Saturday 27th, July 2024
canara news

ನೇಜಾರ್ ಹತ್ಯೆ ಪ್ರಕರಣ ; ಪೆÇಲೀಸ್ ಅಧಿಕಾರಿಗಳಿಗೆ ಐಜಿಪಿ ಬಹುಮಾನ

Published On : 12 Dec 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಡಿ.12: ಇತ್ತೀಚಿಗೆ ಉಡುಪಿ ಜಿಲ್ಲೆಯ ನೇಜಾರ್‍ನಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಜನರನ್ನು ಹತ್ಯೆ ಮಾಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದ ಏಕೈಕ ಆರೋಪಿ ಪ್ರವೀಣ್ ಚೌಗುಳೆ ಆತನನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಶ್ರಮವಹಿಸಿದ ಉಡುಪಿ, ಮಂಗಳೂರು, ಬೆಳಗಾವಿಯ ಒಟ್ಟು 41 ಪೆÇಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ರೂಪಾಯಿ 1,42,500 ಮೊತ್ತವನ್ನು ಬಹುಮಾನವಾಗಿ ಕರ್ನಾಟಕ ರಾಜ್ಯದ ಪಶ್ಚಿಮ ವಲಯದ ಐಜಿಪಿ ಡಾ| ಚಂದ್ರ ಗುಪ್ತ ಅವರ ಶಿಫಾರಸ್ಸಿನಂತೆ ಡೈರೆಕ್ಟರ್ ಜನರಲ್ ಆಫ್ ಪೆÇೀಲಿಸ್ ಅಲೋಕ್ ಮೋಹನ್ (ಐಪಿಎಸ್) ಮಂಜೂರು ಮಾಡಿರುತ್ತಾರೆ.

ಈ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತಿದ್ದು ಪ್ರಸ್ತುತ ಆಂತರಿಕ ಭದ್ರತೆ ಇಲಾಖೆಯ ಇಂಟರ್‍ನಲ್ ಸೆಕ್ಯೂರಿಟಿ ಡಿವಿಜನ್ (ಐಎಸ್‍ಡಿ) ಕರ್ತವ್ಯದಲ್ಲಿನ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಗೋಪಾಲಕೃಷ್ಣ ಕುಂದರ್ ಆರೋಪಿಯ ಚಹರೆ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಎಸ್‍ಐ ಗೋಪಾಲಕೃಷ್ಣ ಇವರಿಗೆ ರೂಪಾಯಿ 2,500 ನಗದು ಬಹುಮಾನ ಹಾಗೂ ಪ್ರಶಂಸನಾಪತ್ರ ನೀಡಿ ಗೌರವಿಸಲಾಗಿದೆ.

 




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here