Sunday 28th, April 2024
canara news

ಬಿಲ್ಲವ ಭವನದಲ್ಲಿ ತ್ರಿದಿನಗಳ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ

Published On : 14 Aug 2017   |  Reported By : Rons Bantwal


ಬ್ರಹ್ಮಜ್ಞಾನಿಗಳ ತತ್ವಾಚಾರಣೆ ನಾಟಕಗಳಲ್ಲಿ ಮೂಡಬೇಕು : ಸ್ವಾಮಿ ವಿಜಯಾನಂದ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕøತಿಕ ಉಪಸಮಿತಿ ಭಾರತ್ ಬ್ಯಾಂಕ್‍ನ ಸಹಯೋಗದೊಂದಿಗೆ ಅಸೋಸಿಯೇ ಶನ್‍ನ ಸ್ಥಳೀಯ ಸಮಿತಿಗಳಿಗೆ ಈ ಬಾರಿ ತ್ರಿದಿನಗಳ ಏಕತಾಸು ಕಾಲಾವಧಿಯಾಗಿ ಆಯೋಜಿಸಿರುವ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ-2017ನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಪಿಂಗಾರ ಅರಳಿಸಿ ಗೆರಸೆ (ತಡಪೆ)ಯಲ್ಲಿನ ಅಕ್ಕಿಕಾಳುಗಳನ್ನು ಸೇಸೆ ಮೂಲಕ ಅಲಂಕೃತ ಬುಟ್ಟಿಯಲ್ಲಿನ ಕಳಸೆಗೆ ಸುರಿದು ವಿಧ್ಯಕ್ತವಾಗಿ ಸ್ಪರ್ಧೆಗೆ ಚಾಲನೆಯನ್ನಿತ್ತರು. ಬೆಳಗಾವಿ ಬೈಲಹೊಂಗಲ ಅಲ್ಲಿನ ಬೇವಿನಕೊಪ್ಪದÀ ಬಾಬಾ ನಿತ್ಯಾನಂದ ಆನಂದ ಆಶ್ರಮ ಶ್ರೀ ಗುರುದೇವ ನಿತ್ಯಾನಂದ ಧ್ಯಾನ ಮಂದಿರದ ಸ್ವಾಮಿ ವಿಜಯಾನಂದ ಅವರು ಆದಿಯಲ್ಲಿ ಭವನದಲ್ಲಿನ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆಗೈದು, ವೇದಿಕೆಯಲ್ಲಿನ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಸ್ಪರ್ಧೆಗೆ ಸಾಂಕೇತಿಕವಾಗಿ ಚಾಲನೆಯನ್ನಿತ್ತು ಆಶೀರ್ವಚನಗೈದರು.

ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ನಾಟಕ ಸ್ಪರ್ಧಾ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಅಸೋಸಿಯೇಶನ್‍ನ ಪೂರ್ವಾಧ್ಯಕ್ಷ ಎಲ್.ವಿ ಅವಿೂನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಪ್ರಬುದ್ಧ ರಂಗ ಕಲಾವಿದ ಮೋಹನ್ ಮಾರ್ನಾಡ್ ಹಾಗೂ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ನಾಡಿನ ಹೆಸರಾಂತ ರಂಗ ಕಲಾವಿದೆಯರುಗಳಾದ ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಆರ್.ಪೂಜಾರಿ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸನ್ಮಾನಿಸಿ ಶುಭಾರೈಸಿದರು.

