Thursday 2nd, May 2024
canara news

ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್.ಶೆಟ್ಟಿ ಹವಾನಿಯಂತ್ರಿತ ಸಭಾಗೃಹ ಉದ್ಘಾಟನೆ

Published On : 29 Sep 2017   |  Reported By : Rons Bantwal


ಕನ್ನಡಿಗರ ಸಂಸ್ಕೃತಿಪ್ರಿಯತೆ ಸರ್ವರಿಗೂ ಮಾದರಿ: ಪ್ರಕಾಶ್ ಮೆಹ್ತಾ

ಮುಂಬಯಿ, ಸೆ.29: ಮರಾಠಿ ಭೂಮಿಯ ಮುಂಬಯಿ ನಗರದಲ್ಲಿ ತುಳುಕನ್ನಡಿಗರ ಸಾಂಸ್ಕೃತಿಕ ಸಂಬಂಧ ಬಹಳ ಬಲಿಷ್ಠವಾಗಿದೆ. ಈ ಸಂಭಂಧಕ್ಕೆ ಯಾರದೂ ಪ್ರಮಾಣಪತ್ರದ ಅಗತ್ಯವಿಲ್ಲ. ತಾವೆಲ್ಲರೂ ಮರಾಠಿ ಬಂಧುಗಳಾಗಿದ್ದೀರಿ. ಉದರ ಪೆÇೀಷಣೆಗಾಗಿ ಇಲ್ಲಿ ನೆಲೆಯಾಗಿದ್ದರೂ ಮರಾಠಿಗರ ಸಂಸ್ಕೃತಿಯೊಂದಿಗೆ ತಮ್ಮ ಸಂಸ್ಕೃತಿಯನ್ನು ಮೈಗೂಡಿಸಿ ಈ ನೆಲದ ಅಭಿವೃದ್ಧಿಗೆ ಕಾರಣಭೂತರಾಗಿದ್ದೀರಿ. ಅಂತೆಯೇ ನಮ್ಮ ಪರಿಸರದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿಯ ಸೇವೆ, ಸ್ಪಂದನೆ ಅಭಿನಂದನೀಯ ಎಂದು ಮಹಾರಾಷ್ಟ್ರ ರಾಜ್ಯ ವಸತಿ ಸಚಿವ ಪ್ರಕಾಶ್ ಮೆಹ್ತಾ ತಿಳಿಸಿದರು.

ಇಂದಿಲ್ಲಿ ಬುಧವಾರ ನಗರದ ಘಾಟ್‍ಕೋಪರ್ ಪೂರ್ವದ ಪಂತ್‍ನಗರದಲ್ಲಿ ಸೇವಾ ನಿರತ ಕನ್ನಡ ವೆಲ್ಫೇರ್ ಸೊಸೈಟಿ ಇದರ ಸ್ವರ್ಣಮಹೋತ್ಸವದ ಶುಭಾವಸರದಲ್ಲಿ ಸೊಸೈಟಿಯ ನೂತನ ಮಹೇಶ್ ಎಸ್.ಶೆಟ್ಟಿ (ಬಾಬಾ'ಸ್ ಗ್ರೂಪ್) ಹವಾನಿಯಂತ್ರಿತ ಸಭಾಗೃಹ ಉದ್ಘಾಟಿಸಿ ಬಳಿಕ ಸಮಾರಂಭಕ್ಕೆ ಚಾಲನೆಯನ್ನಿತ್ತು ಸಚಿವ ಮೆಹ್ತಾ ಮಾತನಾಡಿದರು.

ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ಸಭಾಗೃಹದ ಪ್ರಾಯೋಜಕ ಬಾಬಾ'ಸ್ ಗ್ರೂಪ್‍ನ ಕಾರ್ಯಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಮನಿಪೆÇೀಲ್ಡ್ ಕೊ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವೆಲ್‍ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಮಾಲಕ ರವೀಂದ್ರನಾಥ ಎಂ.ಭಂಡಾರಿ, ಯುವ ಉದ್ಯಮಿ ಸ್ಟೀವನ್ ಫುರ್ಟಾಡೊ ಮತ್ತಿತರರು ಉಪಸ್ಥಿತರಿದ್ದು ಗಣ್ಯರು ಸುವರ್ಣ ಮಹೋತ್ಸವದ ವಿಜ್ಞಾಪನಾಪತ್ರ ಬಿಡುಗೊಳಿಸಿದರು ಮತ್ತು ವಿಧವೆ ವೇತನ ವಿತರಿಸಲಾಯಿತು.


ಸೊಸೈಟಿಯ ಉಪಾಧ್ಯಕ್ಷ ಜಯರಾಜ ಜೈನ್, ಗೌರವ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ರಘುನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಪೀಟರ್ ರೋಡ್ರಿಗಸ್, ಮಹಿಳಾ ವಿಭಾಗಧ್ಯಕ್ಷೆ ಆಶಾ ಜಿ.ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ನಂದಳಿಕೆ, ಮಾಜಿ ಅಧ್ಯಕ್ಷ ವಿದ್ಯಾನಂದ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಂದಲೆ ಸುರೇಶ್ ಮಾತನಾಡಿ ತುಳುನಾಡಿನ ಜನತೆ ಹೊಟ್ಟೆಪಾಡನ್ನು ಹರಸಿ ಮುಂಬಯಿಯಲ್ಲಿ ವಾಸ್ತವ್ಯಹೂಡಿ ಸಂಪಾದಿಸುತ್ತಾ ಕೇವಲ ತಮ್ಮ ಕುಟುಂಬವನ್ನು ಪೆÇೀಷಿಸದೆ ಸಂಘಟನೆಗಳ ಮೂಲಕ ಜನಸೇವೆಯಲ್ಲೂ ತೊಡಗಿಸಿರುವರು. ಸಾಮಾಜಿಕ ಸಂಘಟನೆಗಳ ಮೂಲಕ ತಮ್ಮನ್ನು ತೊಡಗಿಸಿ ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಷಯ ಎಂದರು.


ಸಂಸ್ಥೆಯ ಪದಾಧಿಕಾರಿ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಸದಸ್ಯಸದಸ್ಯೆಯರು ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮವಾಗಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು ವಿದ್ವಾನ್ ಜೋಯಿಷ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ಅಶೋಕ್ ಪಕ್ಕಳ, ಜಯ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here