Monday 29th, April 2024
canara news

ಚೆಂಬೂರು ಕರ್ನಾಟಕ ಹೈಸ್ಕೂಲು-ಜೂನಿಯರ್ ಕಾಲೇಜ್‍ನ ಹಳೆ ವಿದ್ಯಾಥಿ೯ಗಳ ಸಂಗಮ

Published On : 25 May 2017   |  Reported By : Ronida Mumbai


ಹಳೆ ವಿದ್ಯಾಥಿ೯ ಶಿಕ್ಷಣಾಲಯದ ತಾಯಿಬೇರು ಇದ್ದಂತೆ: ಮಹೇಶ್ ಎಸ್.ಶೆಟ್ಟಿ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ,ಮೇ.24: ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್‍ನ ಸಭಾಂಗಣದಲ್ಲಿ ಇತ್ತೀಚೆಗೆ 2008-2009ನೇ ಸಾಲಿನ ಹಳೆ ವಿದ್ಯಾಥಿ೯ಗಳ ಸಂಗಮ-ಸಮಾವೇಶ ನಡೆಸಿತು.

ಚೆಂಬೂರು ಕರ್ನಾಟಕ ಹೈಸ್ಕೂಲಿನಲ್ಲಿ ಶಿಕ್ಷಣವನ್ನು ವಿವಿಧ ಕ್ಷೇತ್ರಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಹಳೇ ವಿದ್ಯಾಥಿರ್üಗಳು ಮರಳಿಗೂಡಿಗೆ ಬಂದಿದ್ದು, 16-04-2017ರಂದು, ಶಾಲಾ ಸಭಾಂಗಣದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ 2008-2009ನೇ ಸಾಲಿನ ಹಳೆ ವಿದ್ಯಾಥಿರ್üಗಳು ಭಾಗವಹಿಸಿದ್ದು, ಈ ಸಂಗಮ ಸಮಾವೇಶ ಸಭೆಯಲ್ಲಿ ನಿವೃತ್ತ ಅಧ್ಯಾಪಕರು, ಅನೇಕ ಶಿಕ್ಷಕ ಮತ್ತಿ ಶಿಕ್ಷಕೇತರ ಸಂಬಂಧಿಯವರು ಉಪಸ್ಥಿತರಿದ್ದರು.

ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವದಿ ಹೆಚ್.ಕೆ ಸುಧಾಕರ ಆರಾಟೆ, ಗೌರವಾನ್ವಿತ ಕಾರ್ಯದರ್ಶಿ ರಂಜನ್ ಕುಮಾರ್ ಆರ್.ಅವಿೂನ್ ಮತ್ತು ಹಳೆ ವಿದ್ಯಾಥಿ೯ ಸಂಘದ ಅಧ್ಯಕ್ಷ ಮಹೇಶ್ ಎಸ್.ಶೆಟ್ಟಿ (ಬಾಬಾ'ಸ್ ಸಮೂಹದ ಆಡಳಿತ ನಿರ್ದೇಶಕ ಮತ್ತು ಬಂಟ್ಸ್ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಧಾಕರ ಆರಾಟೆ ತನ್ನ ವೈಯಕ್ತಿಕ ಅನುಭವಗಳನ್ನು ಹಂಚಿ, ಪರಿಸ್ಥಿತಿಗೆ ತಕ್ಕಂತೆ ವಿದ್ಯಾಥಿರ್üಗಳು ತಮ್ಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು.

ಮಹೇಶ್ ಶೆಟ್ಟಿ ಮಾತಾನಾಡಿ ಹಳೆ ವಿದ್ಯಾಥಿರ್üಗಳು ಶಿಕ್ಷಣ ಸಂಸ್ಥೆಯ ತಾಯಿಬೇರುವಿದ್ದಂತೆ. ನಾವು ವಿದ್ಯಾರ್ಜನೆ ಪಡೆದ ವಿದ್ಯಾಲಯದ ಋಣ ಸಂದಾಯಕ್ಕೆ ಎಂದೂ ಹಿಂಜರಿಯ ಬಾರದು. ಕನಿಷ್ಠ ಸದ್ಯ ಆ ಶಾಲೆ ಕಾಲೇಜುಗಳಲ್ಲಿ ಅಭ್ಯಾಸಿಸುವ ವಿದ್ಯಾಥಿ೯ಗಳಿಗೆ ಪೆÇ್ರತ್ಸಾಹಿಸಿ ನಮ್ಮ ಸೇವೆ ಮಾಡಬೇಕು. ಬಡ ವಿದ್ಯಾಥಿರ್üಗಳಿಗೆ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸವಲತ್ತುಗಳನ್ನು ನೀಡುತ್ತಾ ಶಿಕ್ಷಣ ಪೆÇ್ರತ್ಸಾಹಕ್ಕೆ ಬದ್ದರಾಗೋಣ ಎಂದು ಕರೆಯಿತ್ತÀರು.

ಕಟ್ಟಡ ವಿಸ್ತೀರ್ಣ ನಿಧಿಗೆ ಆಥಿರ್üಕ ಸಹಾಯ ನೀಡಿದ ಎಲ್ಲಾ ದಾನಿಗಳಿಗೆ ಸಂಘದ ವತಿಯಿಂದ ರಶೀದಿಯನ್ನು ನೀಡಲಾಗುವುದು. ಆಥಿರ್üಕ ಸಹಾಯ ಮಾಡುವುವರು ಆನ್‍ಲೈನ್ ಪಾವತಿ ಸಹ ಮಾಡಬಹುದು. ಸಂಘದ ಅನುಮತಿ ಇಲ್ಲದೆ ಯಾರೂ ಅನಧಿಕೃತವಾಗಿ ಧನ ಸಂಗ್ರಹ ಮಾಡಬಾರದು. ಇನ್ನು ಮುಂದೆಯು ಇಂತಹ ಅನೇಕ ಹಳೇ ವಿದ್ಯಾಥಿರ್üಗಳ ಸಭೆಯು ಶಾಲೆಯಲ್ಲಿ ಜರುಗಿಸಲಾಗುವುದು ಎಂದು ರಂಜನ್ ಕುಮಾರ್ ನುಡಿದರು.

`ಕೆರೆಯ ನೀರನ್ನು ಕೆರೆಗೆ ಚೆಲ್ಲಿ' ಎಂಬಂತೆ ಹಳೆ ವಿದ್ಯಾಥಿರ್üಗಳು ಸೇರಿ ತಮ್ಮ ಕಿರು ಕಾಣಿಕೆಯನ್ನು ಚೆಂಬೂರ್ ಕರ್ನಾಟಕ ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಹಾಗೂ ನೆರೆದ ಹಳೇ ವಿದ್ಯಾಥಿ೯ಗಳು ಮಹೇಶ್ ಶೆಟ್ಟಿ ನೇತೃತ್ವದಲ್ಲಿ ವ್ಯವಸ್ಥಾಪಕ ಸಮಿತಿ ಸ್ಥಾಪಿಸಿದರು. ನೃತ್ಯ ಹಾಗೂ ಇನ್ನೀತರ ಮನೋರಂಜನೆಯ ಕಾರ್ಯಕ್ರಮಗಳೊಂದಿಗೆ ಹಳೆ ವಿದ್ಯಾಥಿ೯ಗಳ ಸಂಗಮ-ಸಮಾವೇಶ ಸಮಾಪನ ಕಂಡಿತು. ರಂಜನ್ ಕುಮಾರ್ ಅವಿೂನ್ ಧನ್ಯವದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here