Thursday 2nd, May 2024
canara news

ಅಸಲ್ಫಾದಲ್ಲಿನ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ 54ನೇ ವಾರ್ಷಿಕ ದಸರಾ ಸಂಭ್ರಮ

Published On : 28 Sep 2017   |  Reported By : Rons Bantwal


ತುಳುನಾಡ ಸಂಪ್ರದಾಯ ಸಂಸ್ಕೃತಿಗಳು ಪಾವಿತ್ರ್ಯತೆಯವು-ಲತಾ ಜೆ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.26: ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ನಾರಿ ಸೇವಾಸದನ್ ರಸ್ತೆಯಲ್ಲಿರುವ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಈ ಬಾರಿ 54ನೇ ವಾರ್ಷಿಕ ನವರಾತ್ರಿ ಮಹೋತ್ಸವ ಆಚರಿಸುತ್ತಿದ್ದು, ಆ ಪ್ರಯುಕ್ತ ಇಂದು ಮಂಗಳವಾರ ರಾತ್ರಿ ಅರಸಿನ ಕುಂಕುಮ ಕಾರ್ಯಕ್ರಮ ನಡೆಸಲ್ಪಟ್ಟಿತು.

ಈ ಶುಭಾವಸರದಲ್ಲಿ ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಗೌರವ ಅತಿಥಿüಗಳಾಗಿ ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಎಸ್.ಭಂಡಾರಿ ಕಡಂದಲೆ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ಸ್ಥಾನೀಯ ಮಾಜಿ ನಗರ ಸೇವಕಿ ಸುಪುತ್ರಿ ಶ್ರದ್ಧಾ ಬಿ.ಮತೆ ಸ್ಥಾನೀಯ ಹಾಲಿ ನಗರ ಸೇವಕರ ಪತ್ನಿ ಅನಿತಾ ಕಿರಣ್ ಲಾಂಘ್ನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲತಾ ಶೆಟ್ಟಿ ದೀಪ ಪ್ರಜ್ವಲಿಸಿ ಬಳಿಕ ತುಳುನಾಡ ಸಂಪ್ರಾಯದಂತೆ ಮೊಸರನ್ನು ಕಡೆಯುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಶೋಭಾ ಎಸ್.ಭಂಡಾರಿ ಅವರು ಹಿಂಗಾರವನ್ನರಳಿಸಿ ಕಳಸೆಯಲ್ಲಿರಿಸಿ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸ್ಥಾನೀಯ ಹೆಸರಾಂತ ಸಮಾಜ ಸೇವಕಿ ವಿೂನಾ ಪೂಜಾರಿ ಅವರನ್ನು ಸತ್ಕರಿಸಿ ಗೌರವಿಸಿದರು.

ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಒಗ್ಗೂಡಿ ಉತ್ಸಹÀದಲ್ಲಿ ದಸರಾ ಸಂಭ್ರಮಾಚರಣೆ ಮಾಡುತ್ತಿರುವುದು ಕಂಡಾಗ ನಮ್ಮ ಮಹಿಳೆಯರಲ್ಲಿನ ಧಾರ್ಮಿಕ ಉತ್ಸುಕತೆ, ಭಕ್ತಿ, ಶ್ರದ್ಧೆ ತಿಳಿಯಲಾಗುತ್ತಿದೆ. ತುಳುನಾಡ ಎಲ್ಲಾ ಸಾಂಪ್ರದಾಯ ಸಂಸ್ಕೃತಿಗಳು ಪಾವಿತ್ರ್ಯತೆಯಾದ್ದಾಗಿವೆ. ದೇವಿಗೆ ಇಷ್ಟರ್ಥ ಹಳದಿ ಈ ಎಲ್ಲಾ ಆಚರಣೆಗಳಿಗೂ ಅಗತ್ಯವಾದ ಕಾರಣ. ಹಳದಿ, ಕುಂಕುಮ, ಹೂವು, ಬಳೆಗಳು ಮಹತ್ವ ಪಡೆದಿವೆ. ಇದೇ ಸಂಭ್ರಮ ದೇವಿ ರೂಪವನ್ನು ಕಾಣುವ ಹಳದಿ ಕುಂಕುಮ ಕಾರ್ಯಕ್ರಮವಾಗಿದೆ. ಮಹಿಳೆಯರು ಪರಸ್ಪರ ಅನುಗ್ರಹಿಸಿಕೊಂಡು ಮತ್ತೊಬ್ಬರನ್ನು ಆಶೀರ್ವಾದಿಸುವ ಕ್ರಮವೂ ಇದಾಗಿದೆ. ಇದರಿಂದ ಪ್ರೀತಿ ಮೂಡಿ ಸಾಮರಸ್ಯತ್ವ ಬೆಳೆದು ತಮ್ಮಲ್ಲಿನ ಪ್ರತಿಭೆ ಗುರುತಿಸಿಕೊಳ್ಳುವಂತಹದ್ದು. ಅಂತೆಯೇ ಭಜನೆಯಿಂದ ದೇವರು ಒಲಿಯುತ್ತಾರೆ ಎನ್ನುವುದೂ ಸತ್ಯ. ಆದುದರಿಂದ ನಾವು ಮಕ್ಕಳನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚುಹೆಚ್ಚಾಗಿ ಪಾಲ್ಗೊಳ್ಳುವಂತೆ ಹುರಿದುಂಬಿಸಬೇಕು. ಇವನ್ನೆಲ್ಲಾ ಮೈಗೂಡಿಸಿ ಮುನ್ನಡೆದಾಗಲೇ ಎಲ್ಲರ ಭವಿಷ್ಯತ್ತಿನ ಬಾಳು ಸುಗಮವಾಗುವುದು ಎಂದÀು ಲತಾ ಜೆ.ಶೆಟ್ಟಿ ತಿಳಿಸಿದರು.

