Wednesday 1st, May 2024
canara news

`ಚಂಡಿಕೋರಿ' ತುಳು ಚಿತ್ರಕ್ಕೆ ಮಹೂರ್ತ

Published On : 25 Apr 2015   |  Reported By : Rons Bantwal


ಮಂಗಳೂರು : ತುಳು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಖ್ಯಾತ ನಾಟಕಕಾರ, ನಟ, ನಿದೇ೯ಶಕ ದೇವದಾಸ್ ಕಾಪಿಕಾಡ್ ಅವರ ಕತೆ, ಚಿತ್ರಕತೆ ಹಾಗೂ ನಿದೇ೯ಶನದ `ಚಂಡಿಕೋರಿ' ತುಳು ಸಿನೆಮಾಕ್ಕೆ ನಗರದ ಶ್ರೀ ಶರವು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿತು.

ಬೊಳ್ಳಿ ಮೂವೀಸ್ ಬ್ಯಾನರ್ನಲ್ಲಿ ಶಮಿ೯ಳಾ ಕಾಪಿಕಾಡ್ ಹಾಗೂ ಸಚಿನ್ ಸುಂದರ್ ಅವರ ನಿಮಾ೯ಪಕತ್ವದಲ್ಲಿ ನಿಮಾ೯ಣವಾಗಲಿರುವ "ಚಂಡಿಕೋರಿ' ಸಂಪೂರ್ಣ ಮನೋರಂಜನ ಸಿನೆಮಾವಾಗಿದೆ. ಹಾಸ್ಯ, ವೈಚಾರಿಕತೆ, ಉತ್ತಮ ಸಂದೇಶಗಳ ಜತೆಗೆ ತುಳುನಾಡಿನ ಹಿರಿಮೆ ಗರಿಮೆ, ಸಂಸ್ಕಾರ ಸಾರುವ ಈ ಸಿನೆಮಾ ತುಳು ಚಿತ್ರ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿಬರಲಿದೆ ಎಂದು ದೇವದಾಸ್ ಕಾಪಿಕಾಡ್ ವಿವರಿಸಿದರು.

ತಾರಾಗಣದಲ್ಲಿ ತುಳು ಸಿನೇಮಾರಂಗದ ಖ್ಯಾತನಾಮರು

ತುಳು ಸಿನೆಮಾ ರಂಗದ ಖ್ಯಾತನಾಮರು ತಾರಾಗಣದಲಿದ್ದಾರೆ. ಜತೆಗೆ ಸ್ಥಳಿಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದ್ದು, ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ನಾಯಕನಾಗಿ ಅಜರ್ುನ್ ಕಾಪಿಕಾಡ್ ಹಾಗೂ ನಾಯಕಿಯಾಗಿ ಹೊಸಮುಖ ಕರೀಷ್ಮಾ ಅಮೀನ್ ನಟಿಸಲಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳೂರು, ಗೋಪಿನಾಥ ಭಟ್, ಚೇತನ್ ರೈ ಮಾಣಿ, ಡಿ.ಎಸ್. ಬೋಳೂರು, ಸರೋಜಿನಿ ಶೆಟ್ಟಿ, ಶೋಭಾ ರೈ, ಸುಮಿತ್ರಾ ರೈ, ಮನೀಶಾ, ಸುಜಾತಾ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್ ಹಾಗೂ ಚಾಪರಖ ತಂಡದ ಕಲಾವಿದರು ನಟಿಸಲಿದ್ದಾರೆ.

ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ನಿದೇ೯ಶನ ಹಾಗೂ ಸಂಗೀತ ದೇವದಾಸ ಕಾಪಿಕಾಡ್ ಅವರದ್ದು. ಸಂಗೀತ ಸಂಯೋಜನೆ ಮಣಿಕಾಂತ್ ಕದ್ರಿ, ಕ್ಯಾಮೆರಾ ಪಿ.ಎಲ್. ರವಿ, ಸಂಕಲನ ಸುಜಿತ್ ನಾಯಕ್. ಚಂಡಿಕೋರಿ ಒಂದೇ ಹಂತದಲ್ಲಿ 30 ದಿನಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಮಂಗಳೂರಿನ ಸುಂದರ ಪ್ರಕೃತಿ ಸೊಬಗಿನ ನಡುವೆ ಪಡೀಲ್, ವೀರನಗರ, ಅತ್ತಾವರ, ಸುರತ್ಕಲ್ ಹಾಗೂ ಕೊಂಚಾಡಿಯಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಕಾಪಿಕಾಡ್ ತಿಳಿಸಿದರು.

ಚಾಲಿಪೋಲಿಲು ಚಿತ್ರದ ನಿಮಾ೯ಪಕ ಪ್ರಕಾಶ್ ಪಾಂಡೇಶ್ವರ, ಶಮಿ೯ಳಾ ಕಾಪಿಕಾಡ್, ಸಚಿನ್ ಸುಂದರ್, ಅಜರ್ುನ್ ಕಾಪಿಕಾಡ್, ಕರೀಷ್ಮಾ ಅಮೀನ್, ನವೀನ್ ಡಿ. ಪಡೀಲ್, ವೀರೇಂದ್ರ ಶೆಟ್ಟಿ ಕಾವೂರು, ಮಾಧವ ಬಗಂಬಿಲ, ಸುಂದರ್, ಪಿ.ಎಲ್. ರವಿ ಮೊದಲಾದವರು ಉಪಸ್ಥಿತರಿದ್ದರು. ನರೇಶ್ ಸಸಿಹಿತ್ಲು ನಿರೂಪಿಸಿದರು.

ಮನುಷ್ಯನ ತಾಳ್ಮೆಯನ್ನು ಎಂದೂ ಪರೀಕ್ಷೆ ಮಾಡಲು ಹೋಗಬೇಡಿ ಎಂಬುದು ಚಂಡಿಕೋರಿ ಚಿತ್ರದ ಮುಖ್ಯ ಸಂದೇಶ. ಉತ್ಕೃಷ್ಟ ಮಟ್ಟದ ಸಾಹಸ, ವಿಭಿನ್ನ ಶೈಲಿಯ 4 ಹಾಡುಗಳಿವೆ. ಮುಂದಿನ ಆಗಸ್ಟ್ನಲ್ಲಿ ತೆರೆಕಾಣಲಿರುವ ಈ ತುಳುಚಿತ್ರ ಅಭಿಮಾನಿಗಳ ಮನಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ದೇವದಾಸ್ ಕಾಪಿಕಾಡ್ ಹೇಳಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here