Sunday 28th, April 2024
canara news

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಷೋಡಶ ಉತ್ಸವದ ಹರ್ಷ

Published On : 23 Aug 2017   |  Reported By : Rons Bantwal


ಮಾನಿಷಾದ ಯಕ್ಷಗಾನ ಬಯಲಾಟ-ತಾಳಮದ್ದಳೆ-ಯಕ್ಷರಕ್ಷಾ ಪ್ರಶಸ್ತಿ ಪ್ರದಾನ

ಮುಂಬಯಿ, ಆ.23: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಷೋಡಶ ಉತ್ಸವದ ಹರ್ಷ ಮಾನಿಷಾದ ಯಕ್ಷಗಾನ ಬಯಲಾಟ, ತಾಳಮದ್ದಳೆಯ ಸಮಾರೋಪ ಕೂಟ ಹಾಗೂ ಯಕ್ಷರಕ್ಷಾ ಪ್ರಶಸ್ತಿ-ಪುರಸ್ಕಾರ ಪೇಟ, ತ್ರಿವಳಿ ಸಂಭ್ರಮದ ನೋಟ ಸಂಭ್ಹ್ರಮಕ್ಕೆ ಕಳೆದ ಭಾನುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಚಾಲನೆ ನೀಡಲಾಯಿತು.

ಬಂಟರ ಸಂಘ ಮುಂಬಯಿ ಪೂರ್ವಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉದ್ಯಮಿ ಗುಣಪಾಲ್ ಶೆಟ್ಟಿ ಐಕಳ, ಗೌರವ ಅತಿಥಿüಗಳಾಗಿ ಡಾ| ಭಾಸ್ಕರ ಶೆಟ್ಟಿ ವಿೂರಾರೋಡ್, ರಾಘು ಪಿ.ಶೆಟ್ಟಿ, ಉದಯ್ ಹೆಗ್ಡೆ ಎಲಿಯಾಳ, ಲತಾ ಪ್ರಭಾಕರ್ ಶೆಟ್ಟಿ, ಶಂಕರ್ ಶೆಟ್ಟಿ ಮುಲುಂಡ್, ಅರುಣೋದಯ ಎಸ್.ರೈ ಬಿಳಿಯೂರುಗುತ್ತು ಉಪಸ್ಥಿತರಿದ್ದು ದೀಪ ಪ್ರÀಜ್ವಲಿಸಿ ಬಳಗದ ಷೋಡಶೋತ್ಸವಕ್ಕೆ ಚಾಲನೆ ನೀಡಿದರು.

ಕರ್ನಿರೆ ಮಾತನಾಡಿ ಒಂದು ಕಾಲದಲ್ಲಿ ಯಕ್ಷಗಾನವು ಮುಂಬಯಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಮಾಯಾನಗರಿಯಲ್ಲಿ ಯಕ್ಷಗಾನದ ಕ್ರಾಂತಿಯಾಗುತ್ತಿದೆ. ಮುಂಬಯಿಯ ದಾನಿಗಳು, ಕಲಾಭಿಮಾನಿಗಳು ಉತ್ತಮ ರೀತಿಯಲ್ಲಿ ಇಂತಹ ಕಾರ್ಯಕ್ರಮಳಿಗೆ ಸ್ಪಂದಿಸುತ್ತಿದ್ದಾರೆ. ಯಕ್ಷಗಾನವು ಸಾಂಸ್ಕøತಿಕ ಕಾರ್ಯಕ್ರಮವಾಗಿದ್ದರೂ ಕೂಡಾ ಇದರಲ್ಲಿ ಧಾರ್ಮಿಕತೆ ಅಡಗಿದೆ. ಯಕ್ಷಗಾನದಿಂದ ನೋಡುಗರಲ್ಲಿ ಭಕ್ತಿಭಾವ ಮೂಡುತ್ತದೆ. ಅಜೆಕಾರು ಕಲಾಭಿಮಾನಿ ಬಳಗದ ಬಾಲಕೃಷ್ಣ ಶೆಟ್ಟಿ ಕಳೆದ ಒಂದುವರೆ ದಶಕದಿಂದ ಊರಿನ ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಿ ತಾಳಮದ್ದಳೆ, ಯಕ್ಷಗಾನವನ್ನು ಪ್ರದರ್ಶಿಸುವುದರ ಜೊತೆಗೆ ಅಶಕ್ತ ಕಲಾವಿದರಿಗೆ ನೆರವು, ಸಾಧಕರಿಗೆ ಬೃಹತ್ ನಿಧಿಯೊಂದಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸುತ್ತಿರುವುದು ಅಭಿಮಾನದ ಸಂಗತಿ. ಮುಂಬಯಿಯಲ್ಲಿ ಬಾಲಕೃಷ್ಣ ಶೆಟ್ಟಿ ಅವರು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಾ ಕಲಾ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು, ದಾನಿಗಳ ಪೆÇ್ರೀತ್ಸಾಹ, ಸಹಕಾರ ಸದಾಯಿರಲಿ ಎಂದರು.

ಸಾಂಸ್ಕøತಿಕ ಕಾರ್ಯಕ್ರಮವಾಗಿ ನಗರದ ಪ್ರಸಿದ್ಧ ಕಲಾತಂಡಗಳಿಂದ ನೃತ್ಯ ವೈವಿಧ್ಯ ನಡೆಯಿತು. ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಮಾನಿಷಾದ' ಯಕ್ಷಗಾನ ಪ್ರದರ್ಶನ ಗೊಂಡಿತು.

ಸಮಾರೋಪ ಸಮಾರಂಭ-ಸನ್ಮಾನ ಗೌರವಾರ್ಪಣೆ
ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕಟೀಲು ಇದರ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಉಪಸ್ಥಿತರಿದ್ದು ಅನುಗ್ರಹಿಸಿದರು. ಮುಖ್ಯ ಅತಿಥಿüಯಾಗಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉಪಸ್ಥಿತರಿದ್ದು ಗೌರವÀ ಅತಿಥಿüಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಕಲ್ಕೂರು ಪ್ರತಿಷ್ಠಾನ ಮಂಗಳೂರು ಇದರ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿಗಳಾದ ಅಶೋಕ್ ಶೆಟ್ಟಿ ಪೆರ್ಮುದೆ, ಸಿಎ| ಸದಾಶಿವ ಶೆಟ್ಟಿ, ಚಂದ್ರಶೇಖರ್ ಎಸ್.ಶೆಟ್ಟಿ, ಪ್ರವೀಣ್ ಬಿ.ಶೆಟ್ಟಿ, ವೇಣುಗೋಪಾಲ್ ಶೆಟ್ಟಿ ಥಾಣೆ ಉಪಸ್ಥಿತರಿದ್ದು ಸಂzರ್ರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಕಳೆದ ಹದಿನಾರು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತ ಕಲಾವಿದರನ್ನು ಗೌರವಿಸುವುದು ಹಾಗೂ ಹೊಸ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಕಲಾಸೇವೆಗೈಯಲು ಅನುಕೂಲ ಮಾಡಿಕೊಡುವಂತಹ ಕಾರ್ಯದಿಂದ ಬಾಲಕೃಷ್ಣ ಶೆಟ್ಟಿ ಅವರು ಓರ್ವ ಅಪ್ರತಿಮ ಕಲಾವಿದ, ಕಲಾಪ್ರೇಮಿ ಎಂಬುವುದನ್ನು ನಿರೂಪಿಸಿಕೊಟ್ಟಿದ್ದಾರೆ. ನಾವು ಒಳ್ಳೆಯ ಕೆಲಸ ಮಾಡುವಾಗ ನಮಗೆ ಟೀಕೆ, ಟಿಪ್ಪಣಿಗಳು ಬರುವುದು ಸಹಜ. ಅದನ್ನು ಬದಿಗೊತ್ತಿ ನಾವು ನಮ್ಮ ಕಾರ್ಯದಲ್ಲಿ ಮುಂದಿವರಿಯಬೇಕು. ತಮ್ಮ ಕಲಾಸೇವೆಗೆ ಶ್ರೀ ಕಟೀಲು ದುರ್ಗಾಂಬಿಕೆಯ ಅನುಗ್ರಹ ಸದಾಯಿರುತ್ತದೆ. ಕಳೆದ 16 ವರ್ಷಗಳಿಂದ ಇಂತಹ ಕಾರ್ಯಗಳನ್ನು ಮಾಡುತ್ತಿರುವ ನೀವು ಮುಂಬಯಿ ಮಹಾನಗರದಲ್ಲಿ ನಿರಂತರ 100 ವರ್ಷಗಳ ಕಾಲ ಸೇವೆ ನಡೆಯುತ್ತಿರಲಿ ಎಂದು ಅಸ್ರಣ್ಣರು ತಿಳಿಸಿದರು.

ಯಕ್ಷಗಾನ ಕಲೆಯ ಮೇಲಿನ ಪ್ರೀತಿಯೇ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಯಕ್ಷಕಲಾ ಪ್ರೇಮಿಗಳಿಗೆ ನಿರಂತರ ಯಕ್ಷಗಾನದ ಸವಿಯನ್ನುಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಸ್ವಂತಿಕೆಯ ಲಾಭವೇನೂ ಇಲ್ಲ. ದಾನಿಗಳಿಂದ ಪಡೆದುದನ್ನು ಕಲೆ ಮತ್ತು ಕಲಾವಿದರಿಗಾಗಿ ವಿನಿಯೋಗಿಸುತ್ತಿರು ವುದು ಅವರಿಗೆ ಕಲೆಯ ಮೇಲಿನ ಆಸಕ್ತಿಯನ್ನು ತೋರಿಸುತ್ತದೆ ಎಂದು ಐಕಳ ಹರೀಶ್ ನುಡಿದರು.

ಸಮಾರಂಭದÀಲ್ಲಿ ಮುಂಬಯಿ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಉದ್ಯಮಿ ದಿವಾಕರ ಶೆಟ್ಟಿ ಮುದ್ರಾಡಿ ಅವರಿಗೆ ಸಂಸ್ಥೆಯ ಪ್ರತಿಷ್ಠಿತ `ಯಕ್ಷರಕ್ಷಾ ಕಲಾ ಗೌರವ' ವನ್ನು ಹಾಗೂ ಯಕ್ಷಗಾನ ರಂಗದ ಆಟಕೂಟಗಳ ಪ್ರಸಿದ್ಧಿಯ ಅಶೋಕ್ ಭÀಟ್ ಉಜಿರೆ ಅವರಿಗೆ ಸಂಸ್ಥೆಯ ವಾರ್ಷಿಕ 50 ಸಾವಿರ ರೂಪಾಯಿ ನಗದು ಪುರಸ್ಕಾರ ಸಹಿತ `ಯಕ್ಷರಕ್ಷಾ ವಾರ್ಷಿಕ ವಿಶೇಷ ಪ್ರಶಸ್ತಿ'ಯನ್ನು ಹಾಗೂ ಹಿರಿಯ ಅರ್ಥದಾರಿ, ಯಕ್ಷಗಾನ ವಿದ್ವಾಂಸರುಗಳಾದ ಡಾ| ಎಂ. ಪ್ರಭಾಕರ ಜೋಶಿ ಹಾಗೂ ಪ್ರಸಂಗಕರ್ತ ಮತ್ತು ಛಾಂದಸ, ಯಕ್ಷಕಲಾ ಗುರು ಗಣೇಶ್ ಕೊಲಕಾಡಿ ಅವರಿಗೆ ಗೌರÀವ ನಿಧಿಯೊಂದಿ ಗೆ `ಯಕ್ಷರಕ್ಷಾ ಪ್ರಶಸ್ತಿ' ಅಂತೆಯೇ ಪ್ರಸಿದ್ಧ ಮದ್ದಳೆಗಾರ ದಯಾನಂದ ಶೆಟ್ಟಿಗಾರ್ ಮಿಜಾರ್, ಪತ್ರಕರ್ತ ರೋನ್ಸ್ ಬಂಟ್ವಾಳ್ (ಪರವಾಗಿ ತೋನ್ಸೆ ಸಂಜೀವ ಪೂಜಾರಿ), ಯಕ್ಷಗಾನ ರಂಗದ ಹಾಸ್ಯ ಕಲಾವಿದ ದಿನೇಶ್ ರೈ ಕಡಬ, ಪತ್ತನಾಜೆ ತುಳು ಚಲನಚಿತ್ರದ ನಾಯಕಿ, ಕಲಾವಿದೆ ರೇಷ್ಮಾ ಎಸ್. ಶೆಟ್ಟಿ ಅವರಿಗೆ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಮಾತೋಶ್ರೀ ಸಂಪಾ ಎಸ್.ಶೆಟ್ಟಿ ಸ್ಮರಣಾರ್ಥ `ಯಕ್ಷರಕ್ಷಾ ಪ್ರಶಸ್ತಿ'ಯನ್ನು ಗಣ್ಯರು ಪ್ರದಾನಿಸಿ ಗೌರವಿಸಿದ ರು. ಪುರಸ್ಕೃತರು ಸನ್ಮಾನಕ್ಕೆ ಉತ್ತರಿಸಿ ಅಭಿವಂದಿಸಿದರು.

ಮುಂಬಯಿಯ ಪ್ರಸಿದ್ಧ ಭಾಗವತ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಅರ್ಥದಾರಿ, ಪ್ರಾಧ್ಯಾಪಕ ಪೆÇ್ರ| ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣಗೈದರು. ಯಕ್ಷಗಾನ ಪ್ರಸಂಗಕರ್ತ ಹಾಗೂ ಶ್ರೀ ಕಟೀಲು ಮೇಳದ ಪ್ರಧಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಮಾನಿಷಾದ ಮತ್ತು ಪಾಂಚಜನ್ಯ ಪ್ರಸಂಗಗಳ ಅರ್ಥ ಸಹಿತ ಆವೃತ್ತಿಯನ್ನು ಹಾಗೂ ಯಕ್ಷಗಾನ ಅರ್ಥದಾರಿ, ಕಲಾವಿದ ಸದಾಶಿವ ಆಳ್ವ ತಲಪಾಡಿ ಅವರ `ಭಾರತೀಯ ಚಿಂತನ ವಿಧಾನ ಗ್ರಂಥ'ವನ್ನು ಗಣ್ಯರು ಬಿಡುಗಡೆಗೊಳಿಸಲಾಯಿತು.

ರಂಗನಟ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಕರ್ನೂರು ಮೋಹನ್ ರೈ ಅತಿಥಿüಗಳನ್ನು ಪರಿಚಯಿಸಿ ವಂದಿಸಿದರು. ಅಜೆಕಾರು ಕಲಾಭಿಮಾನಿ ಬಳಗದ ಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅಸ್ರಣ್ಣರನ್ನು ಗೌರವಿಸಿದರು. ಗೌರವ ಕಾರ್ಯದರ್ಶಿ ಸುಧಾಕರ ಶೆಟ್ಟಿ ಎಣ್ಣೆಹೊಳೆ ಮತ್ತಿತರ ಪದಾಧಿಕಾ ರಿಗಳು ಅತಿಥಿüಗಣ್ಯರುಗಳನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here