Tuesday 30th, April 2024
canara news

ಕೋಲ್ಹಾಪುರದ ಸಾಂಗ್ಲಿಯಲ್ಲಿ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಅಸ್ತಿತ್ವಕ್ಕೆ

Published On : 31 May 2017   |  Reported By : Rons Bantwal


ಮಕ್ಕಳನ್ನೇ ಆಸ್ತಿಯಾಗಿಸಿ ಕೊಳ್ಳಿರಿ : ಉಮಾನಾಥ ಕೋಟ್ಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.31: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ವಿಶ್ವಕ್ಕೇ ಮಾದರಿ ಆಗಿದೆ. ನಾವೆಲ್ಲರೂ ಒಂದೇ ದೇವರ ಮಕ್ಕಳಾಗಿದ್ದು ಜಾತಿ ಮಾತ್ರ ಮಾನವ ರೂಪಿತವಾಗಿದೆ. ಆದುದರಿಂದ ಬೇಧ ರಹಿತ ಬದುಕು ನಮ್ಮ ಧರ್ಮವಾಗಬೇಕು. ಸಂಘಟನೆಯಿಂದ ಸಮಾಜದ ಪರಿಚಯ ಸಾಧ್ಯವಾಗಿದ್ದು ಇಂತಹ ಸಂಘಟನಾ ಸಂಸ್ಥೆಗಳೇ ಜನಜೀವನಕ್ಕೆ ಉಸಿರಾಗಿವೆ. ನಮ್ಮ ಪೂರ್ವಜರು ಬಡತನವನ್ನು ನಿವಾರಿಸಲು ಬದುಕನ್ನು ಕಂಡುಕೊಂಡಿದ್ದು ಅವರಲ್ಲಿ ಸಹಬಾಳ್ವೆಯ ದೂರದೃಷ್ಠಿತ್ವವಿತ್ತು ಅದಕ್ಕಾಗಿ ಸಾಂಘಿಕತೆಯನ್ನು ರೂಪಿಸಿ ಸಂಸ್ಥೆಗಳನ್ನು ಕಟ್ಟಿ ಕೂಡುಬದುಕು ಅವಲಂಬಿಸಿದ್ದರು. ಅದರ ಫಲವಾಗಿ ನಾವು ಒಗ್ಗಟ್ಟಾಗಿದ್ದೇವೆ. ಅದನ್ನೇ ನಾವೂ ಮೈಗೂಡಿ ನಮ್ಮ ಭವಿಷ್ಯತ್ತಿನ ಪೀಳಿಗೆಗೆ ಪಸರಿಸಿ ಸಂಸ್ಕಾರಯುತ ಬಾಳಿಗೆ ಪೆÇ್ರೀತ್ಸಾಹಿಸಬೇಕು. ಮಕ್ಕಳಿಗೆ ಆಸ್ತಿ ಮಾಡಿ ಕೊಡುವ ಬದಲು ಮಕ್ಕಳನ್ನೇ ಆಸ್ತಿಯಾಗಿಸಿ ಕೊಳ್ಳಬೇಕು. ಮಕ್ಕಳಲ್ಲಿ ನಂಬಿಕೆ, ವಿಶ್ವಾಸದ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದಾಗ ಜೀವನ ಹಸನಾಗುವುದು ಎಂದು ಬಿಲ್ಲವ ಧುರೀಣ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ನುಡಿದರು.

 

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಹಾರಾಷ್ಟ್ರದ ಕೋಲಾಪುರ ಜಿಲ್ಲೆಯ ಸಾಂಗ್ಲಿ ನಗರದ ಶಿಂದೆಮಾಲ ಇಲ್ಲಿನ ದುರ್ಗಾದಯಾ ಕಾಂಪ್ಲೆಕ್ಸ್‍ನಲ್ಲಿ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಇದರ ಕಾರ್ಯಾಲಯ ಉದ್ಘಾಟಿಸಿ ಸಂಜೆ
ಅಸೋಸಿಯೇಶನ್‍ನ ಸೇವಾರ್ಪಣಾ ನಿಮಿತ್ತ ಸ್ಥಳಿಯ ಮಾಧವ ನಗರ್ ಅಲ್ಲಿನ ಡೆಕ್ಕನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್‍ನ ಲಕ್ಷ ್ಮಣರಾವ್ ಕಿರ್ಲೋಸ್ಕರ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು ದಿಕ್ಸೂಚಿ ಭಾಷಣಗೈದು ಉಮಾನಾಥ ಕೋಟ್ಯಾನ್ ಮಾತನಾಡಿದರು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಗೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತು ಶುಭಾರೈಸುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾನುಸಾರ ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಸರ್ವರಿಗೂ ಸೇವಾ ನೆರಳನ್ನು ನೀಡಲಿ. ಮಾನವೀಯತೆಯ ಬಾಳಿಗೆ ಮಹತ್ವವನ್ನೀಡಿ ಸೇವಾಮಗ್ನರಾದಾಗ ಮಾನವ ಜೀವನ ಪಾವನವಾಗುವುದು. ಎಲ್ಲಾ ಧರ್ಮಗಳು ಒಳ್ಳೆಯದ್ದೇ ಆಗಿದ್ದು ಒಳಿತನ್ನೇ ಬಯಸುತ್ತವೆ. ನಾವು ಬದುಕುವ ರೀತಿಯೇ ಧರ್ಮವಾದಾಗ ಸಾಮಾಜಿಕ ಸಾಮರಸ್ಯ ತನ್ನೀಂತಾನೇ ರೂಪುಗೊಳ್ಳುವುದು ಎಂದರು.

ಸಮಾರಂಭದಲ್ಲಿ ಲೋಣಾವಳಾ ನಗರ ಪರಿಷತ್‍ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಮುಖ್ಯ ಅತಿಥಿüಯಾಗಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ನ್ಯಾಯವಾದಿ ಎಸ್.ಬಿ ಅವಿೂನ್, ಮುಂಬಯಿ ಅಲ್ಲಿನ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಅಶ್ವಜಿತ್ ಹೆಜ್ಮಾಡಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಗೌಅರವ ಕೋಶಾಧಿಕಾರಿ ಎನ್.ಎಂ ಸನೀಲ್, ಕಲ್ವಾದ ಹೊಟೇಲು ಉದ್ಯಮಿ ಹರೀಶ್ ಡಿ.ಸಾಲ್ಯಾನ್, ಕಲ್ವಾ ಸ್ಥಳಿಯ ಕಛೇರಿಯ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ ಗೌರವ ಅತಿಥಿüಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೂತನ ಸಂಸ್ಥೆಯ ಪದಾಧಿಕಾರಿಗಳು ಜಯ ಸಿ.ಸುವರ್ಣ ಅವರಿಗೆ `ಸುವರ್ಣ ಕೀರ್ತಿ' ಬಿರುದು ಪ್ರದಾನಿಸಿ ಗೌರವಿಸಿದರು. ಹಾಗೂ ಅತಿಥಿüಗಳು ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ ಪೂಜಾರಿ ಕಾರ್ಕಳ ಇವರನ್ನು ಸನ್ಮಾನಿಸಿದರು. ಹಾಗೂ ಉಪಸ್ಥಿತ ಗಣ್ಯರುಗಳಾದ ಲ| ದಿವಾಕರ್ ಶೆಟ್ಟಿ, ಗಣೇಶ್ ರೈ, ರಮೇಶ್ ಶೆಟ್ಟಿ ಸಾಂಗ್ಲಿ, ತಾರಾನಾಥ ಶೆಟ್ಟಿ, ಸುರೇಶ್ ರೈ, ನ್ಯಾ| ರಾಜೇಂದ್ರ ಶ್ಯಾನ್‍ಭಾಗ್, ಸೀತರಾಮ ಭಟ್, ಕೇಶವ ರಾವ್ ಮೂಲ್ಕಿ, ಶಂಭು ಆನಂದ ಪೂಜಾರಿ, ಸತೀಶ್ ಮೂಲ್ಯ, ಸುನೀಲ್ ಪೂಜಾರಿ ಬೆಳಗಾವಿ, ಡಾ| ಈಶ್ವರ ಅಲೆವೂರು, ಜ್ಯೋತಿ ಕೆ.ಸುವರ್ಣ, ಜಗನ್ನಾಥ್ ಎಂ.ಅವಿೂನ್ ಉಪ್ಪಳ, ಉಮೇಶ್ ಪೂಜಾರಿ ಕಲ್ವಾ, ಕೃಷ್ಣಪ್ಪ ಪೂಜಾರಿ, ಶ್ರೀ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯದ ಕಟೀಲು ಸದಾನಂದ ಶೆಟ್ಟಿ, ಶಂಭು ಮೂಲ್ಯ, ದೇಜು ಪೂಜಾರಿ, ಜಯಲಕ್ಷಮೀ ಚಂದ್ರಶೇಖರ್, ಆನಂದ ಪೂಜಾರಿ, ಸುಶೀಲಾ ವಿ.ಪೂಜಾರಿ ಭಾಂಡೂಪ್, ಜಯಂತಿ ಶಿವರಾಮ ಕೋಟ್ಯಾನ್, ಪ್ರೇಮಾ ಆರ್.ಕೋಟ್ಯಾನ್ ಸಾಂತಕ್ರೂಜ್ ಮತ್ತಿತರ ಗಣ್ಯರು ಹಾಗೂ ಸಾಂಗ್ಲಿ ಪರಿಸರದ ತುಳು ಕನ್ನಡಿಗ, ಮರಾಠಿ ಸಂಸ್ಥೆಗಳ ಮುಖ್ಯಸ್ಥರು, ಸಾಧಕರು ಹಾಗೂ ದಾನಿಗಳನ್ನು ಗೌರವಿಸಿ ಅಭಿವಂದಿಸಿದರು.

ಸಮಾಜಕ್ಕಿಂತ ದೊಡ್ಡವನು ವ್ಯಕ್ತಿಯಲ್ಲ. ಮಾನವನಿಗೆ ಸ್ವಸಮಾಜವೇ ಪ್ರಧಾನವಾಗಿದೆ. ಸಮುದಾಯವೇ ವ್ಯಕ್ತಿಯ ಅಭಿಮಾನವಾಗಿದೆ. ಇದನ್ನೇ ಅರಿತು ಬಿಲ್ಲವರು ಸ್ವಸಮಾಜವನ್ನು ಕಟ್ಟಬೇಕು. ಆ ಮೂಲಕ ಭಾರತ ರಾಷ್ಟ್ರದ ಸಶಕ್ತ ಸಮಾಜವಾಗಿಸಬೇಕು. ಜಯಣ್ಣ ಬಿಲ್ಲವ ಸಮಾಜದ ಅಭಿಮಾನ ಆಗಿದ್ದಾರೆ. ಇವರ ಸಂಘಟನಾ ಚಾತುರ್ಯತೆ ಸರ್ವರಿಗೂ ಮಾದರಿ ಎಂದು ಶ್ರೀಧರ್ ಪೂಜಾರಿ ಲೋಣಾವಳಾ ಅಭಿಪ್ರಾಯ ವ್ಯಕ್ತ ಪಡಿಸಿದರು.

ಬಂಧುತ್ವ ಹಾಗೂ ಸಂಘಟನೆಯಲ್ಲಿ ಸರ್ವರೂ ಸಮಾನರಾಗಿರಬೇಕು. ನಮ್ಮರ ಸಂಸ್ಥೆಗಳಲ್ಲಿ ನಾವುನೀವು ಎಲ್ಲರೂ ಸದಸ್ಯರೇ ಆಗಿದ್ದೇವೆ. ಒಟ್ಟಾರೆ ಸಂಸ್ಥೆಗಳ ಮುಖೇನ ನಮ್ಮ ತುಳುನಾಡ ಸಂಸ್ಕೃತಿ ಪರಂಪರೆ ಮುನ್ನಡೆಯುವಂತಾಗಲಿ ಎಂದು ದಿವಾಕರ್ ಶೆಟ್ಟಿ ನುಡಿದರು.

ಭಾರತ್ ಬ್ಯಾಂಕ್‍ನ ನಿರ್ದೇಶಕ ಹಾಗೂ ನೂತನ ಸಂಸ್ಥೆಯ ಸ್ಥಾಪಕ ಮಾರ್ಗದರ್ಶಕ ಚಂದ್ರಶೇಖರ ಎಸ್. ಪೂಜಾರಿ ಚಂದ್ರಶೇಖರ ಎಸ್.ಪೂಜಾರಿ ಮಾತನಾಡಿ ಸಾಂಗ್ಲಿಯಲ್ಲಿ ಇಂದು ಬಿಲ್ಲವರ ಏಕತೆಯ ಕನಸು ನನಸಾಗಿದೆ. ಅನೇಕ ವರ್ಷಗಳ ಚಿಂತನೆ ಕೂದಿದೆ. ಬಿಲ್ಲವರ ಬದುಕು ಭಾವನೆ ಬದಲಾದಾಗ ಏಕತೆಯ ಬದುಕು ಹಸನಾಗುವುದು. ಇದಕ್ಕಾಗಿ ಯುವಜನತೆ ಮುಂದಾಗಬೇಕು. ಇಲ್ಲೀ ಶಿಸ್ತು ಮುಖೇನವಾಗಿ ಸಂಸ್ಥೆಯು ಬೆಳೆದು ಬಿಲ್ಲವರ ಹೆಮ್ಮೆಯ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಅಧ್ಯಕ್ಷ ನಾರಾಯಣ ಪೂಜಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಸಾಂಗ್ಲಿಯಲ್ಲಿನ ಬಿಲ್ಲವರ ಒಗ್ಗಟ್ಟಿನ ಮುಹೂರ್ತ ಸಕಾರಗೊಂಡಿದೆ. ಇಂದಿಲ್ಲೆ ರೂಪಿತ ಈ ಒಗ್ಗಟ್ಟು ಎಂದಿಗೂ ಒಡೆಯದಿದೆ. ಇದನ್ನು ಸಮುದಾಯ ಬಂಧುಗಳು ಬಲಪಡಿಸಿ ಬಿಲ್ಲವ ಸಮಾಜವನ್ನು ಬಲಿಷ್ಠವಾಗಿಸುವಲ್ಲಿ ಶ್ರಮಿಸಿ ಎಂದರು.

ಉಪಾಧ್ಯಕ್ಷ ಸುಧಾಕರ ಪೂಜಾರಿ ಹೊಸ್ಮಾರು ಸ್ವಾಗತಿಸಿದರು. ಕು| ರಮಿತಾ ಪೂಜಾರಿ ಮತ್ತು ಕು| ಸೌಂದರ್ಯ ಪೂಜಾರಿ ಪ್ರಾರ್ಥನೆಯನ್ನಾಡಿದರು. ಮಹಿಳಾ ವಿಭಾಗಧ್ಯಕ್ಷೆ ಶಕುಂತಲಾ ಎಸ್.ಪೂಜಾರಿ ಆಶಯ ನುಡಿಗಳನ್ನಾಡಿದರು. ಗೌರವ ಕೋಶಾಧಿಕಾರಿ ಧೀರಜ್ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಘುರಾಮ ಪೂಜಾರಿ, ಪ್ರವೀಣ್ ಪೂಜಾರಿ, ಶೇಖರ್ ಪೂಜಾರಿ, ನಾರಾಯಣ ಎಸ್. ಪೂಜಾರಿ, ಆನಂದ ವಿ. ಪೂಜಾರಿ, ಗಣೇಶ್ ಪೂಜಾರಿ, ಮನೋಜ್ ಪೂಜಾರಿ, ಆನಂದ ಡಿ.ಪೂಜಾರಿ, ಚಂದ್ರಾಕ್ಷಿ ಪೂಜಾರಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ದೇವಿಕಿರಣ್ ಪೂಜಾರಿ ವಂದನಾರ್ಪಣೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಸೋಸಿಯೇಶನ್ ಸದಸ್ಯರು ವಿವಿಧ ನೃತ್ಯಾವಳಿಗಳನ್ನು, ಶ್ರೀ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಟ್ರಸ್ಟ್ ಮುಂಬಯಿ `ಮಹಿಷ ಮರ್ಧಿನಿ-ಶಾಂಭವಿ ವಿಜಯ' ಯಕ್ಷಗಾನ ಬಯಲಾಟ ಮತ್ತು ವಸಯಿ ಕರ್ನಾಟಕ ಸಂಘದ ಶ್ರೀ ಕಟೀಲು ಯಕ್ಷ ಕಲಾ ವೇದಿಕೆಯ ಬಾಲ ಕಲಾವಿದರು ತುಳುನಾಡ ನೃತ್ಯ ವೈಭವ ಹಾಗೂ ಮಾಸ್ಟರ್ ಪ್ರಾಣೇಶ್ ಅವರು ರಿದಮಿಕ್ ಯೋಗ ಕಾರ್ಯಕ್ರಮ ಸಾದರ ಪಡಿಸಿದರು.

 

 

 

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here