Monday 29th, April 2024
canara news

ಕೆಸಿಎ ನಲ್ಲಸೋಫರಾ ಸಂಸ್ಥೆಯಿಂದ 20ನೇ ವಾರ್ಷಿಕ ಶೈಕ್ಷಣಿಕ ಪರಿಕರಗಳ ವಿತರಣೆ

Published On : 08 Jun 2017   |  Reported By : Rons Bantwal


ಫಲಾನುಭವದಲ್ಲಿ ಕೀಳರಿಮೆ ಸಲ್ಲದು : ಹ್ಯಾರಿ ಬಿ.ಕುಟಿನ್ಹೋ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.08: ಕೊಂಕಣಿ ಕಥೊಲಿಕ್ ಎಸೋಸಿಯೇಶನ್ ನಲ್ಲಸೋಫರಾ (ಕೆಸಿಎ) ಸಂಸ್ಥೆಯು ನಿರಂತರವಾಗಿಸಿ ವಾರ್ಷಿಕವಾಗಿ ಕಳೆದ ಎರಡು ದಶಕದಿಂದ ಕೊಡಮಾಡುವ ಆಥಿರ್üಕ ಹಿಂದುಳಿದ ಶಾಲಾ ವಿದ್ಯಾಥಿರ್üಳಿಗೆ ವಿತರಿಸುವ ಹಣಕಾಸು ನೆರವು, ಸಮವಸ್ತ್ರ ಮತ್ತು ಶೈಕ್ಷಣಿಕ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ನೆರವೇರಿಸಿತು.

ಹೆಲ್ಪಿಂಗ್‍ಹ್ಯಾಂಡ್ಸ್‍ಡಾಟ್‍ಗಿವ್ಸ್ (ತಿತಿತಿ.heಟಠಿiಟಿghಚಿಟಿಜs.gives) ಸಂಸ್ಥೆಯ ಸಹಯೋಗದೊಂದಿಗೆ ನಲ್ಲಾಸೊ ೀಫರಾ ಪೂರ್ವದಲ್ಲಿನ ಕೆಸಿಎ ಕಚೇರಿಯಲ್ಲಿ ಕೆಸಿಎ ಅಧ್ಯಕ್ಷ ಹ್ಯಾರಿ ಬಿ.ಕುಟಿನ್ಹೋ ಕಲ್ಲಮುಂಡ್ಕೂರು ಅಧ್ಯಕ್ಷತೆಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ನಲ್ಲಾಸೋಫರಾ ಆಸುಪಾಸಿನ ವಿವಿಧ ಸಮುದಾಯಗಳ ಆಥಿರ್üಕ ಹಿಂದುಳಿದ ನೂರಾರು ಶಾಲಾ ಮಕ್ಕಳಿಗೆ ವಿವಿಧ ರೀತಿಯ ನೆರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತ ಹೆಲ್ಪಿಂಗ್‍ಹ್ಯಾಂಡ್ಸ್‍ಡಾಟ್‍ಗಿವ್ಸ್ ಸಂಸ್ಥೆಯ ಸ್ಥಾಪಕರಲ್ಲೋರ್ವರಾದ ಜೀವನ್ ಕೋಟ್ಯಾನ್, ಪೀಟರ್ ಫೆರ್ನಾಂಡಿಸ್, ಇಮೆಲ್ಡಾ ಸಿಕ್ವೇರಾ ಉಪಸ್ಥಿತರಿದ್ದು ವಿವಿಧ ರೀತಿಯ ನೆರವನ್ನು ಹಸ್ತಾಂತರಿಸಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನಾರೈಸಿದರು. ಈ ಬಾರಿ ಸುಮಾರು 200ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಬರವಣಿಕಾ ಪುಸ್ತಕಗಳು, 50ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಚಟುವಟಿಕೆಗಳ ಸಾಮಾಗ್ರಿಗಳನ್ನು ವಿತರಿಸಿದರು ಹಾಗೂ 20 ವಿದ್ಯಾಥಿರ್üಗಳ ಶಾಲಾ ವಾರ್ಷಿಕ ಶಿಕ್ಷಣ ಶುಲ್ಕವನ್ನು ಭರಿಸಿತು.

ಮಕ್ಕಳ ಅಧ್ಯಾಪನದತ್ತ ಗಮನ ಹರಿಸಿ ಸುಶಿಕ್ಷಿತರನ್ನಾಗಿಸುವ ಅಗತ್ಯ ಮಕ್ಕಳ ಪಾಲಕರ ಜವಾಬ್ದಾರಿ ಆಗಬೇಕು. ಮಕ್ಕಳಲ್ಲಿನ ದೋಷಗಳನ್ನು ತಿದ್ದಿತೀಡುವ ಶಿಕ್ಷಕರಲ್ಲಿ ಅನ್ಯೋನತೆ ಬೆಳೆಸಿಕೊಳ್ಳುವ ಅಗತ್ಯ ಪ್ರಸಕ್ತ ಪಾಲಕರಿಗೆ ಮತ್ತು ಸಮಾಜಕ್ಕಿದೆ. ವಿದ್ಯಾಭ್ಯಾಸವನ್ನು ದೋಷಮುಕ್ತ ಗೊಳಿಸಿದಾಗಲೇ ವಿದ್ಯಾಥಿರ್üಗಳ ಬಾಳು ಬಂಗಾರವಾ ಗುವುದು ಆದುದರಿಂದ ಮಕ್ಕಳು ಸುಶಿಕ್ಷಿತರಾಗಿ ಜೀವನವನ್ನು ಸಾರ್ಥಕವಾಗಿಸಬೇಕು ಎಂದು ಜೀವನ್ ಕೋಟ್ಯಾನ್ ಆಶಯ ವ್ಯಕ್ತಪಡಿಸಿದರು.

ವಿದ್ಯಾರ್ಜನಾ ಆಸಕ್ತ ಮಕ್ಕಳಿಗೆ ಸದ್ಯ ಶೈಕ್ಷಣಿಕ ಪರಿಕರ ಅಥವಾ ಹಣಕಾಸು ನೆರವಿನ ಕೊರತೆ ಎಂದೂ ಬಾಧಿಸಲಾರದು. ಆದುದರಿಂದ ಶೈಕ್ಷಣಿಕ ನೆರವು, ಅನುದಾನ ಪಡೆಯುವುದರ ಬಗ್ಗೆ ಮಕ್ಕಳಾಗಲೀ ಪಾಲಕರಾಗಲಿ ಸಣ್ಣತನ ಎನ್ನುವುದನ್ನು ತಿಳಿಯಬಾರದು. ಫಲಾನುಭವದಲ್ಲಿ ಕೀಳರಿಮೆ ಮಾಡದಿರಿ. ಬದಲಾಗಿ ಇಂತಹ ಸೇವಾ ಫಲಾನುಭವ ಪಡೆದು ಸುಶಿಕ್ಷಿರತರಾಗಿ ಉತ್ತಮ ಭವಿಷ್ಯ ರೂಪಿಸಲು ಪೆÇ್ರೀತ್ಸಾಹಿಸಬೇಕು. ಮಕ್ಕಳೂ ಸಂಸ್ಕಾರಯುತ ಜೀವನ ಮೈಗೂಡಿಸಿ ತಾವೂ ಸ್ವಯಂ ಉದ್ಯಮಿಗಳಾಗಿ ಇದೇ ರೀತಿಯ ನೆರವು ನೀಡುವ ಹೃದಯಶೀಲರಾಗಬೇಕು. ರಾಷ್ಟ್ರದ ಸದ್ಪ್ರಜೆಗಳಾಗಿ ದೇಶಸೇವೆಯಲ್ಲಿ ತೊಡಗಿಸಿ ಕೊಳ್ಳುವ ಮನೋಭಾವ ಬೆಳೆಸಿದಾಗ ಬಡತನ ನಿರ್ಮೂಲನ ಸಾಧ್ಯವಾಗುವುದು ಎಂದು ಅಧ್ಯಕ್ಷೀಯವಾಗಿ ಹ್ಯಾರಿ ಕುಟಿನ್ಹೋ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್, ರೋನಿ ಪಾಯಸ್, ಇನೇಝ್ ಡಿ'ಸೋಜಾ, ಲವೀನಾ ಡಾಯಸ್, ಜೋನ್ ಆಳ್ವ, ಡೈನಾ ಮೋರಸ್, ರೊಹಿನ್‍ಟನ್ ಕಾಕ, ಹಿಲ್ಡಾ ಡಿ'ಸೋಜಾ, ರಿಚಾರ್ಡ್ ಪಿಂಟೊ, ರೊಮಿಯೋ ಫೆರ್ನಾಂಡಿಸ್, ಲವೀನಾ ಡಾಯಸ್, ಜೋನ್ ಆಳ್ವ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.

ಕೆಸಿಎ ಗೌ| ಪ್ರ| ಕಾರ್ಯದರ್ಶಿ ಕ್ಲೋಡ್ ಡಿ'ಸಿಲ್ವಾ ಸ್ವಾಗತಿಸಿದರು. ಗೌ| ಕೋಶಾಧಿಕಾರಿ ಆಲ್ವಿನ್ ಫ್ರಾನ್ಸಿಸ್ ಡಿ'ಸೋಜಾ ಮುದರಂಗಡಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದ ರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್, ರೋನಿ ಪಾಯಸ್, ಇನೇಝ್ ಡಿ'ಸೋಜಾ, ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಉಪಾಧ್ಯಕ್ಷೆ ಗ್ರೇಸಿ ಪಿಂಟೋ ಅಭಾರಮನ್ನಿಸಿದರು.

 


 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here