Thursday 2nd, May 2024
canara news

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‍ಮುಂಬಯಿ ಆಚರಿಸಿದ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವ-ಭಜನೋಹೋತ್ಸವ

Published On : 18 Sep 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.18: ಶ್ರೀಮತ್ ಜಗದ್ಗುರು ಅನಂತಶ್ರೀವಿಭೂಷಿತ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮಿ ಮತ್ತು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸ್ವರಸ್ವತೀ ಪೀಠಾಧೀಶ್ವರ ಜಗದ್ಗುರು ಆಷ್ಟೋತ್ತರಶತ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳ ಶುಭಾನುಗ್ರಹದಿಂದ ಬೃಹನ್ಮುಂಬಯಿಯಲ್ಲಿನ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಸಂಸ್ಥೆಯು ಯತಿದ್ವಾದಶೀ ಶುಭಾವಸರವಾದ ಇಂದಿಲ್ಲಿ ಭಾನುವಾರ ದಿನಪೂರ್ತಿಯಾಗಿಸಿ ಅಂಧೇರಿ ಪಶ್ಚಿಮದ ಜಾನಕಿಭಾೈ ಸಭಾಗೃಹದಲ್ಲಿ 2017ನೇ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಅದ್ದೂರಿ ಯಿಂದ ಸಂಭ್ರಮಿಸಿತು.

ಆ ಪ್ರಯುಕ್ತ ಪ್ರಾತಃಕಾಲದಿಂದ ವಿಶ್ವಕರ್ಮ ಹೋಮ ನೆರವೇರಿಸಲ್ಪಟ್ಟಿತು. ವಿದ್ವಾನ್ ಶಂಕರನಾಥ್ ಪುರೋಹಿತ್ ವಿಶ್ವಕರ್ಮ ಹೋಮ, ನಡೆಸಿದರು. ಗೋಪಾಲಕೃಷ್ಣ ಪುರೋಹಿತ್, ಪ್ರಶಾಂತ್ ಪುರೋಹಿತ್, ಪ್ರಸನ್ನ ಪುರೋಹಿ ತ್, ಪವಿತ್ರ ಪುರೋಹಿತ್ ಕಲಶ ಪ್ರತಿಷ್ಠಾಪನೆ, ಕಲ್ಫೋಕ್ತಪೂಜೆ ಇತ್ಯಾದಿಗಳನ್ನು ಪೂಜಾಧಿಗಳನ್ನು ನಡೆಸಿ ಪ್ರಸಾದವನ್ನಿತ್ತು ಹರಸಿದರು. ಸದಾನಂದ ಎನ್.ಆಚಾರ್ಯ ಕಲ್ಯಾಣ್ಪುರ ಮತ್ತು ಬಿಂದು ಸದಾನಂದ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಬೆಳಿಗ್ಗಿನ್ನಿಂದ ಶ್ರೀ ವಿಶ್ವಕರ್ಮ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು, ಶ್ರೀ ವಿಶ್ವಕರ್ಮ ಕಾಳಿಕಂಬಾ ಭಜನಾವೃಂದ ಮುಂಬಯಿ, ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಕಾಂದಿವಿಲಿ, ಶ್ರೀ ಲಲಿತಾಂಬಾ ಭಜನಾ ಮಂಡಳಿ ಬೋರಿವಿಲಿ ಭಜನಾ ಮಹೋತ್ಸವ ನಡೆಸಿದರು.

ಸಂಜೆ ಅಸೋಸಿಯೇಶನ್‍ನ ಅಧ್ಯಕ್ಷ ಸದಾನಂದ ಎನ್.ಆಚಾರ್ಯ ಕಲ್ಯಾಣ್ಪುರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿದ್ದು ಕಾರ್ಯಕ್ರಮದಲ್ಲಿ ಪೆÇ್ರ| ವಿನಿತಾ ಅಮೃತಾ ಆಚಾರ್ಯ ಮಣಿಪಾಲ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ, ವಾರ್ಷಿಕ ವಿದ್ಯಾಥಿರ್ü ವೇತನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು.

ಈ ಶುಭಾವಸರದಲ್ಲಿ ಅಸೋಸಿಯೇಶನ್‍ನ ಕೋಶಾಧಿಕಾರಿ ಬಾಬುರಾಜ್ ಎಂ.ಆಚಾರ್ಯ, ಜೊತೆ ಕೋಶಾಧಿ ಕಾರಿ ಸುಧೀರ್ ಜೆ.ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಪೇಂದ್ರ ಎ.ಆಚಾರ್ಯ, ಪ್ರಭಾಕರ್ ಎಸ್.ಆಚಾರ್ಯ, ಅರುಣ್ ಪಿ.ಆಚಾರ್ಯ, ರಮೇಶ್ ವಿ.ಆಚಾರ್ಯ, ರಾಮದಾಸ್ ಆಚಾರ್ಯ, ಮಧುಕರ್ ಆಚಾರ್ಯ ಮಾಜಿ ಅಧ್ಯಕ್ಷರುಗಳಾದ ನಿಟ್ಟೆ ದಾಮೋದರ ಆಚಾರ್ಯ, ಜಿ.ಟಿ ಆಚಾರ್ಯ, ಮಹಾಬಲ ಎ. ಆಚಾರ್ಯ, ಕೆ.ಪಿ ಚಂದ್ರಯ್ಯ ಆಚಾರ್ಯ, ಮಹಿಳಾ ವಿಭಾಗಧ್ಯಕ್ಷೆ ಶುಭ ಎಸ್.ಆಚಾರ್ಯ, ಯುವ ವಿಭಾಗಧ್ಯಕ್ಷ ಪ್ರದೀಪ್ ಆರ್.ಆಚಾರ್ಯ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ವಾಸ್ತುತಜ್ಞ ಅಶೋಕ್ ಪುರೋಹಿತ್ ಧಾರ್ಮಿಕ ಉಪನ್ಯಾಸ ನೀಡಿದರು.

ವಾರ್ಷಿಕ ಉತ್ಸವದಲ್ಲಿ ಡಾ| ಕೆ.ಮೋಹನ್, ಶ್ರೀಧರ ವಿ.ಆಚಾರ್ಯ ಬೊರಿವಲಿ, ಕೃಷ್ಣ ವಿ.ಆಚಾರ್ಯ,ಸುಧಾಕರ್ ಎನ್.ಆಚಾರ್ಯ ಮತ್ತಿತರರು ಪ್ರಮುಖರಾಗಿ ಹಾಜರಿದ್ದರು. ಸಂಸ್ಥೆಯ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯವೈಭ, ಶಾಸ್ತ್ರೀಯ ನೃತ್ಯವನ್ನು ಹಾಗೂ ದೂರದರ್ಶನ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಭರತನಾಟ್ಯ ಪ್ರದÀರ್ಶಿಸಿದರು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಸಲ್ಪಟ್ಟಿತು. ನೂರಾರು ವಿಶ್ವಕರ್ಮ ಬಂಧುಗಳು ಮಹೋತ್ಸವದಲ್ಲಿ ಭಾಗಿಳಾಗಿದ್ದು ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಮಹೋತ್ಸವ ಸಮಾಪ್ತಿ ಗೊಂಡಿತು.

ಅಸೋಸಿಯೇಶನ್‍ನ ಉಪಾಧ್ಯಕ್ಷ ರವೀಶ್ ಜಿ.ಆಚಾರ್ಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಹರೀಶ್ ಜಿ.ಆಚಾರ್ಯ ಸ್ಪರ್ಧೆಗಳನ್ನು ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗಣೇಶ್ ಕುಮಾರ್ ಸಭಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here