Saturday 27th, April 2024
canara news

ವಿಶೇಷ ಚೇತನ ಮಕ್ಕಳ ಸೇವೆಗೆ ಬದುಕು ಮುಡುಪಾಗಿರಿಸಿ ಪ್ರಕಾಶ್ ಜಯ ಶೆಟ್ಟಿಗಾರ್

Published On : 17 Dec 2023   |  Reported By : Rons Bantwal


ಪ್ರಕಾಶಾಭಿಮಾನ ಕಾರ್ಯಕ್ರಮದಲ್ಲಿ ಸೇವಾ ಗೌರವ-ಭವಿಷ್ಯದ ಸೇವೆಗೆ ಪೆÇ್ರೀತ್ಸಾಹ

ಮುಂಬಯಿ (ಆರ್‍ಬಿಐ), ಡಿ.16: ಪ್ರಕಾಶ್ ಜಯ ಶೆÉಟ್ಟಿಗಾರ್ ಮೂಡಬಿದಿರೆ ಸಂಸ್ಥಾಪನೆಯ ರಿಜುವನೇಟ್ ಚೈಲ್ಡ್ ಫೌಂಡೇಶನ್ (ರಿ.) ಸಂಚಾಲಕತ್ವದ ನೂರಾರು ಮಕ್ಕಳ ಬದುಕಿಗೆ ಆಸರೆಯಾದ ವಿಶೇಷ ಚೇತನ ಮಕ್ಕಳ ಸೇವಾ `ಸ್ಪೂರ್ತಿ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆ' ಮತ್ತು ತರಬೇತಿ ಕೇಂದ್ರಕ್ಕೆ ಇತ್ತೀಚೆಗೆ ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ (ಬೆಳ್ತಂಗಡಿ) ಅವರು ಭೇಟಿಯನ್ನಿತ್ತು ತನ್ನ ಸಹಾಯಸ್ತ ಚಾಚಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ದುರ್ಗಾದಾಸ್ ಶೆಟ್ಟಿ, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದು ಪ್ರಕಾಶ್ ಜಯ ಶೆÉಟ್ಟಿಗಾರ್ ಅವರ ದಯಾಳುತನದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ಡಿ.ರಂದು ಮಂಗಳೂರುನಲ್ಲಿ ನಡೆಯಲಿರುವ ಪ್ರಕಾಶಾಭಿಮಾನ ಕಾರ್ಯಕ್ರಮದಲ್ಲಿ ಪ್ರಕಾಶ್ ಶೆÉಟ್ಟಿಗಾರ್ ಅವರ ಸೇವೆಯನ್ನು ಮನವರಿಸಿ ಗೌರವಿಸಿ ಭವಿಷ್ಯದ ಸೇವೆಗೆ ಪೆÇ್ರೀತ್ಸಾಹಿಸÀಲು ಬಂಜಾರ (ಗೋಲ್ಡ್‍ಫಿಂಚ್) ಪ್ರಕಾಶಣ್ಣ ಪ್ರಸಿದ್ಧಿಯ ಉದ್ಯಮಿ, ಎಂಆರ್‍ಜಿ ಸಮೂಹದ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಮುಂದಾಗಿದ್ದಾರೆ ಎಂದು ವಿಜಯ್ ಶೆಟ್ಟಿ ಪಣಕಜೆ ತಿಳಿಸಿದ್ದಾರೆ.

ಜಯ ಎಸ್.ಶೆಟ್ಟಿಗಾರ್ ಅವರ `ಸ್ಪೂರ್ತಿ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆ' ಬಗ್ಗೆ
ವಿಶೇಷ ಚೇತನ ಮಕ್ಕಳ ಸೇವೆಗೆ ಬದುಕು ಮುಡುಪಾಗಿರಿಸಿದ ಮಂಗಳೂರು ಮೂಡುಬಿದಿರೆ ಮೂಲತಃ ಜಯ ಎಸ್.ಶೆಟ್ಟಿಗಾರ್ ಮತ್ತು ಶಾರದ ದಂಪತಿ ಸುಪುತ್ರ ಪ್ರಕಾಶ್ ಜಯ ಶೆÉಟ್ಟಿಗಾರ್ ಸ್ವತಃ ಅಪಾಂಗ ವ್ಯಕ್ತಿ. ಮೂಡುಬಿದಿರೆ ಅಲಂಗಾರು ಅಲ್ಲಿನ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆ, ಜೈನ ಪ್ರೌಢಶಾಲೆ ಇಲ್ಲಿ ಶಿಕ್ಷಣ ಪಡೆದು ಮುಂಬಯಿ ಸೇರಿದವರು.

