Monday 29th, April 2024
canara news

ಬಸ್ಸಿನಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಮಹಿಳೆಯ ರಂಪಾಟ

Published On : 28 Nov 2017   |  Reported By : canaranews network


ಮಂಗಳೂರು: ಲೇಡಿಸ್ ಸೀಟ್ ನಲ್ಲಿ ಕುಳಿತಿರುವುದಕ್ಕೆ ಮಹಿಳೆಯೊಬ್ಬರು ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ಬಸ್ ನಲ್ಲಿ ಈ ಹೈಡ್ರಾಮ ನಡೆದಿದ್ದು ಯುವಕನೋರ್ವ ಸೀಟ್ ಇಲ್ಲದೆ ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಕೂತಿದ್ದ. ಮಹಿಳೆಯರು ನಿಂತುಕೊಂಡೇ ಇದ್ದರೂ ಯುವಕ ಮಾತ್ರ ಸೀಟ್ ಬಿಟ್ಟು ಎದ್ದೇಳಿಲ್ಲ.

ಇದನ್ನು ಕಂಡ ಮಹಿಳೆಯೊಬ್ಬರು ಯುವಕನ ವಿರುದ್ಧ ಆರ್ಭಟಿಸಿದ್ದಾರೆ. ಸೀಟು ಬಿಟ್ಟು ಕೊಡುವಂತೆ ಯುವಕನ ವಿರುದ್ದ ಕೂಗಾಡಿದ್ದಾರೆ.ಮಹಿಳೆಯರಿಗೆ ಮೀಸಲಿದ್ದ ಸೀಟನ್ನು ಬಿಟ್ಟು ಹಲವಾರು ಮಹಿಳೆಯರು ಇತರ ಸೀಟುಗಳಲ್ಲಿ ಕುಳಿತುಕೊಂಡಿದ್ದರು. ಅದನ್ನು ಪ್ರಶ್ನಿಸಿದ ಯುವಕ ತಾನು ಕುಳಿತ ಸೀಟಿನಿಂದ ಎದ್ದಿರಲಿಲ್ಲ.

ಇತರ ಸೀಟಿನಲ್ಲಿ ಕುಳಿತುಕೊಂಡ ಮಹಿಳೆಯರು ಸೀಟು ಬಿಟ್ಟು ಕೊಡುವಂತೆ ಯುವಕ ತಾಕೀತು ಮಾಡಿದ್ದಾನೆ. ಯುವಕನಿಗೆ ಬಸ್ಸಿನಲ್ಲಿದ್ದ ಇತರ ಪುರುಷರೂ ಸಾಥ್ ನೀಡಿದ್ದಾರೆ.ಈ ವೇಳೆ ಏಕಾಏಕಿಯಾಗಿ ರೌದ್ರಾವತಾರ ತೋರಿದ ಮಹಿಳೆಯ ವಿರುದ್ದ ಯುವಕನೂ ತಿರುಗಿಬಿದ್ದಿದ್ದು ಬಸ್ ನೊಳಗೆಯೇ ಇಬ್ಬರ ಕಚ್ಚಾಟ ನಡೆದಿದೆ.

ಈ ಸಂದರ್ಭ ಯುವಕನ ವಿರುದ್ದ ಕೋಪಗೊಂಡ ಮಹಿಳೆ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ್ದಾರೆ. ಸೀಟಿಗಾಗಿ ಮಹಿಳೆಯ ಹೈಡ್ರಾಮ ಕಂಡು ದಂಗಾದ ಯುವಕ ಕೊನೆಗೆ ಗತಿಯಿಲ್ಲದೆ ಸೀಟು ಬಿಟ್ಟು ಎದ್ದು ಹೋಗಿದ್ದಾನೆ.ಬಸ್ ನಲ್ಲಿದ್ದವರೆಲ್ಲಾ ಇಬ್ಬರ ರಂಪಾಟಕ್ಕೆ ಮೂಕ ಪ್ರೇಕ್ಷಕರಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೀಟಿಗಾಗಿ ನಡೆದ ಈ ಜಗಳದ ವಿಡಿಯೋ ಸಖತ್ ವೈರಲ್ ಆಗಿ, ಚರ್ಚೆಗೆ ಕಾರಣವಾಗಿದೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here