Sunday 28th, April 2024
canara news

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ವಿಚಾರ ಸಂಕಿರಣ:

Published On : 14 Dec 2023   |  Reported By : Rons Bantwal


ಒಗಟು ಜಾನಪದ ಸಾಹಿತ್ಯದ ಕಣಜ ವಿದ್ದಂತೆ : ನಂದಳಿಕೆ ನಾರಾಯಣ ಶೆಟ್ಟಿ

ಮುಂಬಯಿ, ಡಿ. 14: ಎಲ್ಲ ಭಾಷೆ, ಪ್ರಾಂತ್ಯ, ಜನಾಂಗಗಳಲ್ಲಿ `ಒಗಟು' ಸ್ಥಾನ ಪಡೆದಿದೆ. ಹಾಗೇ ಒಗಟು ಜಾನಪದ ಸಾಹಿತ್ಯದ ಕಣಜ ವಿದ್ದಂತೆ. ಬುದ್ಧಿಶಕ್ತಿ ಹೆಚ್ಚಿಸುವುದರೊಂದಿಗೆ ಭಾಷಾಜ್ಞಾನ, ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಒಗಟು ಮನೋರಂಜನೆಗೆ ವೇದಿಕೆಯಾಗಿಯೂ ಬಳಕೆಯಾಗುತ್ತಿತ್ತು. ದೊಡ್ಡ ವಿಷಯವನ್ನು ಸೂಕ್ಷ್ಮವಾಗಿ ಹೇಳುವುದೇ ಒಗಟು. ಅವಿಭಕ್ತ ಕುಟುಂಬದಲ್ಲಿಒಗಟು ಹೇಗೆ ಬಳಕೆಯಾಗುತ್ತಿತ್ತು ಎನ್ನುವುದನ್ನು ಕೆಲ ಉದಾಹರಣೆ ಮೂಲಕ ವಿವರಿಸಿದ ಅವರು ಕೆಲ ಕ್ಲಿಷ್ಟ ಸಮಸ್ಯೆಗೆ ಒಗಟು ಪರಿಹಾರ ನೀಡುವುದೂಇದೆ. ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೆ ಒಳಪಡುತ್ತ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಮೌಖಿಕ ರೂಪದಲ್ಲಿರುವ ಇದು ಜನರ ಬಾಯಿಂದ ಬಾಯಿಗೆ ತಲುಪಿ ತನ್ನತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ಕನ್ನಡ ವೆಲ್ಫೇರ್ ಸೊಸಾಯಿಟಿ ಘಾಟ್ಕೋಪರ್ ಇಲ್ಲಿ ಹಮ್ಮಿಕೊಂಡ `ಒಗಟುಗಳು ಹಾಗೂ ಜಾನಪದ ವೈವಿಧ್ಯ' ಎಂಬ ವಿಚಾರ ಸಂಕಿರಣದ ಕಳೆದ ರವಿವಾರ (ಡಿ. 10) ರವಿವಾರ ನೇರವೇರಿದ್ದು, ಅಧ್ಯಕ್ಷತೆ ವಹಿಸಿದ ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಭ್ಯಾಗತರಾಗಿ ಆಗಮಿಸಿದ್ದ ಹಿರಿಯ ರಂಗತಜ್ಞ ಡಾ| ಪ್ರಭು ಅಂಗಡಿ ತಮ್ಮ ವಿಚಾರ ಮಂಡಿಸುತ್ತಾ ಜಾನಪದದ ಅನೇಕ ಪ್ರಕಾರಗಳಲ್ಲಿ ಒಗಟು ಪ್ರಮುಖವಾದದ್ದು. ಒಬ್ಬರು ಮತ್ತೊಬ್ಬರಿಗೆ ಒಡ್ಡುವ ಸವಾಲು. ಒಂದು ವಸ್ತುವನ್ನುಇನ್ನೊಂದು ವಸ್ತುವಿನ ಮೂಲಕ ಮೋಡಿಯ ಮಾದರಿಯಲ್ಲಿ ರಚಿಸಿ ಅದರಲ್ಲಿ ಅಡಕವಾಗಿರುವ ಅವ್ಯಕ್ತ ವಸ್ತುವನ್ನು ಕಂಡು ಹಿಡಿಯುವಂತೆ ಕೇಳಿಕೊಳ್ಳುವ ಒಂದು ಪ್ರಕಾರ ಒಗಟು. ಒಗಟಿನಲ್ಲಿ ಎರಡು ಸಮರೂಪದ ವಸ್ತುಗಳಿರಬೇಕು. ಒಂದು ಉಪಮಾನ ಇನ್ನೊಂದು ಉಪಮೇಯ. ಉಪಮಾನ ಅವಾಚ್ಯವಾಗಿರುತ್ತದೆ. ಉಪಮೇಯ ನಿಗೂಢವಾಗಿ ಅಂದರೆ ಗುಟ್ಟಾಗಿರುತ್ತದೆ. ಅದನ್ನುರಟ್ಟು ಮಾಡುವಂತೆ ಕೇಳಿಕೊಳ್ಳುವುದೇ ಒಗಟು. ಈ ಒಗಟುಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೂ ಇರುತ್ತವೆ ಎಂದು ಉದಾಹರಣೆ ಮೂಲಕ ವಿವರಿಸಿದರು.

