Monday 29th, April 2024
canara news

ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ವಾರ್ಷಿಕ ಮಹಾ ಉತ್ಸವ

Published On : 30 Nov 2017   |  Reported By : Bernard J Costa


ಕುಂದಾಪುರ,ನ.30: “ಇಗೋ ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ ” ಎಂಬ ಧ್ಯೇಯ ವಾಕ್ಯದೊಂದಿಗೆ ಸಂಭ್ರಮ ಹಾಗೂ ಭಕ್ತಿ ಪೂರ್ವಕವಾದ ಪವಿತ್ರ ಬಲಿ ಪೂಜೆಯನ್ನು ಅರ್ಪಿಸುವ ಮೂಲಕ 447 ವರ್ಷಗಳ ಹಿರಿಮೆಯುಳ್ಳ ಕುಂದಾಪುರ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬದ ಉತ್ಸವವನ್ನು ಆಚರಿಸಲಾಯಿತು.

 

ಇದರ ನೇತ್ರತ್ವನ್ನು ವಹಿಸಿದ ಉಡುಪಿ ಧರ್ಮ ಪ್ರಾಂತ್ಯದ ಜುಡಿಷಿಯೆಲ್ ವಿಕಾರ್ ಅ|ವಂ|ಧರ್ಮರ್ಗುರು ವಾಲ್ಟರ್ ಡಿಮೆಲ್ಲೊ ಅವರು ನೆಡ್ಸಿಕೊಟ್ಟು ‘ನಮಗೆ ಜೀವಂತ ದೇವರ ಹತ್ತಿರ ಸಂಬಂಧ್ಧ ಇದೆ, ದೇವರ ವಾಕ್ಕ್ಯವು ಮನುಷ್ಯನಾದ, ಬಾಳಲ್ಲಿ ದೇವರ ವಾಕ್ಯದಂತೆ ನಾವು ನೆಡೆದುಕೊಳ್ಳ ಬೇಕು, ಯೇಸುವಿನ ತಾಯಿ ಮರಿಯಳು ದೇವರ ವಾಕ್ಯದಂತೆ ನೆಡೆದುಕೊಂಡ ಮಹಾ ಮಾತೆ, ಇಂತಹ ಮಹಾ ಮಾತೆ, ನಿಮ್ಮ ಚರ್ಚಿನ ಪೆÇೀಷಕಿಯ ವಾರ್ಷಿಕ ಹಬ್ಬವನ್ನು ಆಚರಿಸುವಾಗ, ಅವಳಂತೆ ನಾವು ನೆಡೆದುಕೊಳ್ಳಣ, ನಿಮ್ಮ ಪೆÇೀಷಕಿ ರೋಜರಿ ಮಾತೆ ನಿಮಗೆ ಎಸ್ಟೊ ಉಪಕಾರಗಳನ್ನು ಯೇಸುವಿನ ಮೂಲಕ ದೊರಕಿಸಿ ಕೊಟ್ಟಿದ್ದಾಳೆ, ಅವಳಿಗೆ ಕ್ರತ್ಞತರಾಗೋಣ’ ಎಂದು ಅವರು ಸಂದೇಶ ನೀಡಿದರು.

ಕುಂದಾಪುರ ಚರ್ಚಿನ ಧರ್ಮಗುರು ವಂ|ಅನಿಲ್ ಡಿಸೋಜಾ, ಬಲಿ ಪೂಜೆಯಲ್ಲಿ ಭಾಗವಹಿಸಿ ವಂದಿಸಿದರು. ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್, ಕುಂದಾಪುರ ವಲಯದ ಧರ್ಮ ಕೇಂದ್ರಗಳ ಅನೇಕ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು ಸುಮಾರು 25 ಕ್ಕೂ ಹೆಚ್ಚಿನ ಧರ್ಮಗುರುಗಳು ಪಾಲ್ಗೊಂಡ ದಿವ್ಯ ಬಲಿಪೂಜೆಯಲ್ಲಿ, ಅನೇಕ ಧರ್ಮ ಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ,ವಾಡೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾದಿಗಳು ಪವಿತ್ರ ಬಲಿದನದಲ್ಲಿ ಭಾಗಿಯಾದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here