Saturday 4th, May 2024
canara news

ದುಗ್ಗಪ್ಪ ಯು.ಕೋಟಿಯವರ್ ಅವರ `ಮುಂಬಯಿಯಲ್ಲಿ ಕನ್ನಡದ ಡಿಂಡಿಮ' ಕೃತಿ ಬಿಡುಗಡೆ

Published On : 16 Dec 2017   |  Reported By : Rons Bantwal


ಮುಂಬಯಿಗರ ಕನ್ನಡಭಾಷಾಭಿಮಾನ ಎಲ್ಲರಿಗೂ ಮಾದರಿ:ಡಾ| ಕೃಷ್ಣ ಕೊಲ್ಹಾರ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.15: ಮುಂಬಯಿಗರು ಪಾರದರ್ಶಕ ಭಾಷಾಭಿಮಾನಿಗಳಾಗಿದ್ದಾರೆ. ಇವರಲ್ಲಿನ ಕನ್ನಡ ಭಾಷಾಶೈಲಿ, ಅವ್ಯಾಜ್ಯವಾದ ಸಂಸ್ಕೃತಿ ಪ್ರೇಮ ಕನ್ನಡಿಗರಿಗೆಲ್ಲರಿಗೂ ಮಾದರಿ. ಕನ್ನಡಾಭಿಮಾನವಂತೂ ಮನಸ್ಸು ತಟ್ಟುವಂಹದದ್ದು ಎಂದು ಹೆಸರಾಂತ ಸಂಶೋಧಕ, ಹಿರಿಯ ಸಾಹಿತಿ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ನುಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರÀವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಜಿತ ಪ್ರಕಾಶನದ ದುಗ್ಗಪ್ಪ ಯು.ಕೋಟಿಯವರ್ ಅವರ `ಮುಂಬಯಿಯಲ್ಲಿ ಕನ್ನಡದ ಡಿಂಡಿಮ' ಕೃತಿ ಬಿಡುಗಡೆಗೊಳಿಸಿ ಡಾ| ಕುಲಕರ್ಣಿ ಮಾತನಾಡಿದರು.

ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಅಧ್ಯಕ್ಷ ಪೆÇ್ರ| ದುಷ್ಯಂತ ನಾಡಗೌಡ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಾಹಿತಿ ಡಾ| ಶ್ಯಾಮಸುಂದರ್ ಬಿದರಕುಂದಿ ಅವರು ಪೆÇ್ರ. ಜಿ.ಸಿ ಕುಲ್ಕರ್ಣಿ ಅವರ ಕುಮಾರವ್ಯಾಸ ಭಾರತದ ಮರಾಠಿ ಅನುವಾದಿತ ಗ್ರಂಥವನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರು ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಉಪಸ್ಥಿತರಿದ್ದು, ರಮಾ ಉಡುಪ ಕೃತಿ ಪರಿಚಯಿಸಿದರು.

ಮುಂಬಯಿ ಕನ್ನಡ ಸಾಹಿತ್ಯದ ಕೇಂದ್ರಸ್ಥಾನವಿದ್ದಂತೆ. ಇಲ್ಲಿರುವ ಕನ್ನಡಭಾಷಾಭಿಮಾನ, ಸಾಹಿತ್ಯಾಸಕ್ತಿ ಒಳನಾಡ ಜನರಲ್ಲಿ ಕಾಣುತ್ತಿಲ್ಲ. ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಪೆÇ್ರೀತ್ಸಾಹ ಅನನ್ಯವಾದದ್ದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ನಾಡಗೌಡ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಅವರು ಪ್ರಸ್ತಾವಿಕ ನುಡಿಗಳನ್ನಾಡಿ `ಮುಂಬಯಿಯಲ್ಲಿ ಕನ್ನಡದ ಡಿಂಡಿಮ' ಇದು ನಮ್ಮದು 83ನೇ ಕೃತಿ. ಕೃತಿಕರ್ತ ದುಗ್ಗಪ್ಪ ಯು.ಕೋಟಿಯವರ್ ಅವರ ಶ್ರಮ ಅನನ್ಯವಾದದ್ದು. ದುಗ್ಗಪ್ಪರ ಸಾಧನಾಶೀಲಾ ಪ್ರಯತ್ನದ ಸಾರ್ಥಕತೆ ಇಂದು ತೆರೆದಿದೆ. ನಮ್ಮಲ್ಲಿನ ಅನೇಕರು ಕೃತಿಗಳನ್ನು ರಚಿಸಿದ ಬಳಿಕ ಸುಮ್ಮಗಿರ್ತಾರೆ. ಇದು ಸಲ್ಲದು. ಆದರೆ ಪೆÇ್ರ. ಕುಲ್ಕರ್ಣಿ ಅವರು ಕೃತಿಗಳನ್ನು ರಚಿಸಿ ಸಾವಿರ ಕೃತಿ ಮಾಡಿ ಹಂಚಿದ ಕೀರ್ತಿಕಾರ. ಕನ್ನಡದಲ್ಲಿ ಕುಮಾರವ್ಯಾಸನ ಸಾಹಿತ್ಯೋಪಾಸನಗೈದು ವ್ಯಾಸರಿಗೆ ಮರುಜೀವವನ್ನೀಡಿದ್ದಾರೆ. ಇಂತಹವರಿರುವ ತನಕ ಮುಂಬಯಿಯಲ್ಲಿ ಕನ್ನಡಕ್ಕೆ ಹಿನ್ನಡೆ ಅಸಾಧ್ಯ. ಆದುದರಿಂದ ಕನ್ನಡದ ಅಸ್ಮಿತೆ ಗಟ್ಟಿ ಗೊಳಿಸುವ ಕೆಲಸ ಕನ್ನಡ ವಿಶ್ವ ವಿದ್ಯಾಲಯ, ಸರಕಾರ ಮಾಡ ಬೇಕಾಗಿದೆ ಎಂದರು.

ಕೃತಿಕಾರ ದುಗ್ಗಪ್ಪ ಯು.ಕೋಟಿಯವರ್ ಮಾತನಾಡಿ ಮುಂಬಯಿ ಮಹಾನಗರ ಪಾಲಿಕೆಯ ಕನ್ನಡ ಶಾಲೆಯಲ್ಲಿ ಆಧ್ಯಾಪಕನಾಗಿ ಕೆಲಸಕ್ಕೆ ಸೇರಿಕೊಂಡು ಸೊಲ್ಲಾಪುರ ವಿವಿಯಿಂದ ಬಿ.ಎ, ಎಂ.ಎ ಪಡೆದು, ಮುಂಬಯಿ ಕನ್ನಡ ವಿಭಾಗದಲ್ಲಿ ಎಂ.ಎಲ್ ಮಾಡಬೇಕೆಂಬ ಯೋಚನೆಯೊಂದಿಗೆ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯರ ಭೇಟಿಯಾದೆ. ಅವರು ನನಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾಧನೆಯ ಕುರಿತು ಎಂ.ಫಿಲ್ ಅಧ್ಯಯನಕ್ಕೆ ಬೇಕಾದ ಎಲ್ಲಾ ಗ್ರಂಥಗಳನ್ನು ನೀಡಿ, ಮಾರ್ಗದರ್ಶನ ನೀಡಿ ಪೆÇ್ರೀತ್ಸಾಹಿಸಿದ ಫಲವೇ ಈ ಕೃತಿಯಾಗಿದೆ. ನನ್ನ ಬರಹಗಳನ್ನು ಅಭಿಜಿತ ಪ್ರಕಾಶನ ಮುಖಾಂತರ ಪ್ರಕಟವಾಗುವಂತೆ ಹಾಗೂ ಕೃತಿಗೆ ಮುನ್ನುಡಿಯ ತೊರಣ ಕಟ್ಟಿ ಹರಿಸಿದ ಡಾ| ಉಪಾಧ್ಯ ಅವರಿಗೆ ಕೃತಜ್ಞತೆಗಳು. ಬೆನ್ನಡಿ ಬರೆದು ಬೆನ್ನುತಟ್ಟಿದ ಡಾ| ಭರತ್‍ಕುಮಾರ್ ಪೆÇಲಿಪು ಹಾಗೂ ಮುಖಪುಟ ಚಿತ್ರಿಸಿಕೊಟ್ಟ ಕಲಾವಿದ ಜಯ ಸಿ.ಸಾಲ್ಯಾನ್ ಅವರಿಗೆ ವಂದಿಸುವೆ ಎಂದÀರು.

ಕಾರ್ಯಕ್ರಮದಲ್ಲಿ ದುಗ್ಗಪ್ಪ ಅವರ ಮಾತಾಪಿತರಾದ ಭೀಮವ್ವ ಮತ್ತು ಯಲ್ಲಪ್ಪ ಕೋಟಿಯವರ್, ಪತ್ನಿ ಲಕ್ಷ್ಮೀ ಡಿ.ಕೋಟಿಯವರ್, ಮಕ್ಕಳಾದ ಸಮರ್ಥ ಹಾಗೂ ವನಿತಾ ಡಿ.ಕೋಟಿಯವರ್ ಹಾಗೂ ಪರಿವಾರದ ಅನೇಕರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

ಸುರೇಖಾ ಆರ್.ನಾಯ್ಕ, ಡಾ| ಜಿ.ವಿ ಕುಲಕರ್ಣಿ, ಲಲಿತಪ್ರಭಾ ಅಂಗಡಿ, ಗಿರಿಜಾ ಶಾಸ್ತ್ರಿ, ನಾರಾಯಣ ರಾವ್, ಕುಮುದಾ ಆಳ್ವ, ಗೀತಾ ಮಂಜುನಾಥ್, ಪರಸಪ್ಪ ಡಿ.ಹರಿಜನ, ಶಿವರಾಜ್ ಎಂ.ಜೆ., ರೇವಣಸಿದ್ಧಿ ಕೌಟಗಿ ಸೇರಿದಂತೆ ನೂರಾರು ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ವೈ.ಬಿ ಮಧುಸೂದನ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿ ಧನ್ಯವದಿಸಿದರು.

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here