Sunday 16th, May 2021
canara news

ಮಾಪಥಾನ್ 2020-21 ; ಎಂಐಟಿಇ ಮೂಡಬಿದ್ರೆ ಸಿವಿಲ್ ಇಂಜಿನಿಯರಿಂಗ್‍ನ ಪ್ರಾಧ್ಯಾಪಕ ಡಾ| ಜಯಪ್ರಕಾಶ್ ಎಂ.ಸಿ ನೇತೃತ್ವದ ತಂಡ ವಿಜೇತ

Published On : 20 Feb 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಫೆ.16: ಐಐಟಿ ಬಾಂಬೇ (ಮುಂಬಯಿ), ಎಐಸಿಟಿಇ ಮತ್ತು ಇಸ್ರೋ ಸಂಸ್ಥೆಗಳು ಜಂಟಿಯಾಗಿ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿರುವ ಮಾಪಥಾನ್ 2020-21 (ರಾಷ್ಟ್ರೀಯ ಮಟ್ಟದ ಸಹಕಾರಿ ಭಾರತೀಯ ಮ್ಯಾಪಿಂಗ್ ಈವೆಂಟ್) ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಬಡಗ ಮಿಜಾರು ಇಲ್ಲಿನ ಮ್ಯಾಂಗಳೂರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಎಂಐಟಿಇ) ಇದರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ| ಜಯಪ್ರಕಾಶ್ ಎಂ.ಸಿ ನೇತೃತ್ವದ ತಂಡ ವಿಜೇತ ಗೊಂಡಿದೆ.

ಭಾರತ ರಾಷ್ಟ್ರದ ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರಾರಂಭಿಸಿದ ಆತ್ಮ ನಿರ್ಭಾರ್ ಭಾರತ್ ಯೋಜನೆಯ ಅಡಿಯಲ್ಲಿ ರಾಷ್ಟ್ರದಾದ್ಯಂತ ನಡೆಸಲ್ಪಟ್ಟ ಕಾರ್ಯಕ್ರಮ ಯಾ ಸ್ಪರ್ಧೆಯಲ್ಲಿ ಸುಮಾರು 9,000ಕ್ಕೂ ಅಧಿಕ ಪ್ರತಿಭಾನ್ವಿತರು ಗಮನಾರ್ಹವಾಗಿ ಪಾಲ್ಗೊಂಡಿದ್ದು ಸುಮಾರು 478 ತಂಡ ಯಾ ಶೈಕ್ಷಣಿಕ ಸಂಸ್ಥೆಗಳ ಪೈಕಿ 175 ವಿಜೇತರೆಣಿಸಿದ್ದು 25 ಚಾಂಪಿಯನ್ಸ್ ಆಗಿದ್ದವು. ಈ ಫಲಿತಾಂಶದಲ್ಲಿ ಎಂಐಟಿಇ ಇದರ ಡಾ| ಜಯಪ್ರಕಾಶ್ ಎಂ.ಸಿ ತಂಡ ವಿಜೇತ ಗೊಂಡಿದೆ.

ಮ್ಯಾಪಥಾನ್ ಎನ್ನುವುದು ನಿರ್ಧಿಷ್ಟ ಸಮಸ್ಯೆ ಹೇಳಿಕೆಗಾಗಿ ನಕ್ಷೆ ತಯಾರಿಸುವ ಸ್ಪರ್ಧೆ ಆಗಿದ್ದು, ಐಐಟಿ ಬಾಂಬೇ, ಎಐಸಿಟಿಇ ಮತ್ತು ಇಸ್ರೋ ಜಂಟಿಯಾಗಿ ಆಯೋಜಿಸಿರುವ ಈ ಸ್ಪರ್ಧೆಗೆ ಸಮಗ್ರ ಭಾರತೀಯರನ್ನು ಆಹ್ವಾನಿಸುತ್ತದೆ. ಭಾರತೀಯ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಿಕೊಂಡು ನಕ್ಷೆಗಳನ್ನು ತಯಾರಿಸಲು ಇದೊಂದು ಪಂಥಹ್ವ್ವಾನ ನೀಡುತ್ತದೆ. ಭಾರತೀಯ ರಿಮೋಟ್ ಸೆನ್ಸಿಂಗ್ ಡೇಟಾದ ಸಾಮರ್ಥ್ಯ ಅರ್ಥಮಾಡಿ ಕೊಳ್ಳುವುದು ಮತ್ತು ಉಚಿತ ಮುಕ್ತ ಸಂಪನ್ಮೂಲ ನಕಾಸೆ ತಂತ್ರಾಂಶ (ಓಪನ್ ಸೋರ್ಸ್ ಮ್ಯಾಪಿಂಗ್ ಸಾಫ್ಟ್‍ವೇರ್) ಕ್ಯೂಜಿಐಎಸ್ ಬಳಸಿ ಭಾರತೀಯ ಪ್ರದೇಶಗಳಿಗೆ ನಕ್ಷೆಗಳನ್ನು ತಯಾರಿಸುವ ಪ್ರಾಥಮಿಕ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಭಾರತೀಯ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಿಕೊಂಡು ಭಾರತದ ವಿಷಯಾಧಾರಿತ ನಕ್ಷೆಗಳನ್ನು ಜಂಟಿಯಾಗಿ ತಯಾರಿಸಲು ಕ್ರೌಡ್‍ಸೋರ್ಸಿಂಗ್ ವಿಧಾನದಲ್ಲಿ ಒಟ್ಟಾಗಿ ಕೆಲಸ ಮಾಡಲಾಗುವುದು. ದೇಶವನ್ನು ಆತ್ಮ ನಿರ್ಭಾರ ಭಾರತ್ ಮತ್ತು ಜಾಗತಿಕ ಜಿಐಎಸ್ ಕೇಂದ್ರವನ್ನಾಗಿ ಮಾಡುವ ಕಡೆಗೆ ಬಾಹ್ಯಾಕಾಶ ಅನ್ವಯಗಳಲ್ಲಿ ದೇಶದಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಇದು ಪ್ರಯೋಜನಕಾರಿ ಆಗಿದ್ದು, ಸಹಕಾರಿ ಸಮಸ್ಯೆ ಪರಿಹಾರಕ್ಕಾಗಿ ಸಕ್ರಿಯಗೊಳಿಸುವ ವೇದಿಕೆ ಇದಾಗಿದೆ.

 
More News

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Comment Here