Friday 12th, July 2024
canara news

ಕನ್ನಡ ಭವನ ಎಜುಕೇಶನ್ ಸೊಸೈಟಿ ಕಾಲೇಜ್‍ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭ

Published On : 02 Nov 2023   |  Reported By : Rons Bantwal


ಕನ್ನಡವನ್ನು ಪ್ರತಿ ಕ್ಷಣ ಮಾತನಾಡುತ್ತಾ ಕನ್ನಡವನ್ನು ಉಳಿಸಿಕೊಳ್ಳಬೇಕು: ಡಾ. ಬ್ರೋ

ಮುಂಬಯಿ (ಆರ್‍ಬಿಐ) ನ. 1: ಮುಂಬಯಿಯಯ ಕೋಟೆ ಪರಿಸರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಕನ್ನಡ ಭವನ ಎಜುಕೇಶನ್ ಸೊಸೈಟಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಇಂದು ಡಾ| ಬ್ರೋ ಅವರು ಕನ್ನಡ ರಾಜ್ಯೋತ್ಸವ ಆಚರಣೆಯ ಸುಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಸುಮಾರು ಒಂದು ಗಂಟೆಗಳ ಕಾಲ ಹೈಸ್ಕೂಲ್ ಮಕ್ಕಳ ಜೊತೆ ಕಳೆದ ಅವರು ಕರ್ನಾಟಕ ರಾಜ್ಯೋತ್ಸವ ಆಚರಣೆಯ ಕುರಿತು ಮಾತನಾಡುತ್ತಾ ಕನ್ನಡವನ್ನು ಪ್ರತಿಕ್ಷಣ ಮತ್ತು ಮನೆ ಮನೆಯಲ್ಲಿ ಮಾತನಾಡುತ್ತಾ ಕನ್ನಡವನ್ನು ಉಳಿಸಿಕೊಳ್ಳಬೇಕು. ಕನ್ನಡ ಈಗಾಗಲೇ ಬೆಳೆದ ಭಾಷೆಯಾಗಿದ್ದು, ಅದನ್ನು ಬೆಳೆಸುವ ಅವಶ್ಯಕತೆ ಇಲ್ಲ. ಆದರೆ ಕನ್ನಡಿಗರಾದ ನಾವೆಲ್ಲರೂ ಬೆಳೆದ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು. ಶಿಕ್ಷಣ ಎನ್ನುವುದು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕಾದಾಗ ನಮಗೆ ರಕ್ಷೆಯಾಗಿ ನಿಲ್ಲುವ ಮಾಪನ. ಶಿಕ್ಷಕರ ಸಹಾಯದಿಂದ, ಅವರ ಸಲಹೆ ಸೂಚನೆಗಳ ಮೇರೆಗೆ ವಿದ್ಯಾವಂತರಾಗುತ್ತ ಅವರ ಶಿಕ್ಷೆ ಮತ್ತು ಶಿಕ್ಷಣ ಎರಡನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುತ್ತಾ ಯಶಸ್ವಿ ಮನುಷ್ಯರಾಗಿ ಬಾಳುವುದೇ ನಮ್ಮ ಮುಖ್ಯ ಉದ್ದೇಶವಾಗಬೇಕು ಅಂದರು. ಹೊರನಾಡ ಕನ್ನಡಿಗರಾಗಿದ್ದುಕೊಂಡು ಮುಂಬೈಯ ಪ್ರತಿಷ್ಠಿತ ಸ್ಥಳದಲ್ಲಿದ್ದುಕೊಂಡು ಕನ್ನಡವನ್ನ ಬೆಳೆಸುತ್ತಾ 60 ವರುಷಗಳನ್ನ ಯಶಸ್ವಿಯಾಗಿ ಮುಗಿಸಿದ ಕನ್ನಡ ಭವನದ ಕಾರ್ಯವೈಖರಿಯನ್ನು ಕಂಡು ಸಂತೋಷಗೊಂಡಿದ್ದೇನೆ ಮತ್ತು ನನಗೆ ಇದೊಂದು ಅಪೂರ್ವ ಮತ್ತು ಅಮೋಘ ಕ್ಷಣ ಎಂದು ಕನ್ನಡ ಭವನ ಎಜುಕೇಶನ್ ಸೊಸೈಟಿಯ ಎಲ್ಲ ಸದಸ್ಯರನ್ನ ಮನದುಂಬಿ ಶ್ಲಾಘಿಸಿದರು.

ಕಾರ್ಯಕ್ರಮದ ಮೊದಲಿಗೆ ಶೈಕ್ಷಣಿಕ ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಅಮೃತಾ ಎ.ಶೆಟ್ಟಿ ಅವರು ಪ್ರಖ್ಯಾತ ಯೂಟ್ಯೂಬರ್ ಮತ್ತು ಟ್ರಾವೆಲ್ ವಾಗ್ಲರ್ ಎಂದೇ ಪ್ರಸಿದ್ಧರಾದ, ಸುಮಾರು 20 ದೇಶಗಳನ್ನು ಸುತ್ತಿದ ಡಾಕ್ಟರ್ ಬ್ರೋ ಅವರನ್ನು ಪರಿಚಯಿಸುತ್ತ ಸಾಗತಿಸಿದರು. ಸಂಸ್ಥೆಯ ಗೌರವ ಪ್ರ. ಕಾರ್ಯದರ್ಶಿ ಶೇಖರ್ ಎ. ಅಮೀನ್ ಅÀವರು ಹೂಗುಚ್ಛಗಳನ್ನು ನೀಡಿ, ಗೌರವಿಸಿ ಬ್ರೋ ಆÀವರ ಕನ್ನಡ ಭಾಷೆಯ ಅಭಿಮಾನದ ಬಗ್ಗೆ ಮತ್ತು ಅವರ ಸರಳತೆಯ ಬಗ್ಗೆ, ಹಾಗೆಯೇ 23 ಲಕ್ಷ ಯೂಟ್ಯೂಬ್ ನಲ್ಲಿ ಅನುಯಾಯಿಗಳನ್ನ ಮತ್ತು ಅಭಿಮಾನಿಗಳನ್ನು ಪಡೆದ ಬಗ್ಗೆ, ಮತ್ತು ಸುಮಾರು 20 ಕೋಟಿ ಜನರ ವೀಕ್ಷಣೆಯನ್ನು ಪಡೆದಂತಹ ಪ್ರಖ್ಯಾತ ಯೂಟ್ಯೂಬರ್ ಮತ್ತು ಕನ್ನಡ ಪ್ರೇಮಿ ಅನ್ನುವ ಸವಿಸ್ತಾರವಾದ ಪರಿಚಯವನ್ನು ಮಕ್ಕಳಿಗೆ ನೀಡಿದರು. 60 ವರ್ಷಗಳ ಕನ್ನಡ ಭವನ ನಡೆದು ಬಂದ ದಾರಿಯನ್ನು ಡಾ. ಬ್ರೋ ಅವರಿಗೆ ತಿಳಿಸಿದರು. ನಾಡ ಗೀತೆಯಿಂದ ಮೊದಲ್ಗೊಂಡು ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು. ಎಲ್ಲಾ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವಿಟ್ಟಲ ಮಾಣೂರೆ ಕಾರ್ಯಕ್ರಮವನ್ನು ನಿರೂಪಿಸಿದರೆ, ಶಾಲಾ ಶಿಕ್ಷಕ ಶಿವಾನಂದ್ ಪಾಟೀಲ್ ಅÀವರು ವಂದಿಸಿದರು.

 
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here