Saturday 20th, April 2024
canara news

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ

Published On : 13 Jun 2021   |  Reported By : Rons Bantwal


ಜೂ.12-18ರ ಆರು ದಿನ ತುಳುವಿನಲ್ಲಿ ಭಗದ್ಗೀತೆಯ ಸಾರ ಕಾರ್ಯಕ್ರಮ

ಮುಂಬಯಿ (ಆರ್‍ಬಿಐ), ಜೂ.12: ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ ತುಳುವಿನಲ್ಲಿ ಭಗದ್ಗೀತೆಯ ಸಾರ ಕಾರ್ಯಕ್ರಮವು ಇಂದಿನಿಂದ (ಜೂ.13 ) ಸತತವಾಗಿ 6 ದಿನಗಳ ಕಾಲ ಪ್ರತೀದಿನಾ ಸಂಜೆ 7.00 ಗಂಟೆಯಿಂದ ರಾತ್ರಿ 8-15 ಗಂಟೆಯ ವರೆಗೆ ಮೂಡಿ ಬರಲಿದೆ.

ಇಂದಿನಿಂದ ಒಟ್ಟು ಸತತ ಆರು ದಿನ ಕಾರ್ಯಕ್ರಮ ನಡೆಯಲಿದ್ದು ಇಂದು ಭಾನುವಾರ ಶ್ರೀ ಶ್ರೀ ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಅವರು ಇದನ್ನು ನಡೆಸಿ ಕೊಡುವರು. ತುಳು ವಿಶ್ವ ಸಮ್ಮೇಳನ ಯಶಸ್ವಿ ರೂವಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಲ್ಫ್ ರಾಷ್ಟ್ರದ ಅಬುಧಾಭಿ ಅಲ್ಲಿನ ಅಪ್ರತಿಮ ಸಂಘ್ಟಕ ಸರ್ವೋತ್ತಮ ಶೆಟ್ಟಿ ಅವರು ಇಂದು ಉದ್ಘಾಟಿಸುವರು.

ಹೊಸ ಯೋಜನೆ ಯೋಚನೆಯ ಕಾರ್ಯಕ್ರಮಕ್ಕೆ ಮನೆಯಲ್ಲಿದ್ದೆ ಆನ್ ಲೈನ್ ಮೂಲಕ ನೋಡಿ ಕೇಳಿ ದೇವರ ಕೃಪೆಗೆ ಪಾತ್ರರಾಗಲು ಇದೊಂದು ನೂತನ ಯೋಚನೆ, ಅನುಭವ ಮತ್ತು ಪ್ರಯತ್ನವಾಗಿದೆ ಎಂದು ಟೀಮ್ ಐಲೇಸಾ ಇದರ ಸುರೇಂದ್ರಕುಮಾರ್ ಮಾರ್ನಾಡ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿಸುವವರು ಆನ್‍ಲೈನ್‍ನಲ್ಲಿ ಝುಮ್ ಐಡಿ 87604595039 ಪಾಸ್ ವಾರ್ಡ್:1234 ಮೂಲಕ ಪಾಲ್ಗೊಳ್ಳಬಹುದು ಎಂದು ಟೀಮ್ ಐಲೇಸಾ ತಿಳಿಸಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here