Thursday 2nd, May 2024
canara news

ಹದಿನೇಳನೇ ವಾರ್ಷಿಕ ಮಹಾಸಭೆ ನಡೆಸಿದ ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ

Published On : 31 Jul 2017   |  Reported By : Rons Bantwal


ಕ್ರೆಡಿಟ್ ಸೊಸೈಟಿಯನ್ನು ಬ್ಯಾಂಕ್ ಆಗಿಸೋಣ : ಡಾ| ನಾರಾಯಣ ಆರ್.ಗೌಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.30: ಕರ್ಮಭೂಮಿಯಲ್ಲಿ ಸಾಂಘಿಕವಾಗಿ ಬೆಳೆದ ನಾವುಗಳು ಮರಾಠಿಗರ ಸಹಯೋಗಕ್ಕೆ ಸದಾ ಋಣಿಯಾಗಿರಬೇಕು. ತಮ್ಮೆಲ್ಲರ ಸಹಕಾರ, ಸಮಾಜ ಬಂಧುಗಳ ಅನನ್ಯ ಸೇವೆಯಿಂದ ಒಂದುವರೆ ದಶಕಕ್ಕೂ ಹೆಚ್ಚಾಗಿ ಕಾರ್ಯನಿರತ ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿಯನ್ನು ಶೀಘ್ರವೇ ಬ್ಯಾಂಕ್‍ವನ್ನಾಗಿ ಪರಿವರ್ತಿಸ ಬೇಕಾಗಿದೆ. ಇದಕ್ಕೆ ಒಕ್ಕಲಿಗರ ಸಂಘ ಹಾಗೂ ಜಯಲಕ್ಷ್ಮೀ ಸೊಸೈಟಿಯ ಸರ್ವ ಸದಸ್ಯರ ಹಿತೈಷಿಗಳ ಸಹಯೋಗ ಅತ್ಯವಶ್ಯವಾಗಿದೆ. ಅವಾಗಲೇ ಸಮಾಜಕ್ಕೆ ಆಥಿರ್üಕ ಶಕ್ತಿ ಬಲವರ್ಧನೆ ಗೊಳ್ಳುವುದು ಎಂದು ಕರ್ನಾಟಕದ ಕೆ.ಆರ್ ಪೇಟೆ ಶಾಸಕ, ಒಕ್ಕಲಿಗ ಸಂಘ ಮಹಾರಾಷ್ಟ್ರ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಇದರ ಕಾರ್ಯಾಧ್ಯಕ್ಷ ಡಾ| ನಾರಾಯಣ ಆರ್.ಗೌಡ ತಿಳಿಸಿದರು.

 

ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಜಯಲಕ್ಷ್ಮೀ ಪಥಸಂಸ್ಥೆಯ17ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ರವಿವಾರ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನÀದÀಲ್ಲಿ ಜರುಗಿದ್ದು, ನಾರಾಯಣ ಗೌಡ ಅವರು ನಿರ್ದೇಶಕರನ್ನೊಳಗೊಂಡು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾತನಾಡಿದರು.

ಸೊಸೈಟಿಯ 2018-2021ನೇ ಸಾಲಿಗೆ ನೂತನ ಕಾರ್ಯಧ್ಯಕ್ಷರನ್ನಾಗಿ ರಂಗಪ್ಪ ಸಿ.ಗೌಡ, ಉಪ ಕಾರ್ಯಧ್ಯಕ್ಷರಾಗಿ ಎ.ಕೆಂಪೇ ಗೌಡ (ರಾಮಣ್ಣ), ಕಾರ್ಯದರ್ಶಿಯಾಗಿ ಕೆ.ರಾಜೇ ಗೌಡ ಮತ್ತು ಕೋಶಾಧಿಕಾರಿಯಾಗಿ ಮುತ್ತೇ ಎಸ್. ಗೌಡ ಇವರನ್ನು ಆಯ್ಕೆ ಮಾಡಲಾಗಿದ್ದು ಗತ ಮಂಡಳಿಯನ್ನೊಳಗೊಂಡು ಹೆಚ್ಚುವರಿ ನಿರ್ದೇಶಕರನ್ನಾಗಿ ಸುನೀಲ್ ಕೆ.ಅವಾಡ್ ಮತ್ತು ಸೂರತ್ ಎನ್.ಯಾದ ವ್ ಅವರನ್ನು ನೇಮಿಸಲಾಗಿದೆ ಎಂದು ನಿರ್ಗಮನ ಕಾರ್ಯಾಧ್ಯಕ್ಷ ನಾರಾಯಣ ಗೌಡ ಪ್ರಕಟಿಸಿ ಸರ್ವರಿಗೂ ಶುಭಾರೈಸಿದರು.