ಇನ್ನೋರ್ವ ಅಭ್ಯಾಗತರಾದ ಲತಾ ಸಂತೋಷ ಮುದ್ದುಮನೆ ಒಗಟು ಹಾಗೂ ಜಾನಪದ ವೈವಿಧ್ಯತೆ ಕುರಿತು ವಿವರಿಸುತ್ತ ಪ್ರಕೃತಿಯಲ್ಲಿರುವ ಒಳ್ಳೆಯದೆಲ್ಲವನ್ನು ಆರಳಿಸಿ, ಬೆಳಗಿಸಲು ಪ್ರಯತ್ನಿಸುತ್ತಿದ್ದ ನಮ್ಮ ಪೂರ್ವಜರು ಮುಂಜಾನೆ ಮೂಡಣ ದಿಕ್ಕಿನಲ್ಲಿ ಮೂಡುವ ಸೂರ್ಯನಿಗೆ ಕೈ ಜೋಡಿಸಿ ವಂದಿಸಿದ ಮೇಲೆ ಪದಕಟ್ಟಿ ಹಾಡಿಕುಣಿಯುವಜನಪದರ ಬದುಕು ನಿತ್ಯನೂತನವಾಗಿತ್ತು. ಅವರ ನಿತ್ಯದ ಅನುಭವೇ ಜಾನಪದ, ಜನರನ್ನು, ಸಮಾಜವನ್ನುಒಟ್ಟುಗೂಡಿಸುವ ಶಕ್ತಿ ಅವರಿಗಿತ್ತು. ಬಾಯಿಂದ ಬಾಯಿಗೆ ಹರಿದು ಬಂದ ಸಿರಿ ಮುತ್ತುಗಳೇ ಜಾನಪದಗಾದೆ, ಒಗಟು, ಶೋಭಾನೆ ಸೇರಿದಂತೆ ಹಲವು ಪ್ರಕಾರಗಳ ವೈವಿಧ್ಯತೆಯೇ ಜಾನಪದ ಭಂಡಾರಎಂದರು.