ತಾನು 6ನೇ ತರಗತಿಯಲ್ಲಿರುವಾಗ ಅಸೌಖ್ಯದಿಂದಾಗಿ ಒಂದು ಕಾಲು ನಿಷ್ಕ್ರೀಯತೆಗೊಂಡು ನಡೆಯ ಅಸಾಧ್ಯವಾಯಿತು. ಬಳಿಕ ಗುಣಮುಖನಾಗಿ ಮತ್ತೆ ಓದಲು ಮುಂದದಾಗ ಶಾಲಾ ಸಹಪಾಠಿ ವಿದ್ಯಾಥಿರ್sಗಳು ಕುಂಟುಕಾಲು ಇತ್ಯಾದಿಯೊಂದಿಗೆ ಚೇಷ್ಠೆ ಮಾಡಲಾರಂಭಿಸಿದರು. ವಿದ್ಯಾಥಿರ್sಗಳ ಅವಮಾನÀ, ಕೀಟಲೆ ಸಹಿಸಲಾಗದೆ ಇನ್ನು ನನಗಿಲ್ಲಿ ಮರ್ಯಾದೆ ಇಲ್ಲವೆಂದು ಅರಿತು ಶಾಲೆ ಬಿಟ್ಟು ಮುಂಬಯಿಗೆ ಸೇರಿದೆ. ಇಲ್ಲಿ ಹೊಟೇಲ್‍ನಲ್ಲಿ ಗ್ಲಾಸುಪ್ಲೇಟು ತೊಳೆದು ಕ್ರಮೇಣ ಪ್ಲಂಬಿಂಗ್ ವೃತ್ತಿಯನ್ನು ರೂಢಿಸಿ ವರ್ಷಗಳ ಬಳಿಕ ಮೂಡಬಿದಿರೆಗೆ ವಾಪಾಸ್ಸಾದೆನು. ವಿವಾಹಿತ ಬಾಳಿನಲ್ಲಿ ಮೂರು ಮಕ್ಕಳನ್ನು ಹೊಂದಿದ್ದು ಆ ಪೈಕಿ ಓರ್ವ ಅಂಗಹೀನವಾಗಿದ್ದು ಅನುಕಂಪಪಟ್ಟು ತನ್ನ ಮನಸ್ಥಿತಿ ಬದಲಾಯಿಸಿ ವಿಶೇಷ ಚೇತನ ಮಕ್ಕಳ ಸೇವೆಗೆ ಮನವೋಲಿಸಿದೆನು. ಬದುಕು ಕಟ್ಟಲು ಪ್ಲಂಬಿಂಗ್ ಗುತ್ತಿಗೆದಾರನಾಗಿ ವೃತ್ತಿ ನಡೆಸುತ್ತಾ ಸಮಾಜಕ್ಕೆ ತನ್ನಿಂದ ಏನಾದರೂ ಸಹಾಯ ಆಗಬೇಕೆಂಬ ಉದ್ದೇಶದಿಂದ ಭಿನ್ನ ಸಾಮರ್ಥ್ಯ ಮಕ್ಕಳ ಸೇವೆಗೆ ತೊಡಗಿಸಿ ಕೊಳ್ಳುವ ನಿರ್ಧಾರಕ್ಕೆ ಬಂದು ಅಶಕ್ತ ಮಕ್ಕಳನ್ನೇ ಸಾಕಿ ಬೆಳೆಸಲು ಶಾಲೆಯೊಂದನ್ನು ಹುಟ್ಟು ಹಾಕಿದೆನು ಅನ್ನುತ್ತಾರೆ ಪ್ರಕಾಶ್.

