Tuesday 30th, April 2024
canara news

ಗ್ರಾಹಕನಿಗೆ 5 ಪೈಸೆ ಚೆಕ್ ಕಳುಹಿಸಿನಿಷ್ಠೆ ತೋರಿದ ವೋಡಾಪೋನ್ ಮೊತ್ತ ಸ್ವೀಕೃತ ಮೋಯಿದ್ಧೀನ್ ಷರೀಫ್ ಆಶ್ಚರ್ಯಚಕಿತ

Published On : 22 Jun 2017   |  Reported By : Rons Bantwal


ಮುಂಬಯಿ, ಜೂ.21: ಭಾರತದಲ್ಲಿ ಮಾತ್ರ ನಡೆಯ ಬಹುದಾದ ವಿಚಿತ್ರವಾದರೂ ಸತ್ಯವಾದ ಘಟನೆಯಿದು.ನಮ್ಮ ರಾಷ್ಟ್ರದಲ್ಲಿ ಇಷ್ಟೊಂದು ಪ್ರಾಮಾಣಿಕ ಸಂಸ್ಥೆಗಳೂ ಇನ್ನೂ ಸೇವಾ ನಿರತವಾಗಿವೆ ಎಂದು ಅಭಿಮಾನ ಪಡಬೇಕಾಗಿದೆ. ವಿಷಯ ತಿಳಿದರೂ ಅಚ್ಚರಿ ಪಡಬೇಕಾಗಿಲ್ಲ. ಕಾರಣ ವೋಡಾಪೋನ್ ಇಂಡಿಯಾ ಲಿಮಿಟೆಡ್ (ಮುಂಬಯಿ) ಸಂಸ್ಥೆಯಿಂದ ಕೇವಲ ಐದು ಪೈಸೆ ಚೆಕ್ ಸ್ವೀಕರಿಸಿ ಆಶ್ಚರ್ಯ ಚಕಿತರಾದ ವೋಡಾಪೋನ್ ಮೊಬಾಯ್ಲ್ ಗ್ರಾಹಕ ಮೊಯಿದ್ಧೀನ್ ಷರೀಫ್.

ಮೊಯಿದ್ಧೀನ್ ಷರೀಫ್ ಮೂಲತಃ ಉಪ್ಪಿನಂಗಡಿ ಪಾಲೆತ್ತಾಡಿ ಇಲ್ಲಿನ ವಳಾಲು ನಿವಾಸಿ ಆಗಿದ್ದು ಸದ್ಯ ನವಿಮುಂಬಯಿ ಸನ್ಪಾಡಾ ಇಲ್ಲಿನ ಸೆಕ್ಟರ್ 9ರ ಮಿಲೇನಿಯಂ ಟವರ್‍ನ ವಾಸಿ ಆಗಿದ್ದು ಕಳೆದ ಸುಮಾರು ಒಂದುವರೆ ದಶಕಗಳಿಂದ ಅಂದರೆ ಆರೇಂಜ್ ಸಂಸ್ಥೆಯಾಗಿನಿಂದ ಕ್ರಮೇಣ ಹಚ್ ಸಂಸ್ಥೆಯಾಗಿ ಇದೀಗ ವೋಡಾಫೆÇೀನ್‍ಯಾಗಿ ಪರಿವರಿವರ್ತನೆ ಗೊಂಡರೂ ಅಂದಿನಿಂದ ಇಂದಿನವರೆಗೂ ವೋಡಾಫೆÇೀನ್ ಮೊಬಾಯ್ಲ್ ಸಂಖ್ಯೆ 9833039433ರ ಗ್ರಾಹಕರಾಗಿದ್ದಾರೆ.

ಷರೀಫ್ ನಿರಂತರ ಇದೇ ವೋಡಾಪೋನ್ ಸಂಖ್ಯೆ ಬಳಸುತ್ತಿರುವಂತೆ ಮಧ್ಯಾಂತರದಲ್ಲಿ ರೋಮಿಂಗ್ ದರದಲ್ಲಿ ಭಾರೀ ವೆಚ್ಚದ ಬಿಲ್‍ಗಳಿಂದ ಬೇಸತ್ತು ಇತರೇ ಗ್ರಾಹಕರಂತೆ ತಾನೂ ಸುಸ್ತಾಗಿದ್ದರು. ಆದರೂ ಎಂದಿಗೂ ವಿಶ್ವಾಸ ಕಳಕೊಳ್ಳದೆ ಬೇರೊಂದು ಮೊಬಾಯ್ಲ್ ಸಂಖ್ಯೆಯನ್ನೂ ಪಡೆಯದೆ ತನ್ನ ನಿಷ್ಠೆಯನ್ನು ಮೆರೆದಿದ್ದರು. ಹಣ ಕಟ್ಟುವಂತೆ ಕಾಲ್ ಮೇಲೆ ಕಾಲ್ ಬಂದು ಬೇಸತ್ತು ಕೊನೆಗೂ ವೋಡಾಫೆÇೀನ್ ಕಳುಹಿಸಿದ ಮೊತ್ತಕ್ಕೆ ಬಿಲ್ ಪಾವತಿಸಿದರು. ಕಳುಹಿಸಿದ ಬಿಲ್‍ನ್ನು ಪೂರ್ಣ ಪ್ರಮಾಣವಾಗಿಸಿ ವೃತ್ತಚಲನಾ ಅಂಕಿಯ ಸಂಕೇತಾಕ್ಷರಕ್ಕಾಗಿ (ರೌಂಡ್ ಫಿಗರ್‍ಗಾಗಿ) ಬರೇ 5 ಪೈಸೆ ಹೆಚ್ಚುವರಿಯಾಗಿ ಪಾವತಿಸಿದ್ದರು. ಇವರ ಪ್ರಾಮಾಣಿಕತೆಯನ್ನು ಮೆಚ್ಚಿಯೋ ಅಥವಾ ತಮ್ಮ ನಿಷ್ಠುರತೆಯನ್ನು ತೋರ್ಪಡಿಸಲೋ ಗೊತ್ತಿಲ್ಲ ವೋಡಾಫೆÇೀನ್ ಸಂಸ್ಥೆ ನೂರಾರು ರೂಪಾಯಿ ಖರ್ಚು ಮಾಡಿ ಷರೀಫ್ ಕಳುಹಿಸಿದ ಹೆಚ್ಚುವರಿ 5 ಪೈಸೆಯನ್ನು ಚೆಕ್ ಮುಖೇನ ಷರೀಫ್‍ಗೆ ವಾಪಸ್ಸು (ರಿಫಂಡ್) ಕಳುಹಿಸಿದೆ. ಮುಂಬಯಿ ಬಾಂದ್ರ ಪೂರ್ವದ ಬಿಕೆಸಿ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್) ಆಕ್ಸಿಸ್ ಬ್ಯಾಂಕ್ ಲಿಮಿಟೆಡ್‍ನ ವ್ಯವಹಾರಿತ ಈ ಚೆಕ್‍ನ್ನು ಕಳೆದ ಜೂನ್.21 ದಿನಾಂಕಕ್ಕೆ ಸಿಟಿ ಬ್ಯಾಂಕ್ ಪೇಲಿಂಕ್ (ರಿ) ಇನ್‍ಸ್ಟ್ರೂಮೆಂಟ್ (ಚೆಕ್ ಕ್ರಮಾಂಕ 687302) ಮೂಲಕ ಈ ಮೊತ್ತವನ್ನು ತನ್ನ ಗ್ರಾಹಕ ಮೋಯಿದ್ಧೀನ್ ಷರೀಫ್ ಅವರಿಗೆ ಪಾವತಿಸಿದೆ. ಅದೂ ಕೂಡಾ ಡೆಮೋ ಚೆಕ್‍ವಲ್ಲದೆ ಅಸಲು ಚೆಕ್ ಮೂಲಕ ಪ್ರತ್ಯರ್ಪಿಸಿ ತಮ್ಮ ಔದಾರ್ಯತೆ ತೋರಿ ತಮಾಷೆಗೆ ಒಳಗಾಗಿದೆ.

ಈ ಹಿಂದೆಯೂ ಬರೇ ಪೈಸೆಗಳನ್ನು ಚೆಕ್ ಮೂಲಕ ಹಿಂದಿರುಗಿಸಿದ ಕೆಲವೊಂದು ಘಟನೆಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದು ಅದಕ್ಕೆ ಪೂರಕವೆಂಬಂತೆ ಈ ಘಟನೆ ಪುನರಾವರ್ತಿತ ಗೊಂಡಿದೆ. ಕೋರ್ಟ್ ಪ್ರಕಾರ ಕನಿಷ್ಠ ಒಂದು ರೂಪಾಯಿಕ್ಕಿಂತ ಕಡಿಮೆ ಮೊತ್ತಕ್ಕೆ ಹಣ ವಾಪಸ್ಸೀಕರಣ ಸರಿಯಲ್ಲ ಎನ್ನುವುದಿದೆ. ಆದರೂ ಇಂತಹದೊಂದು ಜಾಗತೀಕವಾಗಿ ವ್ಯವಹರಿತ ಸಂಯುಕ್ತ ಸಂಸ್ಥೆಗಳು ಎಡವಟ್ಟು ಮಾಡಿಸಿ ಕೊಳ್ಳುತ್ತಿರುವುದು ವಿಪರ್ಯಸವೇ ಸರಿ. ಒಂದೆಡೆ ವೋಡಾಫೆÇೀನ್ ಸಂಸ್ಥೆ ತಮ್ಮ ಅಕೌಂಟೆಂಟ್‍ಗೆ ಸಂಬಂಳ ನೀಡಿದಕ್ಕೆ ಸಾರ್ಥಕ ಎಂದಷ್ಟೇ ಖುಷಿ ಪಡುವಂತಿದ್ದರೆ ಮತ್ತೊಂದೆಡೆ ವೋಡಾಫೆÇೀನ್ ನಿಷ್ಠೆಗೆ ಮತ್ತೆ ನಾನು ನೂರಾರು ರೂಪಾಯಿ ಖರ್ಚು ಮಾಡಲಸಾಧ್ಯವೇ.? ಈಗ ನಾನು ಈ ಮೊತ್ತವನ್ನು ಹೇಗೆ ಸಮದೂಗಿಸಿ ವೋಡಾಫೆÇೀನ್‍ನ ಋಣ ತೀರಿಸಲಿ ಎನ್ನುವ ಚಿಂತೆ ಷರೀಫ್ ಅವರನ್ನು ಕಾಡತೊಡಗಿದೆಯಂತೆ.

 

 


 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here