ಇನ್ನೋರ್ವಅಭ್ಯಾಗತರಾದ ಸರೋಜಾ ಅಮಾತಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತ ತಮ್ಮ ಬಾಲ್ಯ ಹಾಗೂ ಹಿರಿಯರೊಂದಿಗಿನ ಒಡನಾಟವನ್ನು ನೆನಪಿಸುತ್ತ ಉತ್ತರ ಕರ್ನಾಟಕದ ಜಾನಪದದ ವಿವಿಧ ಪ್ರಕಾರವನ್ನು ವಿವರಿಸಿದರು. ಸಾಂಕೇತತೆಯಲ್ಲಿಅಭಿವ್ಯಕ್ತಿಗೊಂಡ ಸಂಕ್ಷಿಪ್ತಕಾವ್ಯವೇ `ಒಗಟು'. ಕೃಷಿಕರ ಬದುಕು ಜನಪದದೊಂದಿಗೆ ಬೆರೆತಿದೆ. ಪ್ರಕೃತಿಯ ಮಣ್ಣಿನೊಂದಿಗೆ ಯಾರು ನಿಕಟವಾಗಿರುತ್ತಾರೋ ಅವರು ಜಾನಪದವನ್ನು ಸವಿಯುತ್ತಾರೆ, ಪ್ರಕೃತಿಯಲ್ಲಿನ ಪ್ರತಿಯೊಂದನ್ನು ಗೌರವಿಸಿ ಅವುಗಳ ಮಹತ್ವವನ್ನುಕಿರಿಯರಿಗೆ ತಲುಪಿಸಿ ಸಮಾಜಕ್ಕೆ ಪ್ರಕೃತಿಯ ಮಹತ್ವ ತಿಳಿಸುವಲ್ಲಿ ಯಶಸ್ವಿಯಾಗುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೋರ್ವ ಅಭ್ಯಾಗತರಾದ ಇಂದಿರಾ ಕುಲಕರ್ಣಿ ಅವರು ತಾತ - ಮುತ್ತಾತ, ಅಜ್ಜಿ -ಮುತ್ತಜ್ಜಿಯರಿಂದ ಬಂದ ಈ ಜಾನಪದ ಸಂಸ್ಕೃತಿಯಲ್ಲಿ ಬುದ್ಧಿ ಅಳೆಯುವ ಗುಣವಿದೆ. ನಮ್ಮ ಪೂರ್ವಜರುತಮ್ಮಅನುಭವದ ಬುತ್ತಿಯನ್ನು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿರುವರು. ಇದನ್ನು ನಾವು ಬಳಸಿದಷ್ಟು ಅದುಜೀವಂತಿಕೆ ಪಡೆಯುತ್ತದೆ. ಹಾಗೆಯೇ ಮುಂದಿನ ಪೀಳಿಗೆಗೆ ಹಸ್ತಾಂತರಗೊಳ್ಳಲು ಸಾಧ್ಯ. ಇದರಲ್ಲಿ ಗಣಿತವಿದೆ, ಇತಿಹಾಸವಿದೆ. ವಿಜ್ಞಾನವಿದೆ, ಪ್ರಕೃತಿಯ ಸೊಬಗಿದೆ. ಇದನ್ನು ಬಳಸಿ - ಉಳಿಸುವತ್ತ ಗಮನಹರಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ವೆಲ್ಫೇರ್ ಸೊಸಾಯಿಟಿಯ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆ ನಾಡು-ನುಡಿ ಸೇರಿದಂತೆಜನ-ಪರ ಕಾರ್ಯಗಳಿಗೆ ನಮ್ಮ ಸೊಸಾಯಿಟಿ ಸದಾ ಸ್ಪಂದಿಸುತ್ತದೆ. ಇಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯಚಟುವಟಿಕೆ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಡಾ| ಸತೀಶ ಬಂಗೇರ ಉಪಸ್ಥಿತರಿದ್ದರು. ಪ್ರತಿಷ್ಠಾನದ ನಿಕಟಪೂರ್ವಅಧ್ಯಕ್ಷರಾದ ವಿ. ಆರ್. ಭಟ್, ಅತಿಥಿ ಅಭ್ಯಾಗತರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜ್ ವರ್ಮ ಜೈನ್, ನಿತ್ಯ ಮುಂಡ್ಕೂರ ಸಹಕರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಪ್ರತಿಷ್ಠಾನದ ಹಿತೈಷಿ, ಸಂಘಟಕ ಶೇಖರಅಜೆಕಾರ್‍ಅವರನ್ನು ನೆನೆದುಒಂದು ನಿಮಿಷದ ಮೌನಾಚರಣೆ ಮೂಲಕ ಸದ್ಗತಿ ಕೋರಲಾಯಿತು.

ಮಾಲತಿ ಪುತ್ರನ್ ಸಂಗಡಿಗರು ಹಾಗೂ ಕನ್ನಡ ವೆಲ್ಫೇರ್ ಸೊಸಾಯಿಟಿಯ ಮಹಿಳಾ ವಿಭಾಗದ ಸದಸ್ಯೆಯರಲ್ಲದೆ ಶ್ರೀಕಾಂತ ಅಮಾತಿ ಅವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವೀಣಾ ಶೆಟ್ಟಿಯವರ ಪ್ರಾರ್ಥನೆ ಹಾಗೂ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸವಿತಾ ಎಸ್. ಶೆಟ್ಟಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಗೌ. ಪ್ರ. ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರತಿಷ್ಠಾನದ ಕಾರ್ಯಚಟುವಟಿಕೆ ಕುರಿತು ವಿವರಿಸಿದರಲ್ಲದೆ ಇಂದಿನ ಒಗಟು ಹಾಗೂ ಜಾನಪದ ವೈವಿಧ್ಯತೆ ಕಾರ್ಯಕ್ರಮದ ಕುರಿತು ವಿವರಿಸಿದರು. ಲಕ್ಷ್ಮೀ ಹೇರೂರ ಕಾರ್ಯಕ್ರಮ ನಿರೂಪಣೆ ಮಾಡಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here