ತೀರಾ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಪ್ರಕಾಶ್ ನೇರ ನಡೆ-ನುಡಿಯ ನಿಷ್ಟುರವಾದಿ, ಛಲದಂಕ ಮಲ್ಲ, ಕ್ರಿಯಾಶೀಲ ಹಠವಾದಿಯಾಗಿದ್ದು ಜೀವನದಲ್ಲಿ ಸಮಾಜಕ್ಕೆ ನನ್ನಿಂದಾದ ಸಹಾಯ ಮಾಡಬೇಕು ಎಂಬುದು ಅವರ ಮನದಾಳದ ಚಿಂತನೆ. ಕಳೆದ ಏಳು ವರ್ಷಗಳಿಂದ ಸ್ಫೂರ್ತಿ ವಿಶೇಷ ಶಾಲೆಯನ್ನು ನಡೆಸುತ್ತಾ ಬಂದಿರುವ ಪ್ರಕಾಶ್ ಮೂಡುಬಿದಿರೆಯ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ನೂರಾರು ವಿದ್ಯಾಥಿರ್üಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ವಿಶಿಷ್ಟ ಗುಣವನ್ನು ಹೊಂದಿರುವರು. ಸ್ಪೂರ್ತಿ ಶಾಲಾ ವಿದ್ಯಾಥಿರ್üಗಳು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿ ತರುವುದರ ಜೊತೆಯಲ್ಲಿ ಕರುನಾಡ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿರುತ್ತಾರೆ. ಕಳೆದ ಏಳು ವರ್ಷಗಳಲ್ಲಿ 400 ಪದಕಗಳನ್ನು ಪಡೆದಿರುತ್ತಾರೆ. ಫುಟ್ಬಾಲ್ ಆಟದಲ್ಲಿ ಇಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಆಟವಾಡಿರುತ್ತಾರೆ. ಪವರ್ ಲಿಫ್ಟಿಂಗ್‍ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿರುತ್ತಾರೆ.

ಸ್ಪೂರ್ತಿ ವಿದ್ಯಾಥಿರ್üಗಳು ಅಕ್ಷರ ಜ್ಞಾನದ ಸಾಮಾನ್ಯ ಶಿಕ್ಷಣದ ಜೊತೆಯಲ್ಲಿ ವೃತ್ತಿಪರ ಶಿಕ್ಷಣವನ್ನು ಪಡೆದು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ರೀತಿಯಲ್ಲಿ ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಔಪಚಾರಿಕ ಶಿಕ್ಷಣದ ಜೊತೆಯಲ್ಲಿ ಸಂಗೀತ, ನೃತ್ಯ, ಕಿರು ನಾಟಕ, ಗೀತ ರೂಪಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿಯನ್ನು ವಿದ್ಯಾಥಿರ್üಗಳಿಗೆ ಇಲ್ಲಿ ನೀಡಲಾಗುತ್ತಿದ್ದು, ಬಹುಮುಖಿ ಪ್ರತಿಭಾಸಂಪನ್ನ ಮಕ್ಕಳು ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡುವುದರ ಮೂಲಕ ತಮ್ಮ ಅದ್ಭುತ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಗಿರುವ ಪ್ರಕಾಶ್ ಸಾವಿರಾರು ಮಕ್ಕಳ ಪಾಲಿಗೆ ಪ್ರಕಾಶಮಾನರಾಗಿದ್ದಾರೆ.

ಶಾಲೆಯಲ್ಲಿ ಎಂಟು ಶಿಕ್ಷಕರು, ಏಳು ಬೋಧಕೇತರ ಸಿಬ್ಬಂದಿಗಳ ಮೂಲಕ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಪ್ರಕಾಶ್, ಸರಕಾರದ ಯಾವುದೇ ಅನುದಾನವಿಲ್ಲದೆ ತನ್ನ ದುಡಿಮೆ ಮತ್ತು ದಾನಿಗಳ ಸಹಕಾರದಿಂದ ಮುನ್ನಡೆಸಿಕೊಂಡು ಬರುತ್ತಿರುವ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಮೂಡಬಿದಿರೆ ಪರಿಸರದಲ್ಲಿ ಇರುವ ಇತರ ಜನರ ಕಷ್ಟಗಳಿಗೂ ಸ್ಪಂದಿಸುವ ಸದ್ಗುಣವುಳ್ಳ ಪ್ರಕಾಶ್ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸಮರ್ಥ ಸಂಘಟಕ ಆಗಿರುವ ಪ್ರಕಾಶ್ ಸ್ಪೆಷಲ್ ಒಲಂಪಿಕ್ ಭಾರತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಸಮಾಜ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಗಳಲ್ಲೂ ಸಕ್ರೀಯರಾಗಿರುವರು.

