Sunday 28th, April 2024
canara news

ಸಂತ ಜೋಸೆಫ್ ಹಿ.ಪ್ರಾ. ಶಾಲಾ ವಾರ್ಷಿಕ ಕ್ರೀಡತ್ಸೋವ

Published On : 05 Dec 2017   |  Reported By : Bernard J Costa


ಕುಂದಾಪುರ, ಡಿ. 4: ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಕ್ರೀಡತ್ಸೋವವು ಶಾಲಾ ಮೈದಾನದಲ್ಲಿ ನೆಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಳೆ ವಿಧ್ಯಾರ್ಥಿ ವಾಲಿಬಾಲ್ ಪಟು ಜೊಯ್ ಕರ್ವಾಲ್ಲೊ ಕ್ರೀಡತ್ಸೋವನ್ನು ದೀಪ ಬೆಳಗಿಸಿ, ಕ್ರೀಡಾಳುಗಳಿಂದ ಗೌರವವನ್ನು ಪಡೆದು ‘ಕ್ರೀಡೆಗಳು ಬಹಳ ಪುರಾತನ ಕಾಲದಿಂದಲೂ ನೆಡೆಯುತ್ತಿವೆ, ಕ್ರೀಡೆಗಳು ಮಾನವನ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ, ಅಂತರ್ ರಾಷ್ಠ್ರಿಯ ಮಟ್ಟದಲ್ಲಿ ನೋಡಿದರೆ ಕ್ರೀಡೆಗಳಲ್ಲಿ ನಮ್ಮ ಸಾಧನೆ ಕಡಿಮೆ, ನಾವು ಕ್ರೀಡೆಗಳಲ್ಲಿಹೆಚ್ಚು ಆಸಕ್ತಿ ವಹಿಸಿ ಉತ್ತಮ ಕ್ರೀಡಾಪಟುಗಳಾ ಬೇಕು’ ಎಂದು ಸಂದೇಶ ನೀಡಿದರು.

ಮತ್ತೊರ್ವ ಅಥಿತಿ ದಿವಾಕರ ಭಂಡಾರಿ ಕ್ರೀಡಾ ದೀಪ ಬೆಳಗಿಸಿ ಶುಭ ಕೋರಿದರು. ಶಾಲಾ ಜಂಟಿ ಸಂಚಾಲಕಿ ಸಿಸ್ಟರ್ ವಾಯ್ಲೆಟ್ ತಾವ್ರೊ ‘ಮನುಷ್ಯ ಎನಾದರೂ ಸಾಧಿಸ ಬೇಕಾದರೆ, ಅವನಿಗೆ ತನ್ನ ಶರೀರದ ಸಹಕಾರ ಬೇಕೆ ಬೇಕು, ಶರೀರ ಆರೋಗ್ಯಕರವಾಗಿ ಇಟ್ಟುಕೊಳ್ಳಲು, ಕ್ರೀಡೆ ವ್ಯಾಯಮ ಅಗತ್ಯವಾಗಿ ಬೇಕು, ಆಟ ಪಾಠಗಳನ್ನು ಸಮಾನವಾಗಿ ಸ್ವೀಕರಿಸಿ ಆತ್ಮ ವಿಶ್ವಾಸ ಬೆಳೆಸಿಕೊಂಡು ಕ್ರೀಡೆಗಳಲ್ಲಿ ಸಾಧನೆಯನ್ನು ಮಾಡಿರಿ’ ಎಂದು ವಿಧ್ಯಾರ್ಥಿಗಳಿಗೆ ಶುಭ ಕೋರಿದರು.

ಶಾಲಾ ಮುಖ್ಯೊಪಾಧ್ಯಾಯಿನಿ ಸಿಸ್ಟರ್ ಕೀರ್ತನ ಸ್ವಾಗತಿಸಿದರು, ವೇದಿಕೆಯಲ್ಲಿ ಪೆÇೀಷಕ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ ಉಪಸ್ಥಿತರಿದ್ದರು, ಸಿಸ್ಟರ್ ನವಿತಾ ಬಹುಮಾನ ವಿತರಣ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ದೈಹಿಕ ಶಿಕ್ಷಕ ಅನಿಲ್ ಪಾಯ್ಸ್ ಕ್ರೀಡಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here