Friday 3rd, May 2024
canara news

ಮುಂಬಯಿಯಲ್ಲಿ ಪಟ್ಲ ಫೌಂಡೇಶನ್‍ನಿಂದ ಸಂಭ್ರಮಿಸಲ್ಪಟ್ಟ ಯಕ್ಷಧ್ರುವ ಸಂಭ್ರಮ

Published On : 15 Aug 2017   |  Reported By : Rons Bantwal


ಯಕ್ಷಗಾನ ಮರೆಯಾಗದೇ ಮೆರೆಯುತ್ತಿದೆ : ಶಾಂತರಾಮ ಬಿ.ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.15: ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಈ ಆಚರಣೆ ಕಲಾವಿದನ ಸಂಭ್ರಮ. ಕಲಾವಿದನ ಬದುಕನ್ನು ಗೌರವಿಸುವ ಸುದಿನ ಮತ್ತು ಕಲಾಪೆÇೀಷಕರ ದಾನಿಗಳ ಗೌರವದ ದಿನವೂ ಹೌದು. ಯಕ್ಷಗಾನದಲ್ಲಿ ಕಲಾವಿದನಿಗೆ ಅಧಿಕ ಗಳಿಕೆವಿಲ್ಲ ಯಕ್ಷ ಮತ್ತು ಕಲಾಸೇವೆಯೇ ಕಲಾವಿದನ ಸಂಪಾದನೆ ಪ್ರಧಾನತೆ. ಹಣ ಮಾಡುವ ಉದ್ದೇಶ ಯಾವನೇ ಕಲಾಕಾರಗಿಲ್ಲ. ಹಳೆಕಾಲದಲ್ಲಿ ಯಕ್ಷಗಾನವೇ ಕಲಾ ಮಾಧ್ಯಮವಾಗಿತ್ತು. ಆದರೆ ದೂರದರ್ಶನ ಬಂದಾಗ ಈ ಕಲೆಯು ಕಳೆದುಕೊಳ್ಳುವ ಭೀತಿಯಿತ್ತಾದರೂ ಟಿವಿ ಮುಂದೆ ಯಕ್ಷಗಾನ ಮರೆಯಾಗದೇ ಮೆರೆಯುತ್ತಿರುವುದನ್ನು ಹೆಮ್ಮೆಪಡಬೇಕಾಗಿದೆ. ಕಲಾವಿದರ ಗೌರವ ಕಲಾಭಿಮಾನಿಗಳ ಗೌರವವಾಗಿದ್ದು ಜಯ ವಿಜಯರಂತಹ ಐಕಳ ಹರೀಶ್ ಶೆಟ್ಟಿ ಮತ್ತು ಕಡಂದಲೆ ಸುರೇಶ್ ಭಂಡಾರಿ ಅಂತಹ ಮೇರುಪೆÇೀಷಕರ ಕಲಾರಾಧನೆ ಮೂಲಕ ಪಟ್ಲ ಫೌಂಡೇಶನ್‍ನಂತಹ ಸಂಸ್ಥೆ ಸಮಗ್ರ ಕಲಾವಿದರ ಆಶಾಕಿರಣವಾಗಿ ಪ್ರಕಾಶಿಸಲಿ ಎಂದು ಥಾಣೆಯ ಹೊಟೇಲು ಉದ್ಯಮಿ ಶಾಂತರಾಮ ಬಿ.ಶೆಟ್ಟಿ ಶುಭಾರೈಸಿದರು.

 

ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂಬಯಿ ಘಟಕವು ಆಯೋಜಿಸಿದ್ದ ಯಕ್ಷಧ್ರುವ ಪಟ್ಲ ಸಂಭ್ರಮ-2017 ಸಮಾರಂಭ ಉದ್ಘಾಟಿಸಿ ಶಾಂತರಾಮ ಶೆಟ್ಟಿ ಮಾತನಾಡಿದರು.

ಬಂಟರ ಸಂಘದ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭಕ್ಕೆ ಪೆÇವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ (ಪಂಚಕುಟೀರ ಸುವರ್ಣ ಮಂದಿರ)ದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಶುಭಶಂಸನೆಗೈದರು.