ಕೊರೋನ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕೂರದೆ ತನ್ನದೇ ಓಮಿನಿ ವಾಹನದಲ್ಲಿ ದಾನಿಗಳ ಸಹಕಾರದೊಂದಿಗೆ ಸಾವಿರಾರು ಆಶಕ್ತರ ಮನೆಗಳಿಗೆ ಧರ್ಮಾರ್ಥವಾಗಿ ದಿನಸಿ ಸಾಮಗ್ರಿ ವಿತರಣೆ, ಅಗತ್ಯವಿದ್ದವರಿಗೆ ಔಷಧ ವಿತರಣೆ, ಆಸ್ಪತ್ರೆಗೆ ರವಾನೆ, ಮೂರು ಅಸಹಾಯಕ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣ, ಎರಡು ಮನೆಗಳಿಗೆ ಶೌಚಾಲಯ ನಿರ್ಮಾಣ, ನಾಲ್ಕು ಮನೆಗಳ ದುರಸ್ತಿ ಕಾರ್ಯ ಮಾಡಿರುವ ಇವರಿಗೆ ಕರ್ನಾಟಕ ರಾಜ್ಯ ನೇಕಾರರ ಸಮುದಾಯ ಒಕ್ಕೂಟದಿಂದ ರಾಜ್ಯಮಟ್ಟದ ನೇಕಾರರತ್ನ ಪ್ರಶಸ್ತಿಗೆ ಭಾಜನರಾಗಿರುವ ಇವರು ಮುಲ್ಕಿ ಪುನರೂರುನಲ್ಲಿ ನಡೆದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವರತ್ನ ಪ್ರಶಸ್ತಿ ಮುಡಿಗೇರಿಸಿರುವರು. ಬೆಂಗಳೂರು ಅಲ್ಲಿನ ತುಳುವರ ಚಾವಡಿ ಸಂಘಟನೆ ತುಳುನಾಡ ಸಿರಿ ಪ್ರಶಸ್ತಿ, ತೆರೆಕಾಡು ವಿನಾಯಕ ಯಕ್ಷಕಲಾ ತಂಡವು ಯಕ್ಷ ಕೌಮುದಿ, ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ಮೂಡುಬಿದಿರೆ ಸಂಸ್ಥೆಯು ಸಿರಿಪುರ ಪ್ರಶಸ್ತಿ-2023 ಪ್ರಶಸ್ತಿ ನೀಡಿ ಗೌರವಿಸಿದೆ.

ಭಿನ್ನ ಸಾಮರ್ಥ್ಯದ ಮಕ್ಕಳ ಬದುಕನ್ನು ರೂಪಿಸುವ ಜೊತೆ ಜೊತೆಯಲ್ಲಿ ಸಾಮಾನ್ಯರಂತೆ ಬದುಕಲು ಸಾಧ್ಯವೆನ್ನುವ ಮನೋಭಾವನೆಯನ್ನು ಸಮಾಜದಲ್ಲಿ ಮೂಡಿಸುತ್ತ, ಬದುಕನ್ನು ಅರಳಿಸುವ ಶಿಕ್ಷಣ ನೀಡುವ ಪ್ರಕಾಶ್ ಅವರ ಪವಿತ್ರ ಕಾರ್ಯ ಸರ್ವರಿಗೂ ಸ್ಫೂರ್ತಿಯಾಗಿದೆ. ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮೂಲಕ ನಾಡಿನ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿರುವ ಸಮಾಜಮುಖಿ ಚಿಂತನೆಯ ಪ್ರಕಾಶ್ ಅವರ ವಿಶಾಲ ಮನಸ್ಸಿನ ಸೇವಾಂಕ್ಷಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯ ನೆರವೇರಲಿ. ಈ ಪುಣ್ಯಮಯ ಸೇವೆ ಹೀಗೆ ಮುಂದುವರೆಯಲಿ ಎಂದು ಹಾರೈಸಿದ್ದಾರೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು

Comment Here