Saturday 4th, May 2024
canara news

ಕಡಲಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ;ವಿಜೇತರಿಗೆ ೫೦ ಸಾವಿರ ನಗದು ಬಹುಮಾನ

Published On : 22 Nov 2017   |  Reported By : Canaranews network


ಮಂಗಳೂರು: ಎನ್ಎಂಪಿಟಿ ಹಾಗೂ ಪಣಂಬೂರು ಬೀಚ್ ಪ್ರಾಜೆಕ್ಟ್ ನೇತೃತ್ವದಲ್ಲಿ ಕಡಲಿನ ನೀರಿನಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ. ಪಣಂಬೂರಿನ ಎನ್ಎಂಪಿಟಿ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ಡಿ. 24 ಹಾಗೂ 25ರಂದು ಸ್ಪರ್ಧೆ ಜರಗಲಿದೆ.

ಅಧಿಕ ತೂಕದ ಮೀನು ಸಿಕ್ಕಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಯ ನೆಲೆಯಲ್ಲಿ ಗಾಳದಲ್ಲಿ ಮೀನು ಹಿಡಿಯುವ ಸ್ಪರ್ಧೆ ಮಹತ್ವ ಪಡೆದಿದೆ. 2 ವರ್ಷಗಳ ಹಿಂದೆಯೇ ಇಂಥ ಯೋಜನೆ ಇತ್ತಾದರೂ ಜಿಲ್ಲಾಡಳಿತದ ಅನುಮತಿ ಲಭಿಸಿರಲಿಲ್ಲ. ಬಳಿಕ ಮಲ್ಪೆ ಬೀಚ್ನಲ್ಲಿ ಈ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧಿಗಳಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಕಲ್ಪಿಸುವುದಾಗಿ ಮನವರಿಕೆ ಮಾಡಿದ ಮೇಲೆ ಈ ಬಾರಿ ಜಿಲ್ಲಾಡಳಿತ ಸ್ಪರ್ಧೆಗೆ ಒಪ್ಪಿಗೆ ನೀಡಿದೆ.ಎನ್ಎಂಪಿಟಿ ಬ್ರೇಕ್ ವಾಟರ್ನ 1 ಕಿ.ಮೀ. ವ್ಯಾಪ್ತಿಯ ಬಂಡೆ ಕಲ್ಲಿನಲ್ಲಿ ಕುಳಿತು ಗಾಳ ಹಾಕಲು ಅವಕಾಶವಿದೆ.

20 ಜನರ ತಲಾ ಒಂದೊಂದು ತಂಡ ರಚಿಸಿ ತಲಾ 1 ಗಂಟೆಯ ಕಾಲಾವಕಾಶ ನೀಡಲಾಗುತ್ತದೆ. ಈ ಸಮಯದಲ್ಲಿ ಅತ್ಯಧಿಕ ತೂಕದ ಮೀನು ಹಿಡಿದವರಿಗೆ ಮೊದಲ ಬಹುಮಾನವಾಗಿ 50,000 ರೂ., ದ್ವಿತೀಯ ಪ್ರಶಸ್ತಿ 25,000 ರೂ. ನೀಡಲಾಗುತ್ತದೆ. ಹೆಚ್ಚು ಮೀನು ಹಿಡಿದವರ ಪೈಕಿ ಪ್ರಥಮ ಬಹುಮಾನ 10,000 ರೂ. ಹಾಗೂ ದ್ವಿತೀಯ ಬಹುಮಾನ 5,000 ರೂ. ನೀಡಲಾಗುತ್ತದೆ. ಎರಡು ದಿನಗಳ ಅವಧಿಯಲ್ಲಿ ಒಟ್ಟು 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here