Saturday 4th, May 2024
canara news

ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದಿಂದ ವರಮಹಾಲಕ್ಷ್ಮೀ ಪೂಜೆ.

Published On : 08 Aug 2017   |  Reported By : Bernard J Costa


ಕುಂದಾಪುರ: ಯಾವುದೇ ಪೂಜೆಯನ್ನು ಒಬ್ಬರು ಸೇರಿ ಮಾಡಿದಾಗ ವೃತವಾಗುತ್ತದೆ. ಸಮಾಜದ ಹಲವು ಮಂದಿಗಳು ಸೇರಿ ಮಾಡಿದಾಗ ಅದು ಉತ್ಸವವಾಗುತ್ತದೆ ಎಂದು ಕುಂದಾಪುರ ವ್ಯಾಸರಾಜ ಮಠದ ಪೂರೋಹಿತ ವಿಜಯ ಪೇಜತ್ತಾಯ ಹೇಳಿದರು. ಅವರು ಗಾಣಿಗ ಯುವ ಸಂಘಟನೆ,ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ,ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧ ನಡೆದ ವರ ಮಹಾಲಕ್ಷ್ಮೀ ಪೂಜೆ ಸಂದರ್ಭದಲ್ಲಿ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದರು.

ವರಮಹಾಲಕ್ಷ್ಮಿ ಪೂಜೆಯಿಂದ ಆರೋಗ್ಯ, ಸಂಪತ್ತು, ಧನ,ಧಾನ್ಯಗಳು ಪ್ರಾಪ್ತಿಯಾಗುವುದರ ಜತೆಗೆ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ದೇವಿಯ ಕೃಪೆಗೆ ಭಾಜನರಾಗುತ್ತೇವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುಧಾಕರ ಗಾಣಿಗ ಕುಂಭಾಶಿ ವಹಿಸಿದ್ದರು. ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಕುಂದಾಪುರ ತಾಲೂಕು ಗಾಣಿಗ ಸಂಘದ ಕಾರ್ಯದರ್ಶಿ ಭಾಸ್ಕರ ಗಾಣಿಗ,ಕೋಶಾಧಿಕಾರಿ ಪರಮೇಶ್ವರ ಗಾಣಿಗ,ಹಿರಿಯರಾದ ಶ್ರೀನಿವಾಸ ಗಾಣಿಗ ಬಡಾಕೆರೆ,ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಬಿ.ಜಿ.ನಾಗರಾಜ,ಗಾಣಿಗ ಮಹಿಳಾ ಸಂಘಟನೆ,ಕೋಟೇಶ್ವರ ಘಟಕದ ಅಧ್ಯಕ್ಷೆ ಸವಿತಾಶೇಖರ ಗಾಣಿಗ ಉಪಸ್ಥಿತರಿದ್ದರು.

ಕಾಳಾವರ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಕಲಾವತಿ ಸ್ವಾಗತಿಸಿದರು.ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಪ್ರಭಾಕರ ಬಿ.ಕುಂಭಾಶಿ ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here