Thursday 2nd, May 2024
canara news

ಮುಂಬಯಿ: ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ಭೀಕರ ದುರಂತ ಕಾಲ್ತುಳಿತಕ್ಕೆ ಸುಜತಾ ಶೆಟ್ಟಿ ಮತ್ತು ಸುಮಾ ಶೆಟ್ಟಿ ವಿಧಿವಶ

Published On : 29 Sep 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.29: ಮಹಾನಗರ ಮುಂಬಯಿಯ ಜೀವನಾಡಿ ಎಂದೇ ಕರೆಯಲ್ಪಡುವ ಸ್ಥಾನೀಯ ರೈಲು ಸಂಚಾರದ ತ್ರಿಮಾರ್ಗಗಳಲ್ಲಿ ಒಂದಾದ ಮಧ್ಯ ರೈಲ್ವೇಯ ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ಠಾಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ದುರಂತದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಸದಸ್ಯೆಯರು ವಿಧಿವಶರಾಗಿದ್ದಾರೆ. ಸುಜತಾ ಪಿ.ಆಳ್ವ (42) ಮತ್ತು ಸುಮಾಲತಾ ಸಿ.ಶೆಟ್ಟಿ (45) ಇವರೇ ಮೃತ ದುರ್ದೈವಿಗಳು.

ಎಂದಿನಂತೆ ಸ್ಥಳೀಯ (ಲೋಕಲ್) ರೈಲ್ವೇಯಾನ ಮೂಲಕ ಕೆಲಸಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರೈಲಿನಿಂದ ಇಳಿದು ಪಾದಚಾರಿ ಸೇತುವೆ (ಪೆಡೆಸ್ಟ್ರಿಯನ್ ಬ್ರಿಡ್ಜ್) ಏರಿ ಕಾಲ್ನಡಿಗೆಯಲ್ಲಿ ಮೇಲಕ್ಕೆ ಸಾಗುದ್ದಂತೆಯೇ ಏಕಾಏಕಿ ಸುರಿದ ಮಳೆಯಾರಂಭ ಗೊಂಡಿತು. ಅಷ್ಟರಲ್ಲೇ ಯಾರೊಬ್ಬ ಕಿಡಿಗೇಡಿ ಶಾರ್ಟ್‍ಸರ್ಕೀಟ್ ಆಗಿ ರೈಲ್ವೇ ಸೇತುವೆ ಕುಸಿದು ಬೀಳುತ್ತಿಇದೆ ಎಂದು ವದಂತಿ ಹಬ್ಬಿಸಿದ್ದೇ ಘಟನೆಗೆ ಮೂಲ ಕಾರಣವಾಗಿದೆ. ಗಾಳಿಸುದ್ದಿ ಕಿವಿಗೆ ಬಿದ್ದದ್ದೇ ತಡ ಜನರೆಲ್ಲರೂ ಕಕ್ಕಾಬಿಕ್ಕಿಯಾಗಿ ದುರಂತದಿಂದ ತಪ್ಪಿಸಿಕೊಳ್ಳಲು ಓಡಾಟ ನಡೆಸಲಾರಂಭಿಸಿದರು. ತತ್‍ಕ್ಷಣವೇ ನೂಕುನುಗ್ಗಾಟಕ್ಕೆ ಎದ್ದುಬಿದ್ದು ಓಡಲಾರಂಂಭಿಸಿದ ಜನಸ್ತೋಮದ ಮಧ್ಯೆ ಕಾಲ್ತುಳಿತಕ್ಕೆ ಒಟ್ಟು 22 ಮಂದಿ ಅಸುನೀಗಿದರೆ ಸುಮಾರು 35 ಜನ ಗಾಯಗೊಂಡರು.

ಘಟನೆ ತಿಳಿದಾಕ್ಷಣ ಆಗ್ನಿಶಾಮಕ ದಳ, ರೈಲ್ವೇ ಪೆÇೀಲಿಸ್, ರೈಲ್ವೇ ಭೋಯಿವಾಡ ಠಾಣಾ ಪೆÇೀಲಿಸು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸೂಕ ಬಂದೋಬಸ್ತ್ ಮೂಲಕ ಗಾಯಳುಗಳನ್ನು ಸ್ಥಳೀಯ ಕೆಇಎಂ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಬಂಟ್ಸ್ ಸಂಘ ಮುಂಬಯಿ ಇದರ ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿಯ ಸಕ್ರೀಯ ಸದಸ್ಯೆಯರಾಗಿದ್ದು ಕಾಂಜೂರ್‍ಮಾರ್ಗ ಪೂರ್ವದ ನೆಹರೂ ನಗರ ನಿವಾಸಿ ಆಗಿದ್ದರು. ಒಂದು ನಾಣ್ಯದ ಎರಡು ಮುಖಗಳತ್ತಿದ್ದ ಇವರು ಜೊತೆಜೊತೆಯಾಗಿಯೇ ಇದ್ದು ಎಲ್ಲಾ ಸ್ಪರ್ಧೆಗಳಲ್ಲೂ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಮಾತ್ರವಲ್ಲ ಉತ್ತಮ ಕ್ರೀಡಾಪಟುಗಳು, ಇಲ್ಲಿನ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೂವು ಇತ್ಯಾದಿ ಪೂಜಾಧಿ ಸಾಮಾಗ್ರಿಗಳು ಸಿಗುತ್ತಿರುವ ಕಾರಣ ಸುಜತಾ ಆಳ್ವ ಮತ್ತು ಸುಮಾ ಶೆಟ್ಟಿ ಜೊತೆಗೂಡಿ ದಸರಾ ಹಬ್ಬದ ಪೂಜೆಗೆ ಹೂವು ಖರೀದಿಸಲೆಂದೇ ಹೋದವರು ಶ್ರೀದೇವಪಾದವನ್ನೂ ಒಟೊಟ್ಟಾಗಿ ಸೇರಿರುವುದು ವಿಪರ್ಯಾಸವೇ ಸರಿ.