ಈ ಶುಭಾವಸರದಲ್ಲಿ ಪಟ್ಲ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ, ಮುಖ್ಯ ಅತಿಥಿüಯಾಗಿ ಮುಂಬಯಿ ಕ್ರಿಕೇಟ್ ಆಸೋಸಿಯೇಶನ್‍ನ ಜತೆ ಕಾರ್ಯದರ್ಶಿ ಡಾ| ಪದ್ಮನಾಭ ವಿ.ಶೆಟ್ಟಿ ಉಪಸ್ಥಿತರಿದ್ದು ಗೌರವ ಅತಿಥಿüಗಳಾಗಿ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಧಾಕರ್ ಎಸ್.ಹೆಗ್ಡೆ, ಸಿಎ| ಶಂಕರ್ ಬಿ.ಶೆಟ್ಟಿ, ಹಾಲಿ ಗೌರವ ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ರವೀಂದ್ರನಾಥ ಎಂ.ಭಂಡಾರಿ, ಭಿವಂಡಿ ನಗರ ಸೇವಕ ಸಂತೋಷ್ ಜಿ.ಶೆಟ್ಟಿ, ಹಿರಿಯ ಹೊಟೇಲು ಉದ್ಯಮಿಗಳಾದ ರಘುರಾಮ ಕೆ.ಶೆಟ್ಟಿ, ಶಿವರಾಮ ಜಿ.ಶೆಟ್ಟಿ ಅಜೆಕಾರು, ರಾಘು ಪಿ.ಶೆಟ್ಟಿ ವರ್ಲಿ, ಮುಂಡಪ್ಪ ಎಸ್.ಪಯ್ಯಡೆ, ಶಂಕರ್ ಶೆಟ್ಟಿ ವಿರಾರ್, ದಿವಾಕರ ಶೆಟ್ಟಿ ಮುದ್ರಾಡಿ, ಪ್ರವೀಣ್ ಶೆಟ್ಟಿ ಪುಣೆ, ವಸಂತ್ ಹೆಚ್.ಶೆಟ್ಟಿ, ಜೆ.ಪಿ ಶೆಟ್ಟಿ, ಸುಂದರ್ ಶೆಟ್ಟಿ ಡೊಂಬಿವಿಲಿ, ಸುರೇಶ್ ಆರ್.ಕಾಂಚನ್, ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ರವಿ ಶೆಟ್ಟಿ ಕಿಲ್ಪಾಡಿ, ವಿಶ್ವನಾಥ ಶೆಟ್ಟಿ ವಿರಾರ್, ಫೌಂಡೇಶನ್‍ನ ಕೇಂದ್ರ ಸಮಿತಿ ಸಲಹಾ ಮಂಡಳಿಯ ಪಟ್ಲಗುತ್ತು ಮಹಾಬಲ ಶೆಟ್ಟಿ, ಗೌರವಾಧ್ಯಕ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಡಾ| ಮನು ರಾವ್, ಕೋಶಾಧಿಕಾರಿ ಸಿಎ| ಸುದೇಶ್ ಕುಮಾರ್ ರೈ, ಪ್ರಧಾನ| ಕಾರ್ಯದರ್ಶಿ ಪುರುಷೋತ್ತಮ ಕೆ.ಭಂಡಾರಿ ಅಡ್ಯಾರ್, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಫೌಂಡೇಶನ್‍ನ ಮುಂಬಯಿ ಸಮಿತಿ ಉಪಾಧ್ಯಕ್ಷರುಗಳಾದ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಸಂಚಾಲಕರುಗಳಾದ ಐಕಳ ಗಣೇಶ್ ವಿ.ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟರ ವೇದಿಕೆಯಲ್ಲಿ ಮತ್ತೆ ಇಂದಿಲ್ಲಿ ಕಲಾದಾನಿಗಳ, ಕಲಾವಿದರ ಸಮಾವೇಶವಾಗಿದೆ. ಅಮ್ಮ ಕಟೀಲೇಶ್ವರಿ ಮತ್ತು ಕಲಾಮಾತೆ ಸಂತೋಷದಿಂದ ಕಣ್ತುಂಬಿಸಿ ಕೊಂಡ ಅನುಭವವಾಗುತ್ತಿದೆ. ಯಕ್ಷಗಾನದ ರಕ್ಷಕರು, ಪೆÇೀಷಕರು ಒಂದಾಗಿ ಮತ್ತೆ ಕಲಾಪೆÇೀಷಣೆಯತ್ತ ಒಲವು ತೋರಿರುವುದು ಅಭಿಮಾನ ತರುತ್ತಿದೆ. ಎಲ್ಲರ ಹುಮ್ಮಸ್ಸಿನಿಂದ ನಮ್ಮಕಲೆ, ಸಂಸ್ಕೃತಿ ಯಕ್ಷಗಾನ ಉಳಿದು ಬೆಳೆಯುವಂತಾಗಲಿ. ಅಸಹಾಯಕ ಕಲಾವಿದರ ಅಗತ್ಯಗಳನ್ನು ಈ ಫೌಂಡೇಶನ್ ನಿವಾರಿಸುವಂತಾಗಲಿ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಪ್ರಭಾಕರ ಶೆಟ್ಟಿ ತಿಳಿಸಿದರು.

