Monday 29th, April 2024
canara news

ಸಾ೦ತಾಕ್ರೂಜ್‍ಪೂರ್ವದಲ್ಲಿನ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಸಾಂಪ್ರದಾಯಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಅದ್ದೂರಿ ಚಾಲನೆ

Published On : 15 Aug 2017   |  Reported By : Rons Bantwal


ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.14: ಉಡುಪಿ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಇಂದಿಲ್ಲಿಸೋಮವಾರ ಸಂಜೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿ ಮತ್ತು ಕಿರಿಯಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಅವರ ಆಶೀರ್ವಚನ, ಮಾರ್ಗದರ್ಶನಗಳೊಂದಿಗೆ ಸಾಂಪ್ರದಾಯಿಕ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ ನೀಡಲಾಯಿತು. ಆ ಪ್ರಯುಕ್ತ ಮಠದಲ್ಲಿ ಶಿಲಾಮಯ ಪ್ರತಿಷ್ಠಾಪಿತ ಶ್ರೀಕೃಷ್ಣ ದೇವರಿಗೆ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ವಿವಿಧ ಪೂಜೆಗಳನ್ನು ನೆರವೇರಿಸಿ ಅದ್ದೂರಿಯಾಗಿ ಜನ್ಮಾಷ್ಟಮಿ ಆಚರಿಸಿದರು.

ಸಂಜೆ ಪೇಜಾವರ ಮಠದ ಮಧ್ವೇಶ ಭಜನಾ ಮಂಡಳಿಯು ಭಜನೆ ನಡೆಸಿದ್ದು, ನಂತರ ಶ್ರೀಕೃಷ್ಣ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರು ಹರಿಕಥೆ ಕಾರ್ಯಕ್ರಮ ನಡೆಸಿದರು. ರಾತ್ರಿ ಶ್ರೀಕೃಷ್ಣ ದೇವರಿಗೆ ತುಳಸೀ ಅರ್ಚನೆ ಬಳಿಕ ಮಹಾಪೂಜೆ, ಕೃಷ್ಣಾರ್ಘ್ಯ ಪ್ರದಾನ ಇತ್ಯಾದಿ ಪೂಜೆಗಳೊಂದಿಗೆ ವಿಧಿವತ್ತಾಗಿ ನಡೆಸಲ್ಪಟ್ಟಿತು.

ಈ ಸಂದರ್ಭದಲ್ಲಿ ವಿಶೇಷ ಅಭ್ಯಾಗತರಾಗಿ ಪೇಜಾವರಶ್ರೀಗಳ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ಉಡುಪಿ ಹಾಗೂ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ| ಎ.ಎಸ್ ರಾವ್, ಗೌರವ ಕಾರ್ಯದರ್ಶಿಗಳಾದ ಬಿ.ಆರ್ ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಟಿ.ಬಿ ಹುನ್ನೂರು, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು ಶ್ರೀಕೃಷ್ಣ ದೇವರಿಗೆ ಪೂಜೆ ನೆರವೇರಿಸಿದರು.

ಇಂದು (ಆ.15) ಮಂಗಳವಾರ ಸಂಜೆ 4.30 ಗಂಟೆಯಿಂದ ಮಠದ ಪ್ರದೇಶÀದಲ್ಲಿ ವಿವಿಧ ವೇಷಭೂಷಣ, ವಾದ್ಯ ವೈವಿಧ್ಯಗಳ ನಾದದೊಂದಿಗೆ ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ (ಮೆರವಣಿಗೆ) ನಡೆಸಲಾಗುವುದು. ಸಂಜೆ 6.00 ಗಂಟೆಯಿಂದ ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಬಳಿಕ ಕು| ವಿಂದ್ಯಾ ಆಚಾರ್ಯ ಉಡುಪಿ ಅವರಿಂದ ಭರತನಾಟ್ಯ ಕಾರ್ಯಕ್ರಮ. 7.30 ಗಂಟೆಯಿಂದ ವಿದ್ವಾನ್ ಮುಕುಂದ ಪೈ ಕಾರ್ಕಳ ಅವರಿಂದ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಭಕ್ತರು ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪ್ರಕಾಶ ಆಚಾರ್ಯ ತಿಳಿಸಿದ್ದಾರೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here