Wednesday 1st, May 2024
canara news

ಅಕ್ಟೋಬರ್ ಮಾಸ್ಯಂತಕ್ಕೆ `ಅಂಬರ್ ಕ್ಯಾಟರರ್ಸ್' ಸಿನೇಮಾ ತೆರೆಗೆ

Published On : 03 Oct 2017   |  Reported By : Ronida Mumbai


ಅಭಯಾಶ್ರಮದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅ.01: ತುಳುನಾಡಿನ ಜನತೆಯ ಬಹು ನಿರೀಕ್ಷೆಯ ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯ `ಅಂಬರ್ ಕ್ಯಾಟರರ್ಸ್' ತುಳು ಸಿನೇಮಾ ಇದೇ ಅಕ್ಟೋಬರ್ ತೃತೀಯ ವಾರದಲ್ಲಿ ತೆರೆ ಕಾಣಲಿದೆ ಎಂದು ಮುಂಬಯಿ ಮಹಾನಗರದಲ್ಲಿನ ಧೀಮಂತ ನಾಯಕ, ಕೊಡುಗೈದಾನಿ, ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ, ನಾಗೇಶ್ವರ ಸಿನಿ ಕಂಬೈನ್ಸ್‍ನ ನಿರ್ದೇಶಕ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಮಂಗಳೂರು ತೊಕ್ಕೊಟ್ಟು ಇಲ್ಲಿನ ಅಸೈಗೋಳಿ ಅಭಯಾಶ್ರಮದಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ `ಅಂಬರ್ ಕ್ಯಾಟರರ್ಸ್' ಸಿನೇಮಾ ಬಗ್ಗೆ ಸುರೇಶ್ ಭಂಡಾರಿ ಮಾಹಿತಿ ನೀಡಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಇದೀಗ ಸೆನ್ಸಾರ್ ಬೋರ್ಡ್‍ನಲ್ಲಿದೆ. ಬಹುವೆಚ್ಚದ ದುಬಾರಿ ತುಳು ಚಲನಚಿತ್ರ ಇದಾಗಿದ್ದು, ಹಿಂದಿ ಚಲನಚಿತ್ರದ ಶೈಲಿಯಲ್ಲಿ ಸಂಪೂರ್ಣವಾಗಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ತುಳು ಚಲನಚಿತ್ರದ ಇತಿಹಾಸದಲ್ಲೇ ಇದೊಂದು ಪ್ರಥಮ ಪ್ರಯತ್ನ. ಪರಶುರಾಮನ ಸೃಷ್ಠಿಯ ತುಳುನಾಡಿನ ಪ್ರಾದೇಶಿಕ ಭಾಷೆ ಅದಕ್ಕಿಂತಲೂ ಮೊದಲಾಗಿ ನನ್ನ ಮಾತೃಭಾಷೆಯಲ್ಲಿ ಸಿನೇಮಾವೊದಂದನ್ನು ನಿರ್ಮಿಸುವ ಕನಸು ನನ್ನಲ್ಲಿತ್ತು.
ಯುವೋದ್ಯಮಿ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದನಾಗಿರುವ ನನ್ನ ಸುಪುತ್ರ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಈ ಚಿತ್ರದ ನಾಯಕನಟನಾಗಿ ಮತ್ತು ಹೆಸರಾಂತ ಯುವಕಲಾವಿದೆ ಸಿಂಧು ಲೋಕನಾಥ್ ನಾಯಕಿನಟಿಯಾಗಿ ಅಭಿನಯಿಸಿದ ಅಭಿಮಾನ ನನಗಿದೆ ಎಂದು ಸುರೇಶ್ ಭಂಡಾರಿ ತಿಳಿಸಿದರು.

ಜೈಪ್ರಸಾದ್ ಬಜಾಲ್ ರಚಿಸಿ, ನಿರ್ದೇಶನ ಹಾಗೂ ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದು ಚಿತ್ರೀಕರಣ ಪೂರ್ಣಗೊಂಡು ಚಿತ್ರವು ಅತ್ಯುತ್ತಮವಾಗಿ ಮೂಡಿ ಬಂದಿದೆ. ತುಳು ಭಾಷೆ ಬೆಳೆಯುತ್ತಿದೆ. ತುಳು ಚಲನಚಿತ್ರಗಳಿಂದ ಭಾಷೆಯ ಮೇಲಿನ ಪ್ರೀತಿಯೂ ಹೆಚ್ಚಾಗುವುದರ ಜತೆಗೆ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಅನ್ನುವ ಉದ್ದೇಶದೊಂದಿಗೆ ಚಿತ್ರ ನಿರ್ಮಿಸಲಾಗಿದೆ ಎಂದೂ ಭಂಡಾರಿ ತಿಳಿಸಿದರು.