ಫೌಂಡೇಶನ್‍ನ ಮುಂಬಯಿ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭÀಂಡಾರಿ ಮಾತನಾಡಿ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಎಂಬ ನಕ್ಷತ್ರ ಇಂದು ತಾರಾಲೋಕದಲ್ಲಿ ವಿಜೃಂಭಿಸುವ ಧ್ರುವತಾರೆಯಾಗಿದೆ. ಯಕ್ಷ ಲೋಕದ ಈ ಧ್ರುವ ಪಟ್ಲ ಫೌಂಡೇಶನ್‍ನಿಂದ ಕಲಾಭಿಮಾನಿಗಳಿಂದ ಪಡೆದು ಕಲಾಕಾರರಿಗೆ ಸಹಾಯ ಹಸ್ತ ನೀಡುವ ಸಂಭ್ರಮ. ಕಲಾಪೆÇೀಷಕರಿಗೂ ದೇಣಿಗೆಯನ್ನಿತ್ತು ಪಟ್ಲ ಫೌಂಡೇಶನ್ ಗಟ್ಟಿ ಮಾಡಿಸಿ ಕೊಳ್ಳುವ ಹಬ್ಬ ಇದಾಗಿದೆ. ಇದ್ದವರಿಂದ ಇಲ್ಲದ ನಿರಾಶ್ರಿತ, ಅಸಹಾಯಕ ಕಲಾವಿದರಿಗೆ ಹಂಚುವ ಕೆಲಸದಲ್ಲಿ ಭಾಗವಹಿಸುವುದೇ ಬುದ್ಧಿವಂತರ ಜೀವನ. ಯಾರದರೂ ಒಳ್ಳೆಯದಾಗುವುದಾದರೆ ಅಲ್ಲಿ ನಮ್ಮ ಗಳಿಕೆಯನ್ನು ವಿನಿಯೋಗಿಸುವ ದಕ್ಷ ಸೇವೆಯಲ್ಲಿ ನಿರತ ಸತೀಶ್ ಪಟ್ಲರಿಗೆ ನಮ್ಮ ಸಹಕಾರ ನೀಡೋಣ. ಕಲಿಯುಗದಲ್ಲ್ಲೂ ಸತ್ಯವನ್ನು ಮೆರೆದು ಇಂತಹ ಫೌಂಡೇಶನ್‍ಗೆ ಅಭಯಹಸ್ತ ಚಾಚಿ ಭಾಗ್ಯಶಾಲಿಗಳಾಗೋಣ ಎಂದರು.

ಫೌಂಡೇಶನ್‍ನ ಮುಂಬಯಿ ಸಮಿತಿ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಇದೊಂದು ಗೌಜಿ ಗದ್ದಲದ ಸಂಭ್ರಮವಲ್ಲ, ವಿಶಿಷ್ಟವಾದ ಸಂಸ್ಕೃತಿ ಪಾಲನೆಯ ಸಂಭ್ರಮ. ಈ ಕಾರ್ಯಕ್ರಮ ಮನಸ್ಸುಗಳನ್ನು ಮುದಗೊಳಿಸಿ ಯೋಚನಾ ಕನಸುಗಳನ್ನು ಯೋಜನೆ ಮೂಲಕ ಪರಿಪೂರ್ಣಗೊಳಿಸುವ ಹಂತ ತಲುಪಿದ್ದೇವೆ. ಅದಕ್ಕೆ ಕಟೀಲು ಅಮ್ಮ ಸತೀಶ್ ಪಟ್ಲರಂತಹ ಯೋಗ್ಯ ಸಾರಥಿüಯನ್ನು ಕರುಣಿಸಿದ್ದಾರೆ. ಯೋಜನೆಯ ಗೌರವ ಪಟ್ಲರಿಗೆನೇ ಸಲ್ಲಬೇಕು. ತುಳು ಕನ್ನಡಿಗ ಯಕ್ಷಗಾನ ಪ್ರೇಮಿಗಳ ಪ್ರೀತಿಯ ಕಲಾವಿದನಾಗಿ ಅಶಕ್ತ ಕಲಾವಿದರ ಆಶಾಕಿರಣರಾದ ಸತೀಶ್ ಪಟ್ಲರ ಯೋಜನೆಯ ಕಲಾವಿದರಿಗಾಗಿನ ಮೊದಲ ಹಂತದ 100 ನಿವಾಸಗಳನ್ನು ಮುಂಬಯಿಯಲ್ಲಿನ ಕಲಾಪೆÇ್ರೀತ್ಸ್ಸಕರಿಂದ ಸಾಧ್ಯವಾಗಬಹುದೆಂಬ ಆಶಯ ನನ್ನದಾಗಿದೆ ಎಂದರು.

