Thursday 2nd, May 2024
canara news

ಮಿನ್ ಹಾಜು ಸ್ವಾಲಿಹತ್ ಮಹಿಳಾ ಶರೀಅತ್ ಕಾಲೇಜ್ ಕಟ್ಟಡ ಉದ್ಘಾಟನೆ

Published On : 30 Jul 2017   |  Reported By : Rons Bantwal


ಮುಸ್ಲಿಂ ಮಹಿಳೆಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ : ಅಸ್ಸಯ್ಯಿದ್ ಇಸ್ಮಾಈಲ್

ಉಳ್ಳಾಲ: ತಾಯಿ ಮೊದಲ ಪಾಠ ಶಾಲೆ ಎಂಬಂತೆ ಮಹಿಳೆಯರಿಗೆ ಉನ್ನತ ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ನೀಡಿದಾಗ ಇಡೀ ಕುಟುಂಬ ಶಿಕ್ಷಿತರಾಗಲು ಸಾಧ್ಯ. ಮುಸ್ಲಿಂ ಮಹಿಳೆಯರು ಅಸುರಕ್ಷತೆಯ ಕೊರತೆಯಿಂದ ಧಾರ್ಮಿಕ ಶಿಕ್ಷಣ ಮೊಟಕು ಗೊಳಿಸಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಹಿಳಾ ಸಂಸ್ಥೆಯಿಂದ ಸುರಕ್ಷಿತವಾಗಿ ಉನ್ನತ ಶಿಕ್ಷಣ ಪಡೆದು ಭವಿಷ್ಯದಲ್ಲಿ ಮಹಿಳಾ ಉಪನ್ಯಾಸಕರು ಆಗಿಕೊಂಡು, ಇನ್ನಷ್ಟು ಮಹಿಳೆಯರಿಗೆ ತರಬೇತಿ ನೀಡುವಂತಾಗ ಬೇಕು ಎಂದು ಅಸ್ಸಯ್ಯಿದ್ ಇಸ್ಮಾಈಲ್ ಮದನಿ ತಂಙಳ್ ಅಲ್ ಹಾದಿ ಉಜಿರೆ ಅಭಿಪ್ರಾಯಪಟ್ಟರು.

ತಲಪಾಡಿ ಕೆ.ಸಿ ರೋಡು ತಾಜ್ ನಗರದಲ್ಲಿ ಮಿನ್‍ಹಾಜುಸುನ್ನ ಫೌಂಡೇಶನ್ ನಿರ್ಮಿಸಿದ ಮಿನ್ ಹಾಜು ಸ್ವಾಲಿಹತ್ ಮಹಿಳಾ ಶರೀಅತ್ ಕಾಲೇಜ್ ಕಟ್ಟಡ ಉದ್ಘಾಟಿಸಿ ತಂಙಳ್ ಮತನಾಡಿದರು.

ಎಸ್‍ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆ ಎರಡು ರೀತಿಯ ಉನ್ನತ ಶಿಕ್ಷಣ ನೀಡಿದಾಗ ನಿಮ್ಮ ಕುಟುಂಬದ ಜೀವನ ಉತ್ತಮವಾಗುವುದು. ಇಂದು ಲೌಕಿಕ ಶಿಕ್ಷಣಕ್ಕಾಗಿ ಮಕ್ಕಳ ಹೆತ್ತವರು ಪೆÇ್ರೀತ್ಸಾಹ ನೀಡುತ್ತಿದ್ದು. ಜೊತೆಗೆ ಧಾರ್ಮಿಕ ವಿದ್ಯೆ ನೀಡಿದಾಗ ಕುಟುಂಬ ¨ದಲಾಗುವ ಜೊತೆಗೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