ನಾನೊಬ್ಬ ನಾಟಕಕಾರನಾಗಿದ್ದು ಹಲವು ನಾಟಕಗಳನ್ನು ಬರೆದು ಪ್ರದರ್ಶಿಸಿದವ. ಇಂದು ತುಳು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಭಾಗ್ಯ ನನ್ನ ಹಿರಿತನ. ನಾರಾಯಣ ಸ್ವಾಮಿಗಳು ಬರೇ ಗುರುಗಳಲ್ಲ. ನಮ್ಮಲ್ಲಿ ಗುರುಗಳು ಬೇಕಾದಷ್ಟಿದ್ದಾರೆ. ಅವರೋರ್ವ ಋಷಿಮುನಿ, ಮಹರ್ಷಿಕ್ಕಿಂತಲೂ ಮಿಗಿಲಾದ ಬ್ರಹ್ಮಶ್ರೀ ಆಗಿದ್ದಾರೆ. ಭಾರತದಲ್ಲಿನ 3 ದಿವ್ಯಜ್ಯೋತಿಗಳಲ್ಲಿ ನಾರಾಯಣ ಗುರು, ರಮಣಮ ಮಹರ್ಷಿ, ರಾಮಲಿಂಗ ಸ್ವಾಮಿ ಮಹಾನ್ ಚೇತನಗಳಾಗಿ ಬಾಳಿದವರು. ಬ್ರಹ್ಮಶ್ರೀ ನಾರಾಯಣ ಗುರು ಅವರಂತೂ ಬ್ರಾಹ್ಮಣನಿಗೂ ಬ್ರಹ್ಮಜ್ಞಾನಿ ಗುರುಗಳು. ಇಂತಹ ಮೇಧಾವಿಗಳ ತತ್ವಾಚಾರಣೆ ನಾಟಕಗಳಲ್ಲಿ ಮೂಡಬೇಕು. ಇವರ ತತ್ವಜ್ಞಾನದ ಅರಿವು ನಾಟಕಗಳ ಮೂಲಕ ಪ್ರಚಾರ ಆದಾಗಲೇ ನಮ್ಮಲ್ಲಿನ ಬೇಧಗಳು ಮರೆಯಾಗಿ ಸಾಮರಸ್ಯದ ಬದುಕು ರೂಪಿಸಲು ಸಾಧ್ಯವಾಗುವುದು ಎಂದು ಸ್ವಾಮಿ ವಿಜಯಾನಂದ ಮನವರಿಸಿದರು.

ಜಯ ಸುವರ್ಣರು ಮಾತನಾಡಿ ಕಲಾವಿದರು ವರ್ತಮಾನದ ಮಹಾಶಕ್ತಿ ಆಗಿದ್ದು, ಸಹಭಾಗಿತ್ವ ಮತ್ತು ವಚನಬದ್ಧತೆಯಿಂದ ಎಲ್ಲವೂ ಸಾಧ್ಯ ಎನ್ನುವುದನ್ನು ನಮ್ಮವರಾದ ದಯಾನಂದ ಪೂಜಾರಿ ಕಲ್ವಾ ಮತ್ತು ಅಶೋಕ್ ಸಸಿಹಿತ್ಲು ತೋರ್ಪಡಿಸಿ ಸಾಧನೆ ಮೆರೆದಿದ್ದಾರೆ. ಅವರು ಸ್ಪರ್ಧೆಯ ನೆಪದಲ್ಲಾದರೂ ಕಲಾವಿದರನ್ನು ಒಗ್ಗೂಡಿಸಿದ ರೀತಿ, ನೂರಾರು ಕಲಾವಿದರಿಗೆ ಆಸರೆಯನ್ನೂ, ನವಪೀಳಿಗೆಯಲ್ಲಿ ಮಾತೃಭಾಷೆ ತುಳುಭಾಷೆಯ ನ್ನೂ ಕಲಿಯುವ ಕೀರ್ತಿಗೆ ಪಾತ್ರರು. ಯಕ್ಷಗಾನ ಯಾ ರಂಗಭೂಮಿ ಇವೆರಡರ ಹಿರಿಯ ಕಿರಿಯ ಕಲಾವಿದರನ್ನು ಒಂದೇ ಛತ್ರಿಯಡಿ ಒಗ್ಗೂಡಿಸಿದ ಹಿರಿಮೆ ಬಿಲ್ಲವರ ಅಸೋಸಿಯೇಶನ್‍ಗಿದೆ ಸಂದಿದೆ ಎನ್ನುವ ಅಭಿಮಾನ ನನಗಿದೆ ಎಂದರು.

