Monday 19th, March 2018
canara news

ರಸ್ತೆ ಅಪಘಾತ: ಸಿದ್ದಕಟ್ಟೆ ಉದ್ಯಮಿ ಸಾವು

Published On : 13 Aug 2017   |  Reported By : Canaranews network


ಮಂಗಳೂರು: ದ.ಕ.ಜಿಲ್ಲೆಯ ಸಿದ್ದಕಟ್ಟೆಯತ್ತ ಸಾಗುತ್ತಿದ್ದ ಕಾರು ಮೋರಿಗೆ ಢಿಕ್ಕಿ ಹೊಡೆದು ಸಿದ್ದಕಟ್ಟೆಯ ಉದ್ಯಮಿ ರಾಕೇಶ್ ಶೆಟ್ಟಿ (33) ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.ರಾಕೇಶ್ ಅವರು ಸಿದ್ದಕಟ್ಟೆಯ ನಿವಾಸಿ, ಪೂಂಜ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ ಅವರ ಪುತ್ರ. ಅವಿವಾಹಿತರಾಗಿದ್ದ ರಾಕೇಶ್ ಸಿದ್ದಕಟ್ಟೆಯಲ್ಲಿ ಇಂಟರ್ಲಾಕ್ ಉದ್ಯಮ ನಡೆಸುತ್ತಿದ್ದರು.

ರಾಕೇಶ್ ತನ್ನ ಇಬ್ಬರು ಮಿತ್ರರಾದ ಸುಧೀಂದ್ರ ಶೆಟ್ಟಿ ಮತ್ತು ದಿನೇಶ್ ಶೆಟ್ಟಿಗಾರ್ ಜತೆ ಗುರುವಾರ ಮೂಡಬಿದಿರೆಗೆ ಬಂದು ರಾತ್ರಿ ಹಿಂದಿರುಗುತ್ತಿರುವಾಗ ಈ ಘಟನೆ ಸಂಭವಿಸಿದೆ. ದಿನೇಶ್ ಕಾರು ಚಲಾಯಿಸುತ್ತಿದ್ದು ರಾಕೇಶ್ ಎದುರು ಸೀಟಿನಲ್ಲಿ ಕುಳಿತಿದ್ದರು. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 
More News

ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ಹೊಸ ಪದಾಧಿಕಾರಿಗಳು
ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ಹೊಸ ಪದಾಧಿಕಾರಿಗಳು
ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವಕ್ಕೆ ಚಾಲನೆ
ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವಕ್ಕೆ ಚಾಲನೆ
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ

Comment Here