Thursday 2nd, May 2024
canara news

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ವಾರ್ಷಿಕ ಶರನ್ನವರಾತ್ರಿ ಸಂಭ್ರಮ

Published On : 26 Sep 2017   |  Reported By : Rons Bantwal


ಲಲಿತಪಂಚಮಿ ನಿಮಿತ್ತ ನೆರವೇರಿದ ಸಾಮೂಹಿಕ ಚಂಡಿಕಾ ಮಹಾಯಾಗ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ,25: ಉಪನಗರ ಜೋಗೇಶ್ವರಿ ಪೂರ್ವದ ಕೇವ್ಸ್ ರಸ್ತೆಯಲ್ಲಿನ ಕೃಷ್ಣಾ ನಗರದ ಗುಂಫಾ ಟೆಕಡಿ ಇಲ್ಲಿನ ನಾರಾಯಣಗಿರಿ ಆಶ್ರಮದ ಶ್ರೀ ಜಗದಂಬಾ ಕಾಲಭೈರವ ಮಂದಿದಲ್ಲಿ ವಾರ್ಷಿಕ ನವರಾತ್ರಿ ಉತ್ಸವ ಆಚರಿಸಲಾಗುತ್ತಿದ್ದು, ಆ ಪ್ರಯುಕ್ತ ಇಂದಿಲ್ಲಿ ಸೋಮವಾರ ಲಲಿತಪಂಚಮಿ ನಿಮಿತ್ತ ಬೆಳಿಗ್ಗೆ ಸಾಮೂಹಿಕ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ ನೆರವೇರಿಸಲ್ಪಟ್ಟಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಮತ್ತು ಮಂದಿರ ಸಮಿತಿ ಅಧ್ಯಕ್ಷ ಸಂಜೀವ ಪಿ.ಪೂಜಾರಿ ಮುಂದಾಳುತ್ವ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಪಾದೂರು ನರಹರಿ ತಂತ್ರಿ ಅವರ ಧಾರ್ಮಿಕ ಮಾರ್ಗದರ್ಶನ ಹಾಗೂ ಪೌರೋಹಿತ್ಯದಲ್ಲಿ ವಿಶ್ವಕುಮಾರ ತಂತ್ರಿ, ಶಂಕರನಾರಾಯಣ ತಂತ್ರಿ, ಶ್ರವಣ ಭಟ್, ಮಧುಸೂದನ ಭಟ್, ರಾಘವೇಂದ್ರÀ ಭಟ್ ಮತ್ತು ಪುರೋಹಿತ ಬಳಗವು ವಿವಿಧ ಪೂಜಾಧಿಗಳನ್ನು ನಡೆಸಿ ಸಾಮೂಹಿಕ ಚಂಡಿಕಾ ಮಹಾಯಾಗ ನೆರವೇರಿಸಿ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು. ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಪೆÇಸ್ರಾಲ್ ಸದಾಶಿವ ಕೋಟ್ಯಾನ್ ಮತ್ತು ಲೀಲಾ ಸದಾಶಿವ್ ಹಾಗೂ ವಿಶ್ವಸ್ಥ ಸದಸ್ಯ ಸುಂದರ್ ಸಿ. ಪೂಜಾರಿ ಮತ್ತು ಶಕುಂತಳಾ ಸುಂದರ್ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಯಾಗದ ಬಳಿಕ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು.

ನವರಾತ್ರಿ ಉತ್ಸವದಲ್ಲಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಹೆಚ್.ಬಾಬು ಪೂಜಾರಿ, ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಕೋಶಾಧಿಕಾರಿ ಶೇಖರ್ ಕರ್ಕೇರ, ವಿಶ್ವಸ್ಥ ಸದಸ್ಯರುಗಳಾದ ಗೋವಿಂದ ಎ.ಶೆಟ್ಟಿ, ಜಿ.ಟಿ ಆಚಾರ್ಯ, ಮುದ್ದು ಸಿ.ಸುವರ್ಣ, ಡಿ.ಕೆ ಕುಂದರ್, ಆಡಳಿತ ಸಮಿತಿ ಉಪ ಕಾರ್ಯಾಧ್ಯಕ್ಷ ಭುಜಂಗ ಅವಿೂನ್, ಸಂಚಾಲಕ ಸದಾನಂದ ಅವಿೂನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಶೀಲಾ ಎಸ್. ಪೂಜಾರಿ, ಉಪ ಕಾರ್ಯಾಧ್ಯಕ್ಷೆ ಕಲಾವತಿ ಡಿ.ಪೂಜಾರಿ, ಸಂಚಾಲಕಿ ವನಿತಾ ಜೆ.ಶೆಟ್ಟಿ, ಜಯ ಪೂಜಾರಿ (ಸಮುದ್ರ ದಹಿಸರ್) ಸೇರಿದಂತೆ ಮಹಿಳಾ ವಿಭಾಗದ ಸದಸ್ಯೆಯರು ಮತ್ತು ನೂರಾರು ಸದ್ಭಕ್ತರು ಉಪಸ್ಥಿತರಿದ್ದು ಭಜನೆ, ಅಷ್ಟೋತ್ತರ ಅರ್ಚನೆ ಸೇವೆಗಳನ್ನು ನೆರವೇರಿಸಿ ಶ್ರೀ ಜಗದಂಬೆ ಮಾತೆಯ ಕೃಪೆಗೆ ಪಾತ್ರರಾದರು.

ದೇವಸ್ಥಾನದಲ್ಲಿ ಇಂದು (ಸೆ.26) ಮಂಗಳವಾರ ಬೆಳಿಗ್ಗೆ ಶ್ರೀಸುಕ್ತ ಯಾಗ, ಸೆ.27ನೇ ಬುಧವಾರ ಭಾಗ್ಯಕ್ಯಮಥ್ಯ ಸುಕ್ತ ಯಾಗ, ಸೆ.28ನೇ ಗುರುವಾರ ಬೆಳಿಗ್ಗೆ ಲಕ್ಷ್ಮೀ ಹೃದಯ ಮತ್ತು ನಾರಾಯಣಹೃದಯ ಯಾಗ, ಸೆ.29ನೇ ಶುಕ್ರವಾರ ಬೆಳಿಗ್ಗೆ ನವಕ್ಷರಿ ಮಂತ್ರ ಯಾಗ, ಸೆ.30ನೇ ಶನಿವಾರ ವಿಜಯ ದಶಮಿ ದಿನ ಬೆಳಿಗ್ಗೆ ದುರ್ಗಾ ಹೋಮ, ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ರಾತ್ರಿ ದೇವಿಗೆ ರಂಗಪೂಜೆ ನೆರವೇರಿಸಲಾಗುವುದು. ಅಂತೆಯೇ ಪ್ರತಿದಿನ ಭಜನೆ, ಮಧ್ಯಾಹ್ನ ಮತ್ತು ರಾತ್ರಿ ಮಂಗಳಾರತಿ ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here