ಸುಮಾಲತಾ ಶೆಟ್ಟಿ: ಇವರು ಮೂಲತಃ ಇನ್ನಾ ಮಡ್ಮಾಣ್ ಪಾದೆಮನೆ (ತಾಯಿಮನೆ), ಕಡಂದಲೆ ಹೊೈಗೆಮನೆ ಕೃಷ್ಣ ಶೆಟ್ಟಿ ದಂಪತಿ ಸುಪುತ್ರಿ ಆಗಿದ್ದಾರೆ. ಓರ್ವ ಪ್ರತಿಭಾನ್ವಿತೆ ಮತ್ತು ಅತ್ಯುತ್ತಮ ಕ್ರೀಡಾಪಟು. ಸಮಿತಿಯ ಹಗ್ಗಜಗ್ಗಟ, ತ್ರೋಬಾಲ್ ತಂಡದ ನಾಯಕಿ ಆಗಿದ್ದು ತಂಡಕ್ಕೆ ಹಲವು ಬಹುಮಾನಗಳನ್ನು ತಂದೊದಗಿಸಿದ ಕೀರ್ತಿ ಇವರದ್ದು. ಪತಿ ಎಳಿಯಾಲು ಶೆಟ್ಟಿಬೆಟ್ಟು ಮನೆತನದ ಚಂದ್ರಶೇಖರ್ ಶೆಟ್ಟಿ ಸೀಮೆನ್ಸ್ ಉದ್ಯೋಗಿ ಆಗಿದ್ದು ಏಕೈಕ ಮಗಳು ಕು| ನಿಧಿ ಶೆಟ್ಟಿ ಸಯಾನ್‍ನಲ್ಲಿ ಬಿಎಸ್ಸಿ ಓದುತ್ತಿದ್ದಾರೆ.

ಸುಜತಾ ಆಳ್ವ: ಇವರು ವಾಮಂಜೂರು ಮೂಲದವರಾಗಿದ್ದಾರೆ. ಈಕೆ ಓರ್ವ ಅತ್ಯತ್ತಮ ರಂಗಭೂಮಿ ಕಲಾವಿದೆ. ಹಲವು ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿಭಾಯಿಸಿ ಕಲಾಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ಪತಿ ಪುರುಷೋತ್ತಮ ಆಳ್ವ ಆದಾಯ ತೆರಿಗೆ ಉನ್ನತಾಧಿಕಾರಿ ಆಗಿದ್ದು ಮತ್ತು ಇಬ್ಬರು ಸುಪುತ್ರಿಯರು ಕು| ಪ್ರಜ್ಞಾ ಆಳ್ವ ಮತ್ತು ಕು| ಪ್ರೇರ್ನಾ ಆಳ್ವ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇವರ ನಿಧನಕ್ಕೆ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿ ಅಧ್ಯಕ್ಷ ಸಿಎ| ವಿಶ್ವನಾಥ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಮಹಿಳಾ ಕಾರ್ಯಾಧ್ಯಕ್ಷೆ ಸರೋಜ ಶೆಟ್ಟಿ, ಎಂ.ಡಿ ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ಸುಧಾಕರ್ ಎಸ್.ಹೆಗ್ಡೆ, ಐಕಳ ಹರೀಶ್ ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಜಯರಾಮ ಎನ್.ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಚೆಲ್ಲಡ್ಕ ಕುಸುಮೋಧರ ಶೆಟ್ಟಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಕುರ್ಲಾ ದಿವಾಕರ್ ಶೆಟ್ಟಿ, ಮೋಹನ್ ಮಾರ್ನಾಡ್, ಇನ್ನಬಾಳಿಕ ನವೀನ್ ಶೆಟ್ಟಿ ಸೇರಿದಂತೆ ಮಹಾನಗರದಲ್ಲಿ ನ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here