ಪಂಚತಾರ ನಟನಾಕನ್ಯೆಯರಿಗೆ ಇಂತಹ ವೇದಿಕೆಯ ಸನ್ಮಾನವೇ ಶ್ರೇಷ್ಠವಾದದ್ದು. ಇಂತಹ ಹಿರಿಯ ಕಲಾವಿದರ ಅಭಿನಯ ಕಿರಿಯ ಕಲಾವಿದರಿಗೆ ಪೆÇ್ರೀತ್ಸಾಹಕವಾಗಿದೆ. ಕಿರಿಯರಿಗೆ ಹಿರಿಯ ಕಲಾವಿದರ ಮೇಲ್ಪಂಕ್ತಿ ಆದರನೀಯವೂ ಹೌದು. ಇದರಿಂದ ಪ್ರತಿಭಾನ್ವಿತ ಕಲಾವಿದರ ಅನಾವರಣ ಸಾಧ್ಯ. ಮುಂಬಯಿಗರು ಕಲಾಪೆÇೀಷಕರು ಮತ್ತು ಕಲೆಯನ್ನು ಸಾಕಿ ಗೌರವಿಸುವ ದೊಡ್ಡತನದ ಸದ್ಗುಣವಂತರು. ತವರೂರಲ್ಲಿ ಇಂತಹ ಮನೋಭಾವ ಮಾಯವಾಗುವಂತಿದೆ. ಮುಂಬಯಿಗರು ಎಲ್ಲಕ್ಕೂ ದಿಲ್‍ಕ ದರ್‍ಯಾ ಇದ್ದಂತೆ ಹೃದಯಶೀಲರÀು. ಬಿಲ್ಲವರ ಅಸೋಸಿಯೇಶನ್ ವಾರ್ಷಿಕವಾಗಿ ಸುಮಾರು 400 ಯುವ ಮತ್ತು ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುವುದೇ ಇದಕ್ಕೆ ಸಾಕ್ಷಿ. ಕಲೆ ಒಂದು ದೇವರು ಇದ್ದಂತೆ ಆದುದರಿಂದ ನಾಟಕದವರಿಗೆ ಜಾತಿ ಎನ್ನುವುದೇ ಇಲ್ಲ. ಕಲಾವಿದರು ಮಾನವತ ಜಾತಿವುಳ್ಳವರು. ರಂಗಭೂಮಿಯ ಬೆಳವಣಿಗೆಯ ಪರಿಕಲ್ಪನೆ ಅನನ್ಯವಾದದ್ದು ಎಂದು ಸುರೇಂದ್ರ ಕುಮಾರ್ ಅಭಿಪ್ರಾಯ ಪಟ್ಟರು.

ಎಲ್.ವಿ.ಅಮೀನ್ ಮಾತನಾಡಿ ನಾಟಕದಿಂದ ಜೀವನ ಪರಿವರ್ತನೆ ಸಾಧ್ಯವಾಗಿದೆ. ಆದುದರಿಂದ ಸಂಘದೊಳಗಿನ ನಾಟ ಸ್ಪರ್ಧೆ ಎಲ್ಲರಿಗೂ ಪ್ರೇರಣೀಯ. ಇಂತಹ ಕಾರ್ಯಕ್ರಮ ಸಮಾಜದ ಬದಲಾವಣೆಗೆ ಪ್ರೇರಕವಾದಂತೆ ಸಂಸ್ಥೆಗೂ, ಕಲಾವಿದರಿಗೂ ಹೆಸರು ಸಿದ್ಧಿಸುವ ಯೋಜನೆಯಾಗಿದೆ. ಈ ಮೂಲಕ ಹಿರಿಕಿರಿಯ ಕಲಾವಿದರ ಕನಸು ನನಸಾಗಲಿ ಸ್ಪರ್ಧೆ ಸುಗಮವಾಗಿ ಸಾಗಿ ಎಲ್ಲರಿಗೂ ಮನಾಕರ್ಷಣೆಯಾಗಿರಲಿ ಎಂದರು.