ಸುಧಾಕರ ಹೆಗ್ಡೆ, ವಿರಾರ್ ಶಂಕರ್, ಶಿವರಾಮ ಶೆಟ್ಟಿ, ಐ.ಆರ್ ಶೆಟ್ಟಿ, ಲತಾ ಶೆಟ್ಟಿ, ಪ್ರವೀಣ್ ಶೆಟ್ಟಿ, ಪಾಲೆತ್ತಾಡಿ, ರವೀಂದ್ರ ಭಂಡಾರಿ, ರಾಘು ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಈ ಸಂಭ್ರಮದ ಯಶಸ್ಸು ನಿಜವಾಗಿಯೂ ಐಕಳ ಹರೀಶ್ ಶೆಟ್ಟಿ ಮತ್ತು ಕಡಂದಲೆ ಸುರೇಶ್ ಭಂಡಾರಿ ಅವರಿಗೆ ಸಲ್ಲುತ್ತದೆ ಅವರಿಗೆ ಅಭಿನಂದಿಸಲು ನನ್ನಲ್ಲಿ ಶಬ್ದಗಳಿಲ್ಲ. ನನ್ನ ಕನಸಿನ ಯೋಜನೆಯನ್ನು ಇವರಂತಹ ಮೇಧಾವಿ ಮುಂದಾಳುಗಳ ಹಸ್ತದಿಂದ ಮುನ್ನಡೆಸಲು ಕಟೀಲು ಮಾತೆಯೇ ನನ್ನ ಪಾಲಿಗೆ ಒದಗಿಸಿದ್ದಾರೆ. ಕಲಾವಿದರ ಕಷ್ಟಕಾರ್ಪಣ್ಯಗಳನ್ನು ನಾನು ತೀರಾಹತ್ತಿರದಿಂದ ಕಂಡವ. ಅವರಲ್ಲೂ ಯಕ್ಷಗಾನದ ಕೆಲವರ ಅನಾಥ ಬದುಕು ನೋಡಿ ಇಂತಹ ಸೇವಾಧರ್ಮಕ್ಕೆ ಮನಮಾಡಿರುವೆ. ಸಂಸ್ಕೃತಿ ಸಾರುವ ಯಕ್ಷಗಾನದಂತಹ ಕಲೆ ಮತ್ತೊಂದಿಲ್ಲ. ಆದರೆ ಇದನ್ನು ಪ್ರದರ್ಶಿಸುವ ಕಲಾವಿದರಲ್ಲಿ ಕೆಲವರಿಗೆ ಒಪೆÇ್ಪತ್ತಿನ ತುತ್ತಿಗೂ ಕಷ್ಟವಿದೆ ಎನ್ನುವಂತಿದ್ದತೆ ಇದಕ್ಕಿಂತ ಮಿಗಿಲಾದ ಕಲಾವಿದನ ಸಂಕಷ್ಟ ಮತ್ತೇನಿರಬಹುದು? ಯೋಚಿಸಿ. ಇಂತಹ ಕಲಾವಿದರ ಕಷ್ಟ ತಿಳಿಯುವ ಕಾಲ ಇದಾಗಿದೆ. ಕಲಾವಿದರಲ್ಲಿ ಭೇದಭಾವ, ತಾರತಮ್ಯ ಬೇಡ. ಕಲಾ ಸರಸ್ವತಿ ಇಂತಹ ಸೇವೆ ಮಾಡುವ ಅವಕಾಶ ನಮ್ಮೆಲ್ಲರಿಗೂ ಒದಗಿಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‍ಗೆ ದಾನಿಗಳೇ ದೇವರಾಗಿದ್ದು ಸಂಸ್ಥೆಯ ಮೂಲಕ ಕಲಾವಿದರನ್ನು ಮೇಲೆತ್ತುವಲ್ಲಿ ಸಹಾಯಸ್ತದ ಕರ ಜೋಡಿಸಿ ಯೋಜನೆ ಪೂರೈಸಿ ಪುಣ್ಯಕಟ್ಟಿ ಕೊಳ್ಳೋಣ ಎಂದು ಸತೀಶ್ ಪಟ್ಲ ತಿಳಿಸಿದರು.

ಇದೇ ಶುಭಾವಸರದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನದಲ್ಲಿ ನಾಡಿನ ಹಿರಿಯ ಸುಪ್ರಸಿದ್ಧ ಭಾಗವತ ಪೆÇಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ ಅವರಿಗೆ `ಯಕ್ಷ ಧ್ರುವ ಪ್ರಶಸ್ತಿ', ಹಿರಿಯ ತಾಳಮದ್ದಳೆ ಅರ್ಥಧಾರಿ ಚಿಕ್ಕಯ್ಯ ಶೆಟ್ಟಿ, ಯಕ್ಷಗಾನ ಸಾಹಿತಿ, ಕಲಾವಿದ ಕೊಲ್ಯಾರು ರಾಜು ಶೆಟ್ಟಿ, ಚೆಂಡೆ ವಾದಕ ಕೆ.ಕೆ ದೇವಾಡಿಗ, ಪ್ರಸಂಗಕರ್ತ ಎಂ.ಟಿ ಪೂಜಾರಿ, ಭಾಗವತ ದೇವಲ್ಕುಂದ ಭಾಸ್ಕರ ಶೆಟ್ಟಿ, ವೇಷಧಾರಿ ಭೋಜ ಬಂಗೇರ ಅವರಿಗೆ `ಯಕ್ಷಧ್ರುವ ಕಲಾ ಗೌರವ' ಪ್ರದಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಬ್ಬರ ತಾಳ, ತೆಂಕುಬಡಗು ತಿಟ್ಟಿನ ಪ್ರಸಿದ್ಧ ಭಾಗವತರುಗಳಾದ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ, ಸುರೇಶ್ ಶೆಟ್ಟಿ, ಶಂಕರ ನಾರಾಯಣ, ಕು| ಕಾವ್ಯಶ್ರೀ ಅಜೀರು, ಕು| ಅಮೃತಾ ಅಡಿಗ ಅವರಿಂದ `ಗಾನ ವೈಭವ' ಹಾಗೂ ಉಜಿರೆ ಅಶೋಕ್ ಭಟ್ ನಿರೂಪಣೆಯಲ್ಲಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಅಕ್ಷಯ ಕುಮಾರ್ ಮಾರ್ನಾಡ್, ರಕ್ಷಿತ್ ಶೆಟ್ಟಿ ಪಡ್ರೆ, ಲೋಕೇಶ್ ಮುಚ್ಚೂರು ಕಲಾವಿದರಿಂದ `ನಾಟ್ಯ ವೈಭವ' ಸಂಭ್ರಮಿಸಲ್ಪಟ್ಟಿತು. ಸಮಾರೋಪದ ಮುನ್ನ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ ಹಾಗೂ ಗಣೇಶ್ ಹೆಬ್ರಿ ಇವರ ಭಾಗವತಿಕೆಯಲ್ಲಿ `ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

ಸಮಾರಂಭದಲ್ಲಿ ಮುಂಬಯಿ ಸಮಿತಿಯ ಉಪಾಧ್ಯಕ್ಷ ಸುರೇಶ್ ಬಿ.ಶೆಟ್ಟಿ ಮರಾಠ, ಕೋಶಾಧಿಕಾರಿ ಬಾಬು ಎಸ್.ಶೆಟ್ಟಿ ಪೆರಾರ, ಸಿಎ| ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕು| ಅಮೃತಾ ಅಡಿಗ ಪ್ರಾರ್ಥನೆಯನ್ನಾಡಿದರು. ಮುಂಬಯಿ ಸಮಿತಿ ಉಪಾಧ್ಯಕ್ಷ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಕರ್ನೂರು ಮೋಹನ್ ರೈ ಅತಿಥಿüಗಳನ್ನು ಪರಿಚಯಿಸಿದರು. ಐಕಳ ಹರೀಶ್ ಶೆಟ್ಟಿ ಮತ್ತು ಕಡಂದಲೆ ಸುರೇಶ್ ಭÀಂಡಾರಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ವಂದನಾರ್ಪಣೆಗೈದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here