Friday 3rd, May 2024
canara news

ಕಾಂದಿವಿಲಿಯಲ್ಲಿ ಭರತನಾಟ್ಯ ರಂಗಪ್ರವೇಶಗೈದ ಕು| ಕಶಿಶ್ ವಿ.ಸಾಲ್ಯಾನ್

Published On : 30 May 2017   |  Reported By : Ronida Mumbai


ನೃತ್ಯಕಲೆ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ-ಸಂಸದ ಗೋಪಾಲ ಶೆಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮೇ.29: ಉಡುಪಿ ಅಲ್ಲಿನ ಪಲಿಮಾರು ಮೂದುಗಂಪ ಹೊೈಗೆ ನಿವಾಸಿ, ಮುಂಬಯಿ ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಇದರ ಯುವ ವಿಭಾಗದ ಕಾರ್ಯಾಧ್ಯಕ್ಷ ವಿಜಯ್ ಎನ್.ಸಾಲ್ಯಾನ್ ಮತ್ತು ಚಿತ್ರಾಪು ಶ್ವೇತಾ ವಿ.ಸಾಲ್ಯಾನ್ ದಂಪತಿ ಸುಪುತ್ರಿ, ನೃತ್ಯಕಲಾವಿದೆ, ಪ್ರತಿಭಾಶಾಲಿ ಬೆಡಗಿ ಕು| ಕಶಿಶ್ ವಿ.ಸಾಲ್ಯಾನ್ ಇವರು ಭರತನಾಟ್ಯ (ಅರಂಗೇಟ್ರಮ್) ರಂಗ ಪ್ರವೇಶಗೈದರು.

ಕಾಂದಿವಿಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್‍ನ ತೆರಾಪಂಥ್ ಭವನದ ಸಭಾಗೃಹದಲ್ಲಿ ಕಳೆದ ಭಾನುವಾರ ಆಯೋಜಿಸಲಾಗಿದ್ದ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಉಪಸ್ಥಿತರಿದ್ದು ರಂಗಪ್ರವೇಶಗೈದ ಕು| ಕಶಿಶ್ ಸಾಲ್ಯಾನ್ ಮತ್ತು ಕು| ಅವ್ನಿ ಗೊಸಾಯ್ ಹಾಗೂ ಗುರು ದಯಾನಂದ ಪಿಳ್ಳೈ ಮತ್ತು ಗುರು ವೇಣುಗೋಪಾಲ ಪಿಳ್ಳೈ ಅವರನ್ನು ಸನ್ಮಾನಿಸಿ ಶುಭಾರೈಸಿದರು.

ನೃತ್ಯಕಲೆಯು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬರೇ ಶೈಕ್ಷಣಿಕ ವಿದ್ಯಾರ್ಜನೆ ಜೀವನಕ್ಕೆ ರಂಗು ತರದು. ವಿದ್ಯೆಯೊಂದಿಗೆ ಇಂತಹ ಪಾವಿತ್ರ ್ಯತೆಯ ಭರತನಾಟ್ಯ ಇತ್ಯಾದಿಗಳನ್ನು ನಾವು ಮಕ್ಕಳಲ್ಲಿ ರೂಪಿಸಬೇಕು. ಆವಾಗಲೇ ನಮ್ಮ ಸಂಸ್ಕೃತಿ ಪರಂಪರೆಯ ಉಳಿವು ಸಾಧ್ಯ ಎಂದು ಸಂಸದ ಗೋಪಾಲ ಶೆಟ್ಟಿ ತಿಳಿಸಿದರು.


ಕು| ಕಶಿಶ್ ತನ್ನ ಮಾತಾಪಿತರಾದ ವಿಜಯ್ ಸಾಲ್ಯಾನ್ ಮತ್ತು ಶ್ವೇತಾ ವಿಜಯ್ ಹಾಗೂ ಕು| ಅವ್ನಿ ತನ್ನ ಹೆತ್ತವರಾದ ದಿನೇಶ್ ಗೊಸಾಯ್ ಮತ್ತು ಕೋಮಲಾ ದಿನೇಶ್ ಅವರ ಶುಭಾನುಗ್ರಹ ಹಾಗೂ ತಂಜಯ್ ಕಲಾ ಮಂದಿರದ ನಿರ್ದೇಶಕ ಗುರು ಶ್ರೀ ದಯಾನಂದ ಪಿಳ್ಳೈ ಅವರ ಆಶೀರ್ವಚನದೊಂದಿ ಗೆ ಗಣೇಶಸ್ತುತಿಯೊಂದಿಗೆ ರಂಗಪ್ರವೇಶಗೈದರು. ಬಳಿಕ ಪುಷ್ಪಾಂಜಲಿ, ಜಥಿüಸ್ವರಂ, ಕಾರ್ತಿಕೇಯ ಕೌತುಕಂ, ಶಬ್ದಂ, ವರ್ಣಂ, ಕೀರ್ತನಂ, ಪದಂ, ಥಿüಲ್ಲನಾ ಹಾಗೂ ಮಂಗಳಂ ನೃತ್ಯಗಳನ್ನು ಪ್ರದರ್ಶಿಸಿದರು.

ಗುರು ದಯಾನಂದ ಪಿಳ್ಳೈ ಮತ್ತು ವೇಣುಗೋಪಾಲ್ ಪಿಳ್ಳೈ ಸ್ವರಸಂಗೀತಗೈದರು. ಕೃಷ್ಣನ್ ನಾರಾಯಣ್ ಮೃದಂಗದಲ್ಲಿ, ರಜನಿ ಐಯ್ಯರ್ ಅವರ ವಾಯೋಲಿನ್ ವಾದನ, ಮಹಾಲಕ್ಷ್ಮೀ ರವಿ ಅವರು ಕೊಳಲು, ಶ್ರೀರಾಮ್ ರಾಜನ್ ಘಟಮ್ ಮೂಲಕ ಸಂಗೀತ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಇದರ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ, ಮಹಿಳಾ ಮಂಡಳಿಯ ಮುಖ್ಯಸ್ಥೆಯರುಗಳಾದ ಕೇಸರಿ ಬಿ.ಅಮೀನ್ ಮತ್ತು ಶೋಭಾ ವಿ.ಕೋಟ್ಯನ್, ಸೇರಿದಂತೆ ಸೇವಾ ಸಮಿತಿಯ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಕಶಿಶ್ ಸಾಲ್ಯಾನ್‍ಗೆ ಅಭಿನಂದಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here