ಮಿನ್‍ಹಾಜುಸ್ಸುನ್ನ ಫೌಂಡೇಶನ್ ಅಧ್ಯಕ್ಷ ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಯ್ಯದ್ ಸಿ.ಟಿ.ಎಂ ಸಲೀಂ ಅಸ್ಸಖಾಫ್ ತಂಙಳ್ ಕೆ.ಸಿ ರೋಡು ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅತಿಥಿüಗಳಾಗಿ ಕರ್ನಾಟಕ ಮುಸ್ಲಿಂ ಜಮಾಯತ್ ಕೌನ್ಸಿಲ್ ಇದರ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ, ಕೆ.ಸಿಎಫ್ ಸೌದಿ ನ್ಯಾಷನಲ್ ಕಮಿಟಿಯ ಡಿ.ಪಿ ಯೂಸೂಫ್ ಸಖಾಫಿ ಬೈತಾರ್, ಅಸ್ಸಯ್ಯಿದ್ ಹುಸೈನ್ ಆಟಕೋಯ ತಂಙಳ್ ಪೂಮಣ್ಣು, ಸಯ್ಯದ್ ಶರಫುದ್ದೀನ್ ಹಿಮಮಿ ಅಲ್ ಐದರೂಸದ್ ಎಮ್ಮೆಮ್ಮಾಡ್, ಮಿಸ್ಬಾಹ್ ಮಹಿಳಾ ಕಾಲೇಜು ಕಾಟಿಪಳ್ಳದ ಅಧ್ಯಕ್ಷ ಹಾಜಿ ಬಿ.ಎಂ ಮುಮ್ತಾಝ್ ಅಲಿ ಕೃಷ್ಣಾಪುರ, ಪಂಪ್‍ವೆಲ್ ತಖ್ವಾ ಹಿಫ್‍ಳುಲ್ ಖುರ್‍ಆನ್ ಅಕಾಡೆಮಿ ಮುಖ್ಯಸ್ಥ ಇರ್ಫಾನ್ ಅಬ್ದುಲ್ಲಾಹ್ ನೂರಾನಿ ಕಿನ್ಯ , ಉಚ್ಚಿಲ ಮುದರಿಸ್ ಇಬ್ರಾಹಿಂ ಫೈಝಿ, ಎಸ್ ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಇಬ್ರಾಹಿಂ ಮದನಿ, ಕೆಸಿರೋಡ್ ಎಂಜೆಎಂ ಮುದರ್ರಿಸ್ ಮುನೀರ್ ಸಖಾಫಿ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ತಲಪಾಡಿ ಸೆಕ್ಟರ್ ಎಸ್ಸೆಸ್ಸೆಫ್ ಅಧ್ಯಕ್ಷ ಅಬುರ್ರಹೀಂ ಝುಹರಿ, ಮಾಡೂರು ಐಜೆಎಂ ಮಸೀದಿಯ ಖತೀಬ್ ಬಶೀರ್ ಅಹ್ಸನಿ ತೋಡಾರ್, ಕಾಟುಂಗರೆ ಗುಡ್ಡೆ ಇಮಾಂ ಮುಹಿಯ್ಯದ್ದೀನ್ ಮಸೀದಿಯ ಇಮಾಂ ಫಾರುಕ್ ಸಅದಿ, ಮುಳ್ಳುಗುಡ್ಡೆ ಇಮಾಂ ಮಸ್ಜಿದುಲ್ ಹಿದಾಯದ ಇಮಾಂ ಅಝೀಝ್ ಸಖಾಫಿ, ಉಚ್ಚಿಲಗುಡ್ಡೆ ರೆಹ್ಮಾನಿಯಾ ಮಸೀದಿಯ ಇಮಾಂ ಅಕ್ಬರ್ ಸಅದಿ, ಕೊಮರಂಗಳ ತಕ್ವಾ ಮಸೀದಿಯ ಇಮಾಂ ಅಶ್ರಫ್ ಸಖಾಫಿ, ಪಂಜಳ ಬಿಜೆಎಂನ ಇಮಾಂ ಮೆಹಮೂದ್ ಸಖಾಫಿ, ಎಸ್ ಎಂ ಎ ಉಳ್ಳಾಲ ಝೋನ್ ನ ಅಧ್ಯಕ್ಷ ಅಹ್ಮದ್ ಕುಂಞÂ ಹಾಜಿ ಪಿಲಿಕೂರು, ಎಸ್‍ಎಂಎ ತಲಪಾಡಿ ರೀಜನಲ್‍ನ ಅಧ್ಯಕ್ಷ ಅಬ್ಬಾಸ್ ಹಾಜಿ ಕೋಮರಂಗಳ, ವಿದ್ಯಾನಗರ ಫಲಾಹ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ, ಕೋಟೆಕಾರ್ ಮರ್ಕಝಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ ಅಬ್ದುಲ್ಲ ಹಾಜಿ, ಎಂ.ಎಂ ಕಾಟುಂಗರೆ ಗುಡ್ಡೆ ಪಿ.ಹೆಚ್ ಅಬೂಬಕ್ಕರ್ ಹಾಜಿ, 407 ಜೆಎಂಎಸ್ ಉಚ್ಚಿಲ ಅಬ್ಬಾಸ್ ಹಾಜಿ ಪಿರಿಬೈಲು, ಬಿಜೆಎಂ ಅಜ್ಜಿನಡ್ಕ ಅಧ್ಯಕ್ಷ ಸುಲೈಮಾನ್ ಹಾಜಿ, ಎಂ.ಎಸ್.ಎಫ್ ಐಎನ್‍ಸಿ ಕೋ-ಓರ್ಡಿನೇಟರ್ ಬಶೀರ್ ಟಿ.ಕೆ, ಹಸನಬ್ಬ ಹಾಜಿ ಕೆ.ಸಿ ನಗರ, ಜೆ.ಎಂ ಮೇರಳ ಗುಡ್ಡೆ ಇಸ್ಮಾಯಿಲ್ ಹಾಜಿ ಕೊಪ್ಪಳ, ತಾಲೂಕು ಪಂಚಾಯತ್ ಸದಸ್ಯ ಸಿದ್ದೀಖ್ ತಲಪಾಡಿ, ಎಂಎಸ್‍ಎಫ್ ತಲಪಾಡಿ ಉಪಾಧ್ಯಕ್ಷ ಕೆ.ಎಸ್‍ಬಾವಾ ಹಾಜಿ, ಎಂಎಸ್‍ಎಫ್ ತಲಪಾಡಿ ಜೊತೆ ಕಾರ್ಯದರ್ಶಿ, ಬಿ.ಜೆ.ಎಂ ಪಂಜಳ ಅಬ್ದುಲ್ ಖಾದರ್, ಸೋಮೇಶ್ವರ ಗ್ರಾಮ ಪಂಚಾಯತ್ ರಫೀಖ್ ಕಾಟುಂಗರೆ ಗುಡ್ಡೆ, ಎಂ.ಎಂ ಕಾಟಂಗರೆ ಗುಡ್ಡೆ ಮಾಜಿ ಅಧ್ಯಕ್ಷ ಮೂಸ, ಎಂ.ಎಂ ಕಾಟುಂಗರೆ ಗುಡ್ಡೆ ಪ್ರಧಾನ ಕಾರ್ಯದರ್ಶಿ ಯೂಸುಫ್, ಎಂಎಸ್‍ಎಫ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಟಿ. ಸಮಾಜ ಸೇವಕ ಶಂಸುದ್ದೀನ್ ಉಚ್ಚಿಲ, ಮಾರ್ಕಝುಲ್ ಹುದ ಹಮೀದ್ ಸುಳ್ಯ ಉಪಸ್ಥಿತರಿದರು.

ಮಿನ್‍ಹಾಜು ಸ್ವಾಲಿಹತ್ ಕಾಲೇಜಿನ ಪ್ರಿನ್ಸಿಪಾಲ್ ಮುಹಮ್ಮದ್ ಹನೀಫ್ ಸಖಾಫಿ ಕಿನ್ಯ ಸ್ವಾಗತಿಸಿದರು. ಮಾನ್ಯೇಜರ್ ಎಮ್ಮೆಸ್ಸೆಂ ಸಿರಾಜ್ ಕಾರ್ಯಕ್ರಮ ನಿರೂಪಿದರು. ಪ್ರ.ಕಾರ್ಯದರ್ಶಿ ಫಾರೂಖ್ ಕೋಟೆಪುರ ವಂದಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here