Wednesday 24th, April 2024
canara news

ಪುಡಾರಿಗಳ ಪ್ರಭಾವಕ್ಕೆ ಮಣಿಯದ ಬಾಡಿ ಬಿಲ್ಡರ್; ಡೈನಾಮಿಕ್ ಪೊಲೀಸ್ ಅಧಿಕಾರಿ

Published On : 26 Jun 2021   |  Reported By : Rons Bantwal


ರಾಷ್ಟ್ರಪತಿ ಪುರಸ್ಕೃತ ಬಂಟ್ವಾಳ ಡಿವೈಎಸ್‍ಪಿ ವಲೈಂಟಾಯ್ನ್ ಡಿಸೋಜಾ

ಮುಂಬಯಿ (ಆರ್‍ಬಿಐ), ಜೂ.26: ಕರ್ನಾಟಕ ಕರಾವಳಿಯ ದ.ಕ ಜಿಲ್ಲೆಯ ಬಂಟ್ವಾಳಕ್ಕೆ ಬರುವ ಪೆÇಲೀಸ್ ಅಧಿಕಾರಿಗಳು ಇಲ್ಲಿನ ಶಾಸಕರ, ಸಚಿವರ ಜೀತದಾಳುಗಳಾಗಿ ಬಾಳ ಬೇಕಾಗುತ್ತದೆ. ಅವರು ಹೇಳಿದಂತೆ ಕೇಳದ ಪೆÇಲೀಸ್ ಅಧಿಕಾರಿಗಳು ಮರುದಿನವೇ ವಗಾ9ವಣೆ ಆಗುತ್ತಾರೆ. ಹೇಳಿದಂತೆ ಕೇಳುವ ಅಧಿಕಾರಿಗಳು ಯಾವುದೇ ತೊಂದರೆ ಇಲ್ಲದೆ ಅಲ್ಲಿ ಮುದುಡಿಕೊಂಡು ಬದುಕಿಕೊಳ್ಳಬಹುದು. ಮಾಜಿ ಸಚಿವರೋರ್ವರು ಹೇಳಿದಂತೆ ತಲೆಯಾಡಿಸಿಲ್ಲ ವೆಂಬ ಕಾರಣಕ್ಕೆ ಹಿಂದಿನ ಎಸ್‍ಪಿ ಸುಧೀರ್ ರೆಡ್ಡಿ, ಇನ್ಸ್ ಪೆಕ್ಟರ್ ಆಶೋಕನ್ ಕೆಲವೇ ದಿನಗಳಲ್ಲಿ ಮರು ವಗಾ9ವಣೆಗೊಂಡದ್ದು ಇದಕ್ಕೊಂದು ಸ್ಪಷ್ಟ ಉದಾಹರಣೆ.

ಕೆಲ ಸಮಯಗಳ ಹಿಂದೆ ದ.ಕ.ಜಿಲ್ಲೆ ಹಾಗೂ ಉಡುಪಿಯ ಡೈನಾಮಿಕ್ ಪೊಲೀಸ್ ಅಧಿಕಾರಿ ಎಂದೇ ಪ್ರಸಿದ್ಧರಾಗಿರುವ ವಲೈಂಟಾಯ್ನ್ ಡಿಸೋಜಾ ಬಂಟ್ವಾಳ ಉಪ ವಿಭಾಗದ ಡಿವೈಎಸ್‍ಪಿ ಆಗಿ ಅಧಿಕಾರ ವಹಿಸಿಕೊಂಡಿರುವುದು, ಬಂಟ್ವಾಳ, ವಿಟ್ಲ, ಬೆಳ್ತಂಗಡಿಗೆ ಒಂದು ಶೋಭೆ ತಂದಿದೆ. ಮಧ್ಯವತಿ9ಗಳ, ರಾಜಕೀಯ ಪುಡಾರಿಗಳ ಯಾವುದೇ ಅಮಿಷ ಒತ್ತಡಗಳಿಗೆ ಬಲಿಯಾಗದೆ ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಸೇವೆ ಗೈದು ಧೀರ ಪೆÇಲೀಸ್ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ವಲೈಂಟಾಯ್ನ್ ಅವರು ಮಂಗಳೂರು ಸಿಸಿಬಿ, ಉಡುಪಿ, ಕಾರ್ಕಳ, ಮಲ್ಪೆ, ಭಟ್ಕಳ, ಕಾರವಾರ ಮೊದಲಾಡೆಗಳಲ್ಲಿ ಮಾಡಿದ ಅತ್ಯಮೋಘ ಸೇವೆಯನ್ನು ಅಲ್ಲಿನ ಜನತೆ ಇಂದು ಸಹ ಸ್ಮರಿಸುತ್ತಾರೆ.

