Friday 3rd, May 2024
canara news

ಮುಂಬಯಿ ವಿವಿ ಕನ್ನಡ ವಿಭಾಗದಿಂದ ರಾಷ್ಟ್ರೀಯ ವಿಚಾರ ಸಂಕಿರಣ-ಗೌರವಾರ್ಪಣೆ

Published On : 16 Dec 2017   |  Reported By : Rons Bantwal


ಮರೆತ ಕನ್ನಡ-ಕನ್ನಡಿಗರನ್ನು ತಿಳಿಯುವ ಕಾಲವಿದು : ಡಾ| ಬಿದರಕುಂದಿ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.15: ಗಳಗನಾಥರು ಮತ್ತು ನಾ.ಶ್ರೀ ರಾಜಪುರೋಹಿತರು ಕನ್ನಡ ಕಾದಂಬರಿ ಪಿತಾಮಹಾನ್‍ಗಳ ಅಭಿಮಾನದ ತಾರೆಗಳಾಗಿದ್ದಾರೆ. ಕನ್ನಡ ಸಾಹಿತ್ಯ ಸೇವೆಯ ಅಭಿಮಾನದ ಗುರುತೇ ಎಂದು ತಿಳಿಯಬೇಕಾಗಿದೆ. ಸ್ವಂತಿಕೆಯಿಂದ ಕನ್ನಡದ ಕೃಷಿಯನ್ನು ಬೀಜವಾಗಿ ಬಿತ್ತಿ ಗಿಡವಾಗಿಸಿ ಶತಾಯುಷ್ಯದ ಮರವಾಗಿ ಬೆಳೆಸಿದ ಕೀರ್ತಿ ಅವರದು. ಕಾದಂಬರಿ ಪರಂಪರೆಯನ್ನು ಐತಿಹಾಸಿಕ ಸಂದರ್ಭಗಳಲ್ಲಿ ತಿಳಿದಾಗಲೇ ಅವರ ಮಹತ್ವ ಅರ್ಥೈಸಬಹುದಾಗಿದೆ. ಇಂತಹ ಕಾರ್ಯಕ್ರಮಗಳಿಂದ ಕನ್ನಡ, ಕನ್ನಡಿಗ ಮರೆತು ಹೋದ ಸಂದರ್ಭದಲ್ಲಿನ ಕನ್ನಡದ ನೆಲೆಯ ಸೆಳೆಯನ್ನು ತಿಳಿಯಲಾಗುತ್ತದೆ ಎಂದು ನಾಡಿನ ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಗಳಗನಾಥ-ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಸಹಯೋಗದಲ್ಲಿ ಇಂದಿಲ್ಲಿ ಶುಕ್ರÀವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಆಯೋಜಿಸಿದ್ದ `ಕನ್ನಡ ವಾಙ್ಮಯಕ್ಕೆ ಗಳಗನಾಥ ರಾಜಪುರೋಹಿತರ ಕೊಡುಗೆ' ವಿಚಾರಿತ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಸಾರಥ್ಯದಲ್ಲಿ ನಡೆಸಲ್ಪಟ್ಟ ವಿಚಾರ ಸಂಕಿರಣವನ್ನು ಮಹಾನಗರದ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿüಗಳಾಗಿ ಕರ್ನಾಟಕ ಸಂಸ್ಕೃಯಿ ಇಲಾಖೆ ಹಾವೇರಿ ಇದರ ನಿರ್ದೇಶಕ ಕೆ.ನಾಗರಾಜ್ ಉಪಸ್ಥಿತರಿದ್ದು ಹೆಸರಾಂತ ಸಂಶೋಧಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ, ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಅಧ್ಯಕ್ಷ ಪೆÇ್ರ| ದುಷ್ಯಂತ ನಾಡಗೌಡ, ಲೇಖಕಿ ಮಮತಾ ಮಲ್ಹಾರ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಿದರು.

ನಾನು ಮೊದಲು ವಿಜ್ಞಾನಿ ಮತ್ತೆ ಬರಹಗಾರ. ನನಗೆ ಕನ್ನಡ ಸಾಹಿತ್ಯ ತಿಳಿಯದು. ಬರೇ ಸಂಶೋಧನಾ ವಿದ್ವಾಂಸ ಅಷ್ಟೇ. ಆದರೆ ಗಳಗನಾಥರ ಮಾಧವ ಕರುಣಾ ವಿಳಾಸ ಕೃತಿ ತುಂಬಾ ಇಷ್ಟಪಟ್ಟಿರುವೆ. ಇವರೋರ್ವ ಮುದ್ರಕ, ಪ್ರಕಾಶಕರಾಗಿದ್ದು ಪುಸ್ತಕ, ಪತ್ರಿಕೆಗಳನ್ನು ತಲೆಮೇಲೆ ಹೊತ್ತು ಮನೆಮನೆಗಳಿಗೆ ಹೋಗಿ ಕನ್ನಡವನ್ನು ಬೆಳೆಸಿದವರು. ಗೋಡೆಯಲ್ಲಿ ಬರವಣಿಗೆ ಮೂಡಿಸಿ ಸಾಹಿತ್ಯಕ್ಕೆ ನೆರವಾದದು ಎಂದು ಡಾ| ನಿಂಜೂರು ನುಡಿದರು.

ಡಾ| ಕೃಷ್ಣ ಕೊಲ್ಹಾರ ಮಾತನಾಡಿ ರಾಜ ಪುರೋಹಿತ ಸಂಶೋಧನಾ ಶೈಲಿ ವೈಖರಿ ನಾಡಿಗೆ ಮಾದರಿಯಾಗಿ ನಿಲ್ಲುತ್ತದೆ. ಕನ್ನಡ ಸಂಶೋಧನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಇಂದಿನ ಸಾಹಿತ್ಯ ಸಂಶೋಧನೆಗೆ ಮೂಲ ಅಡಿಪಾಯ ಹಾಕಿದವರಲ್ಲಿ ರಾಜ ಪುರೋಹಿತರು ಕೂಡ ಒಬ್ಬರು ಎಂದರು.

ಗಳಗನಾಥರು ಮತ್ತು ರಾಜರಾಜಪುರೋಹಿತ ಕನ್ನಡ ಭಾಷೆಗೆ ತಮ್ಮದೇ ಆದ ರೀತಿಯಲ್ಲಿ ನೀಡಿದ ಅಕ್ಷರ ಸೇವೆ ನಿಜಕ್ಕೂ ನಾವೆಲ್ಲ ಹೆಮ್ಮೆ ಪಡುವಂತಬಹುದು. ಆಧುನಿಕ ತಂತ್ರಜ್ಞಾನ ಸಲಕರಣಿಗಳು ಇಂದೇ ಪ್ರಸಂಗದಲ್ಲಿ ನಾಡಿನೆಲ್ಲ ಸಂಚಾರ ಮಾಡಿ ಕನ್ನಡ ನುಡಿ ಸೇವೆ ಮಾಡಿರುವುದನ್ನು ಇಂದು ಈ ಸಂಕೀರಣದಲ್ಲಿ ಸ್ಮರಿಸಲು ತುಂಬಾ ಅರ್ಥಪೂರ್ಣವಾಗಿದೆ ಎಂದು ಪೆÇ್ರ| ದುಷ್ಯಂತ ಅಭಿಪ್ರಾಯ ಪಟ್ಟರು.

ಮಮತಾ ಮಲ್ಹಾರ ಮಾತನಾಡಿ ರಾಜಪುರೋಹಿತರ ಬದುಕಿನ ಪುಟಗಳನ್ನು ತಿರುವಿ ನೋಡಿದಾಗ ನಮಗೆ ಕಂಡು ಬರುವುದೆನೆಂದರೆ ಸಂಶೋಧನೆಗಾಗಿ ತಮ್ಮ ಜೀವನದ ಉಸಿರು ಇರುವ ವರೆಗೆ ಸಂಶೋಧನೆಯ ಜಪ ಮಾಡಿದ ದಿವ್ಯಚೇತನ. ಅವರು ಕನ್ನಡ ಸಂಶೋಧನೆಗೆ ಕೊಟ್ಟ ಕಾಣಿಕೆ ಅಮೂಲ್ಯವಾದುದು. ಅವರ ಸಂಶೋಧನೆ ಲೇಖನಗಳು ನಾಡಿನ ಎಲ್ಲ ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಇಂದಿನ ಕನ್ನಡಿಗರ ಆದ್ಯ ಕರ್ತವ್ಯವೆಂದರು.

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮುಂಬಯಿ ವಿವಿ ಸರ್ವೋನ್ನತ ಸ್ಥಾನದಲ್ಲಿದೆ ಇದಕ್ಕೀಗ 40ರ ಸಂಭ್ರಮ. ಕನ್ನಡ ಕನ್ನಡ ಬರೀ ಸಂಗಡ ಎಂಬಂತೆ ಈ ವಿಭಾಗ ಕನ್ನಡದ ಶ್ರೀಮಂತಿಕೆಯನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದೆ. ಇಂದು ಕೂಡಾ ದುರ್ಗಪ್ಪ ಕೋಟೆಕಾರ್ ಅವರ ಮತ್ತು ಉದ್ಗ್ರಂಥ ಮರಾಠಿಯಲ್ಲಿ ಜಿ.ಸಿ ಕುಲಕರ್ಣಿ ಅವರ ಮರಾಠ ಅನುವಾದ ಮಹಾಕೃತಿ ಪ್ರಕಟವಾಗುತ್ತಿರುವುದು ಅಭಿನಂದನೀಯ ಎಂದು ಪ್ರಸ್ತಾವನಾ ನುಡಿಗಳನ್ನಾಡಿ ಡಾ| ಉಪಾಧ್ಯಾಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂ.ಫಿಲ್ ಪದವೀಧರ ಸರೋಜಿನಿ ತೆರೆ, ಸುರೇಖಾ ಬೇಕಲ್, ಶೀಲಾ ಹೆಚ್.ಆರ್ ಮತ್ತು ಎಂಎ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ವಿಜೇತ ಗೀತಾ ಆರ್.ಎಸ್ ಪತಿ ಮಂಜುನಾಥ್ ತೆರೆ ಅವರನ್ನೊಳಗೊಂಡು ಸ್ವರ್ಣಪದಕವನ್ನೀಡಿ ಶಾಲುಹೊದಿಸಿ ಕೃತಿಗೌರವದೊಂದಿಗೆ ಗೌರವಿಸಲಾಯಿತು. ವಿಶೇಷವಾದ ಸಾಂಸ್ಕೃತಿಕ ಸೇವೆಗಾಗಿ ಮಹಾನಗರದ ಹೆಸರಾಂತ ನಾಟಕಕಾರ ನಂದಳಿಕೆ ನಾರಾಯಣ ಶೆಟ್ಟಿ (ಪತ್ನಿ ಶಾಂತಾ ನಾರಾಯಣ್ ಅವರನ್ನೊಳಗೊಂಡು ) ಮತ್ತು ಅನುವಾದಕ ಪೆÇ್ರ| ಜಿ.ಸಿ ಕುಲ್ಕರ್ಣಿ ಅವರಿಗೂ ಸನ್ಮಾನಿಸಿ ಅಭಿನಂದಿಸಿಸಲಾಯಿತು.

ಹಿರಿಯ ಸಾಹಿತಿಗಳಾದ ಡಾ| ಎಸ್.ಕೆ.ಭವಾನಿ, ಡಾ| ಸುನೀತಾ ಎಂ.ಶೆಟ್ಟಿ, ಡಾ| ಮಮತಾ ರಾವ್, ಡಾ| ಕೆ.ರಘುನಾಥ್, ಸುಜತಾ ಎಸ್.ದೇವಾಡಿಗ, ಮೋಹನ್ ಮಾರ್ನಾಡ್, ಕೆ.ಗೋವಿಂದ ಭಟ್, ಶಾರದಾ ಅಂಬೆಸಂಗೆ, ಜಿ.ವಿ ಹೆಗಡೆ, ರೂಪಾ ಬಿ.ಸಂಗೋಲಿ, ಶೈಲಜಾ ಹೆಗಡೆ, ಡಾ| ಶ್ಯಾಮಲಾ ಪ್ರಕಾಶ್, ಕಿರಣಾ ವಿ.ಕುಲ್ಕರ್ಣಿ, ನ್ಯಾ| ವಸಂತ ಕಲಕೋಟಿ, ರತ್ನಾಕರ್ ಆರ್.ಶೆಟ್ಟಿ, ವೈ.ಬಿ ಮಧುಸೂದನ ರಾವ್, ಡಾ| ದಾಕ್ಷಾಯಣಿ ಯಡವಳ್ಳಿ, ಯಜ್ಞನಾರಾಯಣ ಕೆ.ಸುವರ್ಣ, ಸುರೇಖಾ ಎಸ್.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ, ಹೇಮಾ ಸದಾನಂದ್ ಮತ್ತಿತರರು ಹಾಜರಿದ್ದು ಪುರಸ್ಕೃತರನ್ನು ಅಭಿನಂದಿಸಿದÀರು.

ಶ್ಯಾಮಲಾ ಪ್ರಕಾಶ್ ಶ್ಯಾಮಲ ಗೀತಾಗಾಯನ ಗೈದರು. ಕನ್ನಡ ವಿಭಾಗದ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್. ರೇವಯ್ಯ ಕೃತಜ್ಞತೆ ಸಲ್ಲಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here