Friday 20th, October 2017
canara news

ಕುಂದಾಪುರ ಕಥೊಲಿಕ್ ಸಭಾದಿಂದ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ದೆ

Published On : 13 Aug 2017   |  Reported By : Bernard D'Costa


ಕುಂದಾಪುರ, ಅ.13: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷ ಕುಂದಾಪುರ ವಲಯ ಪ್ರಧಾನ ವಂ|ಫಾ|ಅನಿಲ್ ಡಿಸೋಜಾ ಶುಭ ಕೋರಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೊಳಹಳ್ಳಿ ದಿನೇಶ್ ಹೆಗೆಡೆ ‘ದೇಶ ಭಕ್ತಿ ಗೀತೆಗಳ ಸ್ಪರ್ಧೆ ಎರ್ಪಟ್ಟಿಸಿದ್ದು ಸಂತೊಷದ ಸಂಗತಿ. ಮಕ್ಕಳು ಎಳೆವೆಯಿಂದಲೇ ದೇಶ ಭಕ್ತಿ ಬೆಳೆಸಿಕೊಳ್ಳ ಬೇಕು. ಎಲ್ಲರೂ ತಂದೆ ತಾಯಿಯನ್ನು ಪ್ರೀತಿಸುವಂತೆ ದೇಶವನ್ನು ಪ್ರೀತಿಸ ಬೇಕೆಂದು’ ಸಂದೇಶ ನೀಡಿದರು. ತೀರ್ಪುಗಾರರ ಪರವಾಗಿ ಜಲಜ ತೋಳಾರ್ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಶ್ರಿನೀವಾಸ್ ಶೇಟ್ ಮತ್ತು ಸುದೇಶ್ ಶೆಟ್ಟಿ ಇತರ ತೀರ್ಪುಗಾರರಾಗಿದ್ದರು. ಈ ಕಾರ್ಯಕ್ರಮದ ಸಂಚಾಲಕ ವಿನೋದ್ ಕ್ರಾಸ್ತಾ ಸ್ವಾಗತಿಸಿದರು .

 

ಸ್ಪರ್ಧೆಯ ವಯಕ್ತಿಕ ವಿಭಾಗ 1 ರಿಂದ ನಾಲ್ಕನೆ ತರಗತಿಯಲ್ಲಿ ಪ್ರಥಮ ಸ್ಥಾನ ಜೆನೇಸಿಯಾ ಅನ್ನಾ ಮೆಂಡೊನ್ಸಾ, ಹೋಲಿ ರೋಜರಿ ಆಂಗ್ಲಾ, ದ್ವೀತಿಯ ಸಿಂಚನಾ, ಯು.ಬಿಎಮ್.ಸಿ. ತ್ರತೀಯ ಹರ್ಶಿತಾ ಸಂತ ಜೋಸೆಫ್ ಪ್ರಾಯ್ಮರಿ ಶಾಲೆ ವಿಧ್ಯಾರ್ಥಿಗಳು, 5 ರಿಂದ 7ನೆ ತರಗತಿಯ ವಿಭಾಗದಲ್ಲಿ ಅನುಕ್ರಮವಾಗಿ ಧಾರಿಣಿ ಹೋಲಿ ರೋಜರಿ ಆಂಗ್ಲಾ, ಸುಶ್ಮಿತಾ ಶಾಸಕರ ಮಾ.ಹಿ.ಪ್ರಾ. ಪ್ರಾಪ್ತಿ ಎಚ್.ಎಮ್,ಎಮ್. ಆಂಗ್ಲಾ ಮಿಡಿಯಂ ಶಾಲೆ. 8 ರಿಂದ 10 ನೆ ತರಗತಿಯ ವಿಭಾಗದಲ್ಲಿ ಸವಿಶ್ಣು ವೆಂಕಟರಮಣ ಫ್ರೌಡ. ರೋಶನಿ ವಿ.ಕೆ.ಆರ್.ಆಚಾರ್ಯ ಫ್ರೌಡ ಶಾಲೆ. ಪಿ.ಯು.ಸಿ ವಿಭಾಗದಲ್ಲಿ ವಿಘ್ನೇಶ್ ಕೆ.ಎಸ್. ಭಂಡಾರರ್ಕಸ್ ಕಾಲೇಜ್, ಅನುಷಾ ಪೈ ಶ್ರೀ ವೆಂಕಟರಮಣ ಕಾಲೇಜ್, ಸುಶ್ಮಾ ಆಚಾರ್ ಅರ್.ಎನ್.ಶೆಟ್ಟಿ ಕಾಲೇಜ್ ಅನುಕ್ರಮವಾಗು ಸ್ಥಾನವನ್ನು ಪಡೆದರು. ಸಮೂಹ ಗಾನದಲ್ಲಿ 15 ಪಂಗಡಗಳು ಭಾಗವಹಿಸಿದ್ದು ಪ್ರಥಮ ಸ್ಥಾನ ವಿ.ಕೆ.ಆರ್. ಆಚಾರ್ಯ ಕಾಲೇಜ್, ದ್ವೀತಿಯ ಆರ್.ಎನ್.ಶೆಟ್ಟಿ ಕಾಲೇಜ್ , ತ್ರತೀಯ ಸಂತ ಜೋಸೆಫ್ ಫ್ರೌಡ ಶಾಲಾ ತಂಡ ಅನುಕ್ರಮವಾಗಿ ಸ್ಥಾನವನ್ನು ಪಡೆದವು.

ಕಾರ್ಯಕ್ರಮದಲ್ಲಿ ನಿರ್ಗಮನ ಅಧ್ಯಕ್ಷ ವಿಲ್ಸನ್ ಆಲ್ಮೇಡಾ ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಸಂಚಾಲಕ ವಿನೋದ್ ಕ್ರಾಸ್ಟಾ ಸ್ವಾಗತಿಸಿದರು, ನಿಯೋಜಿತ ಅಧ್ಯಕ್ಷೆ ಶೈಲಾ ಆಲ್ಮೇಡಾ ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ಮತ್ತು ನಿರ್ಮಲ ಡಿಸೋಜಾ ನೆಡೆಸಿಕೊಟ್ಟರು.
More News

 ಸಾಧಿಸಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಸಾಕ್ಷಿ ಆಗಿದ್ದಾರೆ  ರೋನ್ಸ್ ಬಂಟ್ವಾಳ್
ಸಾಧಿಸಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಸಾಕ್ಷಿ ಆಗಿದ್ದಾರೆ ರೋನ್ಸ್ ಬಂಟ್ವಾಳ್
ಶಿಮಂತೂರು ಚಂದ್ರಹಾಸರ `ಗಗ್ಗರ'-ಶಾರದಾ ಅಂಚನ್‍ರ`ಜೀಟಿಗೆ'-`ಅಭಿಯಾನ' ಕೃತಿಗಳ ಬಿಡುಗಡೆ
ಶಿಮಂತೂರು ಚಂದ್ರಹಾಸರ `ಗಗ್ಗರ'-ಶಾರದಾ ಅಂಚನ್‍ರ`ಜೀಟಿಗೆ'-`ಅಭಿಯಾನ' ಕೃತಿಗಳ ಬಿಡುಗಡೆ
ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಸಾ.ದಯಾ ಅವರ `ಗಗ್ಗರ' ಕಥಾ ಸಂಕಲನ
ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಸಾ.ದಯಾ ಅವರ `ಗಗ್ಗರ' ಕಥಾ ಸಂಕಲನ

Comment Here