Friday 3rd, May 2024
canara news

‘ಸಹಕಾರಿ ಸಂಘಗಳು ದುರ್ಬಲರ ಅಭಿವ್ರದ್ದಿಗೆ ಸಹಕಾರಿಗಳಾಗಲಿ’

Published On : 21 Nov 2017   |  Reported By : Bernard J Costa


ರೋಜರಿ ಸೊಸೈಟಿ ಬೆಳ್ಳಿ ಸಂಭ್ರಮದಲ್ಲಿ ಬಿಷಪ್ ಡಾ|ಜೆರಾಲ್ಡ್ ಐಸಾಕ್ ಲೋಬೊ

ಕುಂದಾಪುರ,ನ.20: ‘ಸಹಕಾರಿ ಸಂಘಗಳು ಜನರ ಏಳಿಗೆಗಾಗಿ, ಶ್ರಮಿಸುತ್ತಲೆ ಬಂದಿವೆ, ಇಂತಹ ಸಂಘಗಳು ಸಮಾಜದ ಅತೀ ದುರ್ಬಲದವರನ್ನು ಎಳಿಗೆಯತ್ತ ಸಾಗಿಸುವ ಹೊಣೆಗಾರಿಕೆಯನ್ನು ಅವರು ತೆಗೆದುಕೊಳ್ಳ ಬೇಕು. ಸಂಘ ಗಳಿಸಿದ ಲಾಭದಲ್ಲಿ ಬಡವರಿಗೆ ಸ್ವಲ್ಪ ವಿನಿಯೊಗಿಸ ಬೇಕು, ಜನರಿಂದ ಜನರಿಗೆ ಎಂಬ ಧೋರಣೆಯಲ್ಲಿ ನೆಡೆದು ಈ ಸಂಸ್ಥೆ ಮೇಲತ್ತರಕ್ಕೆ ಬೆಳೆದು, ಸಮಾಜದ ಎಳಿಗೆಗೆ ಕಾರಣವಾಗಲೆಂದು’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಸಂದೇಶ ನೀಡಿದರು.

 

ಆರ್.ಎನ್ ಶೆಟ್ಟಿ ಕಲ್ಯಾಣ ಭವನದಲ್ಲಿ ಭಾನುವಾರ ನೆಡೆದ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬದ ಸಂಭ್ರಮದ ಅಧ್ಯಕ್ಷೆ ವಹಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಸಂದೇಶ ಅವರು ಸಂದೇಶ ನೀಡಿದರು. ಇದಕ್ಕೆ ಮುನ್ನಾ ಅವರು ಕುಂದಾಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಹಾಬಲಿದಾದವನ್ನು ಅರ್ಪಿಸುವ ಮೂಲಕ ರಜತ ಮಹೋತ್ಸವಕ್ಕೆ ಚಾಲನೆ ನೀಡಿದರು. ರೋಜರಿ ಸೊಸೈಟಿಯ ಮಾಜಿ ಸಲಹೆಗಾರ ವಂ|ಫಾ|ಅಂಟೋನಿ ಲೋಬೊ ಪವಿತ್ರ ಬಲಿದಾನದಲ್ಲಿ ಭಾಗವಹಿಸಿದ ಶುಭ ಸಂದೇಶ ನೀಡಿದರು.

