Thursday 18th, April 2024
canara news

ನ.01: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಕವಿಗೋಷ್ಠಿ

Published On : 31 Oct 2020   |  Reported By : Rons Bantwal


ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಅವರಿಗೆ ರಾಜ್ಯೋತ್ಸವ ಗೌರವ ಪ್ರದಾನ

ಮುಂಬಯಿ (ಆರ್‍ಬಿಐ), ಅ.31: ಕನ್ನಡರಾಜ್ಯೋತ್ಸವ ಪ್ರಯುಕ್ತ ನ.01ನೇ ಭಾನುವಾರ ಮಧ್ಯಾಹ್ನ 2.30 ಗಂಟೆಗೆ ಮಂಗಳೂರು ಕೊಡಿಯಾಲ್‍ಬೈಲ್‍ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

Pradeep Kumar Kalkura

Dr Sadananda Suvarna

ಸರಕಾರಿ ಪ್ರಥಮದರ್ಜೆಕಾಲೇಜು ರಥಬೀದಿ ಇಲ್ಲಿನ ಸಹಾಯಕ ಪ್ರಾಧ್ಯಾಪಕಿ ಡಾ| ಜಯಶ್ರೀ ಬಿ. ಕದ್ರಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಕವಿಗಳಾದ ಎಂ.ಕೃಷ್ಣ ಬರ್ವೆ, ಉಷಾ ಮಂದಾರ ಕಾಳೆ, ಡಾ.ಮಹೇಶ್ ಕೆ.ಕೆ., ಸ್ಮಿತಾ ಕಣಿಯೂರು, ಪ್ರವೀಣ್ ಬೈಕಂಪಾಡಿ, ಇಬ್ರಾಹಿಂ ಖಲೀಲ್ ಪುತ್ತೂರು, ಸತ್ಯನಾರಾಯಣ ಹಾಗೂ ಲಕ್ಷ್ಮೀ ಬಡಗ ಯೆಕ್ಕಾರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿರುವರು. ಇದೇ ಸಂದರ್ಭ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಅವರಿಗೆ ರಾಜ್ಯೋತ್ಸವ ಗೌರವ ಪ್ರದಾನ ಮಾಡಲಾಗುವುದು.

ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ ಶೆಟ್ಟಿ ಡೆಂಟಲ್‍ಕಾಲೇಜಿನ ಸ್ಟೂಡೆಂಟ್ಸ್ ವೆಲ್ಫೇರ್‍ಎಸೋಸಿಯೇಟ್ ಡೀನ್ ಡಾ| ಅಮರಶ್ರೀ ಅಮರನಾಥ ಶೆಟ್ಟಿ ದೀಪ ಪ್ರಜ್ವಲಿಸಿ ರಾಜ್ಯೋತ್ಸವ ಸಂದೇಶ ನೀಡಲಿರುವರು. ಶಾರದಾ ವಿದ್ಯಾಲಯದಅಧ್ಯಕ್ಷರಾದ ಪೆÇ್ರ| ಎಂ.ಬಿ ಪುರಾಣಿಕ್, ಗಡಿನಾಡ ಸಾಹಿತ್ಯ ಸಂಸ್ಕೃತಿಅಕಾಡೆಮಿ, ಕಾಸರಗೋಡು ಇದರ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬದನಗದ್ದೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಉಪಸ್ಥಿತರಿರುವರು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here