ಈ ಸಂದರ್ಭದಲ್ಲಿ ಗೌರವ್ವಾನಿತ ಗಣ್ಯರುಗಳಾಗಿ ಉದ್ಯಮಿಗಳಾದ ಸದ್ದು ಗಾಯಕ್ವಾಡ್, ಶಿವರಾಮ ಜೆ.ಗೌಡ, ಸುಂದರ ಪೂಜಾರಿ, ಜಯರಾಮ ಗೌಡ ಸಾಕಿನಾಕ, ಜಯರಾಮ ದೇವೇಗೌಡ ಹಾಗೂ ಸೊಸೈಟಿಯ ಉಪಾಧ್ಯಕ್ಷ ಕೆ.ರಾಜೇ ಗೌಡ, ಕಾರ್ಯದರ್ಶಿ ರಂಗಪ್ಪ ಸಿ.ಗೌಡ, ನಿರ್ದೇಶಕರುಗಳಾದ ಚಂದನ್ ಸಿ.ಚಾರಿ, ಮುತ್ತೇ ಎಸ್.ಗೌಡ, ಎ.ಕೆಂಪೇ ಗೌಡ (ರಾಮಣ್ಣ) ಗೊಂಡೇನಹಳ್ಳಿ, ಅನುಸೂಯ ಆರ್.ಗೌಡ, ದೇವಕಿ ನಾರಾಯಣ ಗೌಡ, ಸುನಂದ ಆರ್.ಗೌಡ, ರಾಹುಲ್ ಯು.ಲಗಡೆ ಮತ್ತು ಭಾರತಿ ಎಸ್.ಗಾಯಕ್ವಾಡ್ ವೇದಿಕೆಯಲ್ಲಿ ಆಸೀನರಾಗಿದ್ದರು. ಸಭಿಕರ ಪರವಾಗಿ ಪ್ರತಾಪ್ ಸಿಂಗ್ ಹಾಗೂ ಕಾಂಗ್ರೇಸ್ ನೇತಾರ ಚಂದ್ರ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಲಹೆ, ಸೂಚನೆಗಳ ನ್ನೀಡಿ ಸೊಸೈಟಿಯ ಉನ್ನತಿಗಾಗಿ ಶುಭಾರೈಸಿದರು.

ಒಕ್ಕಲಿಗರ ಧೀಶಕ್ತಿ ದೈವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾಗುರು ಮತ್ತು ಧನಲಕ್ಷ್ಮೀ ಮಾತೆಯ ಪ್ರತಿಮೆಗೆ ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‍ಮಾರ್ಗ್ ಪೂಜೆ ನೆರವೇರಿಸಿ ಸಭೆಗೆ ವಿಧಿವತ್ತಾಗಿ ಚಾಲನೆಗೈದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ನೆರವೇರಿಸಿ ಮಹಾಸಭೆಗೆ ಚಾಲನೆಯನ್ನಿತ್ತರು. ಸೊಸೈಟಿಯ ಗ್ರಾಹಕರು, ಹಿಶೆದಾರರು, ಹಿತೈಷಿ ಗಣ್ಯರು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆವಿತ್ತು ಶುಭ ಕೋರಿದರು.