ಕುಂದಾಪುರ ವಲಯ ಪ್ರಧಾನ ವಂ|ಫಾ|ಅನಿಲ್ ಡಿಸೋಜಾ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚನವನ್ನು ನೀಡಿದರು. ಸಹಕಾರಿ ಸಂಘಗಳ ದಿಗ್ಗಜ ರಾಜ್ಯ ಸಹಕಾರ ಮಹಾ ಮಂಡಳ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಮ್.ಎನ್. ರಾಜೇಂದ್ರ ಕುಮಾರ್ ಸನ್ಮಾವನ್ನು ಸ್ವೀಕರಿಸಿ ‘ನಮ್ಮ ನಾಡಿನಲ್ಲಿ ಜನರಿಗೆ ಉತ್ತಮವಾದ ಸಹಕಾರ ಸಿಗುವುದಾದರೆ ಅದು ಸಹಕಾರಿ ಸಂಘಗಳಿಂದ ಮಾತ್ರ. ಗ್ರಾಹಕನಿಗೆ ಯಾವತ್ತು ಅಲೆದಾಡಿಸಿ ಸಾಲ ಕೋಡ ಬೇಡಿ, ಹಾಗೆಯೆ ಸಾಲ ಅನ್ನಬೇಡಿ ಅದು ಸಹಕಾರ ಎಂದು ತಿಳಿಯ ಬೇಕು, ಈ ಕ್ರೈಸ್ತ ಸಮಾಜ ಶಾಂತಿ ಯುತವಾದ ಸಮಾಜ, ಶಿಕ್ಷಣ ಮತ್ತು ಆರೋಗ್ಯ ಈ ಸೇವೆಗಳಲ್ಲಿ ಈ ಸಮಾಜ ಎಲ್ಲರಿಕ್ಕಿಂತ ಮುಂದಿದೆ, ಹಾಗೆ ಸಹಕಾರಿ ಕ್ಷೇತ್ರದಲ್ಲಿಯು ಇದು ಅತ್ಯುನತ್ತ ಮಟ್ಟಕ್ಕೆ ಬೆಳೆಯಲೆಂದು’ ಎಂದು ಹಾರೈಸಿ ಅವರು ಬಿಷಪ್ ಮತ್ತು ಫಾ|ಅನಿಲರನ್ನು ಅವರು ಸನ್ಮಾನಿಸಿದರು.
ಉಡುಪಿ ಜಿಲ್ಲಾ ಸಹಕಾರಿಗಳ ಸಂಘದ ಉಪನಿಂಭದಕ ಪ್ರವೀಣ್ ಸಿ.ನಾಯಕ್, ಕುಂದಾಪುರ ಸಹಕಾರಿಗಳ ಸಂಘದ ಸಹಾಯಕ ಉಪನಿಂಭದಕಿ ಚಂದ್ರಪ್ರತಿಮಾ, ಸೊಸೈಟಿಯ ಉಪಾಧ್ಯಕ್ಷ, ಜಾನ್ ಮಿನೇಜಸ್, ಕಾರ್ಯನಿರ್ವಹಣ ಅಧಿಕಾರಿ ಫಾಸ್ಕಲ್ ಡಿಸೋಜಾ,ಸಹಾಯಕ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಪುಟಾರ್ಡೊ,ವಲಯ ಕಥೊಲಿಕ್ ಸಭಾದ ಅಧ್ಯಕ್ಷ ಜಾಕೋಬ್ ಡಿಸೋಜಾ, ನೀರ್ದೇಕರಾದ ಫಿಲಿಪ್ ಡಿಕೋಸ್ತಾ, ಕಿರಣ್ ಲೋಬೊ, ವಿನೋದ್ ಕ್ರಾಸ್ಟಾ, ಮರ್ಟಿನ್ ಡಾಯಸ್, ಶಾಂತಿ ಕರ್ವಾಲ್ಲೊ, ಜೆರಾಲ್ಡ್ ಕ್ರಾಸ್ತಾ, ಸ್ಟ್ಯಾನಿ ಡಿಸೋಜಾ, ಡಾಯ್ನಾ ಆಲ್ಮೇಡಾ ಉಪಸ್ಥಿತರಿದ್ದರು.

ಸಂಘದ ಪ್ರಥಮ ಸದಸ್ಯೆ ಲೀನಾ ಡಿಸೋಜಾ, ಸೊಸೈಟಿ ಮಾಜಿ ಮತ್ತು ಹಾಲಿ ಅಧ್ಯಕ್ಷರು, ನಿರ್ದೇಶಕರನ್ನು ಸೊಸೈಟಿ ಸ್ಥಾಪಕರ ಪರವಾಗಿ, ಹಾಗೂ ಸೊಸೈಟಿ ಸ್ಥಾಪನೆ ಹಾಗೂ ಎಳಿಗೆಗಾಗಿ ಶ್ರಮಿಸಿದ ಹಲವರನ್ನು, ಸನ್ಮಾನಿಸಲಾಯಿತು, ಸೊಸೈಟಿ ವತಿಯಿಂದ ರೋಜರಿ ಇಗರ್ಜಿಗೆ ಕಂಪ್ಯುಟರನ್ನು ಕೊಡುಗೆಯಾಗಿ ನೀಡಲಾಯಿತು.

ಸಂಘದ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಸ್ವಾಗತಿಸಿದರು, ಕಿರಣ್ ಲೋಬೊ ವಂದಿಸಿದರು. ಎಲ್.ಜೆ.ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here