Thursday 2nd, May 2024
canara news

ವಿ. ಪಿ. ಎಮ್ ಶಾಲೆಯಲ್ಲಿ ಶಿಕ್ಷಕ ದಿನಾಚರಣೆಯ ಸಮಾರಂಭ

Published On : 29 Sep 2017   |  Reported By : Rons Bantwal


“ ಸೃಜನಶೀಲ ಚಟುವಟಿಕೆಗಳಿಂದ ಕೂಡಿದ ಕಲಿಕೆಯೇ ಬೋಧನೆಯಾಗಿರಬೇಕು ”- ಪ್ರೋ|| ಸಿ. ಜೆ. ಪೈ

ವಿ. ಪಿ. ಎಮ್ ಪ್ರತಿಜ್ಞೆಯನ್ನು ಎಲ್ಲಾ ಶಿಕ್ಷಕ ವೃಂದಕ್ಕೆ ಬೋಧಿಸುತ್ತಾ ವಿದ್ಯಾರ್ಥಿಗಳಲ್ಲಿ ಸೃಜನಶೀಲ, ಕ್ರೀಯಾಶೀಲ, ಸರ್ವಾಂಗೀಣ ಜ್ಞಾನ ಕೌಶಲ್ಯ ಪರಿಮಳದ ಪರಿಪಕ್ವತೆಯು ಶೋಭಿಸಬೇಕಾದರೆ ಅದು ಕೇವಲ ಗುರುವರ್ಯರಿಂದ. ಶಿಕ್ಷಕ ವೃತ್ತಿಯು ಅಪಾರವಾದ ಜವಾಬ್ದಾರಿಯನ್ನು ಮತ್ತು ಉಜ್ವಲ ಭವಿಷ್ಯದ ಹೊಣೆಗಾರಿಕೆಯನ್ನು ಬಿತ್ತರಿಸುದರ ಮೂಲಕ ಪ್ರತಿ ಬಿಂಬಿಸುತ್ತದೆಂದು, ಅವರೇ ಆದರ್ಶ ರಾಷ್ಟ್ರದ ಪ್ರವರ್ತಕರೆಂದು ಪ್ರಶಂಸಿಸುತ್ತಾ ಸಮೃದ್ಧಮಯವಾದ, ಸುವ್ಯವಸ್ಥಿತವಾದ, ಸರ್ವತೋಮಯವಾದ ರಾಷ್ಟ್ರದ ನಿರ್ಮಾಣದ ದೃಷ್ಟಿಯಿಂದ ಆದರ್ಶ ನಾಗರಿಕರ, ಸಮಾಜದ ಜೀವನದಲ್ಲಿ ಶಿಸ್ತುಬದ್ಧವಾದ ಕ್ಷಮತೆಯನ್ನು, ನಯ-ವಿನಯವನ್ನು ಪ್ರಜ್ವಲಗೊಳಿಸುವುದೇ ಶಿಕ್ಷಣ. ಶಿಕ್ಷಣವು ಸ್ವ-ಸಾಮಥ್ರ್ಯದ, ವಿಶ್ವ ಜ್ಞಾನದ ಚಿಂತನ-ಮಂಥನ, ವಿಚಾರ-ವಿಮರ್ಶೆಯ ಸೃಜನಶೀಲತೆಯ ಪ್ರಕ್ರಿಯೆಯನ್ನು ವ್ಯಕ್ತಿಗತವಾಗಿ ವಿಕಾಸವಾಗುವಂತಿರಬೇಕು.

