Monday 29th, April 2024
canara news

ಕಾಳಹಸ್ತೇಂದ್ರಶ್ರೀಗಳವರ ಪಟ್ಟಾಭಿಷೇಕ ವರ್ಧಂತಿ ಉತ್ಸವ

Published On : 24 May 2017   |  Reported By : Ronida Mumbai


ಶ್ರೀ ಸರಸ್ವತೀ ಅನುಗ್ರಹ ಹಾಗೂ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮೇ.23: ಉಡುಪಿ ಜಿಲ್ಲೆಯ ಕಾಪು ಬಳಿಯ ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಠದಲ್ಲಿ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಮಠ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ ಸಪ್ತಮ ವರ್ಧಂತ್ಯುತ್ಸವದ ಸಂದರ್ಭ ಶ್ರೀ ಮಠದ ಪುನರುತ್ಥಾನ, ಅಭಿವೃದ್ಧಿಗೆ ಅನುಪಮ ಸೇವೆ ನೀಡಿದ 6 ಸೇವಾಧುರೀಣರಿಗೆ ಸರಸ್ವತೀ ಅನುಗ್ರಹ ಪ್ರಶಸ್ತಿ ಯನ್ನು ಹಾಗೂ ಶಿಲ್ಪ, ಕಲೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವ 26 ಗಣ್ಯರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಬಾರಿ ಮಾಕೂರು ಮೋಹನ ಆಚಾರ್ಯ ಮಧೂರು, ನಿವೃತ್ತ ಸುಭೇದಾರ್ ವೈ.ಧರ್ಮೇಂದ್ರ ಆಚಾರ್ಯ ಕಾಸರಗೋಡು, ಪಿ.ವಿ ಸುಂದರ ಆಚಾರ್ಯ ಮಂಚಕಲ್, ಕೃಷ್ಣ ವಿ.ಆಚಾರ್ಯ ಮುಂಬಯಿ, ದಿ| ಕೆ.ಕಿಶೋರ್ ಆಚಾರ್ಯ ಕಾರ್ಕಳ, ದಿ| ಭಾಸ್ಕರ ಆರ್ ಆಚಾರ್ಯ ಮಂಗಳೂರು(ಮರಣೋತ್ತರ) ಅವರಿಗೆ `ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ' ಪ್ರಧಾನಿಸಲಾಯಿತು.