ಚಂದ್ರಾವತಿ ಮಾತನಾಡಿ ನಾಟಕದ ಮೂಲಕ ಸಂಭಾಷಣೆ (ಡೈಲೊಗ್) ಮಾಡಿಯೇ ಸಾಕಾಗಿದೆ. ನಮ್ಮನ್ನು ಹಿರಿಯ ಕಲಾವಿದರಾಗಿ ಗುರುತಿಸಿ ಸನ್ಮಾನಿಸಿದ ತಮೆಲ್ಲರಿಗೂ ಧನ್ಯವಾದಗಳು. ಬಿಲ್ಲವ ಸಮಾಜ ಕಲಾವಿದರ ತವರುಮನೆ ಇದ್ದಂತೆ. ಇಲ್ಲಿನ ವೇದಿಕೆ ಕಲಾವಿದರ ಮನೆಯೇ ಸರಿ ಎಂದರು.

ನಾವೆಲ್ಲರೂ ಒಂದು ನಾವೆಲ್ಲರೂ ಬಂಧು ಎಂಬಂತೆ ಭಾವನಾತ್ಮಕ ಮನೋಭಾವದಿಂದ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯುವ ಸಂಸ್ಥೆ ನಮ್ಮದಾಗಿದೆ. ತುಳು ನಾಟಕ ಸ್ಪರ್ಧೆಗೂ ವಿಠಲ ಎಸ್.ಪೂಜಾರಿ ಭಯಂದರ್ ತನ್ನ ಮೊದಲ ಪ್ರಾಯೋಜಕತ್ವಕ್ಕೆ ಪೆÇ್ರೀತ್ಸಹಿಸಿದಂತೆ ಎನ್.ಎಂ ಸನಿಲ್ ಅಂತಹ ಹಿರಿಯ ಮುಂದಾಳುಗಳು ಇಂತಹ ಕಾರ್ಯಕ್ರಮಗಳಿಗೆ ತಮ್ಮನ್ನು ಬಳಸಿಕೊಳ್ಳಬೇಕೆಂದು ತಾವಾಗಿ ಹೇಳಿ ಪೆÇ್ರೀತ್ಸಹಿಸಿ ಕಲಾವಿದರನ್ನು ಹುರಿದುಂಬಿಸು ತ್ತಿರುವುದು ಅಭಿನಂದನೀಯ ಇಂತಹ ಕಾರ್ಯಕ್ರಮಕ್ಕೆ ಒಳ್ಳೆಯ ಮನೋಭಾನೆಗಳುಳ್ಳ ಸಜ್ಜನರ ಸಹಯೋಗವೇ ಮಿಗಿಲಾದದ್ದು ಎಂದು ನಿತ್ಯಾನಂದ ಕೋಟ್ಯಾನ್ ತಿಳಿಸಿದರು.

ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು, ಲೇಖಕ ಓಂದಾಸ್ ಕಣ್ಣಂಗಾರ್, ಹರೀಶ್ ಕೆ.ಹೆಜ್ಮಾಡಿ ಸ್ಪರ್ಧಾ ನಿರ್ವಾಹಣೆ ನಡೆಸಿದ್ದು ಮೋಹನ್ ಮಾರ್ನಾಡ್ ಸ್ಪರ್ಧೆಗೆ ಅಣಿಗೊಂಡ 18 ನಾಟಕ ತಂಡಗಳಿಗೂ ಶುಭಾರೈಸಿ ಜಾಗಟೆ ಭಾರಿಸುವುದರ ಮೂಲಕ ನಾಟಕದ ಪ್ರಥಮ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು.

ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಅತಿಥಿüಗಳನ್ನು ಹಾಗೂ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಉಪಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಸ್ವಾಗತಿಸಿದ್ದು, ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಅಭಾರ ವ್ಯಕ್ತಪಡಿಸಿದರು.

