Friday 29th, March 2024
canara news

ಅಂಬರ್ ಕೆಟರರ್ಸ್ ತುಳುಚಿತ್ರ ಚಿತ್ರೀಕರಣ ಬಹುತೇಕ ಪೂರ್ಣ

Published On : 21 Dec 2016   |  Reported By : Rons Bantwal


ತುಳು ಭಾಷೆಯ ನಟನಾ ಆಸೆ ಈಡೇರಿದೆ : ಭಾರತಿ ವಿಷ್ಣುವರ್ಧನ್

(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ಡಿ.20: ತುಳು ಭಾಷೆಯ ಚಿತ್ರದಲ್ಲಿ ಅಭಿನಯಿಸಬೇಕೆಂಬ ಬಹುದಿನಗಳ ಆಸೆ ಅಂಬರ್ ಕೇಟರರ್ಸ್ ತುಳು ಚಿತ್ರದ ಮೂಲಕ ತುಳು ಭಾಷೆಯ ನಟನಾ ಆಸೆ ಈಡೇರಿದೆÉ. ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಜನತೆ ನೋಡಿ ಪೆÇ್ರೀತ್ಸಾಹಿಸಬೇಕು ಎಂದು ಖ್ಯಾತ ಚಿತ್ರನಟಿ ಭಾರತಿ ವಿಷ್ಣುವರ್ಧನ್ ಮನವಿ ಮಾಡಿದ್ದಾರೆ.

ಮಂಗಳವಾರ ಮಂಗಳೂರಿನಲ್ಲಿ ಅಂಬರ್ ಕೆಟರರ್ಸ್‍ನ ಅಂತಿಮ ಕೆಲವು ದೃಶ್ಯಗಳ ಚಿತ್ರೀಕರಣದ ವೇಳೆ ಸುದ್ದಿಗೋಷ್ಠಿಯಲ್ಲಿ ಭಾರತಿ ವಿಷ್ಣುವರ್ಧನ್ ಮಾತನಾಡಿ ಇತರ ಚಿತ್ರರಂಗದಂತೆ ತುಳು ಚಿತ್ರರಂಗ ಕೂಡ ಬೆಳವಣಿಗೆಯನ್ನು ಕಾಣುತ್ತಿದ್ದು, ಅನೇಕ ಮಂದಿ ಕಲಾವಿದರು ಬೆಳಕಿಗೆ ಬರುವಂತಾಗಿದೆ. ನನಗೂ ತುಳು ಭಾಷೆಯಲ್ಲಿ ನಟಿಸಬೇಕೆಂಬ ಆಸೆ ಇತ್ತು, ಅದೀಗ ಈಡೇರಿದೆ. ಮಂಗಳೂರಿನಲ್ಲಿ ಚಿತ್ರವನ್ನು ವೀಕ್ಷಿಸಿ ಪೆÇ್ರೀತ್ಸಾಹಿಸುವ ಹೆಚ್ಚಿನ ಅಭಿಮಾನಿಗಳಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.

ಕನ್ನಡ ಚಿತ್ರರಂಗದ ಖ್ಯಾತ ನಟ ಶರತ್ ಲೋಹಿತಾಶ್ವ ಮಾತನಾಡಿ, ಭಾಷೆಗೆ ಭಾವನೆಯಷ್ಟೇ ಮುಖ್ಯ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಕೊಡುವ ಕೆಲಸವನ್ನು ಕಲಾವಿದ ಮಾಡಬೇಕು. ತುಳು ಭಾಷೆಯಲ್ಲಿ ಮೊದಲ ಬಾರಿಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದರು.

ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವೊಂದು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಜನತೆ ಮೆಚ್ಚುವ ರೀತಿಯಲ್ಲಿ ಚಿತ್ರ ಹೊರಬರಲಿದೆ ಎಂದು ಅಂಬರ್ ಕೆಟರರ್ರ್ಸ್ ನಿರ್ದೇಶಕ ಜಯಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ, ನಾಯಕ ನಟ ಸೌರಭ್ ಸುರೇಶ್ ಭಂಡಾರಿ, ಚಿತ್ರದ ನಾಯಕಿ ಸಿಂಧು ಲೋಕನಾಥ್, ನವೀನ್ ಡಿ.ಪಡೀಲ್, ಕೌರವ್ ವೆಂಕಟೇಶ್, ಸುನೇತ್ರ ಮತ್ತಿತರರು ಉಪಸ್ಥಿತರಿದ್ದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here