Monday 29th, April 2024
canara news

ವಂ. ಡೆನ್ನಿಸ್ ಮೊರಸ್ ಪ್ರಭುರವರ ಯಾಜಕಾ ದೀಕ್ಷೆಯ ಸುವರ್ಣ ಮಹೋತ್ಸವ- ಸನ್ಮಾನ

Published On : 06 Dec 2017   |  Reported By : Vincent Mascarenhas


ದಿನಾಂಕ 05.12.1967ರಲ್ಲಿ ಯಾಜಕೀಯ ದೀಕ್ಷೆ ಪಡೆದಂತಹ ಮಂಗಳೂರು ಧರ್ಮ ಪ್ರಾಂತ್ಯದ ಶ್ರೇಷ್ಠ ಗುರು ವಂ. ಡೆನ್ನಿಸ್ ಮೊರಸ್ ಪ್ರಭುರವರು ತಮ್ಮ ಯಾಜಕಾ ದೀಕ್ಷೆಯ ಸುವರ್ಣ ಮಹೋತ್ಸವವನ್ನು ಕೋಡಿಯಲ್‍ಬೈಲ್‍ನ ಬಿಷಪ್ ನಿವಾಸದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ, ಸಮಸ್ತ ಜನರ ಏಳಿಗೆಗಾಗಿ ಪ್ರಾರ್ಥಿಸಿದರು. ತದನಂತರ, ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವಂದನೀಯ ಜೆ.ಬಿ.ಕ್ರಾಸ್ತರವರು ಸನ್ಮಾನ ಪತ್ರವಾಚಿಸಿ ವಂ. ಡೆನ್ನಿಸ್ ಮೊರಸ್ ಪ್ರಭುರವರು ತಮ್ಮ ಯಾಜಕ ಜೀವನದಲ್ಲಿ ಸಲ್ಲಿಸಿದ ಸೇವೆಯನ್ನು ಶ್ಲಾಫಿಸಿದರು. ಅತೀ ವಂದನೀಯ ಡಾ. ಅಲೊಶಿಯಸ್ ಪೌಲ್ ಡಿಸೋಜರವರು ಮಾತನಾಡಿ, ವಂದನೀಯ ಡೆನ್ನಿಸ್ ಮೊರಸ್ ಪ್ರಭುರವರು ಹಲವು ಉನ್ನತ ಹುದ್ದೆ ಅಲಂಕರಿಸಿದ್ದರೂ ಸಹಿತ ಸರಳ ಜೀವನ ಶೈಲಿಯನ್ನು ನಡೆಸಿ ಎಲ್ಲರಿಗೂ ಸರಳತೆಯ ಜೀವನ ನಡೆಸಲು ಪ್ರೇರಣೆ ನೀಡಿದಂತಹ ಆರ್ದಶವ್ಯಕ್ತಿಯಾಗಿದ್ದಾರೆ. ಇದಲ್ಲದೇ, ತನಗೂ ಸಹ ಧರ್ಮ ಪ್ಯಾಂತದ ಆಡಳಿತ ನಡೆಸಲು ಅತ್ಯುತ್ತಮ ಸಲಹೆ ನೀಡಿ ವಿವಿಧ ರೀತಿಯಲ್ಲಿ ಸಹಾಯ ಮಾಡಿರುತ್ತಾರೆ. ವಂ. ಡೆನ್ನಿಸ್ ಮೊರಸ್ ಪ್ರಭುರವರು ಬಹಳಷ್ಟು ಸುಜ್ಞಾನಿಯಾಗಿದ್ದು, ಹಲವರಿಗೆ ತಮ್ಮ ವಿವಿಧ ಕರ್ತವ್ಯಗಳನ್ನು ಮಾಡಲು ಮಾರ್ಗದರ್ಶನ ನೀಡಿರುವುದು ಮಾತ್ರವಲ್ಲದೆ, ಸಾವಿರಾರು ಮಂದಿಗೆ ಅವರವರ ಕಷ್ಟದ ಸಮಯದಲ್ಲಿ ಮಾರ್ಗದರ್ಶನ ನೀಡಿರುತ್ತಾರೆ. ಇದಲ್ಲದೇ, ಧಿನದಲಿತರಿಗೆ ಬಹಳ ಸಹಾಯ ಮಾಡಿರುತ್ತಾರೆ ಎಂದು ತಿಳಿಸಿದರು.

ಡಾ. ಅಲೋಶಿಯಸ್ ಪೌಲ್ ಡಿಸೋಜರವರು ವಂ. ಡೆನ್ನಿಸ್ ಮೊರಸ್ ಪ್ರಭುರವರನ್ನು ಶಾಲು ಹೊದಿಸಿ ಪೇಟಧರಿಸಿ ಸನ್ಮಾನ ಮಾಡಿದ್ದರು. ಧರ್ಮ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿಯಾದ ಎಂ.ಪಿ.ನೊರೊನ್ಹಾರವರು ಧರ್ಮಪ್ರಾಂತ್ಯದ ಸದಸ್ಯರ ಪರವಾಗಿ ಹೂಗುಚ್ಚ ನೀಡಿ ಅಭಿನಂದಿಸಿ ಶುಭಾ ಹಾರೈಸಿದರು.

ಸನ್ಮಾನಕ್ಕೆ ವಂ. ಡೆನ್ನಿಸ್ ಮೊರಸ್ ಪ್ರಭುರವರು ಪ್ರತಿಕ್ರಯಿಸಿ, ತನ್ನ ಜೀವನದಲ್ಲಿ ನಡೆದಂತಹ ಪ್ರತಿಯೊಂದು ಏಳಿಗೆಗೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತ ತನಗೆ ಹಲವಾರು ರೀತಿಯಲ್ಲಿ ಸಹಕಾರ ನೀಡಿದಂತಹ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜರವರನ್ನೂ, ಧರ್ಮಗುರುಗಳು, ಧರ್ಮಭಗಿನಿಯರನ್ನು, ಪ್ರಧಾನ ಕಾರ್ಯದರ್ಶಿಯಾದ ಎಂ ಪಿ ನೊರೊನ್ಹಾರವರನ್ನು ಮತ್ತು ತನ್ನ ಅಪಾರ ಬಂದು ಮಿತ್ರರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ತನಗೆ ಎಲ್ಲಾ ಜಾತಿ, ಮತಗಳ ಹಲವಾರು ವ್ಯಕ್ತಿಗಳು ಗೆಳೆಯರಿದ್ದಾರೆ ಮತ್ತು ಅವರು ನನಗೆ ಬಹಳಷ್ಟು ಸಹಕಾರ ನೀಡಿರುತ್ತಾರೆ. ತನ್ನ ಜೀವನದಲ್ಲಿ ಸೇವೆ ಮಾಡಲು ಪ್ರಭು ಯೇಸು ಕೈಸ್ತರು ತನಗೆ ಪ್ರೇರಣೆ ನೀಡಿದ್ದು ತನ್ನ ಮುಂದಿನ ಜೀವನದ ಅವಧಿಯಲ್ಲಿ ಪರರಿಗೆ ಸೇವೆಯನ್ನು ಮುಂದುವರಿಸಲು ಉತ್ಸುಕನಾದ್ದೇನೆಂದು ತಿಳಿಸಿದರು.

ವಂ. ಫಾ. ವಲೇರಿಯನ್ ಫೇರ್ನಾಡಿಸ್‍ರವರು ಸ್ವಾಗತಿಸಿದರು. ಧರ್ಮ ಪ್ರಾಂತ್ಯದ ಚಾನ್ಸೆಲರ್ ವಂ. ಹೆನ್ರಿ ಸಿಕ್ವೇರಾ, ಪೆÇ್ರೀಕ್ಯೂರೇಟರ್ ವಂ. ಜಾನ್ ವಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ವಂ. ಫಾ. ವಿಲಿಯಂ ಮಿನೆಜಸ್, ಸೆನೆಟ್ ಕಾರ್ಯದರ್ಶಿ ಫಾ ಜೆ. ಬಿ. ಸಲ್ಡಾನ, ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಸಮಾಜದ ಮುಖಂಡರು ಹಾಜರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here