Friday 3rd, May 2024
canara news

ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪುನರ್ ನಿರ್ಮಾಣ-ಶಿಲಾ ಪೂಜೆ

Published On : 20 Nov 2017   |  Reported By : Ronida Mumbai


ಗ್ರಾಮ ಸುಭಿಕ್ಷೆಯ ಜತೆ ಜನತೆಯ ಸಮೃದ್ಧಿ : ಸುಬ್ರಹ್ಮಣ್ಯಶ್ರೀ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.19: ಗ್ರಾಮದ ದೇವಸ್ಥಾನವನ್ನು ಸಮೃದ್ಧಿಗೊಳಿಸುವುದರಿಂದ ಗ್ರಾಮ ಸಮೃದ್ಧಿಯಾಗುವುದು. ಶ್ರದ್ದಾ ಭಕ್ತಿಯಿಂದ ನಿತ್ಯ ಪೂಜೆ ಸಲ್ಲಿಸುವುದರಿಂದ ಗ್ರಾಮ ಸುಭಿಕ್ಷೆಯ ಜತೆ ನಮಗೂ ದೇವರ ಅನುಗ್ರಹ ಫಲಿಸುವುದು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಶ್ರೀಪಾದ ಸ್ವಾಮೀಜಿ ಹೇಳಿದರು.

ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಪದವನ ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 2 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ನಿರ್ಮಾಣ ಗೊಳ್ಳುತ್ತಿರುವ ಪ್ರಯುಕ್ತ ರವಿವಾರ ಶ್ರೀ ಕ್ಷೇತ್ರದಲ್ಲಿ ಜರಗಿದ ಶಿಲಾಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆ ಉದ್ಘಾಟಿಸಿ ಸುಬ್ರಹ್ಮಣ್ಯಶ್ರೀ ಆಶೀರ್ವಚನ ನೀಡಿದರು.

ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಈ ಹಿಂದೆ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಢ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರಿಗೂ ತೊಡಗಿಸಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ಇದರಿಂದಾಗಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ. ಪ್ರತಿಯೊಬ್ಬರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗೂಡಿ ನಮ್ಮ ಜೀವಿತಾವಧಿಯಲ್ಲಿ ಸಿಗುವ ಮಹತ್ತರ ಅವಕಾಶ ಎಂಬಂತೆ ಧಾರ್ಮಿಕತೆಯಲ್ಲಿ ಶ್ರಮಿಸಿದಾಗ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಶಿಲಾ ಪೂಜಾ ಮೆರವಣಿಗೆಯನ್ನು ಉದ್ಘಾಟಿಸಿದ ಅಳದಂಗಡಿ ಅರಮನೆ ತಿಮ್ಮಣ್ಣ ರಸರಾದ ಡಾ| ಪದ್ಮಪ್ರಸಾದ್ ಅಜಿಲ ಅವರು ಮಾತನಾಡಿ, ಜೀರ್ಣೋದ್ಧಾರ ಕಾರ್ಯದಂತಹ ಸತ್ಕಾರ್ಯಕ್ಕೆ ಜನ ಬೆಂಬಲ ದೊರಕುವುದು. ಜಾತಿ, ಪಕ್ಷ ರಾಜಕೀಯ ರಹಿತರಾಗಿ ದೇವಸ್ಥಾನದ ಕಾರ್ಯಗಳಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿ ಕೊಂಡಾಗ ಕಾರ್ಯ ಸಫಲತೆಯಾಗುವುದು ಎಂದು ಹೇಳಿದರು.

ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಮುಂಬಯಿ ಉದ್ಯಮಿಗಳಾದ ಚೆಲ್ಲಡ್ಕ ಕೆ.ಡಿ ಶೆಟ್ಟಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಉದ್ಯಮಿ ಯಾದವ ಕೋಟ್ಯಾನ್, ದಿನಕರ ಪಕ್ಕಳ, ವಸಂತ ಶೆಟ್ಟಿ ಅರ್ಕೆದೊಟ್ಟು, ಶ್ರೀ ಕ್ಷೇ. ಧ. ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಬು ಪೂಜಾರಿ ಕೌಡಾಡಿಗುತ್ತು, ಭೊಜರಾಜ ಶೆಟ್ಟಿ ಕೊರಗಟ್ಟೆ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಕಾರ್ಯಾಧ್ಯಕ್ಷ ಸುಲೋಚನಾ ಜಿ.ಕೆ. ಭಟ್, ಪ್ರಕಾಶ್ ರಾವ್, ಬೆಂಗಳೂರು ಸಮಿತಿ ಅಧ್ಯಕ್ಷ ಮೋಹನ್‍ದಾಸ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ, ವಿವಿಧ ಗ್ರಾಮ ಸಮಿತಿ, ಮುಂಬಯಿ, ಬೆಂಗಳೂರು ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಂಬÉೈ ಸಮಿತಿ ಪ್ರಥಮ ಕಾಣಿಕೆ ನಿಧಿಯನ್ನು ಮುಂಬಯಿ ಸಮಿತಿ ಸದಸ್ಯರು ಹಸ್ತಾಂತರಿಸಿದರು. ಅಂಗಣ ವಿಸ್ತರಣೆ ಹಾಗೂ ಸಮತಟ್ಟು ಗೊಳಿಸಿದ ದಾನಿ ಯಾದವ ಕೋಟ್ಯಾನ್ ಅವರನ್ನು ಅತಿಥಿüಗಳು ಸಮ್ಮಾನಿಸಿದರು.

ಮುಂಬಯಿ ಸಮಿತಿ ಅಧ್ಯಕ್ಷ ಅಶೋಕ್ ಪಕ್ಕಳ ಸ್ವಾಗತಿಸಿ, ಪ್ರಾಸ್ತಾವನೆಗೈದÀರು. ರಂಗ ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಯೋಗೀಶ್ ಕಲಸಡ್ಕ ಅಜ್ಜಿಬೆಟ್ಟು ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here