ನಾಡಹಬ್ಬ ನಾಡಿಗೆನೇ ದೊಡ್ದದು. ಆದುದರಿಂದ ಈ ಸಡಗರ ನಾಡಿನ ಹಬ್ಬವಾಗಿ ಸಂಭ್ರಮಿಸಲಾಗುತ್ತದೆ. ವಿವಿಧತೆಯಲ್ಲಿ ಏಕತೆ ಸಾರುವ ಹಬ್ಬ ದಾಸರವಾಗಿದೆ. ಇಂತಹ ದಸರಾ ವೈಭವದ ಶ್ರೇಯತೆ ಕರ್ನಾಟಕಕ್ಕಿದೆ. ಗರ್ಭಾ ಅಂದರೆ ಜಡಕಟ್ಟಿದ ಹೊತ್ತಿನಲ್ಲಿ ಮಾತೆಗೆ ಎಬ್ಬಿಸುವ ಕಾಲ. ಮೈಸಾಸೂರ ಮತ್ತು ದೇವಿ ಮಧ್ಯೆಯ ಕಾಳಗ ದಾಂಡಿಯಾ ಆಗಿದೆ. ಇಂತಹ ಸಂಪ್ರದಾಯಸ್ಥ, ಸಾಂಸ್ಕೃತಿಕತೆಯನ್ನು ಮಕ್ಕಳಲ್ಲಿ ಭಿತ್ತರಿಸುವ ಜವಾಬ್ದಾರಿ ಹೆತ್ತವರದ್ದು. ಆಚರಣೆ ಮೂಲಕ ಅಂತಃಕರಣ ನಿರ್ಮಾಲ ಗೊಳಿಸಿ ಸಮಾಜದ ಜವಾಬ್ದಾರಿ ತಿಳಿದು ಮುನ್ನಡೆಯಲು ಈ ಆಚರಣೆ ವಿಶೇಷವಾಗಿ ಮಹಿಳಾಪ್ರಧಾನ ಹಬ್ಬವಾಗಿದೆ ಎಂದು ಡಾ| ಪೂರ್ಣಿಮಾ ಅವರು ಹಳದಿ ಕುಂಕುಮದ ಮಹತ್ವವನ್ನು ತಿಳಿಸಿದರು.