`ಆನೆಗುಂದಿಶ್ರೀ' ಪ್ರಶಸ್ತಿಯನ್ನು ಜೋಕಟ್ಟೆ ಶಿಲ್ಪಿ ಪ್ರಭಾಕರ ಆಚಾರ್ಯ, ವಾಸ್ತುಶಿಲ್ಪಿ ಸುರತ್ಕಲ್ ಆನಂದ ಆಚಾರ್ಯ, ಶಿಲ್ಪಿ ನಾರಾಯಣ ಆಚಾರ್ಯ ಕಲ್ಲಮುಂಡ್ಕೂರು, ದಾರುಶಿಲ್ಪಿ ಪುರೋಹಿತ್ ಜನಾರ್ಧನ ಆಚಾರ್ಯ ಮಧೂರು, ರಥ ಶಿಲ್ಪಿ ಹೊನ್ನಾವರ ಗಣೇಶಸೀತಾರಾಮ ಆಚಾರ್ಯ ಬಳ್ಕೂರು, ಶಿಲ್ಪಿ ಪ್ರಭಾಕರ ಆಚಾರ್ಯ ಗೋಪಾಡಿ, ಕೆ. ದಾಮೋದರ ಆಚಾರ್ಯ ಕಾರ್ಕಳ, ಶಿಲ್ಪಿ ಗಣಪತಿ ಆಚಾರ್ಯ ಅತ್ತೂರು, ಕಾರ್ಕಳ, ಶಿಲ್ಪಿ ಸತೀಶ ಆಚಾರ್ಯ ಕಾರ್ಕಳ (ಶಿಲಾ ಶಿಲ್ಪ), ರಾಜೇಶ ಆಚಾರ್ಯ ಪಣಿಯಾಡಿ, ರಾಮಚಂದ್ರ ಆಚಾರ್ಯ, ಕುಂಟಾಡಿ (ಎರಕ ಶಿಲ್ಪ), ರತ್ನಾವತಿಸಂಜೀವ ಆಚಾರ್ಯ ಮಂಗಳೂರು (ಸಂಗೀತ), ಪಿ. ಕಮಲಾಕ್ಷ ಆಚಾರ್ ಬೆಳ್ತಂಗಡಿ, ಬಿ. ದೀಪಕ್ ಕುಮಾರ್ ಪುತ್ತೂರು (ಭರತನಾಟ್ಯ), ಗೋಪಾಲ ಆಚಾರ್ಯ ತೀರ್ಥಹಳ್ಳಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಕುಂದಾಪುರ (ಯಕ್ಷಗಾನ ), ಯೋಗೀಶ್ ಆಚಾರ್ಯ ಬೋಳೂರು (ನಾಟಕ), ಪಿ.ಎನ್ ಆಚಾರ್ಯ, ಮಣಿಪಾಲ, ಎಂ.ಜಿ.ಕೆ ಆಚಾರ್ಯ ಕುಂಬಳೆ (ಚಿತ್ರಕಲೆ), ಉಮೇಶ ಆಚಾರ್ಯ, ಪಡೀಲು ಮಂಗಳೂರು, ಬಿ.ಕೆ ಮೋನಪ್ಪ ಆಚಾರ್ಯ, ರಾಯಿ, ಆಚಾರ್ಯ ಜಿ. ವಾದಿರಾಜ ಬೆಳ್ಮಣ್ಣು, ಯೋಗೀಶ್ ಕೆ. ಭಟ್ ಮಂಗಳೂರು (ಜ್ಯೋತಿಷಿ ವಿಭಾಗ), ಕೃಷ್ಣವೇಣಿ, ಸಂಸ್ಥಾಪಕರು ಅನುಪಮ ವಿದ್ಯಾಸಂಸ್ಥೆಗಳು, ಬೆಂಗಳೂರು (ಶೈಕ್ಷಣಿಕ), ಜಿ.ಟಿ. ಆಚಾರ್ಯ ಮುಂಬಯಿ, ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು (ಸಮಾಜ ಸೇವೆ ) ಇವರಿಗೆ ನೀಡಲಾಯಿತು.

ಎಸ್‍ಎಸ್‍ಎಲ್‍ಸಿಯಲ್ಲಿ 99% ಸಾಧಕಿ ರಂಜಿತಾ, ಚಿತ್ರಕಲಾವಿದೆ ಕು.ಉಷಾರಾಣಿ ದಾವಣಗೆರೆ, ನೋಟರಿ, ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು, ನ್ಯಾಯವಾದಿ ಕಟಪಾಡಿ ಸುಂದರಆಚಾರ್ಯ, ಲಾವಣ್ಯ ದೇವಿಕೆ, ಸುಬ್ರಾಯ ಆಚಾರ್ಯ ಇನ್ನಂಜೆ, ಇನ್ನಾನಾರಾಯಣಆಚಾರ್ಯ ಅವರನ್ನು ಅಭಿನಂದಿಸಲಾಯಿತು.

ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು, ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕಾಪು ಶಾಸಕ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಗಣ್ಯರಾದ ಧೀರಜ್‍ಶೆಟ್ಟಿ, ಕಿಶೋರ್‍ಆಳ್ವ, ಯು.ಕೆ.ಎಸ್ ಸೀತಾರಾಮಆಚಾರ್ಯ, ಮಟ್ಟಾರು ರತ್ನಾಕರ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ದಿನೇಶ್ ಆಚಾರ್ಯಪಡುಬಿದ್ರೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಸದಾನಂದ ಎನ್.ಆಚಾರ್ಯ, ಬಿ. ಸೂರ್ಯಕು ಮಾರ್ ಆಚಾರ್ಯ, ಕೆ.ಕೇಶವ ಆಚಾರ್ಯ ಮಂಗಳೂರು, ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here