Thursday 2nd, May 2024
canara news

ಬಹುವಿಧ ಪರಿಣಿತ, ಸ್ಥಿತಪ್ರಜ್ಞ ಕಲಾವಿದ ಕುಬಣೂರು

Published On : 21 Sep 2017   |  Reported By : Rons Bantwal


‘ಯಕ್ಷಗಾನ ರಂಗದ ಹಿರಿಯ ಭಾಗವತರಾಗಿ ಸರಳ ಸ್ನೇಹಶೀಲಸಜ್ಜನರಾಗಿ , ಯಕ್ಷಗಾನ ಪ್ರಸಂಗರಚನೆಯಲ್ಲಿ, ಯಕ್ಷಪ್ರಭ ಸ್ಥಾಪಕ ಸಂಪಾದಕರಾಗಿ ಪತ್ರಿಕೋದ್ಯಮದಲ್ಲೂ ಸಕ್ರಿಯವಾಗಿದ್ದು ಆಪ್ತರೆನಿಸಿದ ಭಾಗವತ ಕುಬಣೂರು ಶ್ರೀಧರ ರಾಯರ ಸಾಧನೆ ವಿಶೀಷ್ಠ” ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರರು ನಮನ ಸಲ್ಲಿಸಿದ್ದಾರೆ. ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಭಾಗವತರ ಹೆಸರನ್ನು ಸ್ಥಾಯಿಗೊಳಿಸುವ ಯೋಜನೆಗಳಿಗೆ ಬೆಂಬಲ ಸೂಚಿಸಿದರು.

 

ಹಿರಿಯ ವಿಮರ್ಷಕ ಡಾ. ಎಂ ಪ್ರಭಾಕರ ಜೋಷಿಯವರು ಮಾತನಾಡಿ ಭಾಗವತರ ಬಹುವಿಧ ಪರಿಣತಿ, ಹಿನ್ನಲೆ, ಕಲಾಯೋಗ್ಯತೆ ಮತ್ತು ಏಳುಬಿಳುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಉಲ್ಲೇಖಿಸಿ ಇಂಜಿನಿಯರ್ ಅಥವಾ ಎಸ್ಟೆಟ್ ಮಾಲಿಕರಾಗಬೇಕಾಗಿದ್ದ ಅವರು ಭಾಗವತರಾದ ಕತೆ, ಅವರ ಉದ್ಯೋಗ ಉದ್ಯಮಗಳ ಏರಿಳಿತಗಳನ್ನು ತಿಳಿಸಿದರು.

ಪ್ರಾ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪ್ರಾ. ಜಿ.ಕೆ. ಭಟ್ ಸೇರಾಜೆ ಅವರು ಶ್ರೀಧರ ರಾಯರ ಯಕ್ಷಗಾನ ರಂಗದ ಗುರು ಪರಂಪರೆ, ವಿವಿಧ ಅಂಗಗಳ ಪರಿಣತಿ, ಯಕ್ಷಗಾನ ಮೇಳ ಸಂಚಾಲಕತ್ವ ಮತ್ತು ಸ್ನೇಹಶೀಲತೆಗಳನ್ನು ಕೊಂಡಾಡಿದರು.

ಕಲಾಕ್ಷೇತ್ರದ ಗಣ್ಯರಾದ ಪೆÇಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ಜಿ ಉಮೇಶ್ ಅಚಾರ್ಯ, ಪೂರ್ಣಿಮ ರಾವ್ ಪೇಜಾವರ ಮಾಣಿಪಾಡಿ ರಾಮಚಂದ್ರ ಭಟ್, ನವನೀತ್ ಶೆಟ್ಟಿ ಕದ್ರಿ, ಶ್ರೀನಿವಾಸ ರಾವ್, ಭಾಗವತರ ಬದುಕಿನ ಅದರ್ಶಗಳನ್ನು, ಸಜ್ಜನಿಕೆಯ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಅಗಲಿದ ಹಿರಿಯ ಕಲಾವಿದನಿಗೆ ಪುಷ್ಪನಮನ ಸಲ್ಲಿಸಲಾಯಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here