ಸರಕಾರಕ್ಕೆ ಸವಾಲಾದಂತಹ ಅನೇಕ ಉಗ್ರ ಪ್ರಕರಣಗಳನ್ನು ಪತ್ತೆಹಚ್ಚಿ ರಾಷ್ಟ್ರಪತಿಗಳ ಪದಕ, ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಸರಕಾರದ ವಿಶೇಷ ಪ್ರಶಸ್ತಿಗಳನ್ನು ಗಳಿಸಿದ ವಲೈಂಟಾಯ್ನ್ ಡಿಸೋಜಾ, ಪೆÇಲೀಸ್ ಇಲಾಖೆಯಲ್ಲಿ ಒಂದು ಇತಿಹಾಸವಾಗಿದ್ದಾರೆ.

ಬಂಟ್ವಾಳ ಉಪ ವಿಭಾಗದ ವ್ಯಾಪ್ತಿಯ ವಿಟ್ಲ, ಬಂಟ್ವಾಳ, ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದ ಕೋಮು, ಗಲಭೆ, ಪುಂಡಾಟಿಕೆ, ಸಮಾಜ ಬಾಹಿರ ಚಟುವಟಿಕೆಗಳಂತಹ ಎಲ್ಲಾ ಅನಿಷ್ಟಕಾರಿ ಪ್ರವೃತ್ತಿಗಳನ್ನು ಅಮೂಲಾಗ್ರವಾಗಿ ನಿಗ್ರಹಿಸಿ ಕಳೆದ ಎರಡು ವಷ9ಗಳಿಂದ ಬಂಟ್ವಾಳ ಉಪ ವಿಭಾಗದಲ್ಲಿ ಡಿವೈಎಸ್‍ಪಿ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ವಿಜೃಂಭಿಸುತ್ತಿರುವ ಡಿಸೋಜ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು. ಪ್ರತಿಭಾನ್ವಿತ ಉತ್ತಮ ಕ್ರೀಡಾಪಟುಗಳೂ, ಬಾಡಿ ಬಿಲ್ಡರ್ (ದೇಹದಾಡ್ಯ) ಸ್ಪಧೆ9ಯಲ್ಲಿ ಸ್ವರ್ಣ ಪದಕಗಳ ವಿಜೇತ ಆಗಿರುವ ಡಿಸೋಜ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಲಾಜ್ ವೇಗಸ್‍ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಸ್ವಾಭಾವಿಕ ದೇಹಾಂಡ್ಯ (ಬೋಡಿ ಬಿಲ್ಡಿಂಗ್) ಸ್ಪರ್ಧೆಯಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ (ಆವಾಗ ಮಂಗಳೂರುನಲ್ಲಿ ಎಸಿಪಿ ಆಗಿದ್ದರು) ಸ್ಪರ್ಧಿಸಿ ವಿಜೇತರಾಗಿದ್ದರು. ಪೆÇಲೀಸ್ ಇಲಾಖೆಗೆ ಹೇಳಿ ಮಾಡಿಸಿದ್ದ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಕಾಕೋ9ಟಕ ಸಾಪ್ತಾಹಿಕ ಸಂಪಾದಕರು ಶೇಖ್ ಎಂದು ಬಣ್ಣಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here