ನಾಟಕದ ಪ್ರಥಮ ಪ್ರದರ್ಶನವು ವಿಠಲ್ ಎಸ್.ಪೂಜಾರಿ ಭಯಂದರ್ ಮತ್ತು ಜಯಾನಂದ ಐ.ಪೂಜಾರಿ ಪ್ರಾಯೋಜಕತ್ವದಲ್ಲಿ ಕಲ್ವಾ ಸ್ಥಳೀಯ ಸಮಿತಿ ತಂಡವು ನಾಗರಾಜ್ ಗುರುಪುರ ರಚಿಸಿ ಸಂಭಾಷಣೆಗೈದು ನಿರ್ದೇಶಿಸಿದ `ಸಂಶಯ' ನಾಟಕವನ್ನು ಪ್ರದರ್ಶಿಸಿತು. ದ್ವಿತೀಯ ಪ್ರದರ್ಶನವು ಸುರೇಶ್ ಸುವರ್ಣ ಮತ್ತು ಮಹಾಬಲ ಪೂಜಾರಿ ಪ್ರಾಯೋಜಕತ್ವದಲ್ಲಿ ಅಂಧೇರಿ ಸ್ಥಳೀಯ ಸಮಿತಿ ತಂಡವು ಹಿರಿಯ ಪತ್ರಕರ್ತ ದಿ| ಕೆ.ಟಿ ವೇಣುಗೋಪಾಲ್ ಕಥಾಧಾರಿತ ನಾರಾಯಣ ಶೆಟ್ಟಿ ನಂದಳಿಕೆ ರೂಪಾಂತರಿಸಿ ರಚಿಸಿ ಭಾಸ್ಕರ್ ಸುವರ್ಣ ಸಸಿಹಿತ್ಲು ನಿರ್ದೇಶಿಸಿದ `ದೇಯಕ್ಕನ ದೈವದಿಲ್ಲ್' ನಾಟಕ ಪ್ರದರ್ಶಿಸಿತು.

ತೃತೀಯ ಪ್ರದರ್ಶನವಾಗಿ ರಾಜೇಶ್ ಸಿ.ಕೋಟ್ಯಾನ್ ಮತ್ತು ರವಿ ಸನಿಲ್ ಪ್ರಾಯೋಜಕತ್ವದಲ್ಲಿ ಡೊಂಬಿವಿಲಿ ಸ್ಥಳೀಯ ಸಮಿತಿಯು ಭೋಜ ಎಸ್.ಪೂಜಾರಿ ರಚಿಸಿ ರವಿ ಎಸ್.ಶೆಟ್ಟಿ ನಿರ್ದೇಶಿಸಿದ `ನಮಡನೇ ಉಪ್ಪಡ್' ನಾಟಕ ಪ್ರದರ್ಶಿಸಿತು. ಚತುರ್ಥ ಪ್ರದರ್ಶನವು ವಿಠಲ್ ಅವಿೂನ್ ಮತ್ತು ಹರೀಶ್ ಜಿ.ಪೂಜಾರಿ ಪ್ರಾಯೋಜಕತ್ವದಲ್ಲಿ ಭಾಂಡೂಪ್ ಸ್ಥಳೀಯ ಸಮಿತಿ ತಂಡವು ಕೃಷ್ಣರಾಜ್ ಶೆಟ್ಟಿ ರಚಿಸಿ ನಿರ್ದೇಶಿಸಿತ `ನಂಕ್ ನಮನೇ' ನಾಟಕ ಪ್ರದರ್ಶಿಸಿತು. ಐದನೇ ನಾಟಕವಾಗಿ ಸಂತೋಷ್ ಕೆ.ಪೂಜಾರಿ ಮತ್ತು ಕೃಷ್ಣ ಎ.ಪೂಜಾರಿ ಪ್ರಾಯೋಜಕತ್ವದಲ್ಲಿ ಮಲಾಡ್ ಸ್ಥಳೀಯ ಸಮಿತಿಯು ಸುಂದರ್ ಪೂಜಾರಿ ರಚಿಸಿ ಸಂಭಾಷಣೆಗೈದು ನಿರ್ದೇಶಿಸಿದ `ಸೋಂಪಗ್ ಮದ್ಮೆ' ನಾಟಕ ಪ್ರದರ್ಶಿಸಿತು. ಆರನೇ ಪ್ರದರ್ಶನವಾಗಿ ಸುಧಾಕರ್ ಪೂಜಾರಿ ಪೆÇವಾಯಿ ಮತ್ತು ಲಾಜರ್ ಟಿ.ಎಂ ಕೋಟ್ಯಾನ್ ಪ್ರಾಯೋಜಕತ್ವ ದಲ್ಲಿ ಘಾಟ್ಕೋಪರ್ ಸ್ಥಳೀಯ ಸಮಿತಿ ತಂಡವು ಅಶೋಕ್ ಕೊಡ್ಯಡ್ಕ ಕಥೆ ಸಂಭಾಷಣೆಯ ಸಂತೋಷ್ ಜಿ.ಪೂಜಾರಿ ಕಾಪು ನಿರ್ದೇಶಿಸಿದ `ಬೀಡಿ' ನಾಟಕ ಪ್ರದರ್ಶಿಸಿತು. ಏಳನೇ ಪ್ರದರ್ಶನವಾಗಿ ರಾಜೇಶ್ ಪೂಜಾರಿ ಮತ್ತು ಉಮೇಶ್ ಪೂಜಾರಿ ಕೊಪ್ಪ ಪ್ರಾಯೋಜಕತ್ವ ದಲ್ಲಿ ಭಿವಂಡಿ ಸ್ಥಳೀಯ ಸಮಿತಿಯು ಶ್ರೀನಾಥ್ ಮುಲ್ಕಿ ಕಥೆ ಸಂಭಾಷಣೆಯ ಸುನೀಲ್ ಎಸ್.ಪೂಜಾರಿ ನಿರ್ದೇಶಿಸಿದ `ಸತ್ಯ ಒರಿಪಾಗ' ನಾಟಕ ಪ್ರದರ್ಶಿಸಿತು.