ಚಿತ್ರದ ನಿರ್ದೇಶಕ ಜೈಪ್ರಸಾದ್ ಬಜಾಲ್ ಮಾತನಾಡಿ ಚಿತ್ರದಲ್ಲಿ ಕನ್ನಡದ ದಿಗ್ಗಜರು, ಕರ್ನಾಟಕದ ಹಿರಿಯ ಅಭಿನೇತರರಾದ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಸುಮಿತ್ರಾ ಪಂಡಿತ್, ಪವನ್ ಕಲ್ಯಾಣ್, ತುಳು ಚಲನಚಿತ್ರಗಳ ಸೂಪರ್‍ಸ್ಟಾರ್‍ಗಳಾದ ನವೀನ್ ಡಿ.ಪಡೀಲ್, ಸುಂದರ್ ರೈ ಮಂದಾರ, ಭೋಜರಾಜ್ ವಾಮಂಜೂರು ಅಭಿನಯಿಸಿರುವರು. ಅವರ ಧ್ವನಿಯ ಡಬ್ಬಿಂಗ್ ಕೂಡಾ ಮಾಡಲಾಗಿದೆ ಎಂದರು.

ನಾಯಕ ನಟ ಸೌರಭ್ ಸುರೇಶ್ ಭಂಡಾರಿ ಮಾತನಾಡಿ ಚಲನಚಿತ್ರರಂಗದಲ್ಲಿ ಇದು ನನ್ನ ಮೊತ್ತಮೊದಲ ಹೆಜ್ಜೆ. ಆದರೂ ಎಲ್ಲೂ ಹಿಂಜಿರಿಯದೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ಅಭಿಮಾನ ನನಗಿದೆ. ಇನ್ನುಳಿದದ್ದು ಪಾತ್ರ ಚಿತ್ರವೀಕ್ಷಕರದ್ದು. ಅವರೆಲ್ಲರೂ ಚಿತ್ರವನ್ನು ನೋಡಿ ಪೆÇ್ರೀತ್ಸಹಿಸುವ ಭರವಸೆ ನನಗಿದೆ ಎಂದರು.

ವಿಭಿನ್ನ ಹಾಡುಗಳು:
ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ನಿರ್ದೇಶನದಲ್ಲಿ ನಾಲ್ಕು ಹಾಡುಗಳು ಚಿತ್ರದಲ್ಲಿವೆ. ನಾಲ್ಕೂ ಹಾಡುಗಳು ವಿಭಿನ್ನವಾಗಿದ್ದು ವಿಜಯಕುಮಾರ್ ಕೋಡಿಯಾಲ್‍ಬೈಲ್ ಸಾಹಿತ್ಯದ `ರಾಮಧೂತ ಹನುಮಂತ' ಹಾಡನ್ನು ಹೆಸರಂತ ಗಾಯಕ ಶಂಕರ ಮಹದೇವನ್, `ಕನಟೊಂಜಿ ಕನನೇ' ಹಾಡನ್ನು ನಕುಲ್ ಅಭ್ಯಂಕರ್ ಮತ್ತು ಅನುರಾಧ ಭಟ್ ಹಾಡಿದ್ದು, `ಡೆನ್ನ ಡೆನ್ನನಾ' ಹಾಡನ್ನು ಮಣಿಕಾಂತ್ ಕದ್ರಿ ಮತ್ತು ರವೀಂದ್ರನಾಥ್ ಹಾಗೂ `ಲಿಂಗುನ ಪುಳ್ಳಿ' ಹಾಡನ್ನು ವಿಸ್ಮಯ ವಿನಾಯಕ್ ಬಹಳ ಮನಾಕರ್ಷಣೆಯಾಗಿ ಹಾಡಿದ್ದಾರೆ. ಹರೀಶ್ ಕಟಪಾಡಿ, ಶ್ರೇಯಸ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here