Saturday 4th, May 2024
canara news

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ : ಸ್ವಸ್ತಿಕ್ ಪ್ರೊ ಕಬಡ್ಡಿ ಸಮಾರೋಪ

Published On : 21 Nov 2017   |  Reported By : Ronida Mumbai


ಫ್ರೆಂಡ್ಸ್ ದೇವಿಪುರ ತಲಪಾಡಿ ಹಾಗೂ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಪ್ರಥಮ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಬಂಟ್ವಾಳ ತಾಲೂಕಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸಾರಥ್ಯ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಸಹಭಾಗಿತ್ವ ಹಾಗೂ ಮುಂಬಯಿ ಉದ್ಯಮಿ ಸುಂದರರಾಜ್ ಹೆಗ್ಡೆ ಇವರ ಸಹಯೋಗದೊಂದಿಗೆ ನಡೆಸಲ್ಪಟ್ಟ ದ್ವಿದಿನಗಳ 34ನೇ ವಾರ್ಷಿಕ ಹೊನಲು ಬೆಳಕಿನ ಪುರುಷರ ಮುಕ್ತ ವಿಭಾಗ ಹಾಗೂ ಮಹಿಳಾ ಮುಕ್ತ ವಿಭಾಗದ ಸ್ವಸ್ತಿಕ್ ಪೆÇ್ರ ಕಬಡ್ಡಿ ಪಂದ್ಯಾಟ ಹಾಗೂ 60 ಕೆ.ಜಿ ವಿಭಾಗದ ಪಂದ್ಯಾಟ ಇಂದಿಲ್ಲಿ ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸಮಾಪನ ಗೊಂಡಿತು.

ಪೆÇ್ರ ಕಬಡ್ಡಿ ಪಂದ್ಯಾಟದಲ್ಲಿ 60 ಕೆ.ಜಿ. ವಿಭಾಗದಲ್ಲಿ ಫ್ರೆಂಡ್ಸ್ ದೇವಿಪುರ ತಲಪಾಡಿ ಹಾಗೂ ಮುಕ್ತ ವಿಭಾಗದಲ್ಲಿ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಪ್ರಥಮ ಸ್ಥಾನಕ್ಕೆ ಪಾತ್ರವಾಯಿತು. ಸಮಾರೋಪದಲ್ಲಿ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಉಖ್ಯ ಅತಿಥಿüಯಾಗಿದ್ದು, ಸುಂದರರಾಜ್ ಹೆಗ್ಡೆ, ಹಾಪ್ ಕಾಮ್ಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪಿಲಾತಬೆಟ್ಟು ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಸುಂದರ ನಾಯ್ಕ, ಜಿಲ್ಲಾ ಪಂ.ಚಾಯತ್ ಸದಸ್ಯ ಶೇಖರ ಕುಕ್ಕೇಡಿ ಹಾಗೂ ಕ್ಲಬ್‍ನ ಪದಾಧಿಕಾರಿಗ ಪಾರಿತೋಷಕ ವಿತರಿಸಿದರು.

ಕಾರ್ಯಕ್ರಮದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಎಂ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ ಮಂಜಲಪಲ್ಕೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತಿತರ ಪದಾಶಿಕಾರಿಗಳು, ನೂರಾರು ಕ್ರೀಡಾಭಿಮಾನಿ-ಕ್ರೀಡಾಸಕ್ತರು ಉಪಸ್ಥಿತರಿದ್ದು ಶುಭಾರೈಸಿದರು.

ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು. ತುಂಗಪ್ಪ ಬಂಗೇರ ಪ್ರಸ್ತಾವನೆಗೈದರು. ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ. ಕಾರ್ಯಕ್ರಮ ನಿರೂಪಿಸಿದರು. ಜಯರಾಜ್ ಅತ್ತಾಜೆ ಅಭಾರ ಮನ್ನಿಸಿದರು.

ಫಲಿತಾಂಶ: 60 ಕೆ.ಜಿ. ವಿಭಾಗ-ದ್ವಿತೀಯ: ಕೆಎಫ್‍ಡಿಸಿ ಸುಳ್ಯ, ತೃತೀಯ: ವೆಲ್‍ಕಂ ತೊಕ್ಕೊಟ್ಟು, ಚತುರ್ಥ: ಬ್ಲೂ ಗೈಸ್ ವಾಮದಪದವು, ಮುಕ್ತ ವಿಭಾಗ- ದ್ವಿತೀಯ: ಕೋಟಿ ಚೆನ್ನಯ ಮರಿಪಾದೆ, ತೃತೀಯ: ವೈಸಿಎಸ್ ಮುಂಡಾಜೆ, ಚತುರ್ಥ: ಬ್ರದರ್ಸ್ ಕಂದಲ್. ಮಹಿಳಾ ವಿಭಾಗ-ಪ್ರಥಮ: ಸತೀಶ್ ಪೈ ದಯಾನಂದ ಪೈ ಮೆಮೋರಿಯಲ್ ಕಾಲೇಜು, ಕಾರ್‍ಸ್ಟ್ರೀಟ್, ದ್ವಿತೀಯ: ಜಿಎಫ್‍ಜಿಸಿ ಕಾರ್‍ಸ್ಟ್ರೀಟ್, ಜೂನಿಯರ್ ವಿಭಾಗ ಪ್ರಥಮ: ಸರಕಾರಿ ಪ್ರೌಢ ಶಾಲೆ ಕೊಕ್ಕಡ, ದ್ವಿತೀಯ: ಸರಕಾರಿ ಪ್ರೌಢ ಶಾಲೆ ವಾಮದಪದವು. ತೃತೀಯ: ಶ್ರೀ ರಾಮ ಸರಕಾರಿ ಪ್ರೌಢ ಶಾಲೆ ಕಲ್ಲಡ್ಕ, ಚತುರ್ಥ: ಬುರೂಜ್ ಆಂಗ್ಲ ಮಾಧ್ಯಮ ಶಾಲೆ. ವೈಯಕ್ತಿಕ: ಕಲಂದರ್ (ಮರಿಪಾದೆ), ಅನೂಪ್ (ವರುಣ್), ವಿಶ್ವರಾಜ್ (ವರುಣ್). ಸುಜಿತ್ (ತಲಪಾಡಿ), ಪ್ರಣಾಮ್ (ಸುಳ್ಯ), ರೋಹಿತ್ ಸಾಠೆ (ತಲಪಾಡಿ).




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here