Wednesday 1st, May 2024
canara news

ಬಂಟವಾಳದ ಬಂಟರ ಸಂಘ-ಆಲ್‍ಕಾರ್ಗೊ ಸಹಯೋಗದ ಮೇಘಾ ಶೈಕ್ಷಣಿಕ ವಿದ್ಯಾಥಿ೯ವೇತನ

Published On : 02 Oct 2017   |  Reported By : Ronida Mumbai


ಮಕ್ಕಳನ್ನು ಪ್ರಬುದ್ದ ನಾಗರಿಕರಾಗಿ ಬೆಳೆಸಿ : ನಿಟ್ಟೆ ವಿನಯ ಹೆಗ್ಡೆ
(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಅ.01: ವಿದ್ಯಾ  ಥಿ೯ ಜೀವನದಲ್ಲಿ ವಿದ್ಯೆಯನ್ನು ಕಲಿಯುವುದಷ್ಟೇ ಅಲ್ಲ, ಮಾನವತೆಯನ್ನು ಬೆಳೆಸಿಕೊಳ್ಳಿ, ದೇಶದ ಮಾರ್ಗದರ್ಶಕರಾಗಿ ಮುನ್ನಡೆಯಿರಿ. ಮಕ್ಕಳನ್ನು ಪ್ರಬುದ್ದ ನಾಗರಿಕರಾಗಿ ಬೆಳೆಯುವುದು ಇಂದು ಅಗತ್ಯ. ಭವಿಷ್ಯದ ತಾಯಂದಿರಾಗಿರುವ ಇಂದಿನ ವಿದ್ಯಾಥಿರ್üನಿಯರು, ಇತರರಲ್ಲೂ ಒಳ್ಳೆಯತನವನ್ನು ಕಾಣುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ನಿಟ್ಟೆ ವಿನಯ ಹೆಗ್ಡೆ ನುಡಿದರು.

ಕರ್ನಾಟಕ ರಾಜ್ಯದಲ್ಲಿನ ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿರುವ ಬಂಟವಾಳದ ಬಂಟರ ಸಂಘವು ಮುಂಬಯಿ ಅಲ್ಲಿನ ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಶಶಿಕಿರಣ್ ಶೆಟ್ಟಿ ಬಂಟವಾಳ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಆರತಿ ಶಶಿಕಿರಣ್ ಶೆಟ್ಟಿ ಸಹಯೋಗದೊಂದಿಗೆ ಇಂದಿಲ್ಲಿ ಭಾನುವಾರ ಪೂರ್ವಾಹ್ನ ತುಂಬೆ ವಳವೂರು ಇಲ್ಲಿನ ಬಂಟರ ಸಂಘ ಬಂಟವಾಳ ತಾಲೂಕು ಇದರ ಬೆಳ್ಳೂರು ಪರಾರಿ ಆರ್.ಎನ್ ಶೆಟ್ಟಿ ಸಭಾಗೃಹದಲ್ಲಿ ಬಂಟರ ಸಂಘದ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ ಆಯೋಜಿಸಿದ ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿದ್ದು ವಿನಯ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ, ಮುಂಬಯಿ ಅಲ್ಲಿನ ಕೈಗಾರಿಕೋದ್ಯಮಿ, ಹೆಸರಾಂತ ಸಮಾಜ ಸೇವಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗೌರವ ಅತಿಥಿsಗಳಾಗಿ ಆಲ್‍ಕಾರ್ಗೊ ಸಂಸ್ಥೆಯ ಸಿಎಸ್‍ಆರ್ ಸಲಹಾದಾರ, ಬೃಹನ್ಮುಂಬಯಿಯ ಮಾಜಿ ಪೆÇೀಲಿಸ್ ಆಯುಕ್ತ ಕೆ.ಎಲ್ ಪ್ರಸಾದ್, ಸ್ಯಾಂಡಲ್‍ವುಡ್ ಸಂಗೀತ ನಿರ್ದೇಶಕ ಗುರುಕಿರಣ್ ಉಪಸ್ಥಿತರಿದ್ದು ಬಂಟ ಸಹಿತ ಎಲ್ಲಾ ಜಾತಿಧರ್ಮ, ಸಮುದಾಯಗಳ ಸುಮಾರು 1,500 ವಿದ್ಯಾಥಿರ್üಗಳಿಗೆ ಸುಮಾರು 30ಲಕ್ಷ ಮೊತ್ತದ ಶೈಕ್ಷಣಿಕ ದೇಣಿಗೆ ವಿತರಿಸಿ ಅಭಿನಂದಿಸಿದರು.