ನಮ್ಮ ಕರಾವಳಿನ ಮಣ್ಣಿನಿಂದ ಉದ್ಯೋಗಕ್ಕಾಗಿ ಕರ್ಮಭೂಮಿಗೆ ಬಂದಿರುವ ನಾವೂ ನಮ್ಮ ಕರಾವಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ಕರ್ಮಭೂಮಿಯಾದ ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಳದಿ ಕುಂಕುಮ ಆಚರಣೆಯೊಂದಿಗೆ ಉಳಿಸಿಕೊಳ್ಳುತ್ತೇವೆ. ಅರಸಿನ ರೋಗ ನಿರೋಧಕ ಶಕ್ತಿವುಳ್ಳಂತಹ ಪವಿತ್ರವಾದ ಶಕ್ತಿಯಾಗಿದೆ. ಹಳದಿ ಗುರುವಿನ ಚಿಹ್ನೆ ಕುಂಕುಮ ದೈಹಿಕ ಸಾರುವ ಚಿಹ್ನೆ. ಇಂತಹ ಕಾರ್ಯಕ್ರಮಗಳನ್ನು ಆಚರಿಸುವುದರಿಂದ ಮನಸ್ಸಿನಲ್ಲಿರುವ ನೋವು ಮರೆತು ಒಗ್ಗಟ್ಟಿನಲ್ಲಿರುವಂತೆ ಮಾಡುತ್ತದೆ. ಮನಸ್ಸಿಗೆ ತುಂಬಾ ಖುಷಿ ಸಿಗುತ್ತದೆ ಎಂದು ಸುರೇಶ್ ಭಂಡಾರಿ ಅಧ್ಯಕ್ಷೀಯ ನುಡಿಗಳನ್ನಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಸತೀಶ್ ಕೆ.ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ಗೌರವ ಉಪಾಧ್ಯಕ್ಷ ಜಯರಾಮ ಜಿ.ರೈ, ಕಾರ್ಯದರ್ಶಿ ಧರ್ಮಪಾಲ್ ಪಿ.ಕೋಟ್ಯಾನ್, ಕೋಶಾಧಿಕಾರಿ ವಿಕ್ರಮ್ ಸುವರ್ಣ, ಕಾರ್ಯನಿರತ ಅಧ್ಯಕ್ಷರುಗಳಾದ ಸುರೇಶ್ ಪಿ.ಕೋಟ್ಯಾನ್, ಪ್ರಭಾಕರ ಕುಂದರ್, ವಿಠಲ್ ಬೆಳುವಾಯಿ, ಸಂಜೀವ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಸುಧಾಕರ ಶೆಟ್ಟಿ, ಕೃಷ್ಣ ಅಮೀನ್, ಜೊತೆ ಕೋಶಾಧಿಕಾರಿಗಳಾದ ಸಚಿನ್ ಡಿ.ಜಾಧವ್, ಸೌಮ್ಯ ಎಸ್.ಪೂಜಾರಿ, ಸಂಚಾಲಕರಾದ ನಿತ್ಯಾಪ್ರಕಾಶ್ ಎನ್.ಶೆಟ್ಟಿ, ನಾಗೇಶ್ ಎಸ್.ಸುವರ್ಣ, ಮಹಿಳಾ ಮಂಡಳಿ ಮತ್ತು ಪೂಜಾ ಸಮಿತಿ ಹಾಗೂ ಭಜನಾ ಸಮಿತಿ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

ಆರಂಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ರಘುಪತಿ ಭಟ್ ಉಡುಪಿ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಶ್ರೀ ಗೀತಾಂಬಿಕಾ ಮಂಡಳಿ ಭಜನೆ ನಡೆಸಿತು. ನಂತರ ದುರ್ಗಾನಮಸ್ಕಾರ ಪೂಜೆ, ಹೂವಿನ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನೆರವೇರಿಸಲ್ಪಟ್ಟಿತು. ಸಲಹಾ ಸಮಿತಿ ಸದಸ್ಯ ಕರ್ನೂರು ಮೋಹನ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು.

ವಾರ್ಷಿಕ ಶರನ್ನವರಾತ್ರಿ ಉತ್ಸವ ನಿಮಿತ್ತ ಸೆ.29ನೇ ಶುಕ್ರವಾರ ಬೆಳಿಗ್ಗೆ ಗಣಹೋಮ, ದುರ್ಗಾಹೋಮ, ರಾತ್ರಿ ರಂಗಪೂಜೆ, ಮಂಗಳಾರತಿ, ಶ್ರೀದೇವಿ ದರ್ಶನ ಬಲಿ, ತುಲಾಭಾರ, ರಾತ್ರಿ ಶ್ರೀ ಗೀತಾಂಬಿಕಾ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಇವರಿಂದ `ಕೋರ್ದಬ್ಬು ಬಾರಗ' ತುಳು ಪೌರಣಿಕ ಯಕ್ಷಗಾನ ಬಯಲಾಟ ಪ್ರದರ್ಶನ, ಸೆ.30ನೇ ಶನಿವಾರ ವಿಜಯ ದಶಮಿ ದಿನ ಬೆಳಿಗ್ಗೆ ಶ್ರೀದೇವಿ ದರ್ಶನ, ಮಹಾ ಮಂಗಳಾರತಿ ನೆರವೇರಲಿದೆ. ದಸರಾ ತನಕ ದಿನಂಪ್ರತಿ ರಾತ್ರಿ ಭಜನೆ, ವಿವಿಧ ಪೂಜೆಗಳು, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಲಿದೆ. ಆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಜರುಗಿಸಲಾಗುವ ವಾರ್ಷಿಕ ದಸರೋತ್ಸವದಲ್ಲಿ ನಾಡಿನ ಸಮಸ್ತ ಭಕ್ತಮಹಾಶಯರು ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕಾರ್ಯದರ್ಶಿ ಧರ್ಮಪಾಲ್ ಪಿ. ಕೋಟ್ಯಾನ್ ವಿನಂತಿಸಿದ್ದಾರೆ. 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here