಯಮಯವಾದ ಭಾಷೆ, ಓದಿಸಿಕೊಂಡರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಎಚ್.ಸಿ. ಕಲ್ಲನಗೌಡರ, ನಗರ ಘಟಕದ ಅಧ್ಯಕ್ಷ ಪೆÇ್ರ. ಸಿ.ಮಂಜುನಾಥ, ಗೌರವಾಧ್ಯಕ್ಷ ರವಿ ಬಾಬು ಪೂಚಾರ, ಕದಳಿ ಮಹಿಳಾ ವೇದಿಕೆಯ ಶಿವಗಂಗಕ್ಕ, ರೇಖಾ ಶೆಟ್ಟರ, ಸಾಹಿತಿಗಳಾದ ಪ್ರಭು ಗುರಪ್ಪನರ, ಕವಿ ದೀಪಾ ಗೋನಾಲ ಇನ್ನಿತರರು ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here