ಕೆ.ಎಲ್ ಪ್ರಸಾದ್ ಮಾತನಾಡಿ ಸ್ತ್ರೀಶಿಕ್ಷಣ ಕಡ್ಡಾಯವಾಗಬೇಕು. ಮಹಿಳೆಯೊಬ್ಬಳು ಶಿಕ್ಷಣ ಪಡೆದಾಗ ಇಡೀ ಕುಟುಂಬ ಶೈಕ್ಷಣಿಕ ಅರ್ಹತೆ ಪಡೆಯುತ್ತದೆ. ಹೆತ್ತವರನ್ನು ದೇವರೆಂದು ಹೇಳುವ ನಮ್ಮ ಧರ್ಮದ ತಿರುಳು ಸರ್ವಶ್ರೇಷ್ಟವಾಗಿದೆ. ವೃದ್ದರನ್ನು ಪ್ರೀತಿಸಿ ಗೌರವಿಸಿ, ಅವರ ಅನುಭವ ದೊಡ್ಡದು. ವಿದ್ಯಾಥಿರ್üಗಳು ಮಾದಕ ದ್ರವ್ಯದ ವ್ಯಸನ ಬಲಿಯಾಗದೆ ಮತ್ತು ವಿಶೇಷವಾಗಿ ಅದಷ್ಟು ಮೊಬಾಯ್ಲ್ ಮುಕ್ತರಾಗಿ ಸುಂದರ ಸಮಾಜ ಕಟ್ಟಿಕೊಳ್ಳಿ ಎಂದು ಹಾರೈಸಿದರು.

ಗುರುಕಿರಣ್ ಮಾತನಾಡಿ ಅರ್ಹ ವಿದ್ಯಾರ್ಥಿಗಳಿಗೆ ಇನ್ನಷ್ಟು ಶಿಕ್ಷಣ ಪಡೆಯಲು ಸಹಕಾರಿಯಾಗಲಿ ಎಂದು ಪೆÇ್ರೀತ್ಸಾಹಿಸುವುದು ವಿದ್ಯಾಥಿರ್üವೇತನ ನೀಡುವ ಹಿಂದಿರುವ ಉದ್ದೇಶ. ಎಲ್ಲಾ ಧರ್ಮಿಯ ವಿದ್ಯಾಥಿರ್üಗಳನ್ನು ಸೇರಿಸಿ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜವಾದ ಜಾತ್ಯಾತೀತತೆ. ಬಂಟವಾಳದ ಬಂಟರ ಸಂಘದ ಕಟ್ಟಡವನ್ನು ಕನಿಷ್ಟ ಅವಧಿಯಲ್ಲಿ ನಿರ್ಮಾಣ ಮಾಡಿರುವುದು ವಿವೇಕ್ ಶೆಟ್ಟಿ ಮತ್ತು ಬಳಗದ ಸಾಧನೆಯಾಗಿದೆ. ಇತರೆಲ್ಲಾ ಬಂಟ ಸಂಘಗಳಿಗೆ ಇದೊಂದೇ ಮಾದರಿ ಆಗುವುದು ಎಂದರು.

ನಗ್ರಿಗುತ್ತು ವಿವೇಕ್ ಅಧ್ಯಕ್ಷೀಯ ಭಾಷಣಗೈದು ಮುಂದಿನ ಹಂತದಲ್ಲಿ ಬಂಟರ ಸಂಘವು ತಾಲೂಕಿನ ಕನಿಷ್ಠ 100 ಮಕ್ಕಳ ಸಂಪೂರ್ಣ ಶೈಕ್ಷಣಿಕ ಹೊಣೆಯನ್ನು ಸ್ವೀಕರಿಸುವ ಉದ್ದೇಶ ಹೊಂದಿದೆ. ಸಮಾಜದಲ್ಲಿ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ನೀಡುವ ಸಹಾಯವೇ ಅತ್ಯಂತ ಶ್ರೇಷ್ಟವಾದ ಸಹಕಾರ ಎನ್ನುತ್ತ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಆಲ್‍ಕಾರ್ಗೋ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ನಿರಲತನ್ ಶೆಂಡೆ, ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪ್ರಮುಖರಾದ ಐತಪ್ಪ ಆಳ್ವ, ಸಂಘದ ಕೋಶಾಧಿಕಾರಿ ಜಗಧೀಶ್ ಶೆಟ್ಟಿ ಇರಾ, ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು ಮತ್ತಿತರÀ ಗಣ್ಯರು ಸೇರಿದಂತೆ ಸುಮಾರು 1500 ಜನತೆ ಉಪಸ್ಥಿತರಿದ್ದು ಅವರ ಮಕ್ಕಳು ವೇತನ ಪಡೆದರು.

ಕು| ತೃಪತಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಫಲಾನುಭವಿ ವಿದ್ಯಾಥಿರ್üಗಳ ಪಟ್ಟಿ ವಾಚಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ನ್ಯಾ| ಆಶಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ (ರಂಗೋಲಿ) ವಂದನಾರ್ಪಣೆಗೈದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here