ಒಂದೇ ವೇದಿಕೆಯಲ್ಲಿ ವಿವಿಧ ತಂಡಗಳ ಸುಮಾರು 600 ಕಲಾವಿದರ ಒಗ್ಗೂಡುವಿಕೆಯಲ್ಲಿ ನಡೆಸಲ್ಪಡುವ 18 ನಾಟಕಗಳ ಸ್ಪರ್ಧೆ ರಂಗಭೂಮಿಯಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಒಂದೆಡೆ ಪಾತ್ರವಾದರೆ ಮತ್ತೊಂದೆಡೆ ಮುಂಬಯಿ ರಂಗ ಭೂಮಿ ಶ್ರೀಮಂತಗೊಳಿಸಿದ ಚರಿತ್ರೆವುಳ್ಳ ನಾಡಿನ ಹೆಸರಾಂತ ಪಂಚಕನ್ಯೆ ಕಲಾವಿದೆಯ ರಾದ ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಪೂಜಾರಿ ಅವರ ಏಕಕಾಲದ ಸನ್ಮಾನ ಸ್ತ್ರೀಯರನ್ನು ಪೆÇ್ರೀತ್ಸ್ಸಾಹಿಸಿಸುವ ಪರಿ ಪಂಚ ಅಭಿನೇತ್ರಿಯರೊಂದಿಗೆ ಸಭಿಕರೆಲ್ಲರ ಪ್ರಶಂಸೆಗೂ ಭಾಜನವಯಿತು. ಸಾಂಸ್ಕøತಿಕ ಸಮಿತಿಯ ದಯಾನಂದ ಆರ್.ಪೂಜಾರಿ ಮತ್ತು ಅಶೋಕ್ ಕುಕ್ಯಾನ್ ಸಸಿಹಿತ್ಲು ಅವರ ಅವಿರತ ಶ್ರಮದ ಶಿಸ್ತುಬದ್ಧ ಮತ್ತು ಕ್ರಮಬದ್ಧ ಸಂಯೋಜನೆಗೆ ಎಲ್ಲರೂ ಮುಕ್ತ ಕಂಠದಿಂದ ಪ್ರಶಂಸಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here