ಕಾರ್ಯದರ್ಶಿ ರಂಗಪ್ಪ ಗೌಡ ಮಾತನಾಡಿ ಸಹಕಾರಿ ಸಂಸ್ಥೆಗಳು ಆಥಿರ್üಕ ಸಬಲತೆಗೆ ಸ್ಪಂದಿಸಿದಾಗಲೇ ಇಡೀ ಸಮಾಜದÀ ಉನ್ನತಿ ಸಾಧ್ಯವಾಗುವುದು. ಆದುದರಿಂದ ಭವಿಷ್ಯತ್ತಿನ ಜನಾಂಗವನ್ನೇ ಕೇಂದ್ರೀಕರಿಸಿ ಯುವಜನತೆಯ ಲ್ಲಿ ಆಥಿರ್üಕ ವ್ಯವಸ್ಥೆಯನ್ನು ರೂಪಿಸುವುದರ ಜೊತೆಗೆ ಸ್ವಂತಿಕೆಯ ಬ್ಯಾಂಕನ್ನು ರಚಿಸುವ ಉದ್ದೇಶ ನಾವಿರಿಸಿದ್ದೇವೆ. ಈ ಮೂಲಕ ಯುವ ಪೀಳಿಗೆ ಕೇವಲ ಆಥಿರ್üಕ ನೆರವು ನೀಡುವುದು ಮಾತ್ರವಲ್ಲದೆ ಸ್ವತಂತ್ರ ಉದ್ಯಮಿಗಳಾಗುವ ಮನೋಭಾವ ಮೂಡಿಸಿ ಪೆÇ್ರೀತ್ಸಾಹಿಸುವ ಉದ್ದೇಶ ನಮ್ಮ ಪಥ ಸಂಸ್ಥೆ ಹೊಂದಿದೆ. ಇಂತಹ ಮಹಾನ್ ಯೋಜನೆಗೆ ಸ್ವಸಮುದಾಯವಾದ ಒಕ್ಕಲಿಗ ಬಂಧುಗಳೆಲ್ಲರೂ ಸ್ಪಂದಿಸ ಬೇಕು ಎಂದು ಮಾಹಿತಿ ನೀಡಿ ಶೆÉೀರುದಾರರಿಗೆ ಈ ಬಾರಿಯೂ ಸೊಸೈಟಿಯು 9% ಡಿವಿಡೆಂಟ್ ನೀಡಲಿದೆ ಎಂದÀರು.


ನೌಕರವೃಂದದ ಪ್ರದೀಪ್‍ಕುಮಾರ್ ಆರ್.ಗೌಡ, ಆಶಾರಾಣಿ ಬಿ.ಗೌಡ, ರವಿ ಎಸ್.ಗೌಡ, ಗಣೇಶ್ ಸಿ.ಗೌಡ ಹಾಗೂ ದೈನಂದಿನ ಹಣಸಂಗ್ರಹಾ ಪ್ರತಿನಿಧಿಗಳಾದ ಮಿನಲ್ ಪಿ.ದೌಂಡ್, ಮಂಜೇ ಎಂ.ಗೌಡ, ರವಿಕುಮಾರ್ ಎನ್.ಗೌಡ, ಪ್ರವೀಣ್ ಜಿ.ಧನವಡೆ, ಶಂಕರ್ ಆರ್.ಗೌಡ, ಸದಾಶಿವ ಎಸ್.ಸಫಲಿಗ, ಗೀತಾ ಕೆ.ಕರ್ಕೇರ ಉಪಸ್ಥಿತರಿದ್ದು ಕಾರ್ಯಾಧ್ಯಕ್ಷರು ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ವಿದ್ಯಾಥಿರ್ü ವೇತನ ವಿತರಿಸಿ ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನುಪಮ ಸೇವೆ ಪ್ರಶಂಸಿಸಿ ಅಭಿವಂದಿಸಿದರು.

ಸೊಸೈಟಿಯ ಪ್ರಬಂಧಕ ಪರ್ಶುರಾಮ್ ಕೆ.ದೌಂಡ್ ಸ್ವಾಗತಿಸಿ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಮಾ| ಪ್ರಜ್ವಲ್ ಗೌಡ ಹಾಗೂ ಕು| ಭೂಮಿಕಾ ಗೌಡ ಗಣೇಶಸ್ತುತಿ ನೃತ್ಯಗೈದರು. ಲೆಕ್ಕಾಧಿಕಾರಿ ಶಿಲ್ಪಾ ಎಸ್.ಮಾಂಡವ್ಕಾರ್ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಆಶಾರಾಣಿ ಬಿ.ಗೌಡ ವಾರ್ಷಿಕ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಪ್ರಕಾಶ್ ಎನ್.ವಾಡ್ಕರ್ ಅಂತರಿಕ ಲೆಕ್ಕಪತ್ರಗಳ ಮತ್ತು ವಾರ್ಷಿಕ ವ್ಯವಹಾರದ ಮಾಹಿತಿ ನೀಡಿದರು. ಶಿವಕುಮಾರ್ ಹೆಚ್.ಗೌಡ ವಾರ್ಷಿಕ ಬಜೆಟ್ ಮಂಡಿಸಿದರು. ಕೆ.ರಾಜೇ ಗೌಡ ಸಭಾಕಲಾಪ ನಿರ್ವಹಿಸಿ ಅತಿಥಿüಗಳನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದರು.

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here