Monday 29th, April 2024
canara news

ಚಿಣ್ಣರ ಬೇಸಿಗೆ ಶಿಬಿರ-2017ಆಯೋಜಿಸಿದ್ದ ಬಿಎಸ್‍ಕೆಬಿಎ-ಗೋಕುಲ

Published On : 07 Jun 2017   |  Reported By : Rons Bantwal


ಮಕ್ಕಳಲ್ಲಿ ಸಂಸ್ಕಾರ ತುಂಬುವ ಅಗತ್ಯವಿದೆ: ವಾಮನ ಹೊಳ್ಳ

ಮುಂಬಯಿ, ಜೂ.07: ವರ್ಷ0ಪ್ರತಿಯಂತೆ ಈ ಬಾರಿಯೂ ಸಯಾನ್ ಅಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲದ ಯುವವಿಭಾಗವು 7 ರಿಂದ 15 ವರ್ಷದ ಮಕ್ಕಳಿಗಾಗಿ ಮುರು ದಿನಗಳ ಬೇಸಿಗೆ ಶಿಬಿರವನ್ನು ನೆರೂಲ್ ಅಲ್ಲಿನ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ'ದಲ್ಲಿ ಆಯೋಜಿಸಿತ್ತು.

ಕಳೆದ ಶುಕ್ರವಾರ (ಜೂ.02) ಸಂಜೆ, ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಅನಂತಪದ್ಮನಾಭ ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್, ಸಹ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಯುವ ವಿಭಾಗದ ಸಂಚಾಲಕಿ ವಿನೋದಿನಿ ರಾವ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ದೀಪ ಪ್ರಜ್ವಲನೆಯೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು. ಬಾಲಕಲಾವೃಂದವು ಪ್ರಾರ್ಥನೆ ನೆರವೇರಿಸಿತು.

ಶನಿವಾರ ಮಹಾಪೆ ಅಲ್ಲಿರುವ ವಾಮನ್ ಹೊಳ್ಳ ಅವರ `ಕಾಂಟೆಕ್ ಇನ್ಸ್ಟ್ರುಮೆಂಟ್ಸ್' ಕಾರ್ಖಾನೆಯ (ತೂಕ ಮಾಡುವ ಯಂತ್ರಗಳ ತಯಾರಿಕಾ ಕಾರ್ಖಾನೆ) ವೀಕ್ಷಣಾ ಕಾರ್ಯಕ್ರಮ ನಡೆಸಲಾಯಿತು. ಬಂಗಾರ, ಭಾರವಾದ ವಸ್ತುಗಳು, ಮಾನವ ತೂಕಯಂತ್ರ ಇತ್ಯಾದಿ ಹಲವಾರು ತೂಕಯಂತ್ರಗಳ ಜೋಡಣೆ ಬಗೆಗಿನ ತಯಾರಿಕೆ ಮತ್ತು ಕಾರ್ಯವೈಖರಿ ಬಗ್ಗೆ ಹೊಳ್ಳ ಅವರು ವಿಸ್ತಾರವಾಗಿ ಮಾಹಿತಿಯನ್ನಿತ್ತರು.

ಬೆಳೆದು ಬದುಕು ರೂಪಿಸುತ್ತಾ ರಾಷ್ಟ್ರವನ್ನು ಕಟ್ಟಲು ಸನ್ನದ್ಧರಾಗುವ ಮಕ್ಕಳಲ್ಲಿ ಬರೇ ಶಿಕ್ಷಣಕ್ಕಿಂತ ಸಂಸ್ಕಾರ ತುಂಬುವ ಅಗತ್ಯವಿದೆ. ಅವರಲ್ಲಿ ಆಧುನಿಕ ಜೀವನವನ್ನು ಶಿಸ್ತು ಹಾಗೂ ಸ್ವಯಂಬದ್ಧವಾಗಿ ನಡೆಸುವ ಶಕ್ತಿ ತುಂಬುವ ಅಗತ್ಯವಿದೆ. ಎಲ್ಲಕ್ಕೂ ಮಿಗಿಲಾಗಿ ಪರಿಸರ ರಕ್ಷಣೆ, ಸಾಮರಸ್ಯದ ಸಮಬಾಳ್ವೆ, ಹಾಗೂ ಜೀವನೋಪಾಯದ ಅರಿವು ಮೂಡಿಸುವ ಅವಶ್ಯಕತೆ ಆಯಾ ಸಮಾಜಕ್ಕಿದೆ ಎಂದು ವಾಮನ್ ಹೊಳ್ಳ ಉಪಸ್ಥಿತ ಮಕ್ಕಳ ಪಾಲಕರಿಗೆ ಕಿವಿಮಾತುಗಳನ್ನಾಡಿದರು.

ಶಿಬಿರದಲ್ಲಿ ಶ್ರೀಮತಿ ಕುಲಕರ್ಣಿ ಅವರು ಸುಲಭ ಯೋಗ, ಸುನೀತಾ ರಾಮಕುಮಾರ್ ಅವರು ಜೀವನ ಮೌಲ್ಯಗಳು, ಎ.ಪಿ.ಕೆ ಪೆÇೀತಿ (ವೇದಿಕ್ ಗಣಿತ), ಸಹನಾ ಭರದ್ವಾಜ್ (ಕನ್ನಡ ಕಲಿಕೆ), ಸಹನಾ ಪೆÇೀತಿ (ಭಜನೆ), ಶಾಲಿನಿ ಉಡುಪ, ಸರೋಜಾ ಸತ್ಯನಾರಾಯಣ ಮತ್ತು ಪಿ.ಸಿ.ಎನ್ ರಾವ್ ಅವರು ಕರಕುಶಲ ವಸ್ತುಗಳ ತಯಾರಿ ಮುಂತಾದುವುಗಳ ವಿಚಾರವಾಗಿ ಮಕ್ಕಳನ್ನು ತರಬೇತು ಗೊಳಿಸಿದರು.

ಭಾನುವಾರ ಸಂಜೆ ಶಿಬಿರದ ಸಮಾರೋಪವ ಜರಗಿದ್ದು ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜರಗಿತು. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬಂತೆ ಇಂತಹ ಮುದ್ದು ಮಕ್ಕಳಲ್ಲಿ ಅಹಂ ಎನ್ನುವುದನ್ನು ಮರೆಮಾಡಿಸಿ ಸ್ವಯಂ ನಿಲುವು ರೂಢಿಸ ಬೇಕಾಗಿದೆ. ಅವಾಗಲೇ ಅನ್ಯರನ್ನು ಅವಲಂಬಿಸದೆ ಸ್ವಂತಿಕೆಯಿಂದ ಬಾಳುವುದನ್ನು ತನ್ನೀಂತಾನೇ ರೂಢಿಸಿಕೊಳ್ಳುತ್ತಾರೆ ಎಂದರು.

ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್ ಅವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸುತ್ತಾ ಮುಂದಿನ ಶಿಬಿರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಯುವ ವಿಭಾಗದ ಕಾರ್ಯಕರ್ತರನ್ನು ಅಭಿನಂದಿಸಿದರು.

ಅಸೋಸಿಯೇಶನ್‍ನ ಉಪಸ್ಥಿತ ಪದಾಧಿಕಾರಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದ ಶಿಕ್ಷಕ ಶಿಕ್ಷಕಿಯರನ್ನು, ಕಾರಕರ್ತರನ್ನು ಅಭಿವಂಧಿಸಿ ಗೌರವಿಸಿ ವಂದಿಸಿದರು. ಪ್ರೇಮಾ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು. ವಿನೋದಿನಿ ರಾವ್ ಉಪಕಾರ ಸ್ಮರಿಸಿದರು .

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here