Monday 29th, April 2024
canara news

`ಕಟೀಲು ಶ್ರೀ ದೇವಿ ಚರಿತೆ' ಚಲನಚಿತ್ರ-ಧಾರವಾಹಿಗೆ ಕಲಾವಿದರ ಆಯ್ಕೆ ಪ್ರಕ್ರಿಯೆ

Published On : 09 Jun 2017   |  Reported By : Rons Bantwal


ಜಗನ್ಮಾತೆಗೆ ಜನನಿದಾತೆಯ ನಾಮದ ಸೇವೆ ನಮ್ಮ ಭಾಗ್ಯ : ಕೆ.ಡಿ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.09: ಶ್ರೀ ಕಟೀಲು ಜಗನ್ಮಾತೆಗೆ ನಮ್ಮ ಜನನಿದಾತೆಯ ಹೆಸರಿನ ಸೇವೆಗೈಯಲು ನಮ್ಮ ಪಾಲಿಗೆ ಒದಗಿದ ಈ ಯೋಜನೆ ಚೆಲ್ಲಡ್ಕ ಪರಿವಾರದ ಸೌಭಾಗ್ಯವೇ ಸರಿ. ಭವಾನಿ ಮಾತೆಯ ಮಮತೆಯಿಂದ ಭ್ರಮರಾಂಭಿಕೆಗೆ ಸೇವಾರ್ಥವಾಗಿ ಈ ಯೋಜನೆ ಅರ್ಪಿಸಲಾಗಿದೆ. ಬಂಟರ ಸಂಘದಲ್ಲಿ ಕೈಗೊಂಡ ಎಲ್ಲಾ ಯೋಜನೆಗಳು ಸಫಲತೆ ಕಂಡಿದ್ದು ಇದೂ ಕೂಡಾ ಎಲ್ಲವನ್ನೂ ಮೀರಿ ಸಿದ್ಧಿಯಾಗುವ ಭರವಸೆ ನನಗಿದೆ. ಇದು ದೇವರ ಪುಣ್ಯದ ಕಾರ್ಯಕ್ರಮವಾಗಿದ್ದು ಏನೋ ಶಕ್ತಿ ಈ ಕಾಯಕದಲ್ಲಿ ಅಡಗಿದೆ. ಇದನ್ನು ಜಾಗತಿಕವಾಗಿ ಧಾರಾವಾಹಿ ಮಾಧ್ಯಮದ ಮೂಲಕ ಪ್ರಸಾರಿಸುವುದು ಅಭಿಮಾನವೆನಿಸುತ್ತಿದೆ. ತುಳುನಾಡಿನಲ್ಲಿ ಅವತಾರ ತೋರ್ಪಡಿಸಿದ ಮಾತೆಯ ಮಹಿಮೆಯನ್ನು ಪ್ರಪಂಚಕ್ಕೆ ತೋರ್ಪಡಿಸುವ ಪ್ರಯತ್ನ ಇದಾಗಿದೆ ಎಂದು ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ (ಕೆ.ಡಿಶೆಟ್ಟಿ) ತಿಳಿಸಿದರು.

ಇಂದಿಲ್ಲಿ ಗುರುವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ವಿಟ್ಲ ಚೆಲ್ಲಡ್ಕ ದಡ್ಡಂಗಡಿ ಅಲ್ಲಿನ ಭವಾನಿ ಕ್ರಿಯೇಶನ್ಸ್ ರೂಪಿಸಲು ಸಿದ್ಧಗೊಂಡ `ಕಟೀಲು ಶ್ರೀ ದೇವಿ ಚರಿತೆ' ಚಲನಚಿತ್ರ ಮತ್ತು ಧಾರವಾಹಿಗೆ ನೃತ್ಯ ನಿರ್ದೇಶÀಕರು, ಕಲಾವಿದರ (ನಟ-ನಟಿಯರು), ಗಾಯಕರ ಆಯ್ಕೆಪ್ರಕ್ರಿಯೆ ಕಾರ್ಯಕ್ರಮ ಉದ್ದೇಶಿಸಿ ಕೆ.ಡಿಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌರವ ಅತಿಥಿüಗಳಾಗಿ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ರೀಡಾಪಟು, ಚಲನಚಿತ್ರ ನಟ ರೋಹಿತ್‍ಕುಮಾರ್ ಕಟೀಲ್, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರು, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಸಮಾಜ ಸೇವಕರುಗಳಾದ ಎಂ.ಎಸ್ ಭಟ್, ಐಕಳ ಗುಣಪಾಲ್ ಶೆಟ್ಟಿ, ರಾಘು ಪಿ.ಶೆಟ್ಟಿ (ಸಂತೋಷ್ ಕೇಟರರ್ಸ್) , ಸಂಜೀವ ಎನ್.ಶೆಟ್ಟಿ (ಅಶ್ವಿತ್ ರೆಸಿಡೆನ್ಸಿ ನೆರೂಲ್), ರವೀಂದ್ರನಾಥ ಎಂ.ಭಂಡಾರಿ, ನವೀನ್ ಶೆಟ್ಟಿ ಇನ್ನಬಾಳಿಕೆ ಉಪಸ್ಥಿತರಿದ್ದು ಶುಭಾರೈಸಿದರು.

ಐಕಳ ಹರೀಶ್ ಮಾತನಾಡಿ ಇಂತಹ ಯೋಚನೆ ನನ್ನದೂ ಬಹು ವರ್ಷದ ಕನಸು. ಯೋಜನೆ ಪರಿಪೂರ್ಣ ಗೊಳಿಸಲು ಚಂದ್ರಹಾಸ ಆಳ್ವರ ಶಕ್ತಿಯಾಗಿ ಕೆ.ಡಿ ಶೆಟ್ಟಿ ಭರವಸೆ ಮೂಡಿಸಿದ್ದಾರೆ. ತುಳುನಾಡ ಜನತೆಯ ಈ ಮಹತ್ವಕಾಂಕ್ಷೆಯ ಧಾರಾವಾಹಿ ಯಶಸ್ಸಿನ ಯಶಸ್ಸು ಕಾಣಲಿದೆ. ಮುಂಬಯಿಯಲ್ಲಿ ಚೆಲ್ಲಡ್ಕ ಅಂದರೆ ಕೆ.ಡಿ ಶೆಟ್ಟಿ ಎಂದರ್ಥ. ಅಂತೆಯೇ ಮುಂಬಯಿ ಬಂಟರ ಸಂಘ ವಿಶ್ವದ ಬಂಟ ಸಮುದಾಯದ ಧೀಶಕ್ತಿಯಾಗಿದೆ. ಈ ಸಂಘವು ಸಾಮರಸ್ಯದ ಬಾಳಿಗೆ ಮಾದರಿಯಾಗಿದ್ದು ಎಲ್ಲರನ್ನು ಪ್ರೀತಿ ವಾತ್ಸಲ್ಯದಿಂದ ಕಾಣುತ್ತಿದೆ. ಅಂದಮೇಲೆ ಈ ಧಾರಾವಾಹಿ ಸಫಲಗೊಳ್ಳಲಿದೆ. ಮುಂಬಯಿಯಲ್ಲಿರುವ ಕಲಾಪ್ರತಿಭೆಗಳು ಊರಲ್ಲೂ ಇರಲಾರರು. ಇಂತಹ ಪ್ರತಿಭೆಗಳನ್ನು ಒಟ್ಟುಗೂಡಿಸಿ ರಚಿಸುವ ಧಾರಾವಾಹಿ ಉತ್ಕೃಷ್ಟವಾಗಿ ಮೂಡಿ ಬರಲಿದೆ ಎಂದರು.

ಕಟಿಲೇಶ್ವರಿ ಮಾತೆ ನಮ್ಮೆಲ್ಲರ ಪರಂಪರೆ ಕುಲದೇವರು. ಇಂತಹ ಮಾತೆಯ ನಾಡಿನ ಚರಿತ್ರೆ ತಿಳಿದು ತಿಳಿಸುವುದು ನಮ್ಮ ಕರ್ತವ್ಯ. ಭಕ್ತಿ ಪರಂಪರೆ, ನಾಡಿನ ಸಂಸ್ಕೃತಿ ತೋರಿಸುತ್ತಿರುವ ಧಾರಾವಾಹಿಗೆ ಎಲ್ಲರೂ ಪೆÇ್ರೀತ್ಸಾಹಿಸಿ ಮಾತೆಯ ಕೃಪೆಗೆ ಪಾತ್ರರಾಗಿರಿ ಎಂದು ಡಾ| ಸುನೀತಾ ಶೆಟ್ಟಿ ನುಡಿದರು.


ಭವಾನಿ ಕ್ರಿಯೇಶನ್ಸ್ ಪ್ರಾಯೋಜಕತ್ವದಲ್ಲಿ ಜಗನ್ಮಾತೆಯ ಧಾರಾವಾಹಿ ನಿರ್ಮಿಸಲು ಪ್ರಧಾನ ಭೂಮಿಕೆ ವಹಿಸಿದ ಕೆ.ಡಿ ಶೆಟ್ಟಿ ಮತ್ತು ಚಂದ್ರಹಾಸ ಆಳ್ವ ಅವರು ಶ್ರೀ ಕ್ಷೇತ್ರ ಕಟೀಲು ಭ್ರಮರಾಂಭಿಕೆಯನ್ನು ಪೂಜಿಸಿ ಧಾರವಾಹಿ ಯೋಜನೆಯ ಯಶಸ್ಸಿಗೆ ಪ್ರಾಥಿರ್üಸಿದರು. ಇವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು. ಉಳ್ತೂರು ಮೋಹನ್‍ದಾಸ್ ಶೆಟ್ಟಿ ಬಂಟರ ಸಂಘದ ಪರವಾಗಿ ಶುಭೇಚ್ಛ ಸಲ್ಲಿಸಿದರು.

ಧಾರಾವಾಹಿಗಳ ನಿರ್ದೇಶಕ ಚೆಲ್ಲಡ್ಕ ಚಂದ್ರಹಾಸ ಆಳ್ವ ಪ್ರಾಸ್ತವಿಕ ನುಡಿಗಳನ್ನಾಡಿ ಇದು ದೈವಾನುಗ್ರಹ ಮತ್ತು ಮತ್ತೊಮ್ಮೆ ನಮ್ಮ ಪಾಲಿಗೆ ಒಲಿದ ಯೋಗ. ಇದೊಂದು ಕಟೀಲು ಅಮ್ಮನ ಪ್ರಸಾದ ರೂಪವಾಗಿದೆ. ಈ ಪ್ರಸಾದ ಶೀಘ್ರವೇ ಕಿರುತೆರೆ ಕಂಡು ತುಳುನಾಡ ಮಾತೆಯ ಸರ್ವರ ಏಳಿಗೆ ಕಾಣಲಿ. ಆ ಮಾತೆ ಸರ್ವರನ್ನೂ ಆಶೀರ್ವಾದಿಸಲಿ. ಸರ್ವರ ಸಾಧನೆಗೆ ಪೆÇ್ರೀತ್ಸಾಹ ದೊರೆತು ರಾಷ್ಟ್ರದ ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುವ ಭರವಸೆ ನನಗಿದೆ. ಆಮೂಲಕ ಭ್ರಮರಾಂಭಿಕೆಯ ಕೀರ್ತಿ ವಿಶ್ವದಾದ್ಯಂತ ಮೆರೆಯಲಿ. ಇಂದಿನ ಈ ಕಾರ್ಯಕ್ರಮದ ಮುಖೇನÀ ಧಾರಾವಾಹಿಗೆ ಮುನ್ನುಡಿದಿದ್ದು ಮಾತೆಯ ಇಚ್ಛ್ಛಾನುಸಾರ ಯೋಜನೆ ಸಿದ್ಧಿಯಾಗುವ ಆಶಯ ನಮ್ಮಲಿದೆ ಎಂದರು.

ಆರಂಭದಲ್ಲಿ ಬಂಟರ ಭವನದ ಆವಾರಣದಲ್ಲಿನ ಶ್ರೀಮಹಾವಿಷ್ಣು ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಸುಶೀಲಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕೆ.ಡಿಶೆಟ್ಟಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಶೋಕ್ ಪಕ್ಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಲನಚಿತ್ರ-ಧಾರವಾಹಿ ತಯಾರಿಕಾ ಮೇಲ್ವಿಚಾರಕ (ಪೆÇ್ರಡಕ್‍ಶನ್ ಕಂಟ್ರೋಲರ್) ಸಹ ನಿರ್ಮಾಪಕ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ವಂದನಾರ್ಪಣೆಗೈದÀು. ಹೆಚ್ಚುವರಿ ಕಲಾವಿದರ ಆಯ್ಕೆಯು ಇದೇ ಜೂ.18ರ ಆದಿತ್ಯವಾರ ಬೆಳಿಗ್ಗೆ ಗಂಟೆಯಿಂದ ಕಾರ್ಕಳದ ಹೊಟೇಲ್ ಕಟೀಲ್ ಇಂಟರ್‍ನೇಶನಲ್‍ನಲ್ಲಿ ನಿರ್ಮಾಪಕ ದಡ್ದಂಗಡಿ ಚೆಲ್ಲಡ್ಕ ರಾಧಾಕೃಷ್ಣ ಡಿ.ಶೆಟ್ಟಿ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಬಂಟರ ಸಂಘದ ವ್ಯವಸ್ಥಾಪಕ ಪ್ರವೀಣ್ ಎಸ್.ಶೆಟ್ಟಿ, ಕೊಲ್ಯಾರು ರಾಘು ಪಿ.ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಕಣಂಜಾರು, ಅಶೋಕ್ ಶೆಟ್ಟಿ ಕಾಪು, ಕಲಾವಿದೆಯರಾದ ಪೂಜಾ ಪೂಜಾರಿ ಕಾರ್ಕಳ, ಚಂದ್ರಾವತಿ ದೇವಾಡಿಗ ಮತ್ತಿತರರು ಹಾಜರಿದ್ದು, ಕಲಾವಿದರ ಆಯ್ಕೆಪ್ರಕ್ರಿಯೆ ನಡೆಸಲ್ಪಟ್ಟಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here