ಶಿಕ್ಷಕರು ರಾಷ್ಟ್ರೀಯ ಸಂಪನ್ಮೂಲ. ಅವರು ವಾಸ್ತವವಾದಿಯಾಗಿರಬೇಕು. ಇಂದಿನ ವಿಜ್ಞಾನ-ತಂತ್ರಜ್ಞಾನದಲ್ಲಾಗುವ ಸಂಶೋಧನೆಯ ಹರವು ಮತ್ತು ಕುರುಹುಗಳ ಜ್ಞಾನಶೀಲರಾಗಿರಬೇಕು. ವರ್ಗಕೋಣೆಯಿಂದ-ಜಗತ್ತಿನವರೆಗೆ, ಪಠ್ಯಕ್ರಮದಿಂದ-ವಿಶ್ವ ಅಧ್ಯಯನದವರೆಗಿನ ವಿವಿಧ ವಿಷಯಗಳ ಜ್ಞಾನವಂತಿಕೆಯನ್ನು ಸಮೃದ್ಧಮಯಗೊಳಿಸಿಕೊಳ್ಳಬೇಕು. ರಾಷ್ಟ್ರೀಯ-ಅಂತರಾಷ್ಟ್ರೀಯ ನಡುವಿನ ವಿವಿಧ ಕ್ಷೇತ್ರಗಳಾದ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಕ್ರೀಡಾತ್ಮಕ, ಸಾಮಾಜಿಕ, ಸಂಶೋಧನಾತ್ಮಕ, ವೈಜ್ಞಾನಿಕ, ಸಾಹಿತ್ತ್ಯಿಕ, ಸಂಶೋಧನಾತ್ಮಕ ಹೀಗೆ ಎಲ್ಲಾ ವಿಷಯಗಳ ಕಲ್ಪವೃಕ್ಷಾತ್ಮಕ ಮತ್ತು ವೈಶಾಲ್ಯಪೂರ್ಣ ಜ್ಞಾನ ಪರಿಪಾಲಕರಾಗಿರಬೇಕು. ನೈಸರ್ಗಿಕವಾಗಿ ಸಂಪನ್ಮೂಲವು ಪ್ರಖರತೆಯನ್ನು ಪಡೆದುಕೊಂಡ ಹಾಗೆ ಮಾನವನ ಜ್ಞಾನಸಾಗರದಲ್ಲಿ ಶಿಕ್ಷಕರು ಪ್ರತಿಬಿಂಬಿಸಬೇಕು. ಸ್ಫೂರ್ತಿದಾಯಕವಾದ ವಿಷಯಗಳ ಮೇಲೆ ಚರ್ಚಿಸುವುದರಿಂದ ಮಾನಿಸಿಕ, ಪರಿವರ್ತನೆ, ವೈವಿಧ್ಯತೆಯಲ್ಲಿ ಸದೃಡವನ್ನು ಬಲಗೊಳಿಸಬಹುದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ವಿಶ್ವ ನಾಗರಿಕರನ್ನಾಗಿ ಮಾಡುವ ಶಕ್ತಿ-ಯುಕ್ತಿಯ ಕೇಂದ್ರಬಿಂದುವಾಗಬೇಕೆಂದು ವಿದ್ಯಾ ಪ್ರಸಾರಕ ಮಂಡಳವು ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಗೂ ವಿದ್ಯಾ ಪ್ರಸಾರಕ ಮಂಡಳದ ಖಜಾಂಚಿಯಾಗಿರುವ ಪ್ರೋ|| ಸಿ. ಜೆ. ಪೈಯವರು ಅತಿಥಿ ಸ್ಥಾನದಿಂದ ಮಾತನಾಡುತ್ತಾ ಶುಭ ಹಾರೈಸಿದರು!

ಬೋಧನೆಯು ನಿರ್ಭಯ, ನಿರರ್ಗಳ, ಲವ ಲವಿಕೆಯಿಂದ, ಉತ್ಸಾಹಭರಿತವಾಗಿದ್ದರೆ, ಕಲಿಕೆಯಲ್ಲಿ ಕೌಶಲ್ಯಪೂರ್ಣತೆಯು ಹೊರಹೊಮ್ಮುತ್ತದೆ. ಈ ಸಮಾರಂಭದ ಗೌರವ ಅತಿಥಿಗಳಾದ ಡಾ|| ಹರೀಶ್ ಸೆಟ್ಟಿಯವರು ಅತಿಥಿ ಸತ್ಕಾರವನ್ನು ಸ್ವೀಕರಿಸಿ, ಶಿಕ್ಷಕ ಪ್ರತಿಭಾನ್ವಿತರಿಗೆ ಬಹುಮಾನ ವಿತರಿಸುತ್ತಾ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸುತ್ತಾ ಪ್ರತಿಯೊಬ್ಬ ಮನುಷ್ಯನ ಹವ್ಯಾಸಗಳು, ವರ್ತನೆಗಳು ನೈಸರ್ಗಿಕವಾಗಿ ವೈವಿಧ್ಯಮಯವಾಗಿರುತ್ತವೆ. ಕಲಿಕೆಯು ಫಲಪ್ರದವಾಗಬೇಕಾದರೆ, ಬೋಧನೆಯು ಯಾವುದೇ ನಿರ್ಬಂಧನೆಗಳನ್ನೊಳಗೊಂಡಿರಬಾರದು. ಸರ್ವ ಸ್ವಾತಂತ್ರಮಯವಾದ ವಾತಾವರಣದ ಅವಕಾಶವನ್ನು ಕಲ್ಪಿಸಿದರೆ, ವಿದ್ಯಾರ್ಥಿಗಳಲ್ಲಿಯ ಸುಪ್ತ ಪ್ರತಿಭೆಯು ಧೈರ್ಯದಿಂದ ಆತ್ಮವಿಶ್ವಾಸದ ಮೂಲಕ ಹೊಂಗೀರಣವಾಗಿ ಹೊರಹೊಮ್ಮುತ್ತದೆ. ಬೋಧನೆಯಲ್ಲಿ ಕಲಿಕೆಯ ಪ್ರತಿಕ್ರಯೆಯಲ್ಲಿ ಅಸಮಾನತೆ-ತಾರತಮ್ಯರಹಿತವಾಗಿದ್ದರೆ ವಿದ್ಯಾರ್ಥಿಗಳಲ್ಲಿ ನಿರ್ಭಯದ ಭಾವನೆ ಉದ್ಭವವಾಗಿ ವಿಶಾಲವಾದ ಮನೋಪ್ರವೃತ್ತಿಯಿಂದ ಜ್ಞಾನ ವಿಕಾಸದಲ್ಲಿ ಹೊಸತನವನ್ನು ಕಾಣಬಹುದು. ಮಗುವನ್ನು ಪರಿಪೂರ್ಣವಾಗಿ ಹಾಗೂ ಸದ್ವಿಕಾಸಗೊಳಿಸಲು ಕೌಟುಂಬಿಕ ಹಿನ್ನಲೆಯನ್ನು ಅಧ್ಯಯನ ಮಾಡಿಕೊಳ್ಳುವುದು ಬೋಧನಕಾರರ ಪ್ರಥಮ ಕಾರ್ಯವಾಗಿದೆ. ಸಮರ್ಪಕ ಮತ್ತು ಸರ್ವಾಂಗೀಣ ವಿಕಾಸಕ್ಕಾಗಿ ಸದೃಡವಾದ ಆರೋಗ್ಯದ ಚಿಂತನ-ಮಂಥನದ ವಿಚಾರ-ವಿಮರ್ಶೆಯನ್ನು ವಿದ್ಯಾರ್ಥಿಗಳಿಗೆ ಜ್ಞಾನೋದಯವಾಗುವಂತೆ ನಿರ್ದೇಶಿಸುವುದು ಬೋಧನಕಾರರ ಆದ್ಯ ಕರ್ತವ್ಯವಾಗಿದೆ ಎಂದು ಮನೋತಜ್ಞರಾದ ಡಾ|| ಹರೀಶ್ ಶೆಟ್ಟಿಯವರು ಮಾತನಾಡುತ್ತಾ ಶುಭ ಹಾರೈಸಿದರು!

ವಿದ್ಯಾ ಪ್ರಸಾರಕ ಮಂಡಳದ ಪ್ರಧಾನ ಪ್ರಧಾನ ಗೌರವ ಕಾರ್ಯದರ್ಶಿಗಳು ಹಾಗೂ ಈ ಸಮಾರಂಭದ ಅಧ್ಯಕ್ಷರಾದ ಡಾ|| ಪಿ. ಎಮ್ ಕಾಮತ್‍ರು ದೀಪ ಪ್ರಜ್ವಲಿಸಿ, ಅತಿಥಿ-ಗಣ್ಯರಿಗೆ ಪುಷ್ಪಗುಚ್ಛವಿತ್ತು ಗೌರವಿಸಿ, ಶಿಕ್ಷಕ ಪ್ರಿಭೆಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಾ, ವೃತ್ತಿಯ ಅನುಭವದಲ್ಲಿಯ ಅಮೃತವೇ ಹೊತ್ತಿಗೆ. ಸಂಸ್ಥೆಯ ವಿಕಾಸ ಮತ್ತು ಬೆಳವಣಿಗೆಯಲ್ಲಿ ಶಿಕ್ಷಕರ ಶ್ರಮ ಅಡಗಿದೆ. ನಿರಂತರವಾದ ಅಧ್ಯಯನವು ಪರಿಪೂರ್ಣ ಭೌದ್ಧಿಕ ವಿಕಾಸಕ್ಕೆ ಹಾಗೂ ಸಂಶೋಧನಾ ಪ್ರವೃತ್ತಿಯ ದಾಹಕ್ಕೆ ಕಾರಣವಾಗುತ್ತೆ. ವಿದ್ಯಾರ್ಥಿಗಳ ಸರ್ವಾಂಗೀಣ ಸಬಲೀಕರಣವಾಗಬೇಕಿದೆ. ಶಿಕ್ಷಕರ ಬೋಧನೆಯು ಪ್ರಬುದ್ಧತೆಯಿಂದ ಕೂಡಿರಬೇಕು. ಕಂಠ ಪಾಠದ ಬದಲಾಗಿ ವಿಷಯದ ವಿವರಣೆಯು ಅರ್ಥವಂತಿಕೆ, ಗ್ರಹಿಕಾ ಅಭಿವ್ಯಕ್ತಿಯ ಸಾಮಥ್ರ್ಯವನ್ನು ವಿಶಾಲಮಯಗೊಳಿಸುವಂತಿರಬೇಕು. ಚರ್ಚಾಕೂಟದ ಪ್ರವೃತ್ತಿಯಿಂದ ವಿಷಯದ ಮನವರಿಕೆಯು ಪ್ರಬಲಗೊಳ್ಳುತ್ತದೆ. ಬೋಧನೆಯು ಯಾವಾಗಲು ಸೃಜನಶೀಲ ಕ್ರಿಯೆಯಿಂದ ಕೂಡಿರಬೇಕೆಂದು ಎಲ್ಲಾ ಶಿಕ್ಷರಿಗೆ ಶುಭಾಶಯ ಸಲ್ಲಿಸಿದರು!

ಈ ಸಮಾರಂಭವು ಶ್ಲೋಕದ ಮೂಲಕ ಪ್ರಾರಂಭಗೊಂಡಿತು. ವೇದಿಕೆಯ ಮೇಲೆ ಡಾ|| ಹರೀಶ್ ಶೆಟ್ಟಿ ಡಾ|| ಪಿ. ಎಮ್ ಕಾಮತ್, ಶ್ರೀಯುತ ಬಿ. ಎಚ್ ಕಟಿ,್ಟ ಪ್ರೋ|| ಸಿ. ಜೆ. ಪೈ, ಡಾ|| ಗಿಡದುಬ್ಲಿ ಉಪಸ್ಥಿತರಿದ್ದರೆ, ಸಭೆಯಲ್ಲಿ ಮುಲುಂಡಿನ ಮತ್ತು ಐರೋಳಿ ಶಾಲೆಯ ಬಾಲವಾಡಿಯಿಂದ ಮಹಾವಿದ್ಯಾಲಯದವರೆಗಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಪರಿವೀಕ್ಷರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆ, ಸ್ವಾಗತ, ಪರಿಚಯ ಹಾಗೂ ಧನ್ಯವಾದವನ್ನು ಶಿಕ್ಷಕಿ ನೀತಾ ಕೋಟ್ಯಾನ್ ಮತ್ತು ವಿಜಯಾ ರಮೇಶ ಪೂರೈಸಿದರೆ, ಅತಿಥಿ-ಗಣ್ಯರು ಪುಷ್ಪಗುಚ್ಛ ಗೌರವವನ್ನು ಸಲ್ಲಿಸಿ, ಸ್ವೀಕರಿಸಿದರು. ಇಂಗ್ಲೀಷ್ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ-ಶಿಕ್ಷಕಿ ಲಕ್ಷ್ಮೀ ತಮಾಮೆ ವ್ಹಿ. ಪಿ. ಎಮ್ ಬಿ ಆರ್ ಟೋಲ್ ಇಂಗ್ಲೀಷ್ ಹೈಸ್ಕೂಲ್, ದ್ವಿತೀಯ-ಶಿಕ್ಷಕಿ ಪ್ರಾಚಿರಾವ ರಾಣೆ ವ್ಹಿ. ಪಿ. ಎಮ್ ಮಹಾವಿದ್ಯಾಲಯ, ತೃತೀಯ- ಶಿಕ್ಷಕಿ ಅಶ್ವೀನಿ ಮೊಂಡಕರ್ ವ್ಹಿ. ಪಿ. ಎಮ್ ಮಹಾವಿದ್ಯಾಲಯ, ಹಿಂದಿ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ-ಶಿಕ್ಷಕಿ ಶುಭಾಂಗಿ ಪೋಟಪೋಡೆ ವ್ಹಿ. ಪಿ. ಎಮ್ ಬಿ ಆರ್ ಟೋಲ್ ಇಂಗ್ಲೀಷ್ ಹೈಸ್ಕೂಲ್, ದ್ವಿತೀಯ- ಶಿಕ್ಷಕಿ ----- ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ತೃತೀಯ-ಶಿಕ್ಷಕಿ-----ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ಕನ್ನಡ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ-ಶಿಕ್ಷಕಿ ಸ್ವರಾ ಸನತ್ ಪ್ರಭು ವ್ಹಿ. ಪಿ. ಎಮ್ ಮಹಾವಿದ್ಯಾಲಯ, ದ್ವಿತೀಯ- ಶಿಕ್ಷಕಿ ಉಲ್ಲಾಸಿನಿ ನಾಯಕ್ ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ಹಾಡಿನ ಸ್ಪರ್ಧೆಯಲ್ಲಿ ಪ್ರಥಮ ಶಿಕ್ಷಕಿ ಅಪರ್ಣಾ ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ದ್ವಿತೀಯ ಶಿಕ್ಷಕಿ ----ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ತೃತೀಯ ಶೀಕ್ಷಕಿ ----ವ್ಹಿ. ಪಿ. ಎಮ್ ಮಹಾವಿದ್ಯಾಲಯದ ಶಿಕ್ಷಕ ಸ್ಪರ್ಧಾಳುಗಳು ಸ್ಪರ್ಧಾ ಬಹುಮಾನದ ಪ್ರೀತಿಗೆ ಪಾತ್ರರಾದರು. ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here