Thursday 2nd, May 2024
canara news

ಮಂಗಳೂರು ವಿಮಾನ ಪ್ರಯಾಣಿಕನ ಬಳಿ ಸಂಶಯಾಸ್ಪದ ವಸ್ತು ಪತ್ತೆ

Published On : 22 Sep 2017   |  Reported By : canaranews network


ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವನ ಬಳಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಭೀತಿ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ತೀವ್ರ ತಪಾಸಣೆ ಮತ್ತು ವಿಚಾರಣೆಯ ಬಳಿಕ ಇದು ಯಾವುದೇ ಅಪಾಯಕಾರಿ ವಸ್ತು ಅಥವಾ ಸ್ಫೋಟಕ ಅಲ್ಲ ಎಂಬ ನಿಲುವಿಗೆ ಪೊಲೀಸ್ ಮತ್ತು ತನಿಖಾಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.

ಘಟನೆಯ ಹಿನ್ನೆಲೆ: ಕಣ್ಣೂರು ಸಮೀಪದ ಪ್ರಯಾಣಿಕ ನೋರ್ವ ಮಂಗಳವಾರ ರಾತ್ರಿಯ ವಿಮಾನದಲ್ಲಿ ತೆರಳಲು ಆಗಮಿಸಿದ ಸಂದರ್ಭ ಆತನ ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಯಿತು. ಕೂಡಲೇ ವಿಮಾನ ನಿಲ್ದಾಣ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡು ತೀವ್ರ ತಪಾಸಣೆಗೊಳಪಡಿಸಿದರು. ಪತ್ತೆಯಾಗಿರುವ ಅನುಮಾನಾಸ್ಪದ ಸಾಧನ ಮೇಲ್ನೋಟಕ್ಕೆ ಮೊಬೈಲ್ ಚಾರ್ಜ್ ಮಾಡಲು ಬಳಸುವ ಪವರ್ ಬ್ಯಾಂಕ್ನಂತಿತ್ತು. ಆದರೂ ಜಾಗೃತಗೊಂಡ ಅಧಿಕಾರಿಗಳು ಕೂಡಲೇ ನಿಲ್ದಾಣಕ್ಕೆ ಬಾಂಬ್ ತಪಾಸಣಾ ದಳವನ್ನು ಕರೆಸಿ ಎಲ್ಲೆಡೆ ಎಚ್ಚರಿಕೆ ಘೋಷಿಸಿದರು.ಮೊಬೈಲ್ ಪವರ್ಬ್ಯಾಂಕ್ ಚೀನ ಕಂಪೆನಿಯದ್ದಾಗಿದ್ದು, ಅವೈಜ್ಞಾನಿಕವಾಗಿ ಪ್ಯಾಕ್ ಮಾಡಿದ್ದರಿಂದ ತಪಾಸಣಾ ಸಿಬಂದಿಗೆ ಸಂಶಯ ಬಂದಿತ್ತು. ಅವರು ಕೂಡಲೇ ಭದ್ರತಾ ಸಿಬಂದಿಗೆ ವಿಷಯ ತಿಳಿಸಿದರು. ಕೂಡಲೇ ಪ್ರಯಾಣಿಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು.

ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ ದುಬಾೖಗೆ ಹೋಗಲೆಂದು ಆತ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಆತನನ್ನು ವಿಚಾರಣೆಗಾಗಿ ಪೊಲೀಸರು ವಶದಲ್ಲಿರಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆಯುವ ಸಂಭವವಿದೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ಪ್ರಯಾಣಿಕರನ್ನು ವಿಶೇಷವಾಗಿ ತಪಾಸಣೆ ಗೊಳಪಡಿಸಲಾಗುತ್ತಿದೆ. ಕಟ್ಟುನಿಟ್ಟಿನ ತಪಾಸಣೆಯ ವೇಳೆ ಪ್ರಯಾಣಿಕನ ಬಳಿ ಸಂಶಯಾಸ್ಪದ ವಸ್ತು ಪತ್ತೆಯಾಯಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here