Sunday 28th, April 2024
canara news

ವಿಲೇಪಾರ್ಲೆಯಲ್ಲಿ ಶ್ರೀ ರಜಕ ಸಂಘ ಮುಂಬಯಿ ನವೀಕೃತ ಆಡಳಿತ ಕಚೇರಿ ಉದ್ಘಾಟನೆ

Published On : 18 Jul 2017   |  Reported By : Rons Bantwal


ಪ್ರತೀಯೊಬ್ಬನೂ ಸ್ವಗುರು ಆಗಿರುತ್ತನೆ : ಸತೀಶ್ ಎಸ್.ಸಾಲಿಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.16: ಉಪನಗರ ವಿಲೇಪಾರ್ಲೆ ಪಶ್ಚಿಮದ ವಿ ಪಿ ರಸ್ತೆಯ ದಾಮೋದರ್ ಭವನದಲ್ಲಿನ ರಜಕ ಸಂಘ ಮುಂಬಯಿ ಇದರ ನವೀಕೃತ ಆಡಳಿತ ಕಚೇರಿ ಇಂದಿಲ್ಲಿ ರವಿವಾರ ಪೂರ್ವಾಹ್ನ ಪುನಾರಂಭಿಸಲ್ಪಟ್ಟಿತು. ರಜಕ ಸಂಘದ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಉಪಸ್ಥಿತ ಸಂಘದ ವಸಾಯಿ ವಲಯ ಕಾರ್ಯಾಧ್ಯಕ್ಷ ರಾಮ ಮಡಿವಾಳ ರಿಬ್ಬನ್ ಕತ್ತರಿಸಿ ನಂತರ ಉಪಸ್ಥಿತ ನಗರದ ಪ್ರತಿಷ್ಠಿತ ಉದ್ಯಮಿ ಕರುಣಾಕರ್ ಪುತ್ರನ್ ಹಾಗೂ ರಜಕ ಸಂಘದ ಮಾಜಿ ಅಧ್ಯಕ್ಷ ಪಿ.ಎಂ ಸಾಲಿಯಾನ್ ಮತ್ತು ಹಾಲಿ ಪದಾಧಿಕಾರಿಗಳನ್ನು ಒಳಗೊಂಡು ಸತೀಶ್ ಸಾಲಿಯಾನ್ ಕಚೇರಿಯನ್ನು ದೀಪ ಬೆಳಗಿಸಿ ವಿಧ್ಯುಕ್ತವಾಗಿ ಉದ್ಘಾಟಿಸಿ ಶುಭಾರೈಸಿದರು.

ಆ ಪ್ರಯುಕ್ತ ಬೆಳಿಗ್ಗೆ (ಆ್ಯಡ್ಮಿನಿಸ್ಟ್ರೇಟಿವ್ ಆಫೀಸ್) ಕಚೇರಿಯಲ್ಲಿ ಗಣಹೋಮ ಇನ್ನಿತರ ಪೂಜಾಧಿಗಳು ನಡೆಸಲ್ಪಟ್ಟವು. ವಿದ್ವಾನ್ ಕೃಷ್ಣರಾಜ ತಂತ್ರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಂಗಳಾರತಿಗೈದು ನೆರೆದ ಭಕ್ತರು ಹಾಗೂ ರಜಕ ಬಂಧುಗಳಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು. ರೂಪಾ ಪ್ರಕಾಶ್ ಗುಜರನ್ ಹಾಗೂ ಸುಮಿತಾ ದಯಾನಂದ ಸಾಲ್ಯಾನ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಪೂಜೆಯ ವೇಳೆಗೆ ಸಂಘದ ಪಶ್ಚಿಮ, ಮಧ್ಯ, ವಸಾಯಿ, ಡೊಂಬಿವಿಲಿ, ನವಿಮುಂಬಯಿ ವಲಯಗಳ ಸದಸ್ಯರು ಭಜನೆಯನ್ನಾಡಿದರು.

ಅಪರಾಹ್ನ ಗುರುವಂದನಾ ಕಾರ್ಯಕ್ರಮ ನಡೆಸಲಾಗಿದ್ದು ಉಪಸ್ಥಿತ ಹಿರಿಯ ಶಿಕ್ಷಕಿ ಮಲ್ಲಿಕಾ ಚಂದ್ರಶೇಖರ ಸಾಲ್ಯಾನ್ (ದಂಪತಿಯನ್ನು) ಪೂಜಿಸಿ ಗೌರವಿಸಲಾಯಿತು. ಹಾಗೂ ಉಪಸ್ಥಿತ ಹಿರಿಯ ರಜಕ ಬಂಧುಗಳಾದ ವಾರಿಜಾ ಭಾಸ್ಕರ್ ಸಾಲ್ಯಾನ್, ಎಲ್.ಕೆ ಕುಂದರ್, ಎಸ್.ಯು ಕುಂದರ್ ಮತ್ತಿತರರನ್ನು ಗೌರವಿಸಲಾಯಿತು.
ತದಾನಂತರ ಸದಸ್ಯಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ, ಪುಸ್ತಕ ವಿತರಿಸಿ ಯಶಸ್ಸನ್ನು ಹಾರೈಸಿದರು.

ಗುರು ಎಂದೊಡನೆ ಮಾತಾಪಿತರು ಅಥವಾ ನಮ್ಮನ್ನು ಸುಶಿಕ್ಷಿತರನ್ನಾಗಿಸಿದ ಶಿಕ್ಷಕರು, ಪ್ರಾಧ್ಯಾಪಕರು ಮಾತ್ರವಲ್ಲ. ಅದಕ್ಕೂ ಮೊದಲಾಗಿ ಪ್ರತೀಯೊಬ್ಬನೂ ಸ್ವಂತಿಕೆಯ ಗುರು ಆಗಿರುತ್ತನೆ. ತನ್ನಲ್ಲಿರುವ ಅಹಂ ಮರೆತು ಸರಳ ಸಜ್ಜನಿಕೆಯೊಂದಿಗೆ ಪರರನ್ನು ಗೌರವಿಸಿ ಬದುಕುವವನೇ ಮೊದಲ ಗುರು ಆಗಿರುವನು. ಪ್ರಾಕೃತಿಕವಾಗಿ ಸರಿದೂಗಿ, ಮನುಕುಲದೊಡನೆ ಸಮಾನನಾಗಿ ಬಾಳುತ್ತಾ ಸರ್ವರಿಗೂ ಮಾದರಿ ಆಗುವವನೇ ಶ್ರೇಷ್ಠ ಗುರು ಎನ್ನುವುದು ನನ್ನ ಅಭಿಮತ. ನೈಸರ್ಗಿಕವಾಗಿರುವ ಜಲ, ವಾಯು, ಆಗ್ನಿ ಗಿಡಮರ, ಪ್ರಾಣಿಪಕ್ಷಿಗಳು ನಿಸರ್ಗದ ನಿಯಮ ಅನುಸರಿಸಿ ಹೇಗೆ ಬೆಳೆಯುತ್ತವೆಯೋ ಹಾಗೆಗೇ ಮಾನವನೂ ಕಾಲಕ್ಕನುಗುಣವಾಗಿ ಸ್ಪಂದಿಸಿ ಬಾಳುತ್ತಾ ಇತರರಿಗೆ ಮಾದರ್ಗದರ್ಶಕರಾಗಿ ಜೀವಿಸುವುದೂ ಗುರು ಸ್ಥಾನವಾಗುತ್ತದೆ. ಕಡಿಮೆ ಸಂಖ್ಯೆಯಲ್ಲಿರುವ ರಜಕರೂ ಇಂತಹದ್ದೇ ಮನೋಧರ್ಮವನ್ನು ಮೈಗೂಡಿಸಿ ಯುವಜನತೆಗೆ ಇಂತಹ ಗುರುಸ್ಥಾನದ ಅರಿವು ಮೂಡಿಸಿ ಬೆಳೆಸಿದಾಗ ರಜಕರೆಲ್ಲರೂ ಸರ್ವರಿಗೂ ಗುರುಸ್ಥಾನದಲ್ಲಿ ಗುರುತಿಸಿ ಕೊಳ್ಳಲು ಸಾಧ್ಯ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಸತೀಶ್ ಎಸ್.ಸಾಲಿಯಾನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಸಿಎ| ವಿಜಯ್ ಕುಂದರ್ ಮತ್ತು ಸುಭಾಷ್ ಸಾಲ್ಯಾನ್, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಡಿ.ಕುಂದರ್, ಯುವ ವಿಭಾಗಧ್ಯಕ್ಷ ಮನೀಷ್ ಕುಂದರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಭಾಸ್ಕರ್ ಕುಂದರ್, ಕುಮಾರ್ ಬಂಗೇರಾ, ಪ್ರಕಾಶ್ ಎನ್.ಗುಜರನ್, ಅಂತರಿಕ ಲೆಕ್ಕಪರಿಶೋಧಕ ಪೂವಣಿ ಸಾಲ್ಯಾನ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ವಿವಿಧ ವಲಯಗಳ ವಿಶೇಷವಾಗಿ ಸಂಘದ ಕಚೇರಿ ಪ್ರಬಂಧಕ ಸಂತೋಷ್ ಸಾಲ್ಯಾನ್ ಮತ್ತು ಸ್ಪರ್ಶ್ ಸತೀಶ್ ಸಾಲಿಯಾನ್ ಅವರ ಸಕ್ರೀಯ ಸಹಯೋಗದಿಂದ ಜರುಗಿದ ತ್ರಿವಳಿ ಕಾರ್ಯಕ್ರಮ ದಿನವಿಡೀ ನೆರವೇರಿಸಲ್ಪಟ್ಟಿತು